ಕೇಶವಪ್ರಸಾದ.ಬಿ
ಮುಂಬೈ: ಸೆನ್ಸೆಕ್ಸ್ ಇವತ್ತು 7 ಅಂಕ ಕಳೆದುಕೊಂಡು 80,710ಕ್ಕೆ ದಿನದ (Stock Market) ವಹಿವಾಟು ಮುಕ್ತಾಗೊಳಿಸಿತು. ನಿಫ್ಟಿ 7 ಅಂಕ ಏರಿಕೆಯಾಗಿ 24,741 ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಫ್ಲಾಟ್ ಆಗಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಮೋಟಾರ್ ಷೇರು ದರದಲ್ಲಿ ತಲಾ 1 ಪರ್ಸೆಂಟ್ ಏರಿಕೆ ದಾಖಲಿಸಿತು. ಐಟಿ, ಎಫ್‌ಎಂಸಿಜಿ ಮತ್ತು ರಿಯಾಲ್ಟಿ ಷೇರುಗಳ ದರದಲ್ಲಿ ಇಳಿಕೆ ಉಂಟಾಗಿತ್ತು.
ಸೆಕ್ಟರ್‌ಗಳ ಪೈಕಿ ರಿಯಾಲ್ಟಿ, ಎಫ್‌ಎಂಸಿಜಿ, ಐಟಿ ಸೆಕ್ಟರ್‌ಗಳು ನಷ್ಟಕ್ಕೀಡಾಯಿತು. ಆಟೊಮೊಬೈಲ್ ಮತ್ತು ಮೀಡಿಯಾ ಸೆಕ್ಟರ್ ಚೇತರಿಸಿತು. ಡಾಲರ್ ಎದುರು ರುಪಾಯಿ ದಾಖಲೆಯ 88 ರುಪಾಯಿ 26 ಪೈಸೆಗೆ ಇಳಿಕೆ ದಾಖಲಿಸಿತು.
ಇಂದು ಲಾಭ ಗಳಿಸಿದ ಷೇರುಗಳು
ಸನ್‌ಟೆಕ್ ರಿಯಾಲ್ಟಿ: 447/-
ವೊಡಾಫೋನ್ ಐಡಿಯಾ: 7.50/-
ರಿಲಯನ್ಸ್ ಇಂಡಸ್ಟ್ರೀಸ್ : 1,375/-
ಟಾಟಾ ಮೋಟಾರ್: 693/-
ಮಹೀಂದ್ರಾ & ಮಹೀಂದ್ರಾ
ಶ್ರೀರಾಮ್ ಫೈನಾನ್ಸ್
ಇಂದು ನಷ್ಟಕ್ಕೀಡಾದ ಷೇರುಗಳು
ಐಟಿಸಿ
ಸಿಪ್ಲಾ
ಎಚ್‌ಸಿಎಲ್ ಟೆಕ್ನಾಲಜೀಸ್
ಈ ಸುದ್ದಿಯನ್ನೂ ಓದಿ: Modi-Putin: ತೈಲ ಒಪ್ಪಂದದ ಮಾತುಕತೆ; ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಅದಾನಿ ಪವರ್ ಷೇರು 1: 5 ಅನುಪಾತದಲ್ಲಿ ವಿಭಜನೆಯಾಗಲಿದ್ದು, ಷೇರುದಾರರಿಗೆ ಪ್ರತಿ 1 ಷೇರಿಗೆ ಪ್ರತಿಯಾಗಿ 5 ಷೇರುಗಳು ಸಿಗಲಿದೆ. ಆಡಳಿತ ಮಂಡಳಿ ಇದಕ್ಕೆ ಅನುಮೋದನೆ ನೀಡಿದೆ. ಪ್ರತಿ 10 ರುಪಾಯಿ ಮುಖಬೆಲೆಯ ಷೇರು ತಲಾ ಎರಡು ರುಪಾಯಿ ಮುಖಬೆಲೆಯ 5 ಷೇರುಗಳಾಗಿ ವಿಭಜನೆಯಾಗಲಿದೆ. ಐಟಿಸಿ ಮತ್ತು ವರುಣ್ ಬೇವರೇಜಸ್ ಷೇರು ದರ 4% ಇಳಿಕೆ ಆಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಎರಡು ತಿಂಗಳಿನಿಂದ 60,000 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಐಟಿ ಮತ್ತು ಹಣಕಾಸು ಷೇರುಗಳನ್ನು ಮುಖ್ಯವಾಗಿ ಮಾರಿದ್ದಾರೆ. ಶುಕ್ರವಾರ ಸಾಕಷ್ಟು ಪ್ರಾಫಿಟ್ ಬುಕಿಂಗ್ ನಡೆಯಿತು.