ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rukmini Vasanth: ಟ್ರೆಂಡ್ಸ್ ಅವಂತ್ರ ರಾಯಭಾರಿಯಾದ ನಟಿ ರುಕ್ಮಿಣಿ ವಸಂತ್

Reliance Retail: ಕಾಂತಾರ ಸಿನಿಮಾದ ರಾಜಕುಮಾರಿ ಹಾಗೂ ಬಹು ಭಾಷಾ ನಟಿ ರುಕ್ಮಿಣಿ ವಸಂತ್ ಅವರು ರಿಲಯನ್ಸ್ ರೀಟೇಲ್‌ನ ಅವಂತ್ರ ರಾಯಭಾರಿಯಾಗಿದ್ದಾರೆ. ನಟಿ ರುಕ್ಮಿಣಿ ವಸಂತ್ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿ ಆಗಿ, ಅವಂತ್ರದ ಮುಖವಾಗಿ ಪರಿಚಯಿಸುವುದಕ್ಕೆ ಸಂಸ್ಥೆಯು ಹೆಮ್ಮೆ ಪಡುತ್ತದೆ ಹಾಗೂ ಈ ಅಭಿಯಾನಕ್ಕೆ ಅವರನ್ನು ಸ್ವಾಗತಿಸುತ್ತದೆ ಎಂದು ತಿಳಿಸಿದೆ.

ಮುಂಬೈ, ಅ.14: ರಿಲಯನ್ಸ್ ರೀಟೇಲ್‌ನ (Reliance Retail) ಅವಂತ್ರ (Avantra) ಎಂಬುದು ಸಮಕಾಲೀನ ಸೀರೆಗಳನ್ನು ಖರೀದಿಸಲು ಅತ್ಯುತ್ತಮವಾದ ತಾಣವಾಗಿದೆ. ಆಧುನಿಕ ಭಾರತೀಯ ಮಹಿಳೆಯರ ಆಯ್ಕೆಗೆ ಹೇಳಿ ಮಾಡಿಸಿದ ಸ್ಥಳ ಇದು. ಇದೀಗ ಹೊಸದಾಗಿ ಹಬ್ಬದ ಅಭಿಯಾನವನ್ನು ʼಅವಂತ್ರʼ ಶುರು ಮಾಡಿದ್ದು, ಕಾಂತಾರ ಸಿನಿಮಾದ ರಾಜಕುಮಾರಿ ಹಾಗೂ ಬಹು ಭಾಷಾ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ರಾಯಭಾರಿ ಆಗಿದ್ದಾರೆ.

ಹಬ್ಬಗಳು ಬಂತೆಂದರೆ ಸಂಭ್ರಮ, ಅದರಲ್ಲೂ ಹೆಣ್ಣುಮಕ್ಕಳಿಗೆ ಮತ್ತೂ ವಿಶೇಷವಾದ ಸಂದರ್ಭ ಇದಾಗಿರುತ್ತದೆ. ಹೌದು, ಇವತ್ತಿನ ಮಹಿಳೆಯಲ್ಲಿ ಆತ್ಮವಿಶ್ವಾಸ ಕಾಣಬಹುದು. ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಗುರುತನ್ನು ತೆರೆದಿಡುವ ಹಾಗೂ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಹಬ್ಬದ ಋತುವಿನಲ್ಲಿ ಅವಂತ್ರಗಿಂತ ಮತ್ತೊಂದು ಉತ್ತಮ ಆಯ್ಕೆ ಬೇರಾವುದೂ ಇಲ್ಲ ಎಂದು ತಿಳಿಸಿದೆ.

ಹಬ್ಬದ ಸಂಭ್ರಮಕ್ಕೆ ಮಹಿಳೆಯರು ಹೇಗೆ ಇನ್ನೂ ಹೆಚ್ಚು ಸಂತಸವನ್ನು ಸೇರಿಸುತ್ತಾರೆ ಹಾಗೂ ಪ್ರತಿ ಕ್ಷಣವನ್ನೂ ಹೇಗೆ ವಿಶೇಷವಾಗಿಸುತ್ತಾರೆ ಮತ್ತು ಆ ಮೂಲಕ ಹಬ್ಬದ ಸಂದೇಶವನ್ನು ಹೇಗೆ ದಾಟಿಸುತ್ತಾರೆ ಎಂಬುದನ್ನು ತುಂಬ ಸೊಗಸಾಗಿ ತೆರೆದಿಡಲಾಗಿದೆ. ಈ ಅಭಿಯಾನವನ್ನು ʼಮೈ ವೇʼ (My way) ಎಂಬ ಸಿದ್ಧಾಂತ ಅಡಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಅಂದ ಹಾಗೆ ಈ ಅಭಿಯಾನದ ಜಾಹೀರಾತಿನಲ್ಲಿ ಪ್ರತಿ ಮಹಿಳೆಗೂ ಹೇಗೆ ಈ ಕ್ಷಣವನ್ನು ತಮ್ಮದಾಗಿಸಿಕೊಳ್ಳುವುದು ಹಾಗೂ ತಮ್ಮದೇ ಸ್ಥಾನವನ್ನು ಹೇಗೆ ಗುರುತಿಕೊಳ್ಳುವುದು ಎಂಬುದನ್ನು ಮುಖ್ಯ ವಿಷಯವಾಗಿ ತೆಗೆದುಕೊಳ್ಳಲಾಗಿದೆ. ಭಾರತೀಯ ಹಬ್ಬಗಳ ಅದ್ಭುತ ಸಂಭ್ರಮದ ಹಿನ್ನೆಲೆಯಲ್ಲಿ ಕುಟುಂಬಗಳು ಒಗ್ಗೂಡುವುದು, ಸಂಪ್ರದಾಯಗಳ ಆಚರಣೆ ಮತ್ತು ನಗು ಈ ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಈ ಎಲ್ಲ ಖುಷಿಯ ವಾತಾವರಣದ ಮಧ್ಯೆ ನಟಿ ರುಕ್ಮಿಣಿ ವಸಂತ್ ಅವರು ಶ್ರೀಮಂತಿಕೆಯ- ಅವಂತ್ರದ ರೇಷ್ಮೆ ಸೀರೆಯುಟ್ಟು ಮಿಂಚಿದ್ದಾರೆ.

ಅವಂತ್ರ ಒಂದು ಬ್ರ್ಯಾಂಡ್ ಆಗಿ ಐವತ್ತಕ್ಕೂ ಹೆಚ್ಚಿನ ಬಗೆಯ ಸೀರೆಗಳನ್ನು ಒಂದೇ ಜಾಗದಲ್ಲಿ ಖರೀದಿ ಮಾಡಬಹುದು. ತುಂಬ ವಿಶಿಷ್ಟವಾದ ಮತ್ತು ಸಾಂಸ್ಕೃತಿಕವಾಗಿಯೂ ಮುಖ್ಯವಾದ ಸ್ಥಳ ಇದಾಗಿರಲಿದೆ. ಭಾರತೀಯ ಯುವ ಮಹಿಳೆಯರನ್ನು ಅವಂತ್ರ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದೆ- ಈಗಿನ ಮಹಿಳೆಯರಿಗೆ ತಮ್ಮ ಗುರುತನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಲು ಹಾಗೂ ಸ್ವಂತ ಭಾವಾಭಿವ್ಯಕ್ತಿ ಸಂಕೇತವಾಗಿ ಈ ಸೀರೆಗಳು ಕಾಣುತ್ತವೆ.

ರುಕ್ಮಿಣಿ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿ ಆಗಿ, ಅವಂತ್ರದ ಮುಖವಾಗಿ ಪರಿಚಯಿಸುವುದಕ್ಕೆ ಸಂಸ್ಥೆಯು ಹೆಮ್ಮೆ ಪಡುತ್ತದೆ ಹಾಗೂ ಈ ಅಭಿಯಾನಕ್ಕೆ ಅವರನ್ನು ಸ್ವಾಗತಿಸುತ್ತದೆ. ಅವರು ತಮ್ಮ ವಿಶ್ವಾಸದ ಮೂಲಕ, ಪರಂಪರೆ ಆಳವಾದ ಬೇರುಗಳ ಜತೆಗೆ ಗುರುತಿಸಿಕೊಂಡು, ಹೆಮ್ಮೆಯನ್ನು ಪ್ರತಿನಿಧಿಸುತ್ತಾರೆ. ಈ ಎಲ್ಲ ಮೌಲ್ಯಗಳು ಹೇಳಿ ಮಾಡಿಸಿದಂತೆ ಅವಂತ್ರದ ಸಿದ್ಧಾಂತಗಳ ಜತೆಗೆ ಹೊಂದಿಕೊಳ್ಳುತ್ತವೆ. ಸಂಪ್ರದಾಯವನ್ನು ಆಧುನಿಕ ಸ್ಪರ್ಶದ ಜತೆಗೆ ಸಂಭ್ರಮಿಸಬೇಕು ಎಂಬುದು ಅವಂತ್ರದ ಸಿದ್ಧಾಂತವಾಗಿದೆ ಎಂದು ತಿಳಿಸಿದೆ.‌

ಈ ಸುದ್ದಿಯನ್ನೂ ಓದಿ | Deepavali Decoration 2025: ಬೆಳಕಿನ ಹಬ್ಬದ ಅಲಂಕಾರಕ್ಕೆ ಲಗ್ಗೆ ಇಟ್ಟ ಆಕಾಶ ದೀಪಗಳು

ಅವಂತ್ರದ ಮಾರ್ಕೆಟಿಂಗ್ ಹೆಡ್ ಮಾತನಾಡಿ, ಈ ಹಬ್ಬದ ಋತುವಿನ ಟಿವಿ ಜಾಹೀರಾತು ಸುಂದರವಾದ, ಮೃದುವಾದ ಕ್ಷಣದ ಧ್ವನಿಯ ವಿಸ್ತರಣೆ ಆಗುತ್ತದೆ ಮತ್ತು ಈ ಎಲ್ಲದರ ಮಧ್ಯೆ ನಿಮ್ಮನ್ನು ನೀವು ಗೌರವಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.