ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌ 485 ಅಂಕ ಜಿಗಿತ 6 ಲಕ್ಷ ಕೋಟಿ ಲಾಭ ಇಳಿದಿದ್ದ ಚಿನ್ನ-ಬೆಳ್ಳಿ ದರ ಮತ್ತೆ ಏರಿಕೆ

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 485 ಅಂಕ ಏರಿಕೆಯಾಗಿದೆ. 84,065ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 174 ಅಂಕ ಏರಿಕೆಯಾಗಿ 25,867ಕ್ಕೆ ಸ್ಥಿರವಾಯಿತು. ಎಲ್ಲ ಸೆಕ್ಟರ್‌ಗಳಲ್ಲಿ ಸಾಂಸ್ಥಿಕ ಹೂಡಿಕೆದಾರು ಷೇರುಗಳನ್ನು ಉತ್ಸಾಹದಿಂದ ಖರೀದಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 485 ಅಂಕ ಏರಿಕೆಯಾಗಿದೆ. 84,065ಕ್ಕೆ ದಿನದ (Stock Market) ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 174 ಅಂಕ ಏರಿಕೆಯಾಗಿ 25,867ಕ್ಕೆ ಸ್ಥಿರವಾಯಿತು. ಎಲ್ಲ ಸೆಕ್ಟರ್‌ಗಳಲ್ಲಿ ಸಾಂಸ್ಥಿಕ ಹೂಡಿಕೆದಾರು ಷೇರುಗಳನ್ನು ಉತ್ಸಾಹದಿಂದ ಖರೀದಿಸಿದರು. ಇತ್ತೀಚೆಗೆ ದಾಖಲೆಯ ಎತ್ತರದಿಂದ ಇಳಿದಿದ್ದ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಸೋಮವಾರ ಸ್ವಲ್ಪ ಏರಿಕೆ ಆಗಿದೆ. 24 ಕ್ಯಾರಟ್‌ನ 10 ಗ್ರಾಮ್‌ ಬಂಗಾರದ ದರ 1,57,910 ರುಪಾಯಿಗೆ ಏರಿಕೆ ಆಗಿದೆ. ಬೆಳ್ಳಿಯ ದರ ಕೆಜಿಗೆ ಮತ್ತೆ 3 ಲಕ್ಷ ರುಪಾಯಿಗೆ ಹೆಚ್ಚಳವಾಗಿದೆ.

ಅಮೆರಿಕ ಮತ್ತು ಭಾರತದ ನಡುವೆ ಐತಿಹಾಸಿಕ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬಳಿಕ ಶುಕ್ರವಾರ ಉಭತ ದೇಶಗಳು ಜಂಟಿ ಹೇಳಿಕೆ ನೀಡಿವೆ. ಮಧ್ಯಂತರ ಒಪ್ಪಂದದ ವಿವರಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಏರಿಕೆ ದಾಖಲಿಸಿವೆ. ಇದು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹೆಜ್ಜೆಯಾಗಿದೆ. ಪಿಎಸ್‌ಯು ಬ್ಯಾಂಕ್‌ ಮತ್ತು ಲೋಹದ ಷೇರುಗಳು ಗಣನೀಯ ಚೇತರಿಸಿತು. ಜಿಯೊ ಪೊಲಿಟಿಕಲ್‌ ಟೆನ್ಷನ್‌ಗಳು ಕಡಿಮೆಯಾಗಿರುವುದು, ಡಾಲರ್‌ ವೀಕ್ನೆಸ್‌ ಕೂಡ ಪ್ರಭಾವ ಬೀರಿತು.

ರಿಯಾಲ್ಟಿ, ಕನ್‌ಸಮ್ಷನ್‌ ಲಿಂಕ್ಡ್‌ ಷೇರುಗಳು ಚೇತರಿಸಿತು. ಐಟಿ ಷೇರುಗಳು ಮಂದಗತಿಯಲ್ಲಿತ್ತು. ಡಾಲರ್‌ ಎದುರು ರುಪಾಯಿ ಮೌಲ್ಯ 90 ರುಪಾಯಿ 76 ಪೈಸೆಯ ಮಟ್ಟದಲ್ಲಿತ್ತು. ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 467 ಲಕ್ಷ ಕೋಟಿ ರುಪಾಯಿಗಳಿಂದ 473 ಲಕ್ಷ ಕೋಟಿ ರುಪಾಯಿಗೆ ಏರಿಕೆ ಆಯಿತು. ಒಂದೇ ದಿನ 6 ಲಕ್ಷ ಕೋಟಿ ಹೆಚ್ಚಳವಾಯಿತು. ಬಿಎಸ್‌ಇ 150 ಮಿಡ್‌ ಕ್ಯಾಪ್‌ ಇಂಡೆಕ್ಸ್‌ 1.66% ಏರಿತು. ಬಿಎಸ್‌ಇ 250 ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ 2.45% ಏರಿತು.

ನಿಫ್ಟಿ 50 ಇಂಡೆಕ್ಸ್‌ನಲ್ಲಿ ಲಾಭಗಳಿಸಿದ ಷೇರುಗಳು

ಎಸ್‌ಬಿಐ : 7.63%

ಶ್ರೀರಾಮ್‌ ಫೈನಾನ್ಸ್:‌ 6.03%

ಗ್ರಾಸಿಮ್‌ ಇಂಡಸ್ಟ್ರೀಸ್‌ : 3.11%

ಟೈಟನ್‌ : 3.16%

ಡಾ. ರೆಡ್ಡೀಸ್‌ : 2.81%

ಅಲ್ಟ್ರಾ ಟೆಕ್‌ ಸಿಮೆಂಟ್:‌ 2.57%

ನಿಫ್ಟಿ 50 ಇಂಡೆಕ್ಸ್‌ನಲ್ಲಿ ನಷ್ಟಕ್ಕೀಡಾದ ಷೇರುಗಳು

ಮ್ಯಾಕ್ಸ್‌ ಹೆಲ್ತ್‌ ಕೇರ್‌ ಇನ್‌ಸ್ಟಿಟ್ಯೂಟ್‌ : 2.82%

ಎನ್‌ಟಿಪಿಸಿ: 2.82%

ಐಟಿಸಿ: 0.95%

ಪವರ್‌ ಗ್ರಿಡ್:‌ 1.03%

ONGC : 0.84%

ICICI ಬ್ಯಾಂಕ್‌ : 0.79%

ಇನ್ಫೋಸಿಸ್:‌ 0.66%

ನಿಫ್ಟಿ ಮೀಡಿಯಾ 4.37% ಏರಿಕೆ ದಾಖಲಿಸಿತು. ಕನ್‌ ಸ್ಯೂಮರ್‌ ಡ್ಯೂರಬಲ್ಸ್‌ 3.60%, ಪಿಎಸ್‌ಯು ಬ್ಯಾಂಕ್‌ 3.34% ಗಳಿಕೆ ದಾಖಲಿಸಿತು.

ಹೆಚ್ಚು ಸಕ್ರಿಯವಾಗಿ ಟ್ರೇಡ್‌ ಆದ ಷೇರುಗಳು

ವೊಡಾಫೋನ್‌ ಐಡಿಯಾ : 63 ಕೋಟಿ

ಐಎಫ್‌ಸಿಐ : 21 ಕೋಟಿ

ಕಲ್ಯಾಣ್‌ ಜ್ಯುವೆಲರ್ಸ್‌ ಕಂಪನಿಯ ಷೇರು ದರದಲ್ಲಿ ಇವತ್ತು 10% ಏರಿಕೆಯಾಯಿತು. ಅಪ್ಪರ್‌ ಸರ್ಕ್ಯೂಟ್‌ ಲಿಮಿಟ್‌ ಮುಟ್ಟಿತು. ಪ್ರತಿ ಷೇರಿನ ದರ 417 ರುಪಾಯಿಗೆ ಏರಿಕೆ ಆಯಿತು. ಕಲ್ಯಾಣ್‌ ಜ್ಯುವೆಲರ್ಸ್‌ ಮೂರನೇ ತ್ರೈಮಾಸಿಕದಲ್ಲಿ ಭಾರಿ ಆದಾಯ ಗಳಿಸಿರುವುದು ಇದಕ್ಕೆ ಕಾರಣ.

ಬೆಳ್ಳಿಯ ಇಟಿಎಫ್‌ಗಳು ಕಳೆದ 4 ವರ್ಷಗಳಿಂದ ಚಿನ್ನದ ಇಟಿಎಫ್‌ಗಿಂತಲೂ ಹೆಚ್ಚಿನ ಆದಾಯವನ್ನು ಹೂಡಿಕೆದಾರರಿಗೆ ಕೊಟ್ಟಿವೆ. 62% XIRR ರಿಟರ್ನ್‌ ಕೊಟ್ಟಿವೆ. ಚಿನ್ನದ ಇಟಿಎಫ್‌ಗಳು 42% XIRR ರಿಟರ್ನ್‌ ನೀಡಿವೆ.

ಕೇಶವ ಪ್ರಸಾದ್​ ಬಿ

View all posts by this author