ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂದು ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ( State Bank of India) ವರ್ಷದ ಮೊದಲ ತಿಂಗಳಲ್ಲೇ ಗ್ರಾಹಕರಿಗೆ ಶಾಕ್ ನೀಡಿದೆ. ಅದು ತನ್ನ ಎಟಿಎಂ (ATM) ಮತ್ತು ಠೇವಣಿ ಮತ್ತು ಹಿಂತೆಗೆದುಕೊಳ್ಳುವ ಯಂತ್ರದ (ADWM) ಬಳಕೆ ಮೇಲಿನ ವಹಿವಾಟು ಶುಲ್ಕಗಳನ್ನು (ransaction Charges) ಹೆಚ್ಚಿಸಿದೆ. ಇದರಿಂದ ಉಚಿತ ಮಿತಿಯನ್ನು ಮೀರಿ ಇತರ ಬ್ಯಾಂಕುಗಳ ಎಟಿಎಂಗಳನ್ನು ಬಳಸುವ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಈಗ ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ತಮ್ಮ ಉಚಿತ ವಹಿವಾಟುಗಳನ್ನು ಬಳಸಿದ ಆನಂತರ ಪ್ರತಿ ನಗದು ಹಿಂಪಡೆಯುವಿಕೆಗೆ ಜಿಎಸ್‌ಟಿ ಸೇರಿದಂತೆ 23 ರೂ. ಪಾವತಿಸಬೇಕಾಗುತ್ತದೆ. ಹಿಂದೆ ಇದು 21 ರೂ. ಆಗಿತ್ತು. ಬ್ಯಾಲೆನ್ಸ್ ವಿಚಾರಣೆ ಅಥವಾ ಮಿನಿ ಸ್ಟೇಟ್‌ಮೆಂಟ್‌ಗಳಿಗೆ 10 ರೂ. ಯಿಂದ 11 ರೂ. ಗೆ ಹೆಚ್ಚಿಸಲಾಗಿದೆ.
ಸ್ವಂತ ಸೂರಿನ ಕನಸು ನನಸು ಮಾಡಿಕೊಳ್ಳುವುದು ಹೇಗೆ?
ಇಂಟರ್‌ಚೇಂಜ್ ಶುಲ್ಕದಲ್ಲಿನ ಹೆಚ್ಚಳದ ಬಳಿಕ ಎಟಿಎಂ ಸಂಬಂಧಿತ ಸೇವೆಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಕೇವಲ ಉಚಿತ ವಹಿವಾಟು ಮಿತಿಗಳನ್ನು ಮೀರಿದ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ಎಸ್‌ಬಿಐ ಅಲ್ಲದ ಎಟಿಎಂಗಳನ್ನು ಬಳಸುವ ಉಳಿತಾಯ ಮತ್ತು ಸಂಬಳ ಖಾತೆದಾರರ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರುತ್ತವೆ. ಖಾತೆಗಳಿಗೆ ನಗದು ವರ್ಗಾವಣೆ ಸೇರಿದಂತೆ ಇತರ ವಹಿವಾಟುಗಳು ಪರಿಣಾಮ ಬೀರುವುದಿಲ್ಲ ಎಂದು ಎಸ್‌ಬಿಐ ತಿಳಿಸಿದೆ.
ಸಾಮಾನ್ಯ ಉಳಿತಾಯ ಖಾತೆದಾರರಿಗೆ ಲಭ್ಯವಿರುವ ಉಚಿತ ಮಾಸಿಕ ವಹಿವಾಟುಗಳ ಸಂಖ್ಯೆ ಮೊದಲಿನಂತೆಯೇ ಇದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಂತೆ ಎಸ್‌ಬಿಐ ಅಲ್ಲದ ಎಟಿಎಂಗಳಲ್ಲಿ ತಿಂಗಳಿಗೆ ಐದು ಉಚಿತ ವಹಿವಾಟುಗಳನ್ನು ನಡೆಸಬಹುದಾಗಿದೆ. ಈ ಮಿತಿ ಮೀರಿದ ಬಳಿಕ ಶುಲ್ಕಗಳು ಅನ್ವಯವಾಗುತ್ತದೆ.
ಸಂಬಳ ಖಾತೆ ಹೊಂದಿರುವವರಿಗೆ 10 ಉಚಿತ ಎಟಿಎಂ ವಹಿವಾಟುಗಳನ್ನು ಅನುಮತಿಸಲಾಗುತ್ತದೆ. ಈ ಹಿಂದೆ ಇವರಿಗೆ ಅನಿಯಮಿತ ಉಚಿತ ವಹಿವಾಟುಗಳಿಗೆ ಅವಕಾಶವನ್ನು ನೀಡಲಾಗಿತ್ತು. 10 ಉಚಿತ ವಹಿವಾಟು ಮುಗಿದ ಬಳಿಕ ಸಂಬಳ ಖಾತೆ ಬಳಕೆದಾರರಿಗೆ ಪ್ರತಿ ನಗದು ಹಿಂಪಡೆಯುವಿಕೆಗೆ ಜಿಎಸ್‌ಟಿ ಸೇರಿ 23 ರೂ. ಮತ್ತು ಹಣಕಾಸೇತರ ವಹಿವಾಟುಗಳಿಗೆ 11 ರೂ. ಶುಲ್ಕ ವಿಧಿಸಲಾಗುತ್ತದೆ.
ಲಂಬಾಣಿ ಮಹಿಳೆಯರ ಬದುಕಿನ ʻಆಶಾʼಕಿರಣ; ಜಾಗತಿಕ ಮಾರುಕಟ್ಟೆಯಲ್ಲಿ ಬಂಜಾರ ಕಸೂತಿ
ಈ ಶುಲ್ಕ ಪರಿಷ್ಕರಣೆಯು ಮೂಲ ಉಳಿತಾಯ ಬ್ಯಾಂಕ್ ಠೇವಣಿ (BSBD), ಡೆಬಿಟ್ ಕಾರ್ಡ್ ಬಳಕೆದಾರರು. ಕಾರ್ಡ್‌ರಹಿತ ನಗದು ಹಿಂಪಡೆಯುವಿಕೆ, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಖಾತೆ ನಿರ್ವಹಿಸುವವರಿಗೆ ಅನ್ವಯವಾಗುವುದಿಲ್ಲ ಎಂದು ಎಸ್‌ಬಿಐ ತಿಳಿಸಿದೆ.