ಬೆಂಗಳೂರು: ಪ್ರಮುಖ ಅಡುಗೆಮನೆ ಮತ್ತು ಗೃಹೋಪಯೋಗಿ ಉಪಕರಣಗಳ ಬ್ರ್ಯಾಂಡ್ ತನ್ನ ವಹಿವಾಟಿನ ಪ್ರಗತಿಯನ್ನು ಮುಂದುವರಿಸಿದೆ. 2027ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 41.3ರಷ್ಟು ಏರಿಕೆ ಕಂಡು ₹480.6 ಕೋಟಿಗೆ ತಲುಪಿದೆ. ಇದರ ಜೊತೆಗೆ, ಕಂಪನಿಯು ತನ್ನ ರಿಟೇಲ್ (ಚಿಲ್ಲರೆ ಮಾರಾಟ) ಜಾಲವನ್ನು ಸ್ಥಿರವಾಗಿ ವಿಸ್ತರಿಸುತ್ತಿದ್ದು, 2027ರ ಆರ್ಥಿಕ ವರ್ಷದ (FY27) ಅಂತ್ಯದ ವೇಳೆಗೆ ತನ್ನ ಮಳಿಗೆಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಈ ಖಾಸಗಿ ಕಂಪನಿಯ ಕಿಚನ್ ಅಪ್ಲೈಯನ್ಸ್ ಮತ್ತು ಕುಕ್‌ವೇರ್ ರೇಂಜ್ ಅನ್ನು ಈ ಮಳಿಗೆ ಒಂದೇ ಸೂರಿನಡಿ ಒದಗಿಸುತ್ತಿದೆ. ದೈನಂದಿನ ಅಡುಗೆ ಹಾಗೂ ಆಧುನಿಕ ಅಡುಗೆಮನೆಗಳಿಗೆ ಅಗತ್ಯವಿರುವ ಪ್ರೆಶರ್ ಕುಕ್ಕರ್‌ಗಳು, ಕುಕ್‌ವೇರ್‌ಗಳು, ಸಣ್ಣ ಕಿಚನ್ ಅಪ್ಲೈಯನ್ಸ್, ಏರ್ ಫ್ರೈಯರ್‌ಗಳು, ಮಿಕ್ಸರ್ ಗ್ರೈಂಡರ್‌ಗಳು, ಕೆಟಲ್‌ಗಳು, ಕುಕ್‌ಟಾಪ್‌ಗಳು, ಇಂಡಕ್ಷನ್ ಕುಕ್‌ಟಾಪ್‌ಗಳು, ಚಿಮ್ನಿಗಳು, ಹಾಬ್‌ಗಳು ಮತ್ತು ಓವನ್‌ಗಳಂತಹ ವೈವಿಧ್ಯಮಯ ಉತ್ಪನ್ನಗಳನ್ನು ಗ್ರಾಹಕರು ಇಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಪರಿಶೀಲಿಸಿ ಖರೀದಿಸಬಹುದಾಗಿದೆ.
ನೂತನ ಮಳಿಗೆಯ ಆರಂಭದ ಕುರಿತು ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಸ್ಥಾಪಕ ರಾಜೇಂದ್ರ ಜೆ. ಗಾಂಧಿ, "ಗ್ರಾಹಕರ ಅಭಿರುಚಿಗಳು ಬದಲಾಗುತ್ತಿದ್ದಂತೆ, ಅವರಿಂದ ಹೆಚ್ಚಿನ ಆಯ್ಕೆ ಗಳ ನಿರೀಕ್ಷೆ ಮತ್ತು ಖರೀದಿಸುವ ಮುನ್ನ ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಪರಿಶೀಲಿಸುವ ಒಲವು ಹೆಚ್ಚಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ತಜ್ಞ ಸಲಹೆಗಾರರ ಉಪಸ್ಥಿತಿಯಲ್ಲಿ ಗ್ರಾಹಕರಿಗೆ ಪಿಜನ್‌ನ ವೈವಿಧ್ಯಮಯ ಉತ್ಪನ್ನಗಳನ್ನು ಅತ್ಯುತ್ತಮ ರೀಟೇಲ್ ಪರಿಸರದಲ್ಲಿ ಪರಿಚಯಿಸಲು ಈ ಮಳಿಗೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಹೊಸ ಸ್ಟೋರ್‌ನ ಉದ್ಘಾಟನೆಯು, ನಮ್ಮ ತವರು ಮಾರುಕಟ್ಟೆಯಲ್ಲಿ ರೀಟೇಲ್ ಜಾಲವನ್ನು ಬಲಪಡಿಸುವ ಮತ್ತು ನಮ್ಮ ಉತ್ಪನ್ನಗಳು ಹಾಗೂ ಪರಿಹಾರಗಳನ್ನು ಗ್ರಾಹಕರಿಗೆ ಇನ್ನಷ್ಟು ಹತ್ತಿರ ತರುವ ನಮ್ಮ ಬದ್ಧತೆಯ ಸಂಕೇತವಾಗಿದೆ," ಎಂದು ತಿಳಿಸಿದರು.
ಕರ್ನಾಟಕವು ಕಂಪನಿ ಪಾಲಿಗೆ ಅತ್ಯಂತ ಪ್ರಮುಖ ಮಾರುಕಟ್ಟೆ. ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ ಮತ್ತು ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ 75ಕ್ಕೂ ಹೆಚ್ಚು ಮಳಿಗೆಗಳನ್ನು ಸಂಸ್ಥೆ ಹೊಂದಿದೆ. ಬೆಂಗಳೂರನ್ನು ಕೇಂದ್ರ ಕಚೇರಿಯನ್ನಾಗಿ ಹೊಂದಿರುವ ಈ ಬ್ರ್ಯಾಂಡ್, ರಾಜ್ಯದಲ್ಲಿ ತನ್ನ ರೀಟೇಲ್ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ.
ಪ್ರಮುಖ ಮಾರುಕಟ್ಟೆಗಳಲ್ಲಿರುವ ಗ್ರಾಹಕರಿಗೆ ಕಂಪನಿಯ ಕಿಚನ್ ಅಪ್ಲೈಯನ್ಸ್ ಮತ್ತು ಕುಕ್‌ವೇರ್ ಉತ್ಪನ್ನಗಳನ್ನು ಸುಲಭವಾಗಿ ತಲುಪಿಸಲು ಇದು ಅನುವು ಮಾಡಿಕೊಡುತ್ತಿದೆ. ಬೆಂಗಳೂರಿನ ಈ ಹೊಸ ಫ್ಲ್ಯಾಗ್‌ಶಿಪ್ ಸ್ಟೋರ್ ಗ್ರಾಹಕರಿಗೆ ಅತ್ಯುತ್ತಮ ಬ್ರ್ಯಾಂಡ್ ಅನುಭವ ಒದಗಿಸುವ ಮೂಲಕ ಸಂಸ್ಥೆಯ ಜಾಲವನ್ನು ಮತ್ತಷ್ಟು ಬಲಪಡಿಸಲಿದೆ. ಈ ಮಳಿಗೆಯ ಆರಂಭವು ಬ್ರ್ಯಾಂಡ್‌ನ ಡಿಜಿಟಲ್ ಬೆಳವಣಿಗೆಗೆ ಪೂರಕವಾಗಿರುವುದರ ಜೊತೆಗೆ ರೀಟೇಲ್ ಉಪಸ್ಥಿತಿಯನ್ನೂ ಗಟ್ಟಿಗೊಳಿಸಲಿದೆ. ಗ್ರಾಹಕರಿಗೆ ಕಂಪನಿಯ ಉತ್ಪನ್ನ ಶ್ರೇಣಿಯನ್ನು ಪಡೆಯಲು ಇದೊಂದು ಮೀಸಲು ತಾಣವಾಗಿದೆ.
ತನ್ನ ರೀಟೇಲ್ ಜಾಲವನ್ನು ವಿಸ್ತರಿಸುವ ಹಾಗೂ ಎಲ್ಲ ಮಾರುಕಟ್ಟೆಗಳಲ್ಲಿ ಗ್ರಾಹಕರೊಂದಿಗೆ ದೃಢವಾದ ಸಂಪರ್ಕ ಸಾಧಿಸುವ ಕಂಪನಿಯ ನಿರಂತರ ಆದ್ಯತೆಯ ಒಂದು ಭಾಗವಾಗಿ ಈ ಮಳಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ, ವೈವಿಧ್ಯಮಯ ಕಿಚನ್ ಅಪ್ಲೈಯನ್ಸ್ ಮತ್ತು ಕುಕ್‌ವೇರ್‌ಗಳನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ದೃಷ್ಟಿಕೋನವನ್ನು ಇದು ಹೊಂದಿದೆ.