ಬೆಂಗಳೂರು: ದೇಶದ ಪ್ರಮುಖ ಎಫ್ಎಂಸಿಜಿ ಕಂಪನಿಗಳಲ್ಲಿ ಒಂದಾದ ನೆಸ್ಲೆ ಇಂಡಿಯಾದ ಆಡಳಿತ ಮಂಡಳಿಯು 2026–2027ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಇಂದು ಅಧಿಕೃತವಾಗಿ ಅನುಮೋದಿಸಿದೆ. ಕಂಪನಿಯು ತನ್ನ ಎಲ್ಲಾ ಉತ್ಪನ್ನ ವಿಭಾಗಗಳಲ್ಲಿ ವಾಲ್ಯೂಮ್ ಆಧಾರಿತ ಬಲವಾದ ಬೆಳವಣಿಗೆಯನ್ನು ದಾಖಲಿಸಿದ್ದು, ತೆರಿಗೆ ನಂತರದ ಲಾಭದಲ್ಲಿ (ಪಿಎಟಿ) ಶೇ. 36.3 ರಷ್ಟು ಏರಿಕೆ ಕಂಡಿದೆ.
ಆರ್ಥಿಕ ಫಲಿತಾಂಶಗಳ ಕುರಿತು ಮಾತನಾಡಿದ ನೆಸ್ಲೆ ಇಂಡಿಯಾದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮನೀಶ್ ತಿವಾರಿ ಅವರು, “ಪ್ರಸಕ್ತ ತ್ರೈಮಾಸಿಕದಲ್ಲಿ ನಮ್ಮ ಎಲ್ಲಾ ಉತ್ಪನ್ನ ವಿಭಾಗಗಳಲ್ಲೂ ಸಮಗ್ರ ಹಾಗೂ ಭರ್ಜರಿ ಬೆಳವಣಿಗೆ ಮುಂದುವರಿದಿದೆ ಎಂಬುದನ್ನು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಕಂಪನಿಯ ಒಟ್ಟು ಮಾರಾಟವು ಶೇ. 20.5 ರಷ್ಟು ಹೆಚ್ಚಳದೊಂದಿಗೆ ₹6,782.2 ಕೋಟಿ ರೂಪಾಯಿಗಳನ್ನು ತಲುಪಿದೆ. ಇದಕ್ಕೆ ಪ್ರಮುಖವಾಗಿ ಎರಡಂಕಿಯ ಬಲವಾದ ವಾಲ್ಯೂಮ್ ಬೆಳವಣಿಗೆಯೇ ಕಾರಣವಾಗಿದೆ.
ನಮ್ಮ ಕಾರ್ಯಾಚರಣೆ ಗಳಲ್ಲಿ ದಕ್ಷತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಬ್ರ್ಯಾಂಡ್ಗಳ ಪ್ರಚಾರದ ಮೇಲಿನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ. ಪರಿಣಾಮವಾಗಿ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳು ಶೇ. 46 ರಷ್ಟು ಏರಿಕೆಯಾಗಿವೆ. ಕಂಪನಿಯ ಇಬಿಐಟಿಡಿಎ ಮಾರ್ಜಿನ್ ಶೇ. 23.8 ರಷ್ಟಿದ್ದು ಉತ್ತಮ ಮಟ್ಟದಲ್ಲಿದೆ. ಈ ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭವು ₹1,026.8 ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 36.3 ರಷ್ಟು ಹೆಚ್ಚಳವಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Election Commission Chalo on Sept.1: ಎಸ್ಐಆರ್ ಪ್ರಕ್ರಿಯೆ ದೋಷಪೂರಿತ: ಸೆ.1ರಂದು ಎಲೆಕ್ಷನ್ ಕಮಿಷನ್ ಚಲೋ
ಮುಂದುವರಿದು ಮಾತನಾಡಿದ ಅವರು, “ಹೆಚ್ಚುತ್ತಿರುವ ಹಣದುಬ್ಬರ, ಅದರಲ್ಲೂ ವಿಶೇಷವಾಗಿ ಆಹಾರ ಹಣದುಬ್ಬರವು ಇಂದಿನ ಕಠಿಣ ವಾಸ್ತವವಾಗಿದೆ. ನಿರಂತರ ನಾವೀನ್ಯತೆ, ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಬ್ರ್ಯಾಂಡ್ಗಳ ಮೇಲಿನ ನಿರಂತರ ಹೂಡಿಕೆ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಒತ್ತಡವನ್ನು ತಗ್ಗಿಸಲು ಉತ್ಪಾದಕತೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ನಾವು ಈ ಬಾಹ್ಯ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇವೆ. ಇಂತಹ ಸವಾಲಿನ ವಾತಾವರಣದಲ್ಲೂ ಕರ್ತವ್ಯ ನಿರ್ವಹಿಸಿದ ನಮ್ಮ ತಂಡಗಳ ಅಸಾಧಾರಣ ಬದ್ಧತೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹಾಗೂ ನಿಖರ ಅನುಷ್ಠಾನಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.
“ನೆಸ್ಲೆ ಇಂಡಿಯಾದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟವೇ ಗ್ರಾಹಕರ ಅಚಲ ನಂಬಿಕೆಯ ಬುನಾದಿಯಾಗಿದೆ. ನಮ್ಮ ವಿವಿಧ ಉತ್ಪಾದನಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹೋದ್ಯೋಗಿಗಳ ಅಚಲ ಬದ್ಧತೆಯ ಬಗ್ಗೆ