ಮುಂಬಯಿ: ಬಿಹಾರ ಚುನಾವಣೆಯ ಫಲಿತಾಂಶ (Bihar Assembly Election 2025) ಶುಕ್ರವಾರ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸ್ಟಾಕ್ ಮಾರ್ಕೆಟ್‌ನಲ್ಲಿ (Stack Market) ಸೆನ್ಸೆಕ್ಸ್ ಮತ್ತು ನಿಫ್ಟಿ ಯಾವುದೇ ಮಹತ್ವದ ಏರಿಳಿತ ದಾಖಲಿಸದೆ ಫ್ಲಾಟ್ ಆಗಿತ್ತು. ಸೆನ್ಸೆಕ್ಸ್ 12 ಅಂಕ ಏರಿಕೊಂಡು 84,478ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 3 ಅಂಕ ಏರಿಕೆಯಾಗಿ 25,879 ಅಂಕಗಳಿಗೆ ಸ್ಥಿರವಾಯಿತು. ಬಿಎಸ್‌ಇ ಮಿಡ್ ಕ್ಯಾಪ್ 0.34 ಪರ್ಸೆಂಟ್ ಇಳಿಯಿತು. ಸ್ಮಾಲ್ ಕ್ಯಾಪ್ ಕೂಡ ತಗ್ಗಿತ್ತು.
ಇವತ್ತಿನ ಮಾರುಕಟ್ಟೆಯ ಹೈಲೈಟ್ಸ್ ಬಗ್ಗೆ ನೋಡೋಣ. ಸತತ ನಾಲ್ಕು ದಿನಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯ ಹಾದಿಯಲ್ಲಿ ಇತ್ತು. ಮಧ್ಯಂತರದಲ್ಲಿ ಸೆನ್ಸೆಕ್ಸ್ 84,919 ಅಂಕಗಳ ಎತ್ತರಕ್ಕೂ ಏರಿತ್ತು. ನಿಫ್ಟಿ 26,010 ಅಂಕಗಳನ್ನು ಸ್ಪರ್ಶಿಸಿತ್ತು. ಬಿಹಾರ ಚುನಾವಣೆ ರಿಸಲ್ಟ್‌ಗೆ ಮುನ್ನ ಪ್ರಾಫಿಟ್ ಬುಕಿಂಗ್ ವ್ಯಾಪಕವಾಗಿ ನಡೆಯಿತು.
ಎನ್‌ಡಿಎ ಬಿಹಾರದಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಬಹುತೇಕ ಎಕ್ಸಿಟ್ ಪೋಲ್‌ಗಳು ಎನ್‌ಡಿಎಗೆ ಅಧಿಕಾರ ಸಿಗಲಿದೆ ಎಂದಿವೆ. ಆದರೆ ಸಮೀಕ್ಷೆಗಳು ಕೆಲವೊಮ್ಮೆ ನಿಜವಾಗುವುದಿಲ್ಲ. ನಿಖರವಾಗಿ ಇರುವುದಿಲ್ಲ. ಒಂದು ವೇಳೆ ಮಾರುಕಟ್ಟೆ ನಿರೀಕ್ಷೆ ತಪ್ಪಿದರೆ ನಾಳೆ ಸೂಚ್ಯಂಕ ಪತನವಾಗುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಇವತ್ತು ಪ್ರಾಫಿಟ್ ಬುಕಿಂಗ್ ನಡೆಯಿತು. ಒಂದು ವೇಳೆ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಸೋತರೆ ಸ್ಟಾಕ್ ಮಾರ್ಕೆಟ್ ಸೂಚ್ಯಂಕ ಭಾರಿ ಕುಸಿಯುವ ಸಾಧ್ಯತೆ ಇದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಡಾಲರ್ ಎದುರು ರುಪಾಯಿ ದುರ್ಬಲವಾಗುತ್ತಿದೆ ಎಂದು ಜಿಯೊಜಿತ್ ಇನ್ವೆಸ್ಟ್ ಮೆಂಟ್‌ನ ರಿಸರ್ಚ್ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.ಲಾಭ ಗಳಿಸಿದ ಷೇರುಗಳು: ನಿಫ್ಟಿ 50 ಇಂಡೆಕ್ಸ್‌ನಲ್ಲಿ ಏಷ್ಯನ್ ಪೇಂಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಇಂಟರ್ ಗ್ಲೋಬ್ ಏವಿಯೇಶನ್ ಏರಿಕೆ ದಾಖಲಿಸಿತು.
ಆದರೆ ಎಟರ್ನಲ್, ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ ಷೇರು ನಷ್ಟಕ್ಕೀಡಾಯಿತು. ಸೆಕ್ಟರ್‌ಗಳ ಪೈಕಿ ನಿಫ್ಟಿ ಪಿಎಸ್‌ಯು ಬ್ಯಾಂಕ್, ಮಾಧ್ಯಮ, ಎಫ್‌ಎಂಸಿಜಿ, ಐಟಿ ಸೆಕ್ಟರ್ ಷೇರುಗಳಿ ಇಳಿಯಿತು. ವೊಡಾಫೋನ್ ಐಡಿಯಾ, ಟಾಡಟಾ ಸ್ಟೀಲ್ ಷೇರುಗಳು ಹೆಚ್ಚು ಸಕ್ರಿಯವಾಗಿತ್ತು. ಏಷ್ಯನ್ ಪೇಂಟ್ಸ್, ಅದಾನಿ ಪೋರ್ಟ್ಸ್, ಕೆನರಾ ಬ್ಯಾಂಕ್, ವೇದಾಂತ ಷೇರುಗಳು 52 ವಾಕ್ ಎತ್ತರಕ್ಕೇರಿವೆ.
ಈ ಸುದ್ದಿಯನ್ನೂ ಓದಿ: Stock Market: ಸ್ಟಾಕ್ ಮಾರ್ಕೆಟ್ ಮೇಲೆ ಬಜೆಟ್ ಬೀರಲಿದೆಯೇ ಪಾಸಿಟಿವ್ ಎಫೆಕ್ಟ್?
ಅಮೆರಿಕದ ವಿಶ್ವವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ತಮ್ಮ 95 ನೇ ವಯಸ್ಸಿನಲ್ಲಿ ದಲಾಲ್ ಸ್ಟ್ರೀಟ್‌ಗೆ ಶುಭ ವಿದಾಯ ಹೇಳಿದ್ದಾರೆ. 60 ವರ್ಷಗಳಿಂದ ತಮ್ಮ ಬರ್ಕ್‌ಶೈರ್ ಹಾಥವೇಸ್ ಕಂಪನಿಯ ಷೇರುದಾರರಿಗೆ ಪ್ರತಿ ವರ್ಷವೂ ತಪ್ಪದೆ ಪತ್ರ ಬರೆಯುತ್ತಿದ್ದರು. ಜಗತ್ತಿನ ನಂ.1 ಹೂಡಿಕೆದಾರನ ಪತ್ರವನ್ನು ಓದಲು ಕಾರ್ಪೊರೇಟ್ ವಲಯದ ಮಂದಿ ಕೂಡ ಕುತೂಹಲದಿಂದ ಕಾಯುತ್ತಿದ್ದರು. ಇದು ಅಮೆರಿಕದ ಕಾರ್ಪೊರೇಟ್ ಇತಿಹಾಸದಲ್ಲೇ ಮಹತ್ವದ ಪರಂಪರೆಯಾಗಿತ್ತು.
ಈಗ ವಯೋಸಹಜ ಕಾರಣದಿಂದ ತಮ್ಮ ಷೇರು ಸಾಮ್ರಾಜ್ಯದ ಚುಕ್ಕಾಣಿಯನ್ನು ಉತ್ತರಾಧಿಕಾರಿಗೆ ವಹಿಸಿ, ಬಫೆಟ್ ಅವರು ದಲಾಲ್ ಸ್ಟ್ರೀಟ್‌ನಿಂದ ಈ ವರ್ಷಾಂತ್ಯದಲ್ಲಿ ನಿರ್ಗಮಿಸುತ್ತಿರುವುದಾಗಿ ಘೋಷಿಸಿದ್ದಾರೆ. ಕೊನೆಯ ಹೃದಯಸ್ಪರ್ಶಿ ಪತ್ರ ಬರೆದು ಪೆನ್ನು ಕೆಳಗಿಟ್ಟಿದ್ದಾರೆ.