ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾರುಕಟ್ಟೆ ಏರಿಳಿತದ ನಡುವೆಯೂ ಭರ್ಜರಿ ಲಾಭ ದಾಖಲಿಸಿದ 'ನುವಾಮಾ', ₹14 ಲಾಭಾಂಶ ಘೋಷಣೆ

ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದ ಆದಾಯವು 2026ನೇ ಆರ್ಥಿಕ ವರ್ಷದಲ್ಲಿ ಶೇ. 20 ರಷ್ಟು ಹೆಚ್ಚಾಗಿ 1,718 ಕೋಟಿ ರೂ. ತಲುಪಿದೆ. ಇದು ಕಂಪನಿಯ ಅತಿ ದೊಡ್ಡ ವಿಭಾಗ ವಾಗಿದ್ದು, ಇದರಲ್ಲಿ 'ನುವಾಮಾ ವೆಲ್ತ್' ಮತ್ತು 'ನುವಾಮಾ ಪ್ರೈವೇಟ್' ಎಂಬ ಎರಡು ಉಪ-ವಿಭಾಗ ಗಳಿವೆ. ಎರಡೂ ವಿಭಾಗಗಳೂ ಉತ್ತಮ ಆದಾಯ ತಂದಿದ್ದು, ಗ್ರಾಹಕರ ಆಸ್ತಿ ಮೌಲ್ಯವು 3,13,787 ಕೋಟಿ ರೂ.ಗೆ ಏರಿಕೆ ಕಂಡಿದೆ.

ಬೆಂಗಳೂರು: ಭಾರತದ ಮುಂಚೂಣಿ ಸಂಪತ್ತು ನಿರ್ವಹಣಾ ಸಂಸ್ಥೆ ನುವಾಮಾ 2026ನೇ ಆರ್ಥಿಕ ವರ್ಷದ ವಾರ್ಷಿಕ ಮತ್ತು 4ನೇ ತ್ರೈಮಾಸಿಕದ ಆರ್ಥಿಕ ವರದಿಯನ್ನು ಪ್ರಕಟಿ ಸಿದ್ದು, ಬಂಪರ್‌ ಲಾಭ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಭಾರೀ ಏರಿಳಿತಗಳ ನಡುವೆಯೂ ನುವಾಮಾ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಅತ್ಯುತ್ತಮ ಲಾಭ ಗಳಿಸಿದೆ.

ಆದಾಯ, ಲಾಭದಲ್ಲಿ ಭರ್ಜರಿ ಏರಿಕೆ

2025ನೇ ಆರ್ಥಿಕ ವರ್ಷದಲ್ಲಿ 2,901 ಕೋಟಿ ರೂ. ಇದ್ದ ಕಂಪನಿಯ ಆದಾಯ, 2026ನೇ ವರ್ಷದಲ್ಲಿ ಶೇ. 8ರಷ್ಟು ಏರಿಕೆಯಾಗಿ 3,122 ಕೋಟಿ ರೂ.ಗೆ ತಲುಪಿದೆ. ಇದೇ ಅವಧಿಯಲ್ಲಿ ನುವಾಮಾದ ಕಾರ್ಯಾಚರಣೆ ಲಾಭ 986 ಕೋಟಿ ರೂ.ನಿಂದ 1,049 ಕೋಟಿ ರೂ.ಗೆ ಜಿಗಿದಿದ್ದು, ಶೇ. 6ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Bangalore News: ಅಂತಾರಾಷ್ಟ್ರೀಯ ಲೆಕ್ಕಪತ್ರ ನಿರ್ವಹಣಾ ದಿನ ಪ್ರಯುಕ್ತ ಕಾರ್ಯತಂತ್ರ ಮತ್ತು ಸುಸ್ಥಿರ ಬೆಳವಣಿಗೆ ಕುರಿತು ಐಸಿಎಂಎಐ ನಿಂದ ಉನ್ನತ ಮಟ್ಟದ ವಿಚಾರ ಸಂಕಿರಣ

ಇನ್ನು ಮಾರ್ಚ್‌ 31ಕ್ಕೆ ಕೊನೆಗೊಂಡ ಕಳೆದ ಆರ್ಥಿಕ ವರ್ಷದ 4ನೇ ತ್ರೈಮಾಸಿಕದಲ್ಲಿ ಕಂಪನಿಯು 825 ಕೋಟಿ ರೂ. ಆದಾಯ ಗಳಿಸಿದ್ದು, 269 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಉತ್ತಮ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 14 ರೂ.ಗಳ ಲಾಭಾಂಶವನ್ನೂ ಘೋಷಿಸಿದೆ.

"2026ನೇ ವರ್ಷವು ನಮಗೆ ಹಲವು ಸವಾಲುಗಳನ್ನು ಒಡ್ಡಿತ್ತು. ಮಾರುಕಟ್ಟೆ ಅಸ್ಥಿರತೆ, ಕಠಿಣ ನಿಯಮಗಳು ಮತ್ತು ತೀವ್ರ ಸ್ಪರ್ಧೆಯ ನಡುವೆಯೂ ನಾವು ಅತ್ಯುತ್ತಮ ಬೆಳವಣಿಗೆ ಕಂಡಿದ್ದೇವೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಇದಕ್ಕಾಗಿ ನಾವು ಹೊಸ ತಂತ್ರಜ್ಞಾನ ಹಾಗೂ ಎಐ ಬಳಕೆ ಮಾಡುತ್ತಿದ್ದೇವೆ. ನಮ್ಮ ವ್ಯವಹಾರದ ಎಲ್ಲಾ ವಿಭಾಗಗಳಲ್ಲೂ ಲಾಭಾಂಶ ಹೆಚ್ಚಿದೆ," ಎಂದು ನುವಾಮಾ ಗ್ರೂಪ್‌ನ ಎಂಡಿ ಮತ್ತು ಸಿಇಒ ಆಶಿಶ್ ಕೆಹೈರ್ ತಿಳಿಸಿದರು.

ಉತ್ತಮ ಬೆಳವಣಿಗೆ ದಾಖಲಿಸಿದ ವಿಭಾಗಗಳು

ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದ ಆದಾಯವು 2026ನೇ ಆರ್ಥಿಕ ವರ್ಷದಲ್ಲಿ ಶೇ. 20 ರಷ್ಟು ಹೆಚ್ಚಾಗಿ 1,718 ಕೋಟಿ ರೂ. ತಲುಪಿದೆ. ಇದು ಕಂಪನಿಯ ಅತಿ ದೊಡ್ಡ ವಿಭಾಗ ವಾಗಿದ್ದು, ಇದರಲ್ಲಿ 'ನುವಾಮಾ ವೆಲ್ತ್' ಮತ್ತು 'ನುವಾಮಾ ಪ್ರೈವೇಟ್' ಎಂಬ ಎರಡು ಉಪ-ವಿಭಾಗಗಳಿವೆ. ಎರಡೂ ವಿಭಾಗಗಳೂ ಉತ್ತಮ ಆದಾಯ ತಂದಿದ್ದು, ಗ್ರಾಹಕರ ಆಸ್ತಿ ಮೌಲ್ಯವು 3,13,787 ಕೋಟಿ ರೂ.ಗೆ ಏರಿಕೆ ಕಂಡಿದೆ.

ಅಸೆಟ್ ಮ್ಯಾನೇಜ್‌ಮೆಂಟ್ ವಿಭಾಗದ ನಿರ್ವಹಣಾ ಶುಲ್ಕವು ಶೇ. 31ರಷ್ಟು ಹೆಚ್ಚಾಗಿದ್ದು, 77 ಕೋಟಿ ರೂ.ಗೆ ಮುಟ್ಟಿದೆ. ವರ್ಷಾಂತ್ಯಕ್ಕೆ ಕಂಪನಿಯು ನಿರ್ವಹಿಸುತ್ತಿರುವ ಆಸ್ತಿ ಮೌಲ್ಯ ಶೇ.13ರಷ್ಟು ಏರಿಕೆಯಾಗಿ 12,807 ಕೋಟಿ ರೂ. ತಲುಪಿದೆ.

ಅಸೆಟ್ ಸರ್ವಿಸ್ ಮತ್ತು ಕ್ಯಾಪಿಟಲ್ ಮಾರ್ಕೆಟ್ಸ್ ವಿಭಾಗದ ಆದಾಯದಲ್ಲಿ ಶೇ. 19ರಷ್ಟು ಕುಸಿತ ಕಂಡುಬಂದಿದ್ದರೂ, ಅಸೆಟ್ ಸರ್ವಿಸ್ ವಿಭಾಗವು ಶೇ. 12ರಷ್ಟು ಬೆಳವಣಿಗೆ ದಾಖ ಲಿಸಿದೆ. ವಿಶೇಷವಾಗಿ ಫಿಕ್ಸೆಡ್ ಇನ್‌ಕಮ್ ವಿಭಾಗದ ಆದಾಯ ಶೇ. 34ರಷ್ಟು ಹೆಚ್ಚಾಗಿದೆ.

ಕಳೆದ 30 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ನುವಾಮಾ ಭಾರತದ ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಾಗಿ ಬೆಳೆದಿದ್ದು, 13 ಲಕ್ಷಕ್ಕೂ ಹೆಚ್ಚು ಶ್ರೀಮಂತ ಗ್ರಾಹಕರು ಮತ್ತು 4,750ಕ್ಕೂ ಹೆಚ್ಚು ಭಾರತದ ಶ್ರೀಮಂತ ಕುಟುಂಬಗಳ 4,52,548 ಕೋಟಿ ರೂ. ಮೌಲ್ಯದ ಆಸ್ತಿಯನ್ನು ನಿರ್ವಹಿಸುತ್ತಿದೆ. ಹೂಡಿಕೆ ಸಲಹೆ, ಎಸ್ಟೇಟ್ ಪ್ಲಾನಿಂಗ್, ಷೇರು ಬ್ರೋಕಿಂಗ್ ಸೇರಿದಂತೆ ಹಲವು ಆರ್ಥಿಕ ಸೇವೆಗಳನ್ನು ಒದಗಿಸುವಲ್ಲಿ ನುವಾಮಾ ಮುಂಚೂಣಿಯಲ್ಲಿದೆ.