ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೆನ್ಸೆಕ್ಸ್‌ 1635 ಅಂಕ ಪತನ, ನಿಫ್ಟಿ 488 ಅಂಕ ನಷ್ಟ

ಇರಾನ್‌ ಯುದ್ಧದ ಪರಿಣಾಮ ಜಾಗತಿಕ ಸ್ಟಾಕ್‌ ಮಾರ್ಕೆಟ್‌ ತಲ್ಲಣ ಮುಂದುವರಿದಿದೆ. ಸೆನ್ಸೆಕ್ಸ್‌ ಇವತ್ತು 1500 ಅಂಕ ಕಳೆದುಕೊಂಡು 71,947ಕ್ಕೆ ದಿನದಾಟ ಮುಕ್ತಾಯಗೊಳಿಸಿತು. ನಿಫ್ಟಿ 488 ಅಂಕ ನಷ್ಟದಲ್ಲಿ 22,331ಕ್ಕೆ ಸ್ಥಿರವಾಯಿತು. ಕಳೆದ ಎರಡು ಸೆಶನ್ಸ್‌ಗಳಲ್ಲಿ ಸೆನ್ಸೆಕ್ಸ್‌ 3,326 ಅಂಕಗಳು ಕುಸಿತಕ್ಕೀಡಾಗಿದ್ದು ಹೂಡಿಕೆದಾರರು 18 ಲಕ್ಷ ಕೋಟಿ ರುಪಾಯಿಗಳ ನೋಶನಲ್ ನಷ್ಟಕ್ಕೀಡಾಗಿದ್ದಾರೆ.

ಸಂಗ್ರಹ ಚಿತ್ರ

ಮುಂಬೈ: ಇರಾನ್‌ ಯುದ್ಧದ ಪರಿಣಾಮ ಜಾಗತಿಕ ಸ್ಟಾಕ್‌ ಮಾರ್ಕೆಟ್‌ ತಲ್ಲಣ ಮುಂದುವರಿದಿದೆ. ಸೆನ್ಸೆಕ್ಸ್‌ ಇವತ್ತು 1500 ಅಂಕ ಕಳೆದುಕೊಂಡು (Stock Market) 71,947ಕ್ಕೆ ದಿನದಾಟ ಮುಕ್ತಾಯಗೊಳಿಸಿತು. ನಿಫ್ಟಿ 488 ಅಂಕ ನಷ್ಟದಲ್ಲಿ 22,331ಕ್ಕೆ ಸ್ಥಿರವಾಯಿತು. ಕಳೆದ ಎರಡು ಸೆಶನ್ಸ್‌ಗಳಲ್ಲಿ ಸೆನ್ಸೆಕ್ಸ್‌ 3,326 ಅಂಕಗಳು ಕುಸಿತಕ್ಕೀಡಾಗಿದ್ದು ಹೂಡಿಕೆದಾರರು 18 ಲಕ್ಷ ಕೋಟಿ ರುಪಾಯಿಗಳ ನೋಶನಲ್ ನಷ್ಟಕ್ಕೀಡಾಗಿದ್ದಾರೆ. ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ 1.5 ಪರ್ಸೆಂಟ್‌ ಇಳಿಯಿತು. ಬಹುತೇಕ ಎಲ್ಲ ಸೆಕ್ಟರ್‌ಗಳು ರೆಡ್‌ನಲ್ಲಿತ್ತು. ಫೈನಾನ್ಷಿಯಲ್ಸ್‌, ಬ್ಯಾಂಕಿಂಗ್‌, ಐಟಿ ಮತ್ತು ಆಟೊಮೊಬೈಲ್‌ ಸೆಕ್ಟರ್‌ನಲ್ಲಿ ಷೇರುಗಳ ದರ ಭಾರಿ ಇಳಿಯಿತು.

ಸ್ಟಾಕ್‌ ಮಾರ್ಕೆಟ್‌ ಕುಸಿತಕ್ಕೆ ಕಾರಣಗಳೇನು?

  1. ಅಮೆರಿಕ- ಇರಾನ್‌ ಯುದ್ಧ ತೀವ್ರವಾಗಿರುವುದು.
  2. ತೈಲ ದರ ಪ್ರತಿ ಬ್ಯಾರೆಲ್‌ ಗೆ 115 ಡಾಲರ್‌ಗೆ ಏರಿಕೆ
  3. ಜಾಗತಿಕ ಷೇರು ಮಾರುಕಟ್ಟೆ ಪತನ
  4. ವಿದೇಶಿ ಹೂಡಿಕೆದಾರರಿಂದ ಷೇರುಗಳ ವಿಕ್ರಯ
  5. ಡಾಲರ್‌ ಎದುರು ರುಪಾಯಿ 95 ರುಪಾಯಿಗೆ ಇಳಿಕೆ

ಜಪಾನ್‌, ಆಸ್ಟ್ರೇಲಿಯಾ, ಹಾಂಕಾಂಗ್‌, ಶಾಂಘೈ, ಯುರೋಪ್‌ನಲ್ಲಿ ಸ್ಟಾಕ್‌ ಸೂಚ್ಯಂಕಗಳು ಕೆಳಗಿಳಿಯಿತು.

ನಿಫ್ಟಿ 50ಯಲ್ಲಿ ಹೆಚ್ಚು ನಷ್ಟಕ್ಕೀಡಾದ ಷೇರುಗಳು:

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ: 163/- : 6.6%

ಕೆನರಾ ಬ್ಯಾಂಕ್:‌ 123/- : 5.21%

ಬಜಾಜ್‌ ಫೈನಾನ್ಸ್:‌ 801/- : 5.01%

ಎಸ್‌ಬಿಐ : 979/- : 3.94%

ಇಂಟರ್‌ ಗ್ಲೋಬ್:‌ 3,944/- : 3.94%

ಬಜಾಜ್‌ ಫಿನ್‌ ಸರ್ವ್‌ : 1,632/- : 3.72%

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ ಮೊದಲ ಬಾರಿಗೆ 95 ರುಪಾಯಿಗೆ ಇಳಿದಿದೆ. ಇಂದು ಇಂಡಿಯಾ ವಿಕ್ಸ್‌ 4 ಪರ್ಸೆಂಟ್‌ ಏರಿಕೆಯಾಗಿದ್ದು 28 ಅಂಕಗಳಿಗೆ ಏರಿದೆ. ವಿದೇಶಿ ಹೂಡಿಕೆದಾರರು ಮಾರ್ಚ್‌ನಲ್ಲಿ 27ರ ತನಕ 1 ಲಕ್ಷದ 23 ಸಾವಿರ ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಕೇಶವ ಪ್ರಸಾದ್​ ಬಿ

View all posts by this author