ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಭಾರತ- ಅಮೆರಿಕ ಟ್ರೇಡ್‌ ಡೀಲ್‌ ಸಸ್ಪೆನ್ಸ್‌, ಸೆನ್ಸೆಕ್ಸ್-ನಿಫ್ಟಿ ಫ್ಲಾಟ್‌

ಅಮೆರಿಕ ಮತ್ತು ಭಾರತದ ನಡುವೆ ನಡೆಯಲಿರುವ ಟ್ರೇಡ್‌ ಡೀಲ್‌ ಬಗ್ಗೆ ಹೂಡಿಕೆದಾರರು ಕಾತರದಿಂದ ಕಾಯುತ್ತಿರುವುದರಿಂದ ಮಾರ್ಕೆಟ್‌ ಇವತ್ತು ಫ್ಲಾಟ್‌ ಆಗಿತ್ತು. ಜತೆಗೆ ಹೂಡಿಕೆದಾರರು ಪ್ರಾಫಿಟ್‌ ಬುಕಿಂಗ್‌ ಕೂಡ ಮಾಡಿದ್ರು. ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌ ಮೊದಲಾದ ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ ಪ್ರಾಫಿಟ್‌ ಬುಕಿಂಗ್‌ ನಡೆಯಿತು. ಟಿಸಿಎಸ್‌ ಗುರುವಾರ ತನ್ನ ರಿಸಲ್ಟ್‌ ಘೋಷಿಸಲಿದ್ದು, ಅದರ ಪ್ರಭಾವ ಕಾದು ನೋಡಬೇಕಿದೆ.

ಭಾರತ- ಅಮೆರಿಕ ಟ್ರೇಡ್‌ ಡೀಲ್‌ ಸಸ್ಪೆನ್ಸ್‌, ಸೆನ್ಸೆಕ್ಸ್-ನಿಫ್ಟಿ ಫ್ಲಾಟ್‌

Profile Rakshita Karkera Jul 9, 2025 4:53 PM

ಮುಂಬೈ: ಭಾರತೀಯ ಸ್ಟಾಕ್‌ ಮಾರ್ಕೆಟ್‌ನಲ್ಲಿ ಇವತ್ತು ಸೆನ್ಸೆಕ್ಸ್‌ ಮತ್ತು ನಿಫ್ಟಿ ಇಳಿಕೆ ದಾಖಲಿಸಿತು. ಸೆನ್ಸೆಕ್ಸ್‌ 176 ಅಂಕ ಇಳಿಕೆಯಾಗಿ 83,536ಕ್ಕೆ ಸ್ಥಿರವಾಯಿತು. ನಿಫ್ಟಿ 47 ಅಂಕ ತಗ್ಗಿ 25,476ಕ್ಕೆ ಸ್ಥಿರವಾಯಿತು. ಅಮೆರಿಕ ಮತ್ತು ಭಾರತದ ನಡುವೆ ನಡೆಯಲಿರುವ ಟ್ರೇಡ್‌ ಡೀಲ್‌ ಬಗ್ಗೆ ಹೂಡಿಕೆದಾರರು ಕಾತರದಿಂದ ಕಾಯುತ್ತಿರುವುದರಿಂದ ಮಾರ್ಕೆಟ್‌ ಇವತ್ತು ಫ್ಲಾಟ್‌ ಆಗಿತ್ತು. ಜತೆಗೆ ಹೂಡಿಕೆದಾರರು ಪ್ರಾಫಿಟ್‌ ಬುಕಿಂಗ್‌ ಕೂಡ ಮಾಡಿದ್ರು. ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌ ಮೊದಲಾದ ಲಾರ್ಜ್‌ ಕ್ಯಾಪ್‌ ಷೇರುಗಳಲ್ಲಿ ಪ್ರಾಫಿಟ್‌ ಬುಕಿಂಗ್‌ ನಡೆಯಿತು. ಟಿಸಿಎಸ್‌ ಗುರುವಾರ ತನ್ನ ರಿಸಲ್ಟ್‌ ಘೋಷಿಸಲಿದ್ದು, ಅದರ ಪ್ರಭಾವ ಕಾದು ನೋಡಬೇಕಿದೆ.

ಈ ನಡುವೆ ಅಮರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದಿಂದ ಅಮೆರಿಕಕ್ಕೆ ಆಮದಾಗುವ ಔಷಧಗಳ ಮೇಲೆ ಭಾರಿ ಸುಂಕ ವಿಧಿಸುವ ಬೆದರಿಕೆ ಹಾಕಿದ್ದಾರೆ. ಇದರಿಂದ ಔಷಧ ಉತ್ಪಾದಕ ಕಂಪನಿಗಳಿಗೆ ಹೊಡೆತವಾಗಲಿದೆ ಎಂಬ ವರದಿಗಳು ನಕಾರಾತ್ಮಕ ಪ್ರಭಾವ ಬೀರಿತು. ಭಾರತದಿಂದ ಅಮೆರಿಕಕ್ಕೆ ರಫ್ತು ಕೆಟಗರಿಯಲ್ಲಿ ಔಷಧವೂ ಒಂದು.



ಸೆಕ್ಟರ್‌ಗಳ ಪೈಕಿ ಲೋಹ ವಲಯದ ಷೇರುಗಳ ದರ ಇಳಿಯಿತು. ತಾಮ್ರದ ಆಮದಿನ ಮೇಲೆ ಸುಂಕ ಹೆಚ್ಚಿಸುವುದಾಗಿ ಟ್ರಂಪ್‌ ಹೇಳಿರುವುದು ಇದಕ್ಕೆ ಕಾರಣ. ಇವತ್ತು ನಿಫ್ಟಿ ಐಟಿ, ರಿಯಾಲ್ಟಿ, ಆಯಿಲ್‌ & ಗ್ಯಾಸ್‌ ಸೆಕ್ಟರ್‌ ಷೇರುಗಳ ದರವೂ ಇಳಿಯಿತು.

ಭಾರತದ ದುಬಾರಿ ಷೇರುಗಳಲ್ಲಿ ಒಂದಾಗಿರುವ ಎಂಆರ್‌ಎಫ್‌ ಷೇರಿನ ದರ ಇವತ್ತು 1 ಲಕ್ಷದ 50 ಸಾವಿರ ರುಪಾಯಿಗಳ ಗಡಿಯನ್ನು ದಾಟಿತು. ಖರೀದಿದಾರರ ಆಸಕ್ತಿ ಹೆಚ್ಚಾಗಿರುವುದು ಇದಕ್ಕೆ ಕಾರಣ. ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 498 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಆದೈವು 6,944 ಕೋಟಿ ರುಪಾಯಗೆ ಚೇತರಿಸಿದೆ.

ಲಾಭ ಗಳಿಸಿದ ಷೇರುಗಳು:

  • ಸ್ಟರ್ಲಿಂಗ್‌ ಆಂಡ್‌ ವಿಲ್ಸನ್‌ ರಿನೆವಬಲ್‌ ಎನರ್ಜಿ: 327/-
  • ಮೆಟ್ರೊಪೊಲಿಸ್‌ ಹೆಲ್ತ್‌ಕೇರ್‌ : 1,964/-
  • ಟೈಮ್ಸ್‌ಸ್ಕ್ಯಾನ್‌ ಲಾಜಿಸ್ಟಿಕ್ಸ್‌ : 66/-

ನಷ್ಟಕ್ಕೀಡಾದ ಷೇರುಗಳು:

  • ಹಿಂಡಾಲ್ಕೊ:673/-
  • ಎಚ್‌ಸಿಎಲ್‌ ಟೆಕ್:‌ 1,673/-
  • ಗೇಲ್‌ ಇಂಡಿಯಾ : 185/-
  • ಹಿಂದೂಸ್ಥಾನ್‌ ಕಾಪ್ಪರ್:‌ 263/-
  • ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ: 144/-
  • ವೇದಾಂತ : 440/-

ಈ ವರ್ಷ ಟಾಟಾ ಕ್ಯಾಪಿಟಲ್.‌ LG, NSDL IPO :

ಭಾರತದ ಐಪಿಒ ಮಾರುಕಟ್ಟೆ ಮತ್ತೆ ಚಟುವಟಿಕೆಯಿಂದ ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಟಾಟಾ ಕ್ಯಾಪಿಟಲ್‌, ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾ, ಎನ್‌ಎಸ್‌ಡಿಎಲ್‌ ಮತ್ತು ಇತರ ಪ್ರಮುಖ ಕಂಪನಿಗಳ ಐಪಿಒ ನಡೆಯುವ ನಿರೀಕ್ಷೆ ಇದೆ. 70ಕ್ಕೂ ಹೆಚ್ಚು ಐಪಿಒಗಳಿಗೆ ಸೆಬಿ ಅನುಮತಿ ಸಿಕ್ಕಿದೆ. ಇನ್ನೂ 77 ಕಂಪನಿಗಳು ಅನುಮತಿ ಪಡೆಯುವ ನಿರೀಕ್ಷೆಯಲ್ಲಿವೆ. ಮಾರುಕಟ್ಟೆ ಚೇತರಿಸುತ್ತಿರುವ ಸಂದರ್ಭವು ಐಪಿಒಗಳಿಗೆ ಸಕಾರಾತ್ಮಕವಾಗಿರುತ್ತದೆ. ಕಾರ್ಪೊರೇಟ್‌ ವಲಯದ ಕಂಪನಿಗಳು ಐಪಿಒದಲ್ಲಿ ಸ್ಟಾಕ್‌ ಮಾರುಕಟ್ಟೆಗೆ ಪ್ರವೇಶಿಸುವುದರಿಂದ ರಿಟೇಲ್‌ ಹೂಡಿಕೆದಾರರಿಗೆ ಅಂಥ ಕಂಪನಿಗಳ ಷೇರುಗಳನ್ನು ಖರೀದಿಸುವ ಹಾಗೂ ಭವಿಷ್ಯದ ದಿನಗಳಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಪಾಲುದಾರರಾಗುವ ಅವಕಾಶ ಸಿಗುತ್ತದೆ. ಡಿವಿಡೆಂಡ್‌ ಕೂಡ ದೊರೆಯುವ ಮತ್ತೊಂದು ಲಾಭವಾಗಬಹುದು.

ಈ ಸುದ್ದಿಯನ್ನೂ ಓದಿ: Stock Market: ಟ್ರಂಪ್‌ ಟಾರಿಫ್‌ ಮುಂದೂಡಿಕೆ, ಟೆಕ್ಸ್‌ಟೈಲ್‌ ಷೇರುಗಳಿಗೆ ಶುಕ್ರದೆಸೆ! ಬಾಂಗ್ಲಾಗೆ ಬಿತ್ತು ಟ್ರಂಪ್‌ ಟ್ಯಾಕ್ಸ್‌

ಈ 2025ರ ಜೂನ್‌ನಲ್ಲಿ ಇದೇ ಮೊದಲ ಬಾರಿಗೆ ಮ್ಯೂಚುವಲ್‌ ಫಂಡ್‌ ಸಿಪ್‌ ಮೂಲಕ ಸ್ಟಾಕ್‌ ಮಾರುಕಟ್ಟೆಗೆ 27,000 ಕೋಟಿ ರುಪಾಯಿಗಳ ಭಾರಿ ಹೂಡಿಕೆ ಆಗಿದೆ. ಮೇ ತಿಂಗಳಿನಲ್ಲಿ 26,688 ಕೋಟಿ ರುಪಾಯಿ ಹೂಡಕೆಯಾಗಿತ್ತು. ಅದಕ್ಕೆ ಹೋಲಿಸಿದರೆ ಎರಡು ಪರ್ಸೆಂಟ್‌ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಮ್ಯೂಚುವಲ್‌ ಫಂಡ್‌ಗಳಿಗೆ 49,300 ಕೋಟಿ ರುಪಾಯಿಗಳ ಹೂಡಿಕೆಯಾಗಿದೆ. ಇಎಲ್‌ಎಸ್‌ಎಸ್‌ ಫಂಡ್ಸ್‌ ಹೊರತುಪಡಿಸಿ ಉಳಿದೆಲ್ಲ ಮ್ಯೂಚುವಲ್‌ ಪಂಡ್ಸ್‌ಗಳಿಗೆ ಹೂಡಿಕೆ ಹರಿದು ಬಂದಿದೆ. ಫ್ಲೆಕ್ಸಿ ಕ್ಯಾಪ್‌ ಫಂಡ್‌ಗಳಿಗೆ ಹೆಚ್ಚು ಇನ್ವೆಸ್ಟ್‌ ಆಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ನೇರವಾಗಿ ಸ್ಟಾಕ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಲು ಬಯಸದವರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುವುದು ಸಾಮಾನ್ಯ.