ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೈಲ ದರ 116 ಡಾಲರ್‌ಗೆ ಹೆಚ್ಚಳ, ಸೆನ್ಸೆಕ್ಸ್‌ 2,500 ಅಂಕ ಮಹಾ ಪತನ ; ಚಿನ್ನ-ಬೆಳ್ಳಿ ದರ ಇಳಿಕೆ

ಇರಾನ್‌ ಯುದ್ಧದ ಪರಿಣಾಮ ಕಚ್ಚಾ ತೈಲ ದರ ಗುರುವಾರ ಪ್ರತಿ ಬ್ಯಾರೆಲ್‌ಗೆ 116 ಡಾಲರ್‌ಗೆ ಜಿಗಿಯಿತು. ಇದರ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಪತನವಾಗಿದೆ. ಸೆನ್ಸೆಕ್ಸ್‌ 2,500 ಅಂಕಗಳಿಗೂ ಹೆಚ್ಚು ನಷ್ಟಕ್ಕೀಡಾಯಿತು. ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್‌ 2,496 ಅಂಕ ನಷ್ಟಕ್ಕೀಡಾಗಿದ್ದು 74,207ಕ್ಕೆ ವಹಿವಾಟು ಮುಕ್ತಾಯಗೊಳಿಸಿತು.

ಸಂಗ್ರಹ ಚಿತ್ರ

ಇರಾನ್‌ ಯುದ್ಧದ ಪರಿಣಾಮ ಕಚ್ಚಾ ತೈಲ ದರ ಗುರುವಾರ ಪ್ರತಿ ಬ್ಯಾರೆಲ್‌ಗೆ 116 ಡಾಲರ್‌ಗೆ ಜಿಗಿಯಿತು. ಇದರ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಪತನವಾಗಿದೆ. ಸೆನ್ಸೆಕ್ಸ್‌ 2,500 ಅಂಕಗಳಿಗೂ ಹೆಚ್ಚು ನಷ್ಟಕ್ಕೀಡಾಯಿತು. ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್‌ 2,496 ಅಂಕ ನಷ್ಟಕ್ಕೀಡಾಗಿದ್ದು 74,207ಕ್ಕೆ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 713 ಅಂಕ ನಷ್ಟಕ್ಕೀಡಾಗಿ 23,064ಕ್ಕೆ ಸ್ಥಿರವಾಯಿತು. ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯವು 426 ಲಕ್ಷ ಕೋಟಿ ರುಪಾಯಿಗೆ ತಗ್ಗಿದ್ದು, ಹೂಡಿಕೆದಾರರಿಗೆ 13 ಲಕ್ಷ ಕೋಟಿಗೂ ಅಧಿಕ ನೋಶನಲ್‌ ನಷ್ಟ ಸಂಭವಿಸಿತು. ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ತಲಾ 3 ಪರ್ಸೆಂಟ್‌ ಕುಸಿತಕ್ಕೀಡಾಯಿತು.

ಸೆನ್ಸೆಕ್ಸ್-ನಿಫ್ಟಿ ಕುಸಿತಕ್ಕೆ ಕಾರಣವೇನು?

  1. ಕಚ್ಚಾ ತೈಲ ದರ ಬ್ಯಾರೆಲ್‌ಗೆ 116 ಡಾಲರ್‌ಗೆ ಹೆಚ್ಚಳ
  2. ಜಾಗತಿಕ ಷೇರು ಮಾರುಕಟ್ಟೆಗಳ ಪತನ.
  3. ಹಣದುಬ್ಬರ ಹೆಚ್ಚಳದ ಬಗ್ಗೆ ಫೆಡರಲ್‌ ರಿಸರ್ವ್‌ ಮುನ್ನೋಟ
  4. ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ದರ ಕುಸಿತ
  5. ಪ್ರಾಫಿಟ್‌ ಬುಕಿಂಗ್‌

ನಿಫ್ಟಿ 50 ಯಲ್ಲಿ ಹೆಚ್ಚು ನಷ್ಟಕ್ಕೀಡಾದ ಷೇರುಗಳು

ಶ್ರೀರಾಮ್‌ ಫೈನಾನ್ಸ್: 949/- : 6.77%‌

ಎಟರ್ನಲ್:‌ 230/- : 5.59% :

ಬಜಾಜ್‌ ಫೈನಾನ್ಸ್:‌ 832/- : 5.39%

ಎಚ್‌ಡಿಎಫ್‌ಸಿ ಬ್ಯಾಂಕ್:‌ 798/- : 5.23%

ಮಹೀಂದ್ರಾ ಆಂಡ್‌ ಮಹೀಂದ್ರಾ: 3,054/- : 4.96%

ಇಂಟರ್‌ ಗ್ಲೋಬ್:‌ 4,161/- : 4.56%

ಟಾಟಾ ಮೋಟಾರ್ಸ್‌ ಪಿವಿ: 310/- : 4.55%

ಈ ನಡುವೆ ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆಯಾಗಿದೆ. ಬೆಳ್ಳಿ 4% ಮತ್ತು ಚಿನ್ನ 2% ಇಳಿಕೆಯಾಗಿದೆ. ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರವನ್ನು 3.75% ಮಟ್ಟದಲ್ಲಿ ಮುಂದುವರಿಸಿದ್ದು, ಸದ್ಯಕ್ಕೆ ಬಡ್ಡಿ ದರ ಇಳಿಕೆ ಸಾಧ್ಯತೆ ಇಲ್ಲವಾಗಿದೆ. ಭವಿಷ್ಯದಲ್ಲಿ ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಬಡ್ಡಿ ದರ ಏರಿಸುವ ಸುಳಿವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಬಂಗಾರದ ದರ ಇಳಿಕೆಯಾಗಿದೆ. ಏಕೆಂದರೆ ಚಿನ್ನ ಸ್ವತಃ ಬಡ್ಡಿ ಅಥವಾ ಡಿವಿಡೆಂಡ್‌ ನೀಡುವುದಿಲ್ಲ. ಆದರೆ ಬಾಂಡ್‌ಗಳು ಬಡ್ಡಿ ಆದಾಯ ನೀಡುತ್ತದೆ. ಫೆಡರಲ್‌ ರಿಸರ್ವ್‌ ಬಡ್ಡೊ ದರ ಏರಿಸಿದರೆ ಚಿನ್ನಕ್ಕಿಂತ ಬಾಂಡ್‌ ಆಕರ್ಷಣೆಯಾಗುತ್ತದೆ. ಆಗ ಬಂಗಾರದ ದರ ಇಳಿಯುತ್ತದೆ.

ತನ್ನ ಬಡ್ಡಿ ದರವನ್ನು 3.75% ಮಟ್ಟದಲ್ಲಿ ಮುಂದುವರಿಸಿದ್ದು, ಸದ್ಯಕ್ಕೆ ಬಡ್ಡಿ ದರ ಇಳಿಕೆ ಸಾಧ್ಯತೆ ಇಲ್ಲವಾಗಿದೆ.

ಜಾಗತಿಕ ಸ್ಟಾಕ್‌ ಮಾರ್ಕೆಟ್‌ ಪತನ:

ಇವತ್ತು ಜಾಗತಿಕ ಷೇರು ಮಾರುಕಟ್ಟೆಗಳೂ ಪತನವಾಗಿವೆ.

ಎಸ್‌ &ಪಿ 500 ಫ್ಯೂಚರ್ಸ್‌ 0.1% ಇಳಿಕೆಯಾಗಿದೆ.

ನಾಸ್‌ ಡಾಕ್‌ 100 ಫ್ಯೂಚರ್ಸ್‌ 0.3% ತಗ್ಗಿದೆ.

MSCI ಏಷ್ಯಾ ಪೆಸಿಫಿಕ್‌ ಇಂಡೆಕ್ಸ್‌ 2.8% ಇಳಿದಿದೆ.

ಹಾಂಕಾಂಗ್-ಶಾಂಘೈ ಸೂಚ್ಯಂಕ ಇಳಿದಿದೆ.

ಇರಾನ್‌ ವಾರ್‌ ತೀವ್ರವಾಗಿದ್ದು ಹೇಗೆ-ಏಕೆ?

ಮಧ್ಯಪ್ರಾಚ್ಯದಲ್ಲಿ ಕಳೆದ ಎರಡು ವಾರಗಳಿಂದ ಯುದ್ಧ ನಡೆಯುತ್ತಿದೆ. ಇಸ್ರೇಲ್‌ ಮತ್ತು ಅಮೆರಿಕ ಸೇನಾ ಪಡೆ ಇರಾನ್‌ ನ ಅತಿ ದೊಡ್ಡ ನೈಸರ್ಗಿಕ ಅನಿಲ ಕೇಂದ್ರವಾಗಿರುವ ಸೌತ್‌ ಪರಾಸ್‌ ಮೇಲೆ ದಾಳಿ ನಡೆಸಿದೆ. ಇದು ವಿಶ್ವದಲ್ಲೇ ದೊಡ್ಡ ನೈಸರ್ಗಿಕ ಅನಿಲ ಘಟಕವಾಗಿದೆ. ಇದರ ಬೆನ್ನಲ್ಲೇ ಇರಾನ್‌ ಮಧ್ಯಪ್ರಾಚ್ಯದ ಎಲ್ಲ ದೇಶಗಳ ತೈಲ ಮತ್ತು ಅನಿಲ ಘಟಕಗಳ ಮೇಲೆ ದಾಳಿ ನಡೆಸಿದೆ. ಇದರ ಪರಿಣಾಮ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ ಗೆ 116 ಡಾಲರ್‌ ದಾಟಿದೆ.

ಇಸ್ರೇಲ್‌ ಮತ್ತು ಅಮೆರಿಕ ಹೀಗೆ ಇರಾನಿನ ನೇಚ್ಯುರಲ್‌ ಗ್ಯಾಸ್‌ ಘಟಕ ಸೌತ್‌ ಪರಾಸ್‌ ಗ್ಯಾಸ್‌ ಫೀಲ್ಡ್‌ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಏನು ಮಾಡಿದೆ ಎಂದರೆ, ಕತಾರ್‌, ಸೌದಿ ಅರೇಬಿಯಾ ಮತ್ತು ಯುಎಇನಲ್ಲಿರುವ ತೈಲ ಮತ್ತು ಅನಿಲ ಘಟಕಗಳ ಮೇಲೆ ದಾಳಿ ನಡೆಸಿದೆ.

ಮುಖ್ಯವಾಗಿ, ಕತಾರ್‌ನ ಪ್ರಮುಖ ಅನಿಲ ಘಟವಾದ ರಾಸ್‌ ಲಫಾನ್‌ ಇಂಡಸ್ಟ್ರಿಯಲ್‌ ಸಿಟಿಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಘಟಕಕ್ಕೆ ತೀವ್ರ ಹಾನಿ ಉಂಟಾಗಿದೆ. ಕತಾರ್‌ನ ವಿದೇಶಾಂಗ ಸಚಿವರೇ ಇದನ್ನು ದೃಢಪಡಿಸಿದ್ದಾರೆ. ಈ ರಾಸ್‌ ಲಾಫನ್‌ ವಿಶ್ವದ ಅತಿ ದೊಡ್ಡ ಲಿಕ್ವಿಫೈಡ್‌ ನೇಚ್ಯುರಲ್‌ ಗ್ಯಾಸ್‌ ರಫ್ತು ಘಟಕವಾಗಿದೆ. ಇದರ ಬೆನ್ನಲ್ಲೇ ಯುರೋಪ್‌ನಲ್ಲಿ ಗ್ಯಾಸ್‌ ದರ ತೀವ್ರ ಹೆಚ್ಚಳವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಚೇರ್ಮನ್‌ ರಾಜೀನಾಮೆ:

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಂಗಾಮಿ ಅಧ್ಯಕ್ಷ ಅತನು ಚಕ್ರವರ್ತಿ ದಿಢೀರ್ ರಾಜೀನಾಮೆ ನೀಡಿದ್ದು,‌ ಇದರ ಬೆನ್ನಲ್ಲೇ ಬ್ಯಾಂಕಿನ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಇವತ್ತು 1 ಲಕ್ಷ ಕೋಟಿ ರುಪಾಯಿ ನಷ್ಟ ಸಂಭವಿಸಿದೆ. ಕಳೆದ ಎರಡು ವರ್ಷಗಳಿಂದ ಬ್ಯಾಂಕಿನಲ್ಲಿ ಕೆಲವು ವ್ಯವಹಾರಗಳ ಬಗ್ಗೆ ನೈತಿಕವಾಗಿ ನನಗೆ ಸರಿ ಎನ್ನಿಸುತ್ತಿಲ್ಲ ಎಂದು ಅತನು ಚಕ್ರವರ್ತಿ ಹೇಳಿದ್ದಾರೆ. ಬ್ಯಾಂಕಿನಲ್ಲಿ ಯಾವುದೇ ತಪ್ಪು ಕೆಲಸಗಳು ಆಗಿವೆ ಎಂದು ನಾನು ದೂರುತ್ತಿಲ್ಲ. ನನ್ನ ಐಡಿಯಾಲಜಿಯು ಬ್ಯಾಂಕ್‌ನ ಜತೆಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಕೇಕಿ ಮಿಸ್ತ್ರಿ ಹೊಸ ಹಂಗಾಮಿ ಚೇರ್ಮನ್‌ ಆಗಿ ನೇಮಕವಾಗಿದ್ದಾರೆ.

Stock Market: ಸೆನ್ಸೆಕ್ಸ್‌ 1,000 ಅಂಕ ಜಿಗಿತ, ಕೊನೆಗೂ ಅಬ್ಬರಿಸಿದ ಗೂಳಿ; ಕಾರಣವೇನು?

ಎಚ್‌ಡಿಎಫ್‌ಸಿ ಬ್ಯಾಂಕ್‌ ಹಂಗಾಮಿ ಅಧ್ಯಕ್ಷರ ದಿಢೀರ್‌ ರಾಜೀನಾಮೆ ಬಳಿಕ ಆರ್‌ ಬಿಐ ಪ್ರತಿಕ್ರಿಯಿಸಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಆಡಳಿತಾತ್ಮಕವಾಗಿ ಯಾವುದೇ ಸಮಸ್ಯೆ ಇಲ್ಲ ಎಂದಿದೆ. ಈ ನಡುವೆ ಇರಾನ್‌ ಪಾರ್ಲಿಮೆಂಟ್‌ ಹಾರ್ಮುಜ್‌ ಜಲಸಂಧಿಯ ಮೂಲಕ ಹಾದು ಹೋಗುವ ಹಡಗುಗಳಿಂದ ಟೋಲ್‌ ಕಲೆಕ್ಷನ್‌ ಮಾಡಲು ಆಲೋಚಿಸಿದೆ.

ಕೇಶವ ಪ್ರಸಾದ್​ ಬಿ

View all posts by this author