ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೆಕ್ಸ್ಟ್ ಭಾರತ್ ವೆಂಚರ್ಸ್‌ ನಿಂದ ₹ 2ಸಾವಿರ ಕೋಟಿ ಮೌಲ್ಯದ ದೇಶದ ಅತಿದೊಡ್ಡ ಇಂಪ್ಯಾಕ್ಟ್ ವೆಂಚರ್ ಫಂಡ್ ಜಾರಿ

ಈ ಯೋಜನೆಯು ಭಾರತದ ರಾಷ್ಟ್ರೀಯ ಆದ್ಯತೆಗಳಾದ ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗ ಸೃಷ್ಟಿ ಮಾಡುವ, ರೈತರ ಆದಾಯವನ್ನು ಸುಧಾರಿಸುವ, ಗ್ರಾಮೀಣ ಮೌಲ್ಯ ಸರಪಳಿಗಳನ್ನು ಬಲಪಡಿಸುವ ಮತ್ತು ಮಹಿಳಾ ನೇತೃತ್ವದ ಉದ್ಯಮಶೀಲತೆಯನ್ನು ಉತ್ತೇಜಿಸುವ ಸ್ಥಳೀಯ ಉದ್ಯಮಗಳಿಗೆ ಇದು ಭಾರಿ ಬೆಂಬಲ ನೀಡಲಿದೆ.

ಬೆಂಗಳೂರು: ನೆಕ್ಸ್ಟ್ ಭಾರತ್ ವೆಂಚರ್ಸ್ ಐಎಫ್‌ಎಸ್‌ಸಿ ಪ್ರೈವೇಟ್ ಲಿಮಿಟೆಡ್ ಇಂದು ತನ್ನ ₹ 2,000 ಕೋಟಿ ಮೌಲ್ಯದ ಎರಡನೇ ಫಂಡ್ ಅನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದೆ. ಇದು ಭಾರತದಲ್ಲೇ ಅತ್ಯಂತ ದೊಡ್ಡ ಇಂಪ್ಯಾಕ್ಟ್- ಕೇಂದ್ರಿತ ವೆಂಚರ್ ಫಂಡ್‌ ಗಳಲ್ಲಿ ಒಂದಾಗಿದೆ. ಈ ಎರಡನೇ ಬೃಹತ್ ಫಂಡ್ ಗ್ರಾಮೀಣ ಭಾರತ ಹಾಗೂ ನಗರ ಪ್ರದೇಶಗಳಿಗೆ ವಲಸೆ ಬಂದ ಮತ್ತು ಸಮಾಜದ ಹಿಂದುಳಿದ ವರ್ಗಗಳ ಜೀವನಮಟ್ಟ ಹಾಗೂ ಸುಸ್ಥಿರ ಜೀವನೋಪಾಯ ಸುಧಾರಿಸಲು ಶ್ರಮಿಸುತ್ತಿರುವ “ಇಂಪ್ಯಾಕ್ಟ್ ಉದ್ಯಮಿಗಳಿಗೆ” ಹೆಚ್ಚಿನ ಬೆಂಬಲ ಒದಗಿಸಲು ನೆಕ್ಸ್ಟ್ ಭಾರತ್ ಸಂಸ್ಥೆಗೆ ನೆರವಾಗಲಿದೆ.ನೆಕ್ಸ್ಟ್ ಭಾರತ್ ವೆಂಚರ್ಸ್ ಕೃಷಿ, ಗ್ರಾಮೀಣ ಪೂರೈಕೆ ಸರಪಳಿಗಳು, ಹಣಕಾಸು ಒಳಗೊಳ್ಳುವಿಕೆ, ಆರೋಗ್ಯ ರಕ್ಷಣೆ, ಗ್ರಾಮೀಣ ಸಾರಿಗೆ ಮತ್ತು ಸಾಮಾಜಿಕ ಒಳಿತಿಗಾಗಿ ಎಐ ನಂತಹ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿರುವ 2 ವರ್ಷ ಹಳೆಯ ಸಂಸ್ಥೆಯಾಗಿದೆ.

ಈ ಯೋಜನೆಯು ಭಾರತದ ರಾಷ್ಟ್ರೀಯ ಆದ್ಯತೆಗಳಾದ ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗ ಸೃಷ್ಟಿ ಮಾಡುವ, ರೈತರ ಆದಾಯವನ್ನು ಸುಧಾರಿಸುವ, ಗ್ರಾಮೀಣ ಮೌಲ್ಯ ಸರಪಳಿಗಳನ್ನು ಬಲಪಡಿಸುವ ಮತ್ತು ಮಹಿಳಾ ನೇತೃತ್ವದ ಉದ್ಯಮಶೀಲತೆಯನ್ನು ಉತ್ತೇಜಿಸುವ ಸ್ಥಳೀಯ ಉದ್ಯಮಗಳಿಗೆ ಇದು ಭಾರಿ ಬೆಂಬಲ ನೀಡಲಿದೆ. ನೆಕ್ಸ್ಟ್ ಭಾರತ್‌ ನ ಈ ನೂತನ ಫಂಡ್ ಬಿಡುಗಡೆಯು, ಸಂಸ್ಥೆಯ ಮೊದಲ ₹ 340 ಕೋಟಿ ಫಂಡ್ ನ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಮೂಡಿಬಂದಿದೆ.

ಇದನ್ನೂ ಓದಿ: Ganesh Bhat Column: ಭಾರತದ ಜೆನ್ ಝೀ ಮುಂದಿನ ದಾರಿ ಯಾವುದು?

ಗ್ರಾಮೀಣ ಮತ್ತು ಅಸಂಘಟಿತ ವಲಯದ ಕೋಟ್ಯಂತರ ಭಾರತೀಯರ ನೈಜ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಗ್ರಾಮೀಣ ಉದ್ಯಮಿಗಳನ್ನು ಪೋಷಿಸುವಲ್ಲಿ, ದೀರ್ಘಾವಧಿಯ ಮತ್ತು ತಾಳ್ಮೆಯಿಂದ ನಡೆಸುವ ಬಂಡವಾಳ ವಿಧಾನವು ಎಷ್ಟು ಯಶಸ್ವಿಯಾಗಿದೆ ಎಂಬುದನ್ನು ಮೊದಲ ಫಂಡ್ ಸಾಬೀತುಪಡಿಸಿದೆ. ನೆಕ್ಸ್ಟ್ ಭಾರತ್ ಸಂಸ್ಥೆಯು ಇದುವರೆಗೆ 50 ಕ್ಕೂ ಹೆಚ್ಚು ಇಂಪ್ಯಾಕ್ಟ್ ಸ್ಟಾರ್ಟ್‌ ಅಪ್‌ ಗಳಿಗೆ ಬೆಂಬಲ ನೀಡಿದ್ದು, ಬಂಡವಾಳ, ಮಾರ್ಗದರ್ಶನ ಮತ್ತು ಪರಿಸರ ವ್ಯವಸ್ಥೆಯ ಬೆಂಬಲದ ಮೂಲಕ ಅವುಗಳಲ್ಲಿ 20ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ. ಈ ಪೈಕಿ ಹಲವಾರು ಸ್ಟಾರ್ಟ್‌ ಅಪ್‌ ಗಳು ಈಗಾಗಲೇ ಜಪಾನ್‌ ನ ಪ್ರಮುಖ ಕಂಪನಿಗಳೊಂದಿಗೆ ಪ್ರಾಯೋಗಿಕ ವ್ಯವಹಾರವನ್ನು ಸಹ ಆರಂಭಿಸಿವೆ.

ಈ ಮಹತ್ವದ ಫಂಡ್ ಘೋಷಣೆಯ ಕುರಿತು ಮಾತನಾಡಿದ ನೆಕ್ಸ್ಟ್ ಭಾರತ್ ವೆಂಚರ್ಸ್‌ ನ ಸಂಸ್ಥಾಪಕ ಮತ್ತು ಸಿಇಒ ಹಾಗೂ ಐಐಟಿ ಹೈದರಾಬಾದ್‌ ನ ಹಳೆಯ ವಿದ್ಯಾರ್ಥಿ ವಿಪುಲ್ ಜಿಂದಾಲ್ ನಾಥ್ ಅವರು, "ಸಾಮಾಜಿಕ ಬದಲಾವಣೆ ಮತ್ತು ವ್ಯವಹಾರ ಎರಡೂ ಒಟ್ಟಿಗೆ ಸಾಗಬಹುದು ಎಂಬುದಕ್ಕೆ ನಮ್ಮ ಮೊದಲ ಫಂಡ್ ಸಾಕ್ಷಿಯಾಗಿದೆ. ಜನರ ಜೀವನೋಪಾಯ ಹಾಗೂ ಸುಧಾರಿತ ಜೀವನಮಟ್ಟವನ್ನು ಆಧರಿಸಿ ಬಲಿಷ್ಠ ಉದ್ಯಮಗಳನ್ನು ಕಟ್ಟಬಹುದು ಮತ್ತು ಅವುಗಳನ್ನು ದೊಡ್ಡ ಮಟ್ಟಕ್ಕೆ ಬೆಳೆಸಬಹುದು ಎಂಬುದನ್ನು ಇದು ನಿರೂಪಿಸಿದೆ.

ನಮ್ಮ ಇಂಪ್ಯಾಕ್ಟ್ ಸಂಸ್ಥಾಪಕರು ವ್ಯವಹಾರದ ಯಶಸ್ಸನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ತಳಮಟ್ಟದ ಬದಲಾವಣೆಗಾಗಿ ಶ್ರಮಿಸುತ್ತಿರುವ ವಿನೂತನ ಆವಿಷ್ಕಾರರಾಗಿದ್ದಾರೆ. ನಮ್ಮ ಪೋರ್ಟ್‌ ಫೋಲಿಯೋದಲ್ಲಿರುವ ಶೇಕಡಾ 20ಕ್ಕೂ ಹೆಚ್ಚು ಕಂಪನಿಗಳು ತಮ್ಮ ಆರಂಭಿಕ ವರ್ಷಗಳಲ್ಲೇ ಈಗಾಗಲೇ ಲಾಭದಾಯಕತೆಯತ್ತ ಮುನ್ನಡೆಯುತ್ತಿರುವುದು ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ" ಎಂದು ತಿಳಿಸಿದರು.ಮಾತು ಮುಂದುವರಿಸಿದ ಅವರು, "ಕೇವಲ ವಾಣಿಜ್ಯ ಮೌಲ್ಯವನ್ನು ಸೃಷ್ಟಿಸುವುದಷ್ಟೇ ಅಲ್ಲದೆ, ನಮ್ಮ ಗ್ರಾಮೀಣ ಮತ್ತು ಅಸಂಘಟಿತ ಸಮುದಾಯಗಳ ಸಾಮಾಜಿಕ ಸಮಸ್ಯೆಗಳನ್ನು ತಳಮಟ್ಟದಿಂದ ಪರಿಹರಿಸುವಂತಹ ಸ್ಟಾರ್ಟ್‌ ಅಪ್‌ ಗಳನ್ನು ಕಟ್ಟಲು ನಾನು ಮಹತ್ವಾಕಾಂಕ್ಷಿ ಸಂಸ್ಥಾಪಕರಿಗೆ ಕರೆ ನೀಡುತ್ತೇನೆ. ಏಕೆಂದರೆ ಗ್ರಾಮೀಣ ಭಾಗವೇ ಭಾರತದ ಹೃದಯವಾಗಿದೆ. ನೀವು ಸಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತರಲು ಯಶಸ್ವಿ ಯಾದರೆ, ವಾಣಿಜ್ಯಿಕ ಲಾಭಗಳು ತಾವಾಗಿಯೇ ಬೆನ್ನತ್ತಿ ಬರುತ್ತವೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ" ಎಂದು ತಿಳಿಸಿದರು.

ಸುಜುಕಿ ಮೋಟಾರ್ ಕಾರ್ಪೊರೇಷನ್‌ ನ ರೆಪ್ರೆಸೆಂಟೇಟಿವ್ ಡೈರೆಕ್ಟರ್ ಮತ್ತು ಪ್ರೆಸಿಡೆಂಟ್ ತೋಷಿಹಿರೊ ಸುಜುಕಿ ಅವರು ಮಾತನಾಡಿ, "ಭಾರತದ ಮೇಲಿನ ಜಪಾನ್‌ ನ ಹೂಡಿಕೆಯು ಯಾವಾಗಲೂ ಭಾರತದ ಸಾಮರ್ಥ್ಯದ ಮೇಲಿನ ಪರಸ್ಪರ ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ನಮ್ಮ ನಾಲ್ಕು ದಶಕಗಳ ಸುದೀರ್ಘ ಪಾಲುದಾರಿಕೆಯೇ ಅತ್ಯುತ್ತಮ ಸಾಕ್ಷಿಯಾಗಿದೆ. ನಾವು ನೀಡಿದ ಅತ್ಯಂತ ಪ್ರಮುಖ ಕೊಡುಗೆ ಎಂದರೆ ಕೇವಲ ಕಾರುಗಳಲ್ಲ, ಬದಲಿಗೆ ಅದರಿಂದ ಹುಟ್ಟಿಕೊಂಡ ಉದ್ಯಮಗಳು. ಸಾಮಾನ್ಯ ಅಂಗಡಿಗಳು ಇಂದು ಪ್ರಮುಖ ಡೀಲರ್‌ ಶಿಪ್‌ ಗಳಾಗಿ ಮಾರ್ಪಟ್ಟಿವೆ, ಸಣ್ಣ ರಿಪೇರಿ ಶೆಡ್‌ʼಗಳು ಆಟೋ-ಪಾರ್ಟ್ಸ್ ಪೂರೈಕೆದಾರರಾಗಿ ಬೆಳೆದಿವೆ ಮತ್ತು ಒಬ್ಬನೇ ಒಬ್ಬ ಪೂರೈಕೆದಾರನಿಂದ ಇಡೀ ಎಸ್‌ಎಂಇ ಪರಿಸರ ವ್ಯವಸ್ಥೆಯೇ ಸೃಷ್ಟಿಯಾಗಿದೆ. ಈ ಮೂಲಕ ನಾವು ಭಾರತದಾದ್ಯಂತ ಅಂದಾಜು 3,000ಕ್ಕೂ ಹೆಚ್ಚು ಉದ್ಯಮಿಗಳನ್ನು ಸೃಷ್ಟಿಸಿದ್ದೇವೆ. ಇವರಲ್ಲಿ ಪ್ರತಿಯೊಬ್ಬರೂ ಸ್ಥಳೀಯ ಉದ್ಯೋಗ ಮತ್ತು ಆದಾಯದ ಪ್ರೇರಕ ಶಕ್ತಿಯಾಗಿದ್ದಾರೆ.

ನಮ್ಮ ಈ ಫಂಡ್-2 ಮೂಲಕ ನಾವು ಈ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದೇವೆ. ನೈಜ ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ಭಾರತ ಸರ್ಕಾರದೊಂದಿಗೆ ಈ ಹಾದಿಯಲ್ಲಿ ಸಾಗಲು ನಾವು ಹೆಮ್ಮೆಪಡುತ್ತೇವೆ" ಎಂದು ಹೇಳಿದರು.2024ರಲ್ಲಿ ಸ್ಥಾಪನೆಯಾದ ನೆಕ್ಸ್ಟ್ ಭಾರತ್ ವೆಂಚರ್ಸ್ ಸಂಸ್ಥೆಯು, ಕೇವಲ ಬಂಡವಾಳ ಹೂಡಿಕೆಗೆ ಮಾತ್ರ ಸೀಮಿತವಾಗದೆ ಸಂಸ್ಥಾಪಕರಿಗೆ ಸಂಪೂರ್ಣ ಬೆಂಬಲ ನೀಡುವ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತಿದೆ. ಇ

ದರ ಪ್ರಮುಖ ಹತ್ತು ದಿನಗಳ ರೆಸಿಡೆನ್ಸಿ ಕಾರ್ಯಕ್ರಮವು ಆರಂಭಿಕ ಹಂತದ ಉದ್ಯಮಿಗಳಿಗೆ ಮಾರ್ಗದರ್ಶನ, ನೆಟ್‌ ವರ್ಕ್ ಮತ್ತು ₹ 1 ರಿಂದ ₹ 5 ಕೋಟಿವರೆಗಿನ ಈಕ್ವಿಟಿ ಹೂಡಿಕೆಗಳ ಮೂಲಕ ಬೆಂಬಲ ನೀಡಿ, ಅವರು ಸುಸ್ಥಿರ ಉದ್ಯಮಗಳಾಗಿ ಬೆಳೆಯಲು ನೆರವಾಗುತ್ತದೆ.

ಇದಕ್ಕೆ ಪೂರಕವಾಗಿ, ನೆಕ್ಸ್ಟ್ ಭಾರತ್ ಸಂಸ್ಥೆಯು ವೈ ಕ್ಲಬ್ ಎಂಬ ಸಂಸ್ಥಾಪಕರ ನೇತೃತ್ವದ ಸಮುದಾಯವನ್ನು ಪ್ರಾರಂಭಿಸಿದೆ. ಇದು ಇಂಪ್ಯಾಕ್ಟ್ ಉದ್ಯಮಿಗಳು ತಮ್ಮ ಉದ್ಯಮಗಳನ್ನು ದೀರ್ಘಕಾಲದವರೆಗೆ ಯಶಸ್ವಿಯಾಗಿ ಮುನ್ನಡೆಸಲು ಮತ್ತು ಬೆಳೆಸಲು ಪರಸ್ಪರ ಸಹಯೋಗ, ಧನಸಹಾಯ ಮತ್ತು ದೀರ್ಘಾವಧಿಯ ಬೆಂಬಲವನ್ನು ನೀಡುತ್ತದೆ.ಈ ₹ 2,000 ಕೋಟಿ ಮೌಲ್ಯದ ಎರಡನೇ ಫಂಡ್ ನೆಕ್ಸ್ಟ್ ಭಾರತ್‌ನ ಹೂಡಿಕೆ ಸಾಮರ್ಥ್ಯವನ್ನು ಗಣನೀಯವಾಗಿ ಬೆಳೆಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ನೆಕ್ಸ್ಟ್ ಭಾರತ್ ಹಲವಾರು ಭರವಸೆಯ ಗ್ರಾಮೀಣ ಸ್ಟಾರ್ಟ್‌ ಅಪ್‌ ಗಳಲ್ಲಿ ಹೂಡಿಕೆ ಮಾಡಿದೆ.

ಅವುಗಳಲ್ಲಿ, ಅಧಿಕೃತ ಭಾರತೀಯ ಜಾನಪದ ಕಲೆಯ ಮಾರುಕಟ್ಟೆ ಮೀಮೆರಾಕಿ, ಸೈಕಲ್ ಮತ್ತು ರಿಕ್ಷಾಗಳಿಗೆ ಕೈಗೆಟುಕುವ ದರದಲ್ಲಿ ಇ-ಮೊಬಿಲಿಟಿ ಕಿಟ್‌ ಗಳನ್ನು ಒದಗಿಸುವ ಗ್ರಾಮೀಣ ಸಾರಿಗೆ ಬ್ರ್ಯಾಂಡ್ ಇ-ಬಿಕ್, ಸಣ್ಣ ಹಿಡುವಳಿದಾರ ರೈತರಿಗೆ ಕೈಗೆಟುಕುವ ದರದಲ್ಲಿ ಯಾಂತ್ರೀಕರಣ ಸೌಲಭ್ಯ ಒದಗಿಸುವ ಸಂಸ್ಥೆ ಎಸ್ ಜಿ ಬಿ ಆಗ್ರೋ, ವಿಕಲ ಚೇತನರ ಜೀವನೋಪಾಯಕ್ಕಾಗಿ ಇರುವ ಭಾರತದ ಅತಿ ದೊಡ್ಡ ವೇದಿಕೆ ಅಟಿಪಿಕಲ್ ಅಡ್ವಾಂಟೇಜ್ ಪ್ರಮುಖವಾದವುಗಳು.ಇವುಗಳಲ್ಲಿ ಹಲವು ಸಂಸ್ಥೆಗಳು ಇಂದು ವಾಣಿಜ್ಯಿಕ ಯಶಸ್ಸನ್ನು ಸಾಧಿಸುವುದರ ಜೊತೆಗೆ, ತಾವು ಸೇವೆ ಸಲ್ಲಿಸುತ್ತಿರುವ ಸಮುದಾಯಗಳಲ್ಲಿ ಅರ್ಥಪೂರ್ಣ ಸಾಮಾಜಿಕ ಬದಲಾವಣೆಯನ್ನು ತರುವ ಮೂಲಕ ಯಶಸ್ವಿ ಬ್ರ್ಯಾಂಡ್‌ ಗಳಾಗಿ ಹೊರಹೊಮ್ಮಿವೆ.