ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‘ಶ್ರೀರಾಮ್‌ ಮನಿ ಮಾರ್ಕೆಟ್‌ ಫಂಡ್‌' ಆರಂಭಿಸಿದ ಶ್ರೀರಾಮ್‌ ಎಎಮ್‌ಸಿ

ಈ ಫಂಡ್‌ ಒಂದು ವರ್ಷ ಅವಧಿಯ ಮೆಚ್ಯೂರಿಟಿಯ ಉತೃಷ್ಟ ಗುಣಮಟ್ಟದ ಮನಿ ಮಾರ್ಕೆಟ್‌ ಇನ್ಸ್ಟ್ರೂಮೆಂಟ್‌ಗಳಲ್ಲಿ ಹೂಡಿಕೆ ಮಾಡಲಿದೆ. ಅಧಿಕ ಲಿಕ್ವಿಡಿಟಿ ಮತ್ತು ನಿಯಂತ್ರಿತ ರಿಸ್ಕ್‌ ಪ್ರೊಫೈಲ್‌ ನೊಂದಿಗೆ ನಿರಂತರ ಆದಾಯವನ್ನು ನೀಡುವ ಉದ್ದೇಶವನ್ನು ಈ ಫಂಡ್‌ ಹೊಂದಿದೆ. ಈ ನೂತನ ಫಂಡ್‌ (ಎನ್‌ಎಫ್‌ಒ) ಜ.19 ರಂದು ಆರಂಭವಾಗಲಿದ್ದು ಜ.21ರಂದು ಮುಕ್ತಾಯಗೊಳ್ಳಲಿದೆ.

ಮುಂಬೈ : ಶ್ರೀರಾಮ್‌ ಗ್ರೂಪ್‌ನ ಭಾಗವಾಗಿರುವ ಶ್ರೀರಾಮ್‌ ಅಸೆಟ್‌ ಮ್ಯಾನೆಜ್ಮೆಂಟ್‌ ಕಂಪನಿ ಲಿಮಿಟೆಡ್‌ ಓಪನ್‌ ಎಂಡೆಡ್‌ ಡೆಟ್‌ ಸ್ಕೀಮ್‌ ಶ್ರೀರಾಮ್‌ ಮನಿ ಮಾರ್ಕೆಟ್‌ ಫಂಡ್‌ ಬಿಡುಗಡೆ ಯೊಂದಿಗೆ ತನ್ನ ಸ್ಥಿರ ಆದಾಯ ಕೊಡುಗೆಯನ್ನು (fixed income offering) ವಿಸ್ತರಿಸಿದೆ.

ಈ ಫಂಡ್‌ ಒಂದು ವರ್ಷ ಅವಧಿಯ ಮೆಚ್ಯೂರಿಟಿಯ ಉತೃಷ್ಟ ಗುಣಮಟ್ಟದ ಮನಿ ಮಾರ್ಕೆಟ್‌ ಇನ್ಸ್ಟ್ರೂಮೆಂಟ್‌ಗಳಲ್ಲಿ ಹೂಡಿಕೆ ಮಾಡಲಿದೆ. ಅಧಿಕ ಲಿಕ್ವಿಡಿಟಿ ಮತ್ತು ನಿಯಂತ್ರಿತ ರಿಸ್ಕ್‌ ಪ್ರೊಫೈಲ್‌ನೊಂದಿಗೆ ನಿರಂತರ ಆದಾಯವನ್ನು ನೀಡುವ ಉದ್ದೇಶವನ್ನು ಈ ಫಂಡ್‌ ಹೊಂದಿದೆ. ಈ ನೂತನ ಫಂಡ್‌ (ಎನ್‌ಎಫ್‌ಒ) ಜನೆವರಿ 19 ರಂದು ಆರಂಭವಾಗಲಿದ್ದು ಜ.21ರಂದು ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ: Banking: ಬ್ಯಾಂಕ್‌ ಗ್ರಾಹಕರೇ ಗಮನಿಸಿ, ನ.1ರಿಂದ ಬದಲಾಗಲಿವೆ ಈ ನಿಯಮಗಳು

ಈ ಎನ್‌ಎಫ್‌ಒ ಕಮರ್ಷಿಯಲ್‌ ಪೇಪರ್‍‌, ಸರ್ಟಿಫಿಕೆಟ್‌ ಆಫ್‌ ಡಿಪಾಸಿಟ್‌, ಟ್ರೆಶರಿ ಬಿಲ್‌ಗಳು, ಟ್ರಿಪಾರ್ಟಿ ರೆಪೊ, ಸರ್ಕಾರಿ ಸೆಕ್ಯೂರಿಟಿಗಳು ಹಾಗೂ ನಿಯಮಗಳಿಗೆ ಅನುಗುಣವಾಗಿ ಅಲ್ಪಾವಧಿ ಇನ್ಸ್ಟ್ರುಮೆಂಟ್‌ಗಳಲ್ಲೂ ಹೂಡಿಕೆ ಮಾಡಲಿದೆ.

ಈ ಯೋಜನೆಯ ಕಾರ್ಯಕ್ಷಮತೆಯು ನಿಫ್ಟಿ ಮನಿ ಮಾರ್ಕೆಟ್‌ ಸೂಚ್ಯಂಕ ಎ-1( ಟೋಟಲ್‌ ರಿಟರ್ನ ಇಂಡೆಕ್ಸ್‌) ಮೇಲೆ ಅವಲಂಬಿತವಾಗಿದೆ.

ಹೂಡಿಕೆದಾರರು ಒಂದೇ ಬಾರಿಗೆ ದೊಡ್ಡ ಮೊತ್ತ (ಲಂಪ್‌ ಸಮ್‌) ಅಥವಾ ಕ್ರಮಬದ್ದ ಹೂಡಿಕೆ ಯೋಜನೆ(ಎಸ್‌ಐಪಿ) ಮೂಲಕ ಶ್ರೀರಾಮ್‌ ಮನಿ ಮಾರ್ಕೆಟ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹು ದಾಗಿದೆ. ಕನಿಷ್ಟ ಅಪ್ಲಿಕೇಶನ್‌ ಮೊತ್ತವು 1,000 ವಿದ್ದು, ಮುಂದೆ 1, ರೂ ಗುಣಕದಲ್ಲಿ ಹೂಡಿಕೆ ಮಾಡಬಹುದಾಗಿದೆ. ಇಲ್ಲಿ ಯಾವುದೇ ಎಕ್ಸಿಟ್‌ ಲೋಡ್‌ ಇಲ್ಲ. ಮರುಪಡೆಯುವಿಕೆಯು (ರಿಡೆಂಪ್ಷನ್‌) ಮೂರು ವ್ಯವಹಾರ ದಿನದಲ್ಲಿ ನಿರ್ವಹಿಸಲಾಗುವುದು. ಈ ಯೋಜನೆಯು ನೇರ ಮತ್ತು ರೆಗ್ಯೂಲರ್‍‌ ಪ್ಲ್ಯಾನ್‌ ಅಡಿಯಲ್ಲಿ ಗ್ರೋತ್‌ ಆಪ್ಷನ್‌ನಲ್ಲಿ ಮಾತ್ರ ಲಭ್ಯವಿರಲಿದೆ.