ನವದೆಹಲಿ: ಭಾರತದ ಅತಿ ದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಆಗಿರುವ (SEBI) ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಎನ್‌ಎಸ್‌ಇನ ಬಹು ನಿರೀಕ್ಷಿತ ಐಪಿಒ ನಡೆಸಲು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಅನುಮೋದಿಸಿದೆ. ಎನ್‌ಎಸ್‌ಇಗೆ ಇದು ದೊಡ್ಡ ಮೈಲಿಗಲ್ಲು ಆಗಿದೆ. ಐಪಿಒಗೆ ಅಗತ್ಯವಿರುವ ಪ್ರಕ್ರಿಯೆಗಳನ್ನು ಆರಂಭಿಸಲು ಇದೀಗ ಎನ್‌ಎಸ್‌ಒಗೆ ಹಾದಿ ಸುಗಮವಾಗಿದೆ.
2016ರಲ್ಲಿ ಎನ್‌ಎಸ್‌ಇ ಐಪಿಒ ನಡೆಸಲು ಮೊದಲ ಬಾರಿಗೆ ಅರ್ಜಿ ಸಲ್ಲಿಸಿತ್ತು. ಮಾರುಕಟ್ಟೆ ಬಂಡವಾಳ ಮೌಲ್ಯದ ದೃಷ್ಟಿಯಿಂದ ಎನ್‌ಎಸ್‌ಇಯು 5ನೇ ಅತಿ ದೊಡ್ಡ ಸಂಸ್ಥೆಯಾಗಿದೆ. ವಿಶ್ವದ ಅತಿ ದೊಡ್ಡ ಡಿರೈವಟೀಸ್ ಎಕ್ಸ್‌ಚೇಂಜ್ ಆಗಿದೆ. ರೆಗ್ಯುಲೇಟರಿ ಪರಿಶೀಲನೆಗಳು, ಕಾನೂನು ಪ್ರಕ್ರಿಯೆಗಳಿಂದಾಗಿ ಐಪಿಒ ವಿಳಂಬವಾಗಿತ್ತು.
ಸಿಇಒ ಆಶಿಷ್ ಚೌಹಾಣ್ ಪ್ರಕಾರ ಎನ್‌ಎಸ್‌ಇಯು ಮುಂದಿನ 7-8 ತಿಂಗಳಿನಲ್ಲಿ ಐಪಿಒ ನಡೆಸುವ ನಿರೀಕ್ಷೆ ಇದೆ. ಎನ್‌ಎಸ್‌ಇ ಐಪಿಒ ಗಾತ್ರ 2.5 ಶತಕೋಟಿ ಡಾಲರ್ ಅಥವಾ 22,900 ಕೋಟಿ ರುಪಾಯಿಗಳಾಗಿರುವ ನಿರೀಕ್ಷೆ ಇದೆ ಎಂದು ಇಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ.
ಉದ್ದೇಶಿತ ಐಪಿಒ ಪ್ರಕ್ರಿಯೆಯು ಆಫರ್ ಫಾರ್ ಸೇಲ್ ಆಗಿದ್ದು, ಎಕ್ಸ್‌ಚೇಂಜ್ ಮೂಲಕ ಫ್ರೆಶ್ ಕ್ಯಾಪಿಟಲ್ ಸಂಗ್ರಹಿಸುತ್ತಿಲ್ಲ. ಹಾಲಿ ಹೂಡಿಕೆದಾರರು ತಮ್ಮ ಷೇರುಗಳನ್ನು ಪಬ್ಲಿಕ್ ಆಫರಿಂಗ್ ಮೂಲಕ ಮಾರಾಟ ಮಾಡಲಿದ್ದಾರೆ. ಎನ್‌ಎಸ್‌ಇ ಯಾವುದೇ ಪ್ರಮೋಟರ್ ಅನ್ನು ಒಳಗೊಂಡಿಲ್ಲ. ದೇಶೀಯ ಮತ್ತು ವಿದೇಶಿ ಸಂಸ್ಥೆಗಳು ಇದರಲ್ಲಿ ಷೇರುಗಳ್ನು ಹೊಂದಿವೆ. ಸಾರ್ವಜನಿಕ ಸಂಸ್ಥೆಗಳೂ, ಸ್ಟ್ರಾಟಜಿಕ ಇನ್ವೆಸ್ಟರ್ಸ್ ಕೂಡ ಷೇರುಗಳನ್ನು ಹೊಂದಿದ್ದಾರೆ.
ಪ್ರಸ್ತುತ ಎನ್‌ಎಸ್‌ಇನಲ್ಲಿ ಷೇರುಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 4 ಪರ್ಸೆಂಟ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಕಂಪನಿಯು 4.5 ಪರ್ಸೆಂಟ್ ಷೇರುಗಳನ್ನು ಮಾರಾಟ ಮಾಡುವ ನಿರೀಕ್ಷೆ ಇದೆ. ಈಗ ಎನ್‌ಎಸ್‌ಇ ಷೇರುಗಳನ್ನು ಹೊಂದಿರುವ ಎಲ್ಲ 1,90,000 ಷೇರುದಾರರಿಗೆ ಐಪಿಒದ ಭಾಗವಾಗಿ ಸೆಕೆಂಡರಿ ಸೇಲ್‌ನಲ್ಲಿ ಭಾಗವಹಿಸುವ ಆಯ್ಕೆಯನ್ನು ನೀಡಲಾಗುವುದು. ಎನ್‌ಎಸ್‌ಇನಲ್ಲಿ ಎಲ್‌ಐಸಿಯು 10.72 ಪರ್ಸೆಂಟ್ ಷೇರುಗಳನ್ನು ಹೊಂದಿದೆ. ಟೀಮ್ ಸೇಕ್ 4.5 ಪರ್ಸೆಂಟ್ ಷೇರುಗಳನ್ನು ಹೊಂದಿದೆ.
ಅನ್ ಲಿಸ್ಟೆಡ್ ಮಾರ್ಕೆಟ್‌ನಲ್ಲಿ ಎನ್‌ಎಸ್‌ಇ ಷೇರಿನ ದರ 2,150 ರುಪಾಯಿಗಳಾಗಿದೆ. ಇನ್‌ಕ್ರೆಡಿಬಲ್ ಡಾಟದ ಕಾಮ್ ಪ್ರಕಾರ ಅನ್ ಲಿಸ್ಟೆಡ್ ಮಾರುಕಟ್ಟೆಯಲ್ಲಿ ಎನ್‌ಎಸ್‌ಇಯ ಮಾರುಕಟ್ಟೆ ಮೌಲ್ಯವು 5 ಲಕ್ಷದ 30 ಸಾವಿರ ಕೋಟಿ ರುಪಾಯಿಗಳಾಗಿದೆ.
ಎನ್‌ಎಸ್‌ಇ ಐಪಿಒ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಎಕ್ಸ್‌ಚೇಂಜ್ ಈಕ್ವಿಟಿ ಕ್ಯಶ್, ಡಿರೈವಟೀಸ್ ಮತ್ತು ಕ್ಲಿಯರಿಂಗ್ ಬಿಸಿನೆಸ್‌ನಲ್ಲಿ ಪ್ರಾಬಲ್ಯವನ್ನು ಹೊಂದಿದೆ.
ಎನ್‌ಎಸ್‌ಇಯ ಇಂಡೆಕ್ಸ್‌ಗಳ ವಿವರ
- ನಿಫ್ಟಿ 50
- ನಿಫ್ಟಿ ಬ್ಯಾಂಕ್
- ನಿಫ್ಟಿ ಫೈನಾನ್ಷಿಯಲ್ ಸರ್ವೀಸ್
- ನಿಫ್ಟಿ ಮಿಡ್ ಕ್ಯಾಪ್ ಸೆಲೆಕ್ಟ್
- ನಿಫ್ಟಿ ನೆಕ್ಸ್ಟ್ 50
1992ರಲ್ಲಿ ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಮುಂಬಯಿನಲ್ಲಿ ಸ್ಥಾಪನೆಯಾಯಿತು. ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಟ್ರಾನ್ಸಪರೆನ್ಸಿ ತರಲು ಯತ್ನಿಸುತ್ತಿದೆ. 1991ರಲ್ಲಿ ಫೆರ್ವಾನಿ ಕಮಿಟಿಯ ಶಿಫಾರಸಿನ ಮೇರೆಗೆ ಎನ್‌ಎಸ್‌ಇ ಸ್ಥಾಪನೆಯಾಯಿತು. ಆಶಿಷ್ ಚೌಹಾಣ್ ಈಗಿನ ಸಿಇಒ ಆಗಿದ್ದಾರೆ. 2600ಕ್ಕೂ ಹೆಚ್ಚು ಷೇರುಗಳು ಎನ್‌ಎಸ್‌ಇನಲ್ಲಿ ಲಿಸ್ಟ್ ಆಗಿವೆ. ಬಾಂವೆ ಸ್ಟಾಕ್ ಎಕ್ಸ್‌ಚೇಂಜ್ ಲಿಮಿಟೆಡ್ ಭಾರತದ ಅತ್ಯಂತ ಹಳೆಯ ಸ್ಟಾಕ್ ಎಕ್ಸ್‌ಚೇಂಜ್ ಆಗಿದ್ದು, 1875ರಲ್ಲಿ ಸ್ಥಾಪನೆಯಾಗಿದೆ. ಏಷ್ಯಾದಲ್ಲೇ ಅತ್ಯಂತ ಹಳೆಯ ಸ್ಟಾಕ್ ಎಕ್ಸಚೇಂಜ್ ಇದಾಗಿದೆ.
ಎನ್‌ಎಸ್‌ಇ ಐಪಿಒ ರಿಟೇಲ್ ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಪೋರ್ಟ್ ಫೋಲಿಯೊವನ್ನು ವೈವಿಧ್ಯಗೊಳಿಸಲು ಉತ್ತಮ ಅವಕಾಶವಾಗಲಿದೆ. ಕಂಪನಿಯ ಭವಿಷ್ಯದ ಯಶಸ್ಸಿನಲ್ಲಿ ಮತ್ತು ಪಯಣದಲ್ಲಿ ಭಾಗವಹಿಸಬಹುದು.
ಕೇಂದ್ರ ಬಜೆಟ್ 2026 ಸಮೀಪಿಸುತ್ತಿದ್ದಂತೆ ಹೂಡಿಕೆದಾರರ ಗಮನ ಸೆಳೆಯುತ್ತಿವೆ ರೈಲ್ವೇ ಷೇರುಗಳು
ಎನ್‌ಎಸ್‌ಇ ಐಪಿಒ ಮೂಲಕ ಲಿಸ್ಟ್ ಆದಾಗ, ಅನ್ ಲಿಸ್ಟೆಡ್ ಮಾರ್ಕೆಟ್‌ನಲ್ಲಿ ಖರೀದಿಸಿರುವ ಷೇರುಗಳಿಗೆ ಏನಾಗುತ್ತದೆ? ಎಂದು ನೀವು ಕೇಳಬಹುದು. ಆಗ ಅನ್ ಲಿಸ್ಟೆಡ್ ಷೇಉಗಳು ಲಿಸ್ಟೆಡ್ ಷೇರುಗಳಾಗಿ ಡಿಮ್ಯಾಟ್ ಅಕೌಂಟ್‌ಗೆ ಕ್ರೆಡಿಟ್ ಆಗುತ್ತವೆ. ಆದರೆ ಅವುಗಳನ್ನು ತಕ್ಷಣ ಮಾರಲು ಸಾಧ್ಯವಾಗುವುದಿಲ್ಲ. ಸೆಬಿಯು ಪ್ರಿ-ಐಪಿಒ ಷೇರುದಾರರಿಗೆ ನಿರ್ದಿಷ್ಟ ಲಾಕ್ ಇನ್ ಅವಧಿಯನ್ನು ಕಡ್ಡಾಯಗೊಳಿಸಿದೆ. ಆ ಅವಧಿ ಮುಗಿದ ಬಳಿಕ ಷೇರುಗಳನ್ನು ಮಾರಾಟ ಮಾಡಬಹುದು.