ನವದೆಹಲಿ, ಡಿ. 2: ಡಾಲರ್ ಎದುರು ಮಂಗಳವಾರ ರುಪಾಯಿ ಮೌಲ್ಯವು (Rupee Vs Dollar) ದಾಖಲೆಯ 90 ರುಪಾಯಿಯ ಸನಿಹಕ್ಕೆ ಬಿದ್ದಿದೆ. 89 ರುಪಾಯಿ 85 ಪೈಸೆಗೆ ಇಳಿಕೆಯಾಗಿದೆ. ಮಂಗಳ ವಾರ ಒಂದೇ ದಿನ ರುಪಾಯಿ 32 ಪೈಸೆ ಕುಸಿಯಿತು. ಜಾಗತಿಕ ಮತ್ತು ದೇಶೀಯ ಒತ್ತಡಗಳಿಂದಾಗಿ ರುಪಾಯಿ ಪತನಕ್ಕೀಡಾಯಿತು. 89 ರುಪಾಯಿ 70 ಪೈಸೆಯಿಂದ ವಹಿವಾಟು ಆರಂಭಿಸಿದ ರುಪಾಯಿ 89 ರುಪಾಯಿ 85 ಪೈಸೆಗೆ ಇಳಿಯಿತು. ಕಾರ್ಪೊರೇಟ್ ಉದ್ಯಮಿಗಳು, ಆಮದುದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಡಾಲರ್‌ಗೆ ಬೇಡಿಕೆ ತೀವ್ರವಾಗಿತ್ತು. ಸೋಮವಾರವೇ ಡಾಲರ್ ಎದುರು ರುಪಾಯಿ 89 ರುಪಾಯಿ 79 ಪೈಸೆಗೆ ಒಂದು ಹಂತದಲ್ಲಿ ಮುಟ್ಟಿತ್ತು. ಮತ್ತೆ ಸ್ವಲ್ಪ ಚೇತರಿಸಿತ್ತು. ಆದರೆ ಮಂಗಳವಾರ ಮತ್ತೆ ಇಳಿಕೆಯಾಯಿತು.
ರುಪಾಯಿ ಕುಸಿತಕ್ಕೆ ಕಾರಣವೇನು?
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ದುರ್ಬಲವಾಗಿರುವುದು, ವಿದೇಶಿ ಹೂಡಿಕೆದಾರರ ಹೂಡಿಕೆ ಹಿಂತೆಗೆತ ಮತ್ತು ಕಚ್ಚಾ ತೈಲ ದರದಲ್ಲಿ ಏರಿಳಿತವೇ ಪಾಯಿ ಕುಸಿತಕ್ಕೆ ಕಾರಣವಾಗಿದೆ.
ರೂಪಾಯಿ ಚಿಹ್ನೆಯ ವಿನ್ಯಾಸಕಾರು ಯಾರು? ಒಬ್ಬರಿಗೆ ಖ್ಯಾತಿ, ಮತ್ತೊಬ್ಬರು ತೆರೆಮರೆಗೆ
ಆರ್‌ಬಿಐ ಮಧ್ಯ ಪ್ರವೇಶ
ವಿಶ್ಲೇಷಕರ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರುಪಾಯಿ ಬಲವರ್ಧನೆಗೆ ಪೂರಕ ಕ್ರಮಗಳನ್ನು ಕೈಗೊಂಡಿದೆ. ಡಾಲರ್ ಮಾರಾಟದ ಮೂಲಕ ಮಧ್ಯ ಪ್ರವೇಶಿಸಿದೆ. ಆದರೆ ರುಪಾಯಿ ಬಲವರ್ಧಿಸಿದಾಗ ಆರ್‌ಬಿಐ ಡಾಲರನ್ನೂ ಖರೀದಿಸುತ್ತದೆ. ಭಾರತವು ಕಲೆದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 8.2 ಪರ್ಸೆಂಟ್ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. ಭಾರತ-ಅಮರಿಕ ನಡುವಣ ವ್ಯಾಪಾರ ಒಪ್ಪಂದದ ಮಾತುಕತೆ ಇನ್ನೂ ಅಂತಿಮವಾಗದಿರುವುದು ಕೂಡ ಅನಿಶ್ಚಿತತೆಯನ್ನು ಸೃಷ್ಟಿಸಿದೆ.
ರುಪಾಯಿ ಕುಸಿತವಾದಾಗ ಏನಾಗುತ್ತದೆ?
ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದರೆ ಆಮದು ದುಬಾರಿಯಾಗುತ್ತದೆ. ಬಂಗಾರದ ದರ ಏರುತ್ತದೆ. ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ಸ್ ವಸ್ತುಗಳ ದರ ಹೆಚ್ಚುತ್ತದೆ. ಆಟೊಮೊಬೈಲ್ ಬಿಡಿ ಭಾಗಗಳು ತುಟ್ಟಿಯಾಗಬಹುದು. ಉದ್ದಿಮೆಗಳ ಯಂತ್ರೋಪಕರಣಗಳು, ಕಚ್ಚಾ ವಸ್ತುಗಳ ದರಗಳು ಹೆಚ್ಚಬಹುದು. ವಿದೇಶಿ ಪ್ರವಾಸ ತುಟ್ಟಿಯಾಗಬಹುದು. ವಿದೇಶಗಳಲ್ಲಿ ಮಕ್ಕಳ ಶಿಕ್ಷಣ ವೆಚ್ಚ ಹೆಚ್ಚಬಹುದು. ಆದರೆ ಐಟಿ ಇಂಡಸ್ಟ್ರಿಯ ಆದಾಯ ಹೆಚ್ಚಬಹುದು. ರಫ್ತುದಾರರಿಗೆ ಅನುಕೂಲವಾಗುತ್ತದೆ. ಅವರಿಗೆ ಲಾಭದಾಯಕವಾಗುತ್ತದೆ. ಆರೆ ಆಮದು ವೆಚ್ಚ ಜಾಸ್ತಿಯಾದಾಗ ಹಣದುಬ್ಬರ ಹೆಚ್ಚುತ್ತದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತದೆ.