ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026: ಮದ್ಯ ಪ್ರಿಯರಿಗೆ ಮತ್ತೆ ಶಾಕ್‌; ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಲಿಸ್ಟ್‌

Budget Session 2026 Parliament: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಮ್ಮ ದಾಖಲೆಯ ಒಂಬತ್ತನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ತೆರಿಗೆದಾರರು ಜನ ಸಾಮಾನ್ಯರು ಸೇರಿಂದತೆ ಹಲವು ವರ್ಗದ ಜನರಿಗೆ ಗುಡ್‌ ನ್ಯೂಸ್‌ ನೀಡಿದೆ. ಹಲವು ವಸ್ತುಗಳ ಮೇಲಿನ ಸುಂಕವನ್ನು ಇಳಿಸಿದ್ದರೆ, ಇನ್ನೂ ಕೆಲ ವಸ್ತುಗಳು ದುಬಾರಿಯಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಮ್ಮ ದಾಖಲೆಯ ಒಂಬತ್ತನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ತೆರಿಗೆದಾರರು ಜನ ಸಾಮಾನ್ಯರು ಸೇರಿಂದತೆ ಹಲವು ವರ್ಗದ ಜನರಿಗೆ ಗುಡ್‌ ನ್ಯೂಸ್‌ ನೀಡಿದೆ. ಹಲವು ವಸ್ತುಗಳ ಮೇಲಿನ ಸುಂಕವನ್ನು ಇಳಿಸಿದ್ದರೆ, ಇನ್ನೂ ಕೆಲ ವಸ್ತುಗಳು ದುಬಾರಿಯಾಗಿದೆ. MSME ಗಳು ಮತ್ತು ರತ್ನಗಳು ಮತ್ತು ಆಭರಣಗಳು, ಸಿದ್ಧ ಉಡುಪುಗಳು ಸೇರಿದಂತೆ ಕೆಲ ವಸ್ತುಗಳ ಮೇಲಿನ ಸುಂಕ ಕಡಿಮೆ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಈ ಹೊಸ ಯೋಜನೆಯನ್ನು ಘೋಷಿಸಿದ್ದು, ಇದರ ಮುಖ್ಯ ಉದ್ದೇಶ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಉತ್ಪಾದನೆಯನ್ನು ಉತ್ತೇಜಿಸುವುದಾಗಿದೆ. ಭಾರತದ ಭವಿಷ್ಯದ ಸೆಕ್ಟರ್ ಎನಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ. ಎರಡನೇ ಆವೃತ್ತಿಯ ಸೆಮಿಕಂಡಕ್ಟರ್ ಮಿಷನ್​ನಲ್ಲಿ ಉಪಕರಣಗಳು ಮತ್ತು ವಸ್ತುಗಳ ತಯಾರಿಕೆ, ಫುಲ್ ಸ್ಟ್ಯಾಕ್ ಇಂಡಿಯನ್ ಐಪಿ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ.

ವಿಡಿಯೋ ನೋಡಿ

ಇಳಿಕೆ ಏನು?

ಸರ್ಕಾರವು ಪ್ರಮುಖ ಘಟಕಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿದರೆ, ಮೇಕ್-ಇನ್-ಇಂಡಿಯಾ ಅಭಿಯಾನಕ್ಕೆ ಅನುಗುಣವಾಗಿ ಭಾರತದಲ್ಲಿ ತಯಾರಿಸಿದ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಅಗ್ಗವಾಗುವ ನಿರೀಕ್ಷೆ ಇದೆ. ಆರೋಗ್ಯ ವಿಮೆ, ವಿದ್ಯುತ್ ವಾಹನಗಳು, ಕ್ಯಾನ್ಸರ್ ಔಷಧಗಳು, ಕ್ರೀಡಾ ಉಪಕರಣಗಳು ಮತ್ತು ಕೆಲವು ದೇಶೀಯವಾಗಿ ತಯಾರಿಸಿದ ಗೃಹೋಪಯೋಗಿ ಉಪಕರಣಗಳನ್ನು ಸಹ ಹೆಚ್ಚು ಕೈಗೆಟುಕುವಂತೆ ಆಗಿದೆ. ಸೋಲಾರ್‌ ಬಿಡಿ ಭಾಗಗಗಳು, ಕ್ಯಾನ್ಸರ್‌ ಔಷಧಗಳು, ವಿದೇಶ ಯಾತ್ರೆ, ಮೈಕ್ರೋ ಓವನ್‌, ಬಟ್ಟೆ ಸೆಣಬು ಉತ್ಪನ್ನಗಳು ಇಳಿಕೆ ಕಾಣಲಿಗವೆ.

ಏನು ದುಬಾರಿಯಾಗಬಹುದು?

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಕಸ್ಟಮ್ ಸುಂಕವನ್ನು ಹೆಚ್ಚಿಸಿದರೆ, ವಿದೇಶಗಳಲ್ಲಿ ತಯಾರಾಗುವ ಐಷಾರಾಮಿ ಕೈಗಡಿಯಾರಗಳು, ಪಾದರಕ್ಷೆಗಳು ಮತ್ತು ಬಟ್ಟೆಗಳು ಭಾರತದಲ್ಲಿ ಹೆಚ್ಚು ದುಬಾರಿಯಾಗುತ್ತವೆ. ಇನ್ನು ತಂಬಾಕು ಉತ್ಪನ್ನಗಳಾದ ಸಿಗರೇಟ್‌, ಪಾನ್‌ ಮಸಾಲಾ ಸೇರಿದಂತೆ ಮದ್ಯದ ದರದಲ್ಲಿ ಏರಿಕೆಯಾಗಲಿದೆ. ಅಷ್ಟೇ ಅಲ್ಲದೇ ವಿಮಾನ ಬಿಡಿ ಭಾಗಗಳು ಏರಿಕೆಯಾಗಲಿವೆ.