ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಸ್‌ಬಿಐ ಡೇಟಾ ಸೋರಿಕೆ ; ಜನರ ಖಾಸಗಿ ಮಾಹಿತಿ ಲೀಕ್‌, ಬ್ಯಾಂಕ್‌ ಹೇಳಿದ್ದೇನು?

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಇಮೇಲ್ ಮತ್ತು ವಾಟ್ಸಾಪ್ ಮೂಲಕ ಎಸ್‌ಬಿಐ ಡೇಟಾ ಸೋರಿಕೆಯಾಗಿರುವ ಕುರಿತು ಮಾಹಿತಿ ನೀಡಿದೆ. ಅಲ್ಲದೇ ಎಲ್ಲರ ಹಣವು ಸುರಕ್ಷಿತವಾಗಿರುವುದಾಗಿ ದೆ ಎಂದು ಬ್ಯಾಂಕ್ ಭರವಸೆ ನೀಡಿದೆ.

ಸಂಗ್ರಹ ಚಿತ್ರ

ನವದೆಹಲಿ: ಎಲ್ಲಾ ಗ್ರಾಹಕರ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಹೇಳಿಕೆಯಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಡಾರ್ಕ್ ವೆಬ್‌ನಲ್ಲಿ (dark web) ಪತ್ತೆಯಾಗಿರುವ ದಾಖಲೆಗಳಿಗೆ ಸಂಬಂಧಿಸಿ ಸ್ಪಷ್ಟನೆ ನೀಡಿರುವ ಬ್ಯಾಂಕ್, ಡೇಟಾ ಸೋರಿಕೆಯಲ್ಲಿ (bank data leak) ವೈಯಕ್ತಿಕ ಮಾಹಿತಿ ಬಹಿರಂಗಗೊಂಡಿರುವ ಗ್ರಾಹಕರಿಗೆ ಪ್ರತ್ಯೇಕವಾಗಿ ಇಮೇಲ್ ಮತ್ತು ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳುಹಿಸಲಾಗಿದೆ. ಎಲ್ಲರೂ ಡಿಜಿಟಲ್ ಬ್ಯಾಂಕಿಂಗ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ, ಅನುಮಾನಾಸ್ಪದ ಕರೆ, ಸಂದೇಶ ಹಾಗೂ ಇಮೇಲ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ತಿಳಿಸಿದೆ.

'ಗ್ರಾಹಕರ ಸುರಕ್ಷತೆ ಮತ್ತು ಜಾಗೃತಿ' ಪ್ರಮುಖ ಮಾಹಿತಿ ಎನ್ನುವ ಶೀರ್ಷಿಕೆಯಡಿ ಬ್ಯಾಂಕ್, ಇತ್ತೀಚಿನ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಡೇಟಾ ಸೋರಿಕೆಯಾಗಿರುವ ಎಲ್ಲಾ ಗ್ರಾಹಕರಿಗೆ ಇಮೇಲ್ ಮತ್ತು ವಾಟ್ಸಾಪ್ ಮೂಲಕ ಪ್ರತ್ಯೇಕವಾಗಿ ಮಾಹಿತಿ ನೀಡಲಾಗಿದೆ ಎಂದು ಹೇಳಿದೆ. ಅಲ್ಲದೇ ಇದರೊಂದಿಗೆ ಗ್ರಾಹಕರ ಹಣದ ಸುರಕ್ಷತೆಯ ಬಗ್ಗೆ ಭರವಸೆ ನೀಡಿರುವ ಬ್ಯಾಂಕ್, ನಿಮ್ಮ ಖಾತೆಯಲ್ಲಿರುವ ಹಣ ನಮ್ಮ ಬಳಿ ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ಬಾಲಿವುಡ್‌ ಸೆಲೆಬ್ರಿಟಿಗಳ ಮೇಲೆ ದಾಳಿ ಮಾಡಲು ನಡೆದಿತ್ತು ಬಹು ದೊಡ್ಡ ಸಂಚು; ತನಿಖೆಯಲ್ಲಿ ಆರೋಪಿಗಳು ಹೇಳಿದ್ದೇನು?

ಡಾರ್ಕ್ ವೆಬ್‌ನಲ್ಲಿ ಎಸ್ ಬಿಐ ಗ್ರಾಹಕರ ಮಾಹಿತಿ ಪತ್ತೆಯಾದ ಹಿನ್ನೆಲೆಯಲ್ಲಿಈ ಕುರಿತು ದಾಖಲೆಗಳನ್ನು ಪರಿಶೀಲಿಸಿರುವ ಬ್ಯಾಂಕ್, ಸುಮಾರು 3.75 ಲಕ್ಷ ದಾಖಲೆಗಳಲ್ಲಿ 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿ ಸೋರಿಕೆಯಾಗಿರುವುದಾಗಿ ತಿಳಿಸಿದೆ.

ಅಕ್ಟೋಬರ್ 16ರಂದು ಎಸ್ ಬಿಐಗೆ ಬೆದರಿಕೆ ಗುಪ್ತಚರ, ಸೇವಾ ಪೂರೈಕೆದಾರರು, ಡಿಫೆನ್ಸ್ ಸೈಬರ್ ಏಜೆನ್ಸಿ ಮತ್ತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ನಿಂದ ಎಚ್ಚರಿಕೆಗಳು ಬಂದಿದ್ದವು. ಈ ಕುರಿತು ಪರಿಶೀಲನೆ ನಡೆಸಿದಾಗ ಸೋರಿಕೆಯಾದ ಮಾಹಿತಿಯಲ್ಲಿ ಗ್ರಾಹಕರ ಹೆಸರು, ನೋಂದಾಯಿತ ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ, ಲಿಂಗ, ಇಮೇಲ್, ವಸತಿ ವಿಳಾಸಗಳು ಸೇರಿವೆ. ಇದರೊಂದಿಗೆ ಬ್ಯಾಂಕ್ ಶಾಖೆಯ ವಿವರಗಳು, ಗ್ರಾಹಕ ಮಾಹಿತಿ ಫೈಲ್ ಗುರುತಿಸುವಿಕೆ, ಲೀಡ್ ಐಡಿ ಹಾಗೂ ಸಾಲ ದಾಖಲೆಗಳಿಗೆ ಸಂಬಂಧಿಸಿದ ಮೆಟಾ ಡೇಟಾ ಕೂಡ ಸೋರಿಕೆಯಾಗಿದೆ. ಶಂಕಿತ ಡೇಟಾ ಸೋರಿಕೆಯ ವ್ಯಾಪ್ತಿ ಮತ್ತು ಮೂಲ ಯಾವುದು ಎಂಬುದನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದಕ್ಕಾಗಿ ವಿವರವಾದ ತನಿಖೆಯ ಅಗತ್ಯವಿದೆ ಎಂದು ಎಸ್ ಬಿಐ ತಿಳಿಸಿದೆ.

ಅಮೆರಿಕದಲ್ಲಿ ಪತ್ನಿಯನ್ನು ಕೊಲೆ ಮಾಡಿ ಐಸಿಇ ಅಧಿಕಾರಿಗಳು ಅಪಹರಿಸಿದ್ದಾರೆ ಎಂದು ಕಥೆ ಕಟ್ಟಿದ: ಭಾರತೀಯ ಮೂಲದ ಪತಿಯ ಬಂಧನ

ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು, ಗೌಪ್ಯ ಬ್ಯಾಂಕಿಂಗ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಬ್ಯಾಂಕ್ ಎಚ್ಚರಿಕೆಯನ್ನು ನೀಡಿದೆ. ಈ ಸೋರಿಕೆಯ ಪರಿಣಾಮ ನಿತ್ಯದ ಬ್ಯಾಂಕ್ ವ್ಯವಹಾರ ಕಾರ್ಯಾಚರಣೆಗಳು, ಆರ್ಥಿಕ ಕಾರ್ಯಕ್ಷಮತೆ ಅಥವಾ ವ್ಯವಹಾರ ನಿರಂತರತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author