ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಥಿರ ಠೇವಣಿ ಬಡ್ಡಿ ದರ ಪರಿಷ್ಕರಿಸಿದ ಶ್ರೀರಾಮ್‌ ಫೈನಾನ್ಸ್‌ ಲಿಮಿಟೆಡ್‌: ಮೇ. 6 ರಿಂದ ಜಾರಿ

ಬ್ಯಾಂಕ್ ಸಾಲ ಸೌಲಭ್ಯಗಳು, ಪರಿವರ್ತಿಸಲಾಗದ ಡಿಬೆಂಚರ್‌ಗಳು, ಅಧೀನ ಸಾಲ ಮತ್ತು ಸ್ಥಿರ ಠೇವಣಿ ಕಾರ್ಯಕ್ರಮಗಳಿಗಾಗಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೀರ್ಘಕಾಲಿಕ ಕ್ರೆಡಿಟ್ ರೇಟಿಂಗ್‌ ಗಳನ್ನು AAA (ಸ್ಥಿರ) ಮಟ್ಟಕ್ಕೆ ಇತ್ತೀಚೆಗೆ ಉನ್ನತೀಕರಿಸಲಾಗಿದೆ. ಈ ರೇಟಿಂಗ್ ಪ್ರತಿ ಏಜೆನ್ಸಿಯ ಮಾನದಂಡಗಳಲ್ಲಿ ಅತ್ಯುನ್ನತವಾಗಿದೆ.

ಬೆಂಗಳೂರು: ಶ್ರೀರಾಮ್ ಗ್ರೂಪ್‌ನ ಪ್ರಮುಖ ಸಂಸ್ಥೆ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (SFL), ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳ ಪರಿಷ್ಕರಣೆಯನ್ನು ಘೋಷಿಸಿದೆ. ಈ ಪರಿಷ್ಕೃತ ದರಗಳು ಮೇ 6, 2026 ರಿಂದ ಜಾರಿಗೆ ಬರಲಿವೆ.

ಬ್ಯಾಂಕ್ ಸಾಲ ಸೌಲಭ್ಯಗಳು, ಪರಿವರ್ತಿಸಲಾಗದ ಡಿಬೆಂಚರ್‌ಗಳು, ಅಧೀನ ಸಾಲ ಮತ್ತು ಸ್ಥಿರ ಠೇವಣಿ ಕಾರ್ಯಕ್ರಮಗಳಿಗಾಗಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೀರ್ಘಕಾಲಿಕ ಕ್ರೆಡಿಟ್ ರೇಟಿಂಗ್‌ ಗಳನ್ನು AAA (ಸ್ಥಿರ) ಮಟ್ಟಕ್ಕೆ ಇತ್ತೀಚೆಗೆ ಉನ್ನತೀಕರಿಸಲಾಗಿದೆ. ಈ ರೇಟಿಂಗ್ ಪ್ರತಿ ಏಜೆನ್ಸಿಯ ಮಾನದಂಡಗಳಲ್ಲಿ ಅತ್ಯುನ್ನತವಾಗಿದೆ. CRISIL, ICRA, ಇಂಡಿಯಾ ರೇಟಿಂಗ್ಸ್ & ರೀಸರ್ಚ್ ಮತ್ತು CARE ರೇಟಿಂಗ್ಸ್ ಸಂಸ್ಥೆಗಳು ಈ ರೇಟಿಂಗ್ ನೀಡಿರುವುದನ್ನು ಅನುಸರಿಸಿ, ಈಗ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದೆ.

ಈ ಸ್ಥಿರ ಠೇವಣಿಗಳಿಗೆ CRISIL ರೇಟಿಂಗ್ಸ್ ಸಂಸ್ಥೆಯು 'CRISIL AAA/ಸ್ಥಿರ', ICRA ಸಂಸ್ಥೆಯು '[ICRA]AAA (ಸ್ಥಿರ)', ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆಯು 'IND AAA/ಸ್ಥಿರ' ಮತ್ತು CARE ರೇಟಿಂಗ್ಸ್ ಸಂಸ್ಥೆಯು 'CARE AAA/ಸ್ಥಿರ' ಎಂಬ ರೇಟಿಂಗ್‌ಗಳನ್ನು ನೀಡಿವೆ.

ಇದನ್ನೂ ಓದಿ: Bangalore News: ನೋಂದಾಯಿತವಲ್ಲದ ಮದರಸಾಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ ಅನುದಾನ : ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ

ಪರಿಷ್ಕೃತ ಬಡ್ಡಿ ದರಗಳು (ಮೇ 6, 2026 ರಿಂದ ಜಾರಿಗೆ ಬರುತ್ತವೆ)

ರೂ. 10 ಕೋಟಿವರೆಗಿನ ಠೇವಣಿಗಳು

ಅವಧಿ ಅಸ್ತಿತ್ವದಲ್ಲಿರುವ ವಾರ್ಷಿಕ ದರ ಪರಿಷೃತ ವಾರ್ಷಿಕ ದರ

12 ತಿಂಗಳುಗಳು 7.00% 6.75%

15 ತಿಂಗಳುಗಳು (ಡಿಜಿಟಲ್ ಮಾತ್ರ) 7.25% 7.05%

18 ತಿಂಗಳುಗಳು – 23 ತಿಂಗಳುಗಳು 7.15% 7.00%

24 ತಿಂಗಳುಗಳು – 35 ತಿಂಗಳುಗಳು 7.25% 7.05%

36 ತಿಂಗಳುಗಳು – 60 ತಿಂಗಳುಗಳು 7.60% 7.25%

ಹೆಚ್ಚುವರಿ ಪ್ರಯೋಜನಗಳು ಈ ಕೆಳಕಂಡಂತೆ ಅನ್ವಯವಾಗುತ್ತವೆ:

  • ಹಿರಿಯ ನಾಗರಿಕರು (ಠೇವಣಿ ಇಡುವ ಅಥವಾ ನವೀಕರಿಸುವ ಸಮಯದಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ವಾರ್ಷಿಕವಾಗಿ 0.50% ಹೆಚ್ಚುವರಿ ಬಡ್ಡಿಯನ್ನು ಪಡೆ ಯಲು ಅರ್ಹರಾಗಿರುತ್ತಾರೆ
  • ಮಹಿಳಾ ಠೇವಣಿದಾರರು ವಾರ್ಷಿಕವಾಗಿ ಹೆಚ್ಚುವರಿಯಾಗಿ 0.05% ಅನ್ನು ಪಡೆಯುತ್ತಾರೆ.
  • ಮೆಚ್ಯೂರ್ ಆದ ಠೇವಣಿಗಳ ನವೀಕರಣಕ್ಕೆ ವಾರ್ಷಿಕವಾಗಿ 0.15% ಹೆಚ್ಚುವರಿ ಬಡ್ಡಿ ಸಿಗಲಿದೆ
  • ಠೇವಣಿಗಳನ್ನು ಕನಿಷ್ಠ ರೂ. 5,000/- ಮೊತ್ತಕ್ಕೆ ಒಳಪಟ್ಟು, ರೂ. 1,000/- ರ ಗುಣಕಗಳಲ್ಲಿ ಸ್ವೀಕರಿಸಲಾಗುತ್ತದೆ.

ಸ್ಥಿರ ಹೂಡಿಕೆ ಯೋಜನೆ (FIP) — ಪರಿಷ್ಕೃತ ದರಗಳು (ಮೇ 6, 2026 ರಿಂದ ಜಾರಿಗೆ ಬರುತ್ತವೆ)

ಅವಧಿ ಅಸ್ತಿತ್ವದಲ್ಲಿರುವ ವಾರ್ಷಿಕ ದರ ಪರಿಷೃತ ವಾರ್ಷಿಕ ದರ

12 – 23 ತಿಂಗಳುಗಳು 7.00% 6.75%

24 – 35 ತಿಂಗಳುಗಳು 7.25% 7.05%

36 – 48 ತಿಂಗಳುಗಳು 7.60% 7.25%

ಹೆಚ್ಚುವರಿ ಪ್ರಯೋಜನಗಳು ಈ ಕೆಳಕಂಡಂತೆ ಅನ್ವಯವಾಗುತ್ತವೆ:

  • ಮಹಿಳಾ ಠೇವಣಿದಾರರು ವಾರ್ಷಿಕವಾಗಿ ಹೆಚ್ಚುವರಿಯಾಗಿ 0.05% ಅನ್ನು ಪಡೆಯುತ್ತಾರೆ.
  • ಸ್ಥಿರ ಹೂಡಿಕೆ ಯೋಜನೆಯ (FIP) ಇತರ ಕರಾರುಗಳು ಮತ್ತು ಷರತ್ತುಗಳು ಬದಲಾಗುವುದಿಲ್ಲ.
  • ಕನಿಷ್ಠ 1,000/- ರೂ.ಗಳಿಗೆ ಒಳಪಟ್ಟು, FIP ಕಂತನ್ನು 500/- ರೂ.ಗಳ ಗುಣಕಗಳಲ್ಲಿ ಸ್ವೀಕರಿಸಲಾಗುತ್ತದೆ.