ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀರಾಮ್ ಫೈನಾನ್ಷಿಯಲ್ ಸರ್ವಿಸಸ್ ಮೂಲಕ ಬಂಡವಾಳ ಮಾರುಕಟ್ಟೆ ವ್ಯವಹಾರ ಬಲಪಡಿಸಿದ ಶ್ರೀರಾಮ್ ಸಮೂಹ

ಸ್ವತಂತ್ರವಾಗಿ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳಲು ಬಯಸುವವರಿಗೆ ತಜ್ಞರ ಮಾರ್ಗದರ್ಶನ ವನ್ನೂ ಒದಗಿಸುವ ‘ಅಸಿಸ್ಟೆಡ್ ಡು-ಇಟ್-ಯುವರ್‌ಸೆಲ್ಫ್’ (ಸ್ವಯಂ ಹೂಡಿಕೆಗೆ ನೆರವು) ಮಾದರಿಯ ವೇದಿಕೆ ರೂಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಚಿಲ್ಲರೆ ಹೂಡಿಕೆದಾರರು ಹಾಗೂ ಹೆಚ್ಚಿನ ನಿವ್ವಳ ಮೌಲ್ಯದ ಹೂಡಿಕೆದಾರರಿಗೆ ತಂತ್ರಜ್ಞಾನ ಮತ್ತು ವೈಯಕ್ತಿಕ ಸಲಹೆಯನ್ನು ಸಂಯೋಜಿಸಿದ ಸೇವೆಗಳನ್ನು ಒದಗಿಸಲು ಸಂಸ್ಥೆ ಯೋಜಿಸಿದೆ.

ಬೆಂಗಳೂರು: ದೇಶದ ಬಂಡವಾಳ ಮಾರುಕಟ್ಟೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಶ್ರೀರಾಮ್ ಸಮೂಹ ಮುಂದಾಗಿದೆ. 2020ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ವೇ2ವೆಲ್ತ್ ಸಂಸ್ಥೆಯನ್ನು ಶ್ರೀರಾಮ್ ಫೈನಾನ್ಷಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್(Shriram Financial Services Private Limited) ಎಂದು ಮರುನಾಮಕರಣ ಮಾಡಲಾಗುತ್ತಿದೆ. ಇದರೊಂದಿಗೆ ಸಂಸ್ಥೆಯ ಬ್ರೋಕರೇಜ್ ವ್ಯವಹಾರವು ಶ್ರೀರಾಮ್ ಬ್ರ್ಯಾಂಡ್‌ನಡಿ ಕಾರ್ಯ ನಿರ್ವಹಿಸಲಿದ್ದು, ಹೂಡಿಕೆ ಮತ್ತು ಸಂಪತ್ತು ನಿರ್ವಹಣಾ ಸೇವೆಗಳ ವಿಸ್ತರಣೆಗೆ ಸಮೂಹ ಒತ್ತು ನೀಡಲಿದೆ.

ಈ ಹೊಸ ಬೆಳವಣಿಗೆಯ ಭಾಗವಾಗಿ, ಬಂಡವಾಳ ಮಾರುಕಟ್ಟೆ ಕ್ಷೇತ್ರದಲ್ಲಿ 26 ವರ್ಷಗಳ ಅನುಭವ ಹೊಂದಿರುವ ಅಮಿತ್ ಗೋಲಿಯಾ ಅವರನ್ನು ಶ್ರೀರಾಮ್ ಫೈನಾನ್ಷಿಯಲ್ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾ ಗಿದೆ. ಅವರು ಈ ಹಿಂದೆ ಮೋತಿಲಾಲ್ ಓಸ್ವಾಲ್, ಆಕ್ಸಿಸ್ ಸೆಕ್ಯುರಿಟೀಸ್ ಮತ್ತು ಎಸ್‌ಬಿಐ ಸೆಕ್ಯುರಿಟೀಸ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: Shriram Finance: ಶ್ರೀರಾಮ್‌ ಫೈನಾನ್ಸ್‌ನಲ್ಲಿ 39,618 ಕೋಟಿ ಹೂಡಿಕೆ ಘೋಷಿಸಿದ ಜಪಾನ್‌ ಬ್ಯಾಂಕ್‌

ಸ್ವತಂತ್ರವಾಗಿ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳಲು ಬಯಸುವವರಿಗೆ ತಜ್ಞರ ಮಾರ್ಗದರ್ಶನ ವನ್ನೂ ಒದಗಿಸುವ ‘ಅಸಿಸ್ಟೆಡ್ ಡು-ಇಟ್-ಯುವರ್‌ಸೆಲ್ಫ್’ (ಸ್ವಯಂ ಹೂಡಿಕೆಗೆ ನೆರವು) ಮಾದರಿಯ ವೇದಿಕೆ ರೂಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಚಿಲ್ಲರೆ ಹೂಡಿಕೆದಾರರು ಹಾಗೂ ಹೆಚ್ಚಿನ ನಿವ್ವಳ ಮೌಲ್ಯದ ಹೂಡಿಕೆದಾರರಿಗೆ ತಂತ್ರಜ್ಞಾನ ಮತ್ತು ವೈಯಕ್ತಿಕ ಸಲಹೆಯನ್ನು ಸಂಯೋಜಿಸಿದ ಸೇವೆಗಳನ್ನು ಒದಗಿಸಲು ಸಂಸ್ಥೆ ಯೋಜಿಸಿದೆ.

ಷೇರು ವಹಿವಾಟು, ಡೆರಿವೇಟಿವ್‌ಗಳು, ಸರಕು ವ್ಯಾಪಾರ, ಮ್ಯೂಚುವಲ್ ಫಂಡ್‌ಗಳು, ಆರಂಭಿಕ ಸಾರ್ವಜನಿಕ ಷೇರು ಕೊಡುಗೆಗಳು, ಪೋರ್ಟ್‌ಫೋಲಿಯೊ ನಿರ್ವಹಣೆ, ರಾಷ್ಟ್ರೀಯ ಪಿಂಚಣಿ ಯೋಜನೆ, ಡಿಮ್ಯಾಟ್ ಸೇವೆಗಳು, ಸ್ಥಿರ ಆದಾಯದ ಹೂಡಿಕೆಗಳು ಹಾಗೂ ಹೂಡಿಕೆಗಳ ಮೇಲಿನ ಸಾಲ ಸೇರಿದಂತೆ ವಿವಿಧ ಹಣಕಾಸು ಸೇವೆಗಳನ್ನು ಸಂಸ್ಥೆ ಒದಗಿಸಲಿದೆ.

ಶ್ರೀರಾಮ್ ಕ್ಯಾಪಿಟಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಭಾಶ್ರೀ ಶ್ರೀರಾಮ್ ಮಾತನಾಡಿ, ಭಾರತದ ಬಂಡವಾಳ ಮಾರುಕಟ್ಟೆ ಬೆಳೆಯುತ್ತಿರುವ ಸಂದರ್ಭದಲ್ಲಿ ಹೂಡಿಕೆದಾರರಿಗೆ ವಿಶ್ವಾಸಾರ್ಹ ಸೇವೆಗಳ ಅಗತ್ಯ ಹೆಚ್ಚಿದೆ. ಶ್ರೀರಾಮ್ ಬ್ರ್ಯಾಂಡ್‌ನ ವಿಶ್ವಾಸ, ಸಮೂಹದ ವಿತರಣಾ ಜಾಲ ಮತ್ತು ಸ್ಯಾನ್‌ಲಾಮ್ ಸಮೂಹದ ಜಾಗತಿಕ ಅನುಭವವನ್ನು ಒಗ್ಗೂಡಿಸಿ ಹೂಡಿಕೆದಾರರ ಸಂಪತ್ತು ಸೃಷ್ಟಿಗೆ ನೆರವಾಗುವ ವೇದಿಕೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಹೊಸ ಜವಾಬ್ದಾರಿಯ ಕುರಿತು ಮಾತನಾಡಿದ ಅಮಿತ್ ಗೋಲಿಯಾ, ಸರಳ, ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ಹೂಡಿಕೆ ಸೇವೆಗಳನ್ನು ಒದಗಿಸುವುದರೊಂದಿಗೆ ಗ್ರಾಹಕರಿಗೆ ದೀರ್ಘಕಾಲೀನ ಮೌಲ್ಯ ಸೃಷ್ಟಿಸುವುದು ಸಂಸ್ಥೆಯ ಗುರಿಯಾಗಿದೆ ಎಂದು ಹೇಳಿದರು.