ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Stock Market: ಇರಾನ್‌ ಯುದ್ಧ ಸಮಾಪ್ತಿ ಎಫೆಕ್ಟ್‌; ಸೆನ್ಸೆಕ್ಸ್‌ 736 ಅಂಕ ಜಿಗಿತ

Share Market: ಅಮೆರಿಕ- ಇರಾನ್‌ ನಡುವೆ ಶಾಂತಿ ಒಪ್ಪಂದ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಗಣನೀಯ ಚೇತರಿಕೆ ದಾಖಲಿಸಿತು. ಸೆನ್ಸೆಕ್ಸ್‌ 736 ಅಂಕ ಗಳಿಸಿ 76,264ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 231 ಅಂಕ ಗಳಿಸಿ 23,853ಕ್ಕೆ ಸ್ಥಿರವಾಯಿತು.

ಸಾಂದರ್ಭಿಕ ಚಿತ್ರ.

ಮುಂಬೈ, ಜೂ.15: ಅಮೆರಿಕ- ಇರಾನ್‌ ನಡುವೆ ಶಾಂತಿ ಒಪ್ಪಂದ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಗಣನೀಯ ಚೇತರಿಕೆ ದಾಖಲಿಸಿತು (Stock Market). ಸೆನ್ಸೆಕ್ಸ್‌ 736 ಅಂಕ ಗಳಿಸಿ 76,264ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 231 ಅಂಕ ಗಳಿಸಿ 23,853ಕ್ಕೆ ಸ್ಥಿರವಾಯಿತು. ರಿಯಾಲ್ಟಿ ವಲಯವು ಮುಂಚೂಣಿಯಲ್ಲಿ ಲಾಭ ಗಳಿಸಿತು. ಆಟೋ, ಸಿಮೆಂಟ್ ಮತ್ತು ಹಣಕಾಸು ಸೇವೆಗಳ ವಲಯಗಳು ಇದನ್ನು ಹಿಂಬಾಲಿಸಿದವು. ಇದು ಹೂಡಿಕೆದಾರರಲ್ಲಿ ರಿಸ್ಕ್ ತೆಗೆದುಕೊಳ್ಳುವ ಉತ್ಸಾಹ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.

ಸಾರ್ವಜನಿಕ ವಲಯದ (PSU) ಬ್ಯಾಂಕುಗಳು ಮತ್ತು ತೈಲ ಹಾಗೂ ನೈಸರ್ಗಿಕ ಅನಿಲ (Oil & Gas) ವಲಯಗಳು ಸಹ ಸ್ಥಿರವಾಗಿ ಮುನ್ನಡೆದವು. ಫಾರ್ಮಾ ಮತ್ತು ಹೆಲ್ತ್‌ಕೇರ್‌ನಂತಹ ರಕ್ಷಣಾತ್ಮಕ (ಡೆಫೆನ್ಸಿವ್) ವಲಯಗಳು ಹಿನ್ನಡೆ ಅನುಭವಿಸಿದರೆ, ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಹೆಲ್ತ್‌ಕೇರ್ ಸೂಚ್ಯಂಕಗಳು ಒತ್ತಡದಲ್ಲೇ ಮುಂದುವರಿದವು. ಒಟ್ಟಾರೆಯಾಗಿ, ಮಾರುಕಟ್ಟೆಯ ಸೆಂಟಿಮೆಂಟ್ ಸ್ಪಷ್ಟವಾಗಿ ರಿಸ್ಕ್ ತೆಗೆದುಕೊಳ್ಳುವತ್ತ (ರಿಸ್ಕ್-ಆನ್) ಒಲವು ತೋರಿತು ಹಾಗೂ ಸೈಕ್ಲಿಕಲ್ ವಲಯಗಳು ಈ ಚೇತರಿಕೆಯ ನೇತೃತ್ವ ವಹಿಸಿದವು.

ಇಂದು ಮಾರುಕಟ್ಟೆ ಸೂಚ್ಯಂಕಗಳು ಏಕೆ ಏರಿಕೆಯಾಗಿದೆ? ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದದ ರೂಪುರೇಷೆ ಸಿದ್ಧಗೊಂಡಿರುವುದು. ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿರುವುದು. ಬಾಂಡ್ ಇಳುವರಿ (ಬಾಂಡ್ ಯೀಲ್ಡ್) ಕುಸಿದಿರುವುದು. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಭಾರಿ ಚೇತರಿಕೆ (ರ‍್ಯಾಲಿ) ಕಂಡುಬಂದಿರುವುದು. ರೂಪಾಯಿ ಮೌಲ್ಯವು 94ರ ಮಟ್ಟವನ್ನು ದಾಟಿ ಬಲಗೊಂಡಿರುವುದು.

ಇಂದು ಹೆಚ್ಚು ಲಾಭ ಗಳಿಸಿದ ಷೇರುಗಳು

  • ಎಚ್‌ಡಿಎಫ್‌ಸಿ ಬ್ಯಾಂಕ್:‌ 777/-
  • ಆರ್‌ಐಎಲ್:‌ 1,307/-
  • ಐಸಿಐಸಿಐ ಬ್ಯಾಂಕ್:‌ 1,328
  • ಎಲ್‌ &ಟಿ: 4,170/-
  • ಎಂ&ಎಂ: 3,134/-
  • ಎಸ್‌ಬಿಐ: 1,021/-
  • ಶ್ರೀರಾಮ್‌ ಫೈನಾನ್ಸ್‌: 1,001/-

ಇಂದು ಹೆಚ್ಚು ನಷ್ಟಕ್ಕೀಡಾದ ಷೇರುಗಳು

  • ಎನ್‌ ಟಿಪಿಸಿ: 348/-
  • ಬಜಾಜ್‌ ಆಟೊ : 9,943
  • ಒಎನ್‌ ಜಿಸಿ: 243
  • ಐಸಿಐಸಿಐ ಬ್ಯಾಂಕ್‌ : 1,328/-
  • ಹಿಂಡಾಲ್ಕೊ: 1,014/-

ಇಲ್ಲಿಯವರೆಗೆ ವೇದಾಂತ ಲಿಮಿಟೆಡ್ (Vedanta Ltd) ಒಂದೇ ಕಂಪನಿಯಾಗಿದ್ದು, ಅದರ ಅಡಿಯಲ್ಲಿ ಅಲ್ಯೂಮಿನಿಯಂ, ತೈಲ (Oil & Gas), ವಿದ್ಯುತ್ (Power), ಕಬ್ಬಿಣ ಮತ್ತು ಉಕ್ಕು (Iron & Steel) ಹಾಗೂ ಜಿಂಕ್ (ಸತು) ನಂತಹ ಎಲ್ಲ ವಿಭಿನ್ನ ವ್ಯವಹಾರಗಳೂ ಒಟ್ಟಿಗೆ ನಡೆಯುತ್ತಿದ್ದವು.

ಆದರೆ ಈ ದೊಡ್ಡ ಜಂಟಿ ಕುಟುಂಬವನ್ನು ಈಗ 5 ಪ್ರತ್ಯೇಕ ಸ್ವತಂತ್ರ ಕಂಪನಿಗಳಾಗಿ ವಿಂಗಡಿಸಲಾಗಿದೆ. ಮೂಲ ಕಂಪನಿಯಾದ ವೇದಾಂತ ಲಿಮಿಟೆಡ್ ಜಿಂಕ್ ಮತ್ತು ಇತರ ಬೇಸ್ ಮೆಟಲ್ಸ್ ವ್ಯವಹಾರಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ. ಉಳಿದ 4 ಪ್ರಮುಖ ವಿಭಾಗಗಳನ್ನು ಹೊಸ ಕಂಪನಿಗಳಾಗಿ ಬೇರ್ಪಡಿಸಿ, ಇವತ್ತು ಷೇರು ಮಾರುಕಟ್ಟೆಯಲ್ಲಿ (NSE & BSE) ಪ್ರತ್ಯೇಕವಾಗಿ ಲಿಸ್ಟ್ ಮಾಡಲಾಗಿದೆ.

ಸೆನ್ಸೆಕ್ಸ್-ನಿಫ್ಟಿ ಜಿಗಿತಕ್ಕೆ ಕಾರಣಗಳು

ಯುಎಸ್-ಇರಾನ್ ಒಪ್ಪಂದ: ಸುಮಾರು 107 ದಿನಗಳ ಕಾಲ ನಡೆದ ತಮ್ಮ ನಡುವಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ಜಾಗತಿಕ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ಸಾಗಣೆಯಾಗುವ ಕಿರಿದಾದ ಜಲಮಾರ್ಗವಾದ 'ಸ್ಟ್ರೈಟ್ ಆಫ್ ಹಾರ್ಮುಜ್' (Strait of Hormuz) ಅನ್ನು ಪುನಃ ಮುಕ್ತಗೊಳಿಸಲು ಅಮೆರಿಕ (US) ಮತ್ತು ಇರಾನ್ ದೇಶಗಳು ಶುಕ್ರವಾರ ಸ್ವಿಟ್ಜರ್ಲೆಂಡ್‌ನಲ್ಲಿ ಮುಖಾಮುಖಿ ಸಭೆ ನಡೆಸಿ ಒಪ್ಪಂದವನ್ನು ಅಂತಿಮಗೊಳಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಸಂಜೆ ತಮ್ಮ 'ಟ್ರುತ್ ಸೋಶಿಯಲ್' (Truth Social) ಜಾಲತಾಣದಲ್ಲಿ ಈ ಬೆಳವಣಿಗೆಯನ್ನು ಪ್ರಕಟಿಸಿದ್ದು, ಇದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿದ್ದ ಆತಂಕಗಳನ್ನು ನಿವಾರಿಸಿದೆ. ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಅಧಿಕೃತ ಶಾಂತಿ ಒಪ್ಪಂದಕ್ಕೆ ಉಭಯ ದೇಶಗಳ ಅಧಿಕಾರಿಗಳು ಸಹಿ ಹಾಕಲಿದ್ದಾರೆ ಎಂದು ತಿಳಿಸಲಾಗಿದೆ.

ಬ್ರೆಂಟ್ ಕಚ್ಚಾ ತೈಲ ಬೆರೆಯಲ್ಲಿ ಕುಸಿತ: ಅಮೆರಿಕ-ಇರಾನ್ ಒಪ್ಪಂದದ ಪ್ರಕಟಣೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಕಳೆದ ಮೂರು ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಜಾಗತಿಕ ಮಾರುಕಟ್ಟೆಯ ಮಾನದಂಡವಾಗಿರುವ 'ಬ್ರೆಂಟ್ ಕ್ರೂಡ್' (Brent Crude) ಬೆಲೆ ಶೇಕಡಾ 5ರಷ್ಟು ಕುಸಿತ ಕಂಡು, ಪ್ರತಿ ಬ್ಯಾರೆಲ್‌ಗೆ ಸುಮಾರು 82.90 ಯುಎಸ್ ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ತೈಲ ಆಮದು ದೇಶವಾಗಿರುವ ಭಾರತಕ್ಕೆ ಈ ತೈಲ ಬೆಲೆ ಇಳಿಕೆ ದೊಡ್ಡ ನಿರಾಳ ತಂದಿದೆ. ಏಕೆಂದರೆ, ಇದರಿಂದ ದೇಶದ ಹಣದುಬ್ಬರ, ರುಪಾಯಿ ಮೌಲ್ಯದ ಮೇಲಿನ ಒತ್ತಡ ಹಾಗೂ ವ್ಯಾಪಾರ ಕೊರತೆ ಕಡಿಮೆಯಾಗಲು ಭಾರಿ ಸಹಾಯವಾಗುತ್ತದೆ.

ಆಕಾಶ ಏರ್‌ನಿಂದ ಪ್ರಯಾಣಿಕರಿಗಾಗಿ ಆರೋಗ್ಯಪೂರ್ಣ ಯೋಗ ಡೇ ಸ್ಪೆಷಲ್ ಮೀಲ್ ಬಿಡುಗಡೆ

ಬಲವಾದ ಜಾಗತಿಕ ಮಾರುಕಟ್ಟೆ ಸಂಕೇತಗಳು: ಏಷ್ಯಾದ ಮಾರುಕಟ್ಟೆಗಳಲ್ಲಿ, ದಕ್ಷಿಣ ಕೊರಿಯಾದ 'ಕೋಸ್ಪಿ' (Kospi) ಶೇಕಡಾ 5 ಕ್ಕಿಂತ ಹೆಚ್ಚು ಜಿಗಿತ ಕಂಡರೆ, ಜಪಾನ್ನ 'ನಿಕ್ಕಿ 225' (Nikkei 225) ಸೂಚ್ಯಂಕವು ಸುಮಾರು ಶೇಕಡಾ 5 ರಷ್ಟು ಏರಿಕೆ ದಾಖಲಿಸಿತು. ಚೀನಾದ ಶಾಂಘೈ 'ಎಸ್‌ಎಸ್‌ಇ ಕಾಂಪೋಸಿಟ್' (SSE Composite) ಮತ್ತು ಹಾಂಗ್ ಕಾಂಗ್‌ನ 'ಹ್ಯಾಂಗ್ ಸೆಂಗ್' (Hang Seng) ಸೂಚ್ಯಂಕಗಳು ಸಹ ಲಾಭದೊಂದಿಗೆ ದಿನದ ವಹಿವಾಟು ಮುಗಿಸಿದವು. ಯುರೋಪ್ ಮಾರುಕಟ್ಟೆಗಳು ಸಹ ಹಸಿರು ನಿಶಾನೆಯೊಂದಿಗೆ (ಲಾಭದಲ್ಲಿ) ಮುನ್ನಡೆಯುತ್ತಿದ್ದವು. ಇನ್ನು ಶುಕ್ರವಾರದ ವಹಿವಾಟಿನಲ್ಲಿ ಅಮೆರಿಕದ ಮಾರುಕಟ್ಟೆಗಳು ಭರ್ಜರಿ ಲಾಭದೊಂದಿಗೆ ಮುಕ್ತಾಯಗೊಂಡಿದ್ದವು.

ಕೇಶವ ಪ್ರಸಾದ್​ ಬಿ

View all posts by this author