ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assault: ವೃಂದಾವನದ ಮುಖ್ಯ ಅರ್ಚಕನಿಂದ ವ್ಯಕ್ತಿ ಮೇಲೆ ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪ

ವೃಂದಾವನದ ಆಶ್ರಮದಲ್ಲಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಆಗ್ರಾ ವ್ಯಾಪ್ತಿಯ ಉಪ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದು, ಈ ಕುರಿತು ತನಿಖೆ ಕೈಗೊಳ್ಳುವಂತೆ ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯವರು ಎಸ್‌ಎಸ್‌ಪಿ ವೃತ್ತ ಅಧಿಕಾರಿಗೆ ಆದೇಶಿಸಿದ್ದಾರೆ.

ವೃಂದಾವನದ ಮುಖ್ಯ ಅರ್ಚಕನಿಂದ ವ್ಯಕ್ತಿ ಮೇಲೆ ಲೈಂಗಿಕ?

-

ಮಥುರಾ: ವೃಂದಾವನದ ಮುಖ್ಯ ಅರ್ಚಕ ( Vrindavan Ashram Head Priest) ಲೈಂಗಿಕ ದೌರ್ಜನ್ಯ (Assault) ಎಸಗಿ ಬೆದರಿಕೆ ಹಾಕುತ್ತಿರುವುದಾಗಿ ವ್ಯಕ್ತಿಯೊಬ್ಬರು ಮಥುರಾ ಪೊಲೀಸರಿಗೆ (Mathura ) ದೂರು ನೀಡಿದ್ದಾರೆ. ತಾನು ಆಶ್ರಮದಲ್ಲಿದ್ದಾಗ ಅರ್ಚಕರು ಪ್ರಸಾದದಲ್ಲಿ ಮಾದಕ ವಸ್ತುಗಳನ್ನು (intoxicants) ಬೆರೆಸಿ ಬಳಿಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ (assault) ಎಸಗಿದ್ದಾರೆ. ಇದರ ವಿಡಿಯೊವನ್ನು (Video) ಬಳಸಿ ತನಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಶನಿವಾರ ಮಥುರಾ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವೃಂದಾವನ ಆಶ್ರಮದ ಮುಖ್ಯ ಅರ್ಚಕ ಮಧ್ಯಪ್ರದೇಶದ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಮಾತ್ರವಲ್ಲ ಬೆದರಿಕೆಯನ್ನೂ ಹಾಕಿದ್ದಾರೆ. ಈ ಘಟನೆ 2022ರ ನವೆಂಬರ್ 22ರಂದು ವೃಂದಾವನದ ಆಶ್ರಮದಲ್ಲೇ ನಡೆದಿದೆ. ಈ ಕೃತ್ಯದ ವಿಡಿಯೊವನ್ನು ಬಳಸಿ ಆತ ತನಗೆ ಬೆದರಿಕೆ ಒಡ್ಡುತ್ತಿರುವುದಾಗಿ ಆರೋಪಿಸಿದ್ದಾರೆ. ಈ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಮಥುರಾದ ಎಸ್‌ಎಸ್‌ಪಿ ಆದೇಶಿಸಿದ್ದಾರೆ.

ವೃಂದಾವನದ ಮಹಾಂತ್ (ಮುಖ್ಯ ಅರ್ಚಕ) ಪ್ರಸಾದದಲ್ಲಿ ಕೆಲವು ಮಾದಕ ವಸ್ತುಗಳನ್ನು ಬೆರೆಸಿ ನೀಡಿದ್ದು, ಅದನ್ನು ತಾನು ಸೇವಿಸಿದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯದ ವಿಡಿಯೊ ತೋರಿಸಿ ಬಳಿಕ ಬೆದರಿಕೆ ಹಾಕಿದ್ದಾರೆ. ತಾನು ಪ್ರತಿಭಟಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಬಳಿಕ ಆಶ್ರಮದಿಂದ ತಪ್ಪಿಸಿಕೊಂಡು ಮನೆಗೆ ಬಂದೆ ಎಂದು ಮಧ್ಯಪ್ರದೇಶದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Virgin Flight: ವಿಮಾನದಲ್ಲಿ ಮುಚ್ಚಿದ ಶೌಚಾಲಯ: ಬಾಟಲ್‌ನಲ್ಲೇ ಮೂತ್ರ ವಿಸರ್ಜಿಸಿದ ಪ್ರಯಾಣಿಕರು

ಈ ಕುರಿತು ಆಗ್ರಾ ವ್ಯಾಪ್ತಿಯ ಉಪ ಪೊಲೀಸ್ ಮಹಾನಿರ್ದೇಶಕರಿಗೆ ಅವರು ದೂರು ನೀಡಿದ್ದು, ಅವರು ಬಳಿಕ ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಎಸ್‌ಎಸ್‌ಪಿ ವೃತ್ತ ಅಧಿಕಾರಿ (ಸದರ್) ಸಂದೀಪ್ ಕುಮಾರ್ ಸಿಂಗ್ ಅವರಿಗೆ ಈ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸ್‌ಎಸ್‌ಪಿ ಸೂಚಿಸಿದ್ದಾರೆ.

ಮಹಂತ್ ವಿರುದ್ಧದ ವ್ಯಕ್ತಿಯ ಆರೋಪಗಳು ತುಂಬಾ ಗಂಭೀರವಾಗಿವೆ. ಈ ಘಟನೆ ಸುಮಾರು ಮೂರು ವರ್ಷಗಳ ಹಿಂದೆ ನಡೆದಿದ್ದು, ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸಂದೀಪ್ ಕುಮಾರ್ ಸಿಂಗ್ ತಿಳಿಸಿದ್ದಾರೆ.