ಮುಂಬಯಿ: ಸೆನ್ಸೆಕ್ಸ್ (SENSEX) ಮತ್ತು ನಿಫ್ಟಿ (Nifty) ಇವತ್ತು ಗಣನೀಯ ಚೇತರಿಕೆ ದಾಖಲಿಸಿತು. ಸೆನ್ಸೆಕ್ಸ್ 389 ಅಂಕ ಹೆಚ್ಚಳವಾಗಿ 84,950ಕ್ಕೆ ಸ್ಥಿರವಾಯಿತು. ನಿಫ್ಟಿ 104 ಅಂಕ ಚೇತರಿಸಿಕೊಂಡು 26,013ಕ್ಕೆ ಸ್ಥಿರವಾಯಿತು. ಎಟರ್ನಲ್ ಮತ್ತು ಟಾಟಾ ಕನ್‌ಸ್ಯೂಮರ್ ತಲಾರ ಎರಡು ಪರ್ಸೆಂಟ್ ಹೆಚ್ಚಳ ದಾಖಲಿಸಿತು. ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಆರು ದಿನಗಳಿಂದ ಏರುಗತಿಯಲ್ಲಿ ಇತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ರಫ್ತುದಾರರಿಗೆ ಪೂರಕ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸೂಚ್ಯಂಕ ಏರಿಕೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಣಕಾಸು ಷೇರುಗಳು ಲಾಭದಲ್ಲಿತ್ತು.
ಮೋತಿಲಾಲ್ ಓಸ್ವಾಲ್ ಪ್ರಕಾರ ಎಲ್‌ಜಿ ಎಲೆಕ್ಟ್ರಾನಿಕ್ಸ್ ಷೇರು ದರ 17% ಏರಿಕೆಯಾಗುವ ಸಾಧ್ಯತೆ ಇದೆ. ಬಜಾಜ್ ಆಟೊ, ಟಾಟಾ ಕನ್‌ಸ್ಯೂಮರ್, ಈಶರ್ ಮೋಟಾರ್, ಮ್ಯಾಕ್ಸ್ ಹೆಲ್ತ್‌ಕೇರ್, ಮಾರುತಿ ಸುಜುಕಿ ಮೊದಲಾದ ಷೇರುಗಳು ಲಾಭ ಗಳಿಸಿತು. ಅದಾನಿ ಎಂಟರ್ ಪ್ರೈಸಸ್, ಜಿಯೊ ಫೈನಾನ್ಷಿಯಲ್, ಇಂಟರ್‌ಗ್ಲೋಬ್ ಏವಿಯೇಶನ್ ಷೇರುಗಳ ದರಗಳು ಇಳಿಯಿತು.
ನಾರಾಯಣ ಹೃದಯಾಲಯ, ಎಂಆರ್‌ಪಿಎಲ್, ಡಿಸಿಬಿ ಬ್ಯಾಂಕ್, ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಷೇರುಗಳು ಲಾಭ ಗಳಿಸಿವೆ. ಮ್ಯೂಚುವಲ್ ಫಂಡ್‌ಗಳು ಅಕ್ಟೋಬರ್‌ನಲ್ಲಿ ಐಪಿಒದಲ್ಲಿ 13,527 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿವೆ. ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದ ಐಪಿಒದಲ್ಲಿ ಮ್ಯೂಚುವಲ್ ಫಂಡ್‌ಗಳು 5,237 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿವೆ. ಟಾಟಾ ಕ್ಯಾಪಿಟಲ್ ಐಪಿಒದಲ್ಲಿ 2,008 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿವೆ. ಕೆನರಾ ಎಚ್‌ಎಸ್‌ಬಿಸಿ ಲೈಫ್ ಇನ್ಷೂರೆನ್ಸ್ ಕಂಪನಿಯ ಐಪಿಒದಲ್ಲಿ 1,807 ಕೋಟಿ ರುಪಾಯಿ ಇನ್ವೆಸ್ಟ್ ಮಾಡಿವೆ. ವಿ ವರ್ಕ್ ಇಂಡಿಯಾ ಮ್ಯಾನೇಜ್ ಮೆಂಟ್ ಕಂಪನಿಯ ಐಪಿಒದಲ್ಲಿ 1,413 ಕೋಟಿ ರುಪಾಯಿ ಹೂಡಿಕೆ ಮಾಡಿವೆ.
Stock Market: ಸೆನ್ಸೆಕ್ಸ್ 700 ಅಂಕ ಪತನ, ಸ್ಟಾಕ್ ಮಾರ್ಕೆಟ್ ಕುಸಿಯುತ್ತಿರುವುದೇಕೆ?
ತಜ್ಞರುಗಳ ಪ್ರಕಾರ ಜಾಗತಿಕ ಹೂಡಿಕೆದಾರರು 4-5 ವರ್ಷಗಳ ನಂತರ ಭಾರತಕ್ಕೆ ವಾಪಸಾಗುತ್ತಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಹೂಡಿಕೆ ಮುಂದುವರಿಸುತ್ತಿದ್ದಾರೆ. ಆಟೊಮೊಬೈಲ್, ಇಂಡಸ್ಟ್ರಿಗಳು ವಿದೇಶಿ ಹೂಡಿಕೆಯನ್ನು ಸ್ವೀಕರಿಸುತ್ತಿವೆ. ಪವರ್ ಗ್ರಿಡ್ ಕಂಪನಿಯು ಬಾಂಡ್‌ಗಳ ಮೂಲಕ 3,800 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲು ಉದ್ದೇಶಿಸಿದೆ. ರಿಯಾಲ್ಟಿ ವಲಯದ ಸ್ಟೋನ್ ಕ್ರಾಫ್ಟ್ ಗ್ರೂಪ್ ತೆಲಂಗಾಣದಲ್ಲಿ 110 ಎಕರೆ ಟೌನ್ ಶಿಪ್ ಯೋಜನೆಯಲ್ಲಿ 300 ಕೋಟಿ ರುಪಾಯಿ ಹೂಡಿಕೆ ಮಾಡಲು ಉದ್ದೇಶಿಸಿದೆ.
ಭಾರತ ಮತ್ತು ಅಮೆರಿಕದ ನಡುವೆ ಡೀಲ್ ಆದರೆ ಸ್ಟಾಕ್ ಮಾರ್ಕೆಟ್ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ. ಜವಳಿ ಮತ್ತು ರತ್ನಗಳ ವಲಯ ಗಣನೀಯ ಲಾಭ ಪಡೆಯುವ ಸಾಧ್ಯತೆ ಇದೆ.