ನವದೆಹಲಿ, ಫೆ. 1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಭಾನುವಾರ ಲೋಕಸಭೆಯಲ್ಲಿ 2026–27ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ (Union Budget 2026) ಮಂಡಿಸಿದರು. ಈ ಬಜೆಟ್ ಭಾಷಣಕ್ಕೆ ಅವರು ಕೇವಲ 81 ನಿಮಿಷಗಳನ್ನು ಮಾತ್ರ ತೆಗೆದುಕೊಂಡಿದ್ದು, ಅಂದರೆ 1 ಗಂಟೆ 25 ನಿಮಿಷ. ಅಮೃತಕಾಲದ ಮೊದಲ ಬಜೆಟ್ ಅಧಿವೇಶನ ಎಂಬ ಹೆಗ್ಗಳಿಕೆಯ ಜತೆಗೆ, ಕಡಿಮೆ ಸಮಯದಲ್ಲಿ ಮಂಡಿಸಲಾದ ಬಜೆಟ್ ಎಂಬ ಬಿರುದನ್ನು ಪಡೆದುಕೊಂಡಿದೆ.
ಪತ್ರಿಕಾ ಮಾಹಿತಿ ಬ್ಯೂರೋ (PIB) ಬಿಡುಗಡೆ ಮಾಡಿದ ಅಧಿಕೃತ ವಿಡಿಯೊ ಪ್ರಕಾರ ಈ ಬಜೆಟ್ ಭಾಷಣಕ್ಕೆ ನಿರ್ಮಲಾ ಸೀತಾರಾಮನ್ ಸುಮಾರು 81 ನಿಮಿಷಗಳು. ಅಂದರೆ 1 ಗಂಟೆ 21 ನಿಮಿಷ ಸಮಯ ತೆಗೆದುಕೊಂಡಿದ್ದಾರೆ. ವಿಶೇಷ ಎಂದರೆ ದೀರ್ಘಾವಧಿಯ ಬಜೆಟ್ ಭಾಷಣದ ದಾಖಲೆ ಕೂಡ ನಿರ್ಮಲಾ ಸೀತಾರಾಮನ್ ಅವರದ್ದೇ. 2020ರಲ್ಲಿ ಅವರು ನಿರಂತರವಾಗಿ 2 ಗಂಟೆ 45 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡುವ ಮೂಲಕ, ಅದುವರೆಗೆ ಇದ್ದ ಎಲ್ಲ ದಾಖಲೆಗಳನ್ನು ಮುರಿದಿದ್ದರು. ಭಾಷಣದ ಮಧ್ಯೆ ಸ್ವಲ್ಪ ವಿರಾಮ ಪಡೆದು ಪಾನೀಯ ಸೇವಿಸಿ, ನಂತರ ಮತ್ತೆ ಬಜೆಟ್ ಓದುವಿಕೆಯನ್ನು ಮುಂದುವರಿಸಿದ್ದು ಗಮನಾರ್ಹ. ಬಜೆಟ್ ಇತಿಹಾಸದಲ್ಲಿ ಇಷ್ಟೊಂದು ದೀರ್ಘಾವಧಿಯ ಭಾಷಣವನ್ನು ನಡೆಸಿದವರಲ್ಲಿ ಅವರೇ ಮೊದಲಿಗರು.
"ಈ ಬಜೆಟ್ 2047 ರ ವಿಕಸಿತ ಭಾರತಕ್ಕೆ ಅಡಿಪಾಯ"; ವಿತ್ತ ಸಚಿವೆಯನ್ನು ಹೊಗಳಿದ ಮೋದಿ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೂರನೇ ಬಜೆಟ್ ಇದಾಗಿದ್ದು, ಸೀತಾರಾಮನ್ ಮಂಡಿಸುತ್ತಿರುವ ಒಂಭತ್ತನೇ ಮುಂಗಡಪತ್ರ ಇದಾಗಿದೆ. 2019ರಲ್ಲಿ ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದು, ಆ ಭಾಷಣವು 2 ಗಂಟೆ 17 ನಿಮಿಷಗಳ ಕಾಲ ನಡೆಯಿತು. ಅದು ಅವರ ಎರಡನೇ ಅತಿ ದೀರ್ಘ ಬಜೆಟ್ ಭಾಷಣವಾಗಿತ್ತು. ಹೀಗಾಗಿ 2026ರ ಬಜೆಟ್ ಭಾಷಣವು ಅವರ ಹಿಂದಿನ ಭಾಷಣಗಳ ಹೋಲಿಕೆಯಲ್ಲಿ ಕಡಿಮೆ ಅವಧಿಯದ್ದೆಂದು ಹೇಳಬಹುದು.
ರಾಜನಾಥ್ ಸಿಂಗ್ ಅವರ ಪ್ರತಿಕ್ರಿಯೆ:
ಇನ್ನು, ಪದಗಳ ಸಂಖ್ಯೆಯ ಆಧಾರದಲ್ಲಿ ಭಾರತದ ಇತಿಹಾಸದಲ್ಲೇ ಅತಿ ದೀರ್ಘ ಬಜೆಟ್ ಭಾಷಣ ಮಾಡಿದ ಗೌರವವು ಡಾ. ಮನಮೋಹನ್ ಸಿಂಗ್ ಅವರ ಪಾಲಾಗಿದೆ. 1991ರಲ್ಲಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ನೇತೃತ್ವದ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು, 18,700 ಪದಗಳ ಬೃಹತ್ ಬಜೆಟ್ ಭಾಷಣದ ಮೂಲಕ ಇತಿಹಾಸ ಸೃಷ್ಟಿಸಿದ್ದರು.
ಆದಾಗ್ಯೂ ಈ ವರ್ಷದ ಬಜೆಟ್ ಭಾಷಣವೇ ಅತಿ ಕಡಿಮೆ ಅವಧಿಯದ್ದಲ್ಲ. 1977ರಲ್ಲಿ ವಿತ್ತ ಸಚಿವ ಹೀರೂಭಾಯಿ ಎಂ. ಪಟೇಲ್ ಅವರು ಕೇವಲ 800 ಪದಗಳ ಬಜೆಟ್ ಭಾಷಣವನ್ನು ಅರ್ಧಗಂಟೆಗೂ ಕಡಿಮೆ ಅವಧಿಯಲ್ಲಿ ಮುಗಿಸಿದ್ದರು. ಆ ಭಾಷಣವೇ ಇಂದಿಗೂ ಭಾರತದ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯ ಬಜೆಟ್ ಭಾಷಣವೆಂದು ದಾಖಲಾಗಿದೆ.