ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌ 1,000 ಅಂಕ ಜಿಗಿತ, ಕೊನೆಗೂ ಅಬ್ಬರಿಸಿದ ಗೂಳಿ; ಕಾರಣವೇನು?

Share Market: ಸತತ ಮೂರು ದಿನಗಳಿಂದ ಕುಸಿತಕ್ಕೀಡಾಗಿದ್ದ ಬೆಂಚ್‌ಮಾರ್ಕ್‌ ಇಂಡೆಕ್ಸ್‌ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಗಣನೀಯವಾಗಿ ಚೇತರಿಸಿಕೊಂಡಿದೆ. ಉಭಯ ಸೂಚ್ಯಂಕಗಳು ಇತ್ತೀಚೆಗೆ ಇಳಿಮುಖವಾಗಿದ್ದರಿಂದ ಹೂಡಿಕೆದಾರರು ವಾಲ್ಯೂ ಬೈಯಿಂಗ್‌ ಮಾಡಿದರು. ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿಸಿದರು. ಇದರ ಪರಿಣಾಮ ಸೂಚ್ಯಂಕಗಳು ಜಿಗಿದಿವೆ.

ಸಾಂದರ್ಭಿಕ ಚಿತ್ರ

ಮುಂಬೈ, ಮಾ. 16: ಸತತ ಮೂರು ದಿನಗಳಿಂದ ಕುಸಿತಕ್ಕೀಡಾಗಿದ್ದ ಬೆಂಚ್‌ಮಾರ್ಕ್‌ ಇಂಡೆಕ್ಸ್‌ ಸೆನ್ಸೆಕ್ಸ್‌ (Sensex jumps) ಮತ್ತು ನಿಫ್ಟಿ ಸೋಮವಾರ (ಮಾರ್ಚ್‌ 16) ಗಣನೀಯವಾಗಿ ಚೇತರಿಸಿದೆ. ಉಭಯ ಸೂಚ್ಯಂಕಗಳು ಇತ್ತೀಚೆಗೆ ಇಳಿಮುಖವಾಗಿದ್ದರಿಂದ ಹೂಡಿಕೆದಾರರು ವಾಲ್ಯೂ ಬೈಯಿಂಗ್‌ ಮಾಡಿದರು. ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿಸಿದರು. ಇದರ ಪರಿಣಾಮ ಸೂಚ್ಯಂಕಗಳು ಜಿಗಿದಿವೆ.

ಮಧ್ಯಂತರದಲ್ಲಿ ದಿನದ ಕೆಳಮಟ್ಟದಿಂದ 1,800 ಅಂಕಗಳ ತನಕ ಏರಿಕೆಯಾದ ಸೆನ್ಸೆಕ್ಸ್‌ ದಿನದ ಮುಕ್ತಾಯಕ್ಕೆ 938 ಅಂಕ ಹೆಚ್ಚಳದೊಂದಿಗೆ 75,501ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 257 ಅಂಕ ಕಳೆದುಕೊಂಡು 23,408ಕ್ಕೆ ಸ್ಥಿರವಾಯಿತು.

ಸೆನ್ಸೆಕ್ಸ್-ನಿಫ್ಟಿ ಹೈಜಂಪ್‌ಗೆ ಕಾರಣ

  • ವಾಲ್ಯೂ ಬೈಯಿಂಗ್.‌
  • ಇಂಡಿಯಾ ವಿಕ್ಸ್‌ ಇಳಿಕೆ.
  • ಜಿಯೊಪಾಲಿಟಿಕಲ್‌ ರಿಲೀಫ್‌

ಷೇರು ಸೂಚ್ಯಂಕಗಳು ಕೆಳಕ್ಕೆ ಇಳಿದಿದ್ದರಿಂದ ಹೂಡಿಕೆದಾರರು ಗುಣಮಟ್ಟದ ಷೇರುಗಳನ್ನು ಖರೀದಿಸಿದರು. ಮೆಟಲ್‌, ಆಟೊಮೊಬೈಲ್‌, ಎಫ್‌ಎಂಸಿಜಿ ಷೇರುಗಳು ಚೇತರಿಸಿಕೊಂಡವು.

ಮಾರುಕಟ್ಟೆಯ ತೀವ್ರ ಏರಿಳಿತವನ್ನು ಬಿಂಬಿಸುವ ಇಂಡಿಯಾ ವಿಕ್ಸ್‌ ವೊಲಟಾಲಿಟಿ ಗೇಜ್‌ ಕೂಡ ಸುಗಮವಾಗಿದ್ದು, ಕುಸಿತವನ್ನು ಕಡಿಮೆ ಮಾಡಿದೆ. ಹಾರ್ಮುಜ್‌ ಜಲಸಂಧಿಯಲ್ಲಿ ತೈಲ- ಅನಿಲ ಹೊತ್ತ ಹಡಗುಗಳ ಸಂಚಾರಕ್ಕೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸಿದ್ಧತೆ ನಡೆಸುತ್ತಿರುವ ಕುರಿತ ವರದಿಗಳು ಸಕಾರಾತ್ಮಕ ಪ್ರಭಾವ ಬೀರಿತು.ಭಾರತಕ್ಕೆ 92,712 ಟನ್‌ ಎಲ್‌ಪಿಜಿ ಹೊತ್ತ ಎರಡು ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್‌ ಜಲಸಂಧಿ ದಾಟಿ ಬಂದಿವೆ. ಇದು ಭರವಸೆ ಮೂಡಿಸಿದೆ.

ನಿಫ್ಟಿ 50ಯಲ್ಲಿ ಇವತ್ತು ಲಾಭ ಗಳಿಸಿದ ಷೇರುಗಳು

  • ಅಲ್ಟ್ರಾ ಟೆಕ್‌ ಸಿಮೆಂಟ್:‌ 11,099/-: 4.55%
  • M&M: 3,036/-: 3.59%
  • ಟ್ರೆಂಟ್‌: 3,596/-: 3.11%
  • ಗ್ರಾಸಿಮ್‌ ಇಂಡಸ್ಟ್ರೀಸ್:‌ 2,644/-: 2.96%
  • ಎಟರ್ನಲ್‌: 222/-: 2.95%
  • ಎಚ್‌ಡಿಎಫ್‌ಸಿ ಬ್ಯಾಂಕ್‌: 840/-: 2.89%
  • ಬಜಾಜ್‌ ಫೈನಾನ್ಸ್‌ : 878/-: 2.71%

ನಿಫ್ಟಿ 50ಯಲ್ಲಿ ಇವತ್ತು ನಷ್ಟಕ್ಕೀಡಾದ ಷೇರುಗಳು

  • BEL: 429/-: 2.26%
  • ಮ್ಯಾಕ್ಸ್‌ ಹೆಲ್ತ್‌ಕೇರ್:‌ 970/-: 1.96%
  • ಒಎnffಜಿಸಿ: 259/-: 1.58%
  • ವಿಪ್ರೊ: 195/-: 2.47%

ನಿಫ್ಟಿ 50 ಇಂಡೆಕ್ಸ್‌ ಕಳೆದ 30 ವರ್ಷಗಳಲ್ಲಿ 2,000ರ ಡಾಟ್‌ ಕಾಮ್‌ ಕ್ರೈಸಸ್‌, 2008ರ ಜಾಗತಿಕ ಆರ್ಥಿಕ ಹಿಂಜರಿತ, 2019-20ರ ಕೋವಿಡ್‌ ಬಿಕ್ಕಟ್ಟುಗಳನ್ನು ಎದುರಿಸಿತ್ತು. ಶೇಕಡಾ 59ರ ತನಕವೂ ಬಿದ್ದಿತ್ತು. ಹೀಗಿದ್ದರೂ, ಇವುಗಳನ್ನೆಲ್ಲ ಎದುರಿಸಿದ ಬಳಿಕ ಕೂಡ ಏರಿಕೆ ದಾಖಲಿಸಿತ್ತು. 1995-2026ರಲ್ಲಿ ನಿಫ್ಟಿ 50 ಟೋಟಲ್‌ ರಿಟರ್ನ್‌ ಇಂಡೆಕ್ಸ್‌ 12.74% ಸಿಎಜಿಆರ್‌ ಲೆಕ್ಕದಲ್ಲಿ ರಿಟರ್ನ್‌ ಕೊಟ್ಟಿತ್ತು. ಆದ್ದರಿಂದ ಮಾರುಕಟ್ಟೆ ಸೂಚ್ಯಂಕಗಳು ಪತನವಾದಾಗ ರಿಟೇಲ್‌ ಹೂಡಿಕೆದಾರರು ಆತಂಕಪಡಬೇಕಿಲ್ಲ.

ಬೆಂಗಳೂರಿನ ಚಾರ್ಟರ್ಡ್‌ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

ಎಚ್‌ಎಫ್‌ಡಿಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ರಿಲಯನ್ಸ್‌ ಮತ್ತು ಎಸ್‌ಬಿಐ ಸೇರಿದಂತೆ ಹೆವಿವೈಟ್‌ ಸ್ಟಾಕ್ಸ್‌ಗಳ ಖರೀದಿ ಭರಾಟೆ ಕಂಡು ಬಂದಿತು. ಕ್ವಾಲಿಟಿ ಲಾರ್ಜ್‌ ಕ್ಯಾಪ್‌ ಷೇರುಗಳನ್ನು ಹೂಡಿಕೆದಾರರು ಖರೀದಿಸಿದರು.

ಸಾರ್ವಜನಿಕ ವಲಯದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬಾಂಡ್‌ಗಳನ್ನು ಬಿಡುಗಡೆ ಮಾಡುವ ಮೂಲಕ 25,000 ಕೋಟಿ ರುಪಾಯಿಗಳ ಫಂಡ್‌ ರೈಸ್‌ ಮಾಡುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ನ ಷೇರು ದರದಲ್ಲಿ ಇವತ್ತು 1.52% ಏರಿಕೆ ಆಯಿತು. 176 ರುಪಾಯಿಗೆ ಏರಿಕೆ ಆಯಿತು.

24 ಕ್ಯಾರೆಟ್‌ ಬಂಗಾರದ ದರ ಪ್ರತಿ ಗ್ರಾಮ್‌ಗೆ 15,917 ರುಪಾಯಿಗೆ ಇಳಿಕೆಯಾಗಿತ್ತು. ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 5,000/- ಇಳಿಕೆಯಾಗಿದ್ದು, 2 ಲಕ್ಷದ 70 ಸಾವಿರ ರುಪಾಯಿ ತಗ್ಗಿತ್ತು.