ಬೆಂಗಳೂರು: ಕಿಚನ್ ಮತ್ತು ಹೋಮ್ ಅಪ್ಲೈಯನ್ಸ್ಗಾಗಿನ ಪ್ರಮುಖ ಖಾಸಗಿ ಕಂಪನಿಯು ಬೆಂಗಳೂರಿನಲ್ಲಿ ತನ್ನ ನೂತನ ಫ್ಲ್ಯಾಗ್‌ಶಿಪ್ ಸ್ಟೋರ್ ಅನ್ನು ಮಿಷನ್ ರಸ್ತೆಯಲ್ಲಿ ಆರಂಭಿಸಿದೆ. ಇದರೊಂದಿಗೆ, ಭಾರತದಾದ್ಯಂತ ಕಂಪನಿಯ ರೀಟೇಲ್ ಮಳಿಗೆಗಳ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಆಧುನಿಕ ವಿನ್ಯಾಸ, ಆಕರ್ಷಕ ಪ್ರಾಡಕ್ಟ್ ಡಿಸ್‌ಪ್ಲೇ ಹಾಗೂ ಸುಧಾರಿತ ಪ್ರದರ್ಶನ ವ್ಯವಸ್ಥೆಯೊಂದಿಗೆ ಈ ಹೊಸ ಸ್ಟೋರ್ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವ ನೀಡಲಿದೆ. ಈ ಬ್ರ್ಯಾಂಡ್ʼನ ವಿಶಾಲವಾದ ಕಿಚನ್ ಅಪ್ಲೈಯನ್ಸ್ ಮತ್ತು ಕುಕ್‌ವೇರ್ ರೇಂಜ್ ಅನ್ನು ಈ ಮಳಿಗೆ ಒಂದೇ ಸೂರಿನಡಿ ಒದಗಿಸುತ್ತಿದೆ.
ದೈನಂದಿನ ಅಡುಗೆ ಹಾಗೂ ಆಧುನಿಕ ಅಡುಗೆಮನೆಗಳಿಗೆ ಅಗತ್ಯವಿರುವ ಪ್ರೆಶರ್ ಕುಕ್ಕರ್‌ಗಳು, ಕುಕ್‌ವೇರ್‌ಗಳು, ಸಣ್ಣ ಕಿಚನ್ ಅಪ್ಲೈಯನ್ಸ್, ಏರ್ ಫ್ರೈಯರ್‌ಗಳು, ಮಿಕ್ಸರ್ ಗ್ರೈಂಡರ್‌ಗಳು, ಕೆಟಲ್‌ಗಳು, ಕುಕ್‌ಟಾಪ್‌ಗಳು, ಇಂಡಕ್ಷನ್ ಕುಕ್‌ಟಾಪ್‌ಗಳು, ಚಿಮ್ನಿಗಳು, ಹಾಬ್‌ಗಳು ಮತ್ತು ಓವನ್‌ಗಳಂತಹ ವೈವಿಧ್ಯಮಯ ಉತ್ಪನ್ನಗಳನ್ನು ಗ್ರಾಹಕರು ಇಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಪರಿಶೀಲಿಸಿ ಖರೀದಿಸಬಹುದಾಗಿದೆ.
ನೂತನ ಮಳಿಗೆಯ ಆರಂಭದ ಕುರಿತು ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಸ್ಥಾಪಕ ರಾಜೇಂದ್ರ ಜೆ. ಗಾಂಧಿ, "ಗ್ರಾಹಕರ ಅಭಿರುಚಿಗಳು ಬದಲಾಗುತ್ತಿದ್ದಂತೆ, ಅವರಿಂದ ಹೆಚ್ಚಿನ ಆಯ್ಕೆ ಗಳ ನಿರೀಕ್ಷೆ ಮತ್ತು ಖರೀದಿಸುವ ಮುನ್ನ ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಪರಿಶೀಲಿಸುವ ಒಲವು ಹೆಚ್ಚಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.
ಇದನ್ನೂ ಓದಿ: Hosmane Muttu Column: ಹಸಿರು ರೆಕ್ಕೆಗಳ ಮೌನ ಕವಿತೆ !
ತಜ್ಞ ಸಲಹೆಗಾರರ ಉಪಸ್ಥಿತಿಯಲ್ಲಿ ಗ್ರಾಹಕರಿಗೆ ಪಿಜನ್‌ನ ವೈವಿಧ್ಯಮಯ ಉತ್ಪನ್ನಗಳನ್ನು ಅತ್ಯುತ್ತಮ ರೀಟೇಲ್ ಪರಿಸರದಲ್ಲಿ ಪರಿಚಯಿಸಲು ಈ ಮಳಿಗೆ ವಿನ್ಯಾಸಗೊಳಿಸಲಾಗಿದೆ. ಈ ಹೊಸ ಸ್ಟೋರ್‌ನ ಉದ್ಘಾಟನೆಯು, ನಮ್ಮ ತವರು ಮಾರುಕಟ್ಟೆಯಲ್ಲಿ ರೀಟೇಲ್ ಜಾಲವನ್ನು ಬಲಪಡಿಸುವ ಮತ್ತು ನಮ್ಮ ಉತ್ಪನ್ನಗಳು ಹಾಗೂ ಪರಿಹಾರಗಳನ್ನು ಗ್ರಾಹಕರಿಗೆ ಇನ್ನಷ್ಟು ಹತ್ತಿರ ತರುವ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದು ತಿಳಿಸಿದರು.
ಕರ್ನಾಟಕವು ಈ ಬ್ರ್ಯಾಂಡ್ ಪಾಲಿಗೆ ಅತ್ಯಂತ ಪ್ರಮುಖ ಮಾರುಕಟ್ಟೆ. ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ ಮತ್ತು ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ 75ಕ್ಕೂ ಹೆಚ್ಚು ಮಳಿಗೆಗಳನ್ನು ಸಂಸ್ಥೆ ಹೊಂದಿದೆ. ಬೆಂಗಳೂರನ್ನು ಕೇಂದ್ರ ಕಚೇರಿಯನ್ನಾಗಿ ಹೊಂದಿರುವ ಈ ಬ್ರ್ಯಾಂಡ್, ರಾಜ್ಯದಲ್ಲಿ ತನ್ನ ರೀಟೇಲ್ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ.
ಪ್ರಮುಖ ಮಾರುಕಟ್ಟೆಗಳಲ್ಲಿರುವ ಗ್ರಾಹಕರಿಗೆ ಈ ಬ್ರ್ಯಾಂಡ್ʼನ ಕಿಚನ್ ಅಪ್ಲೈಯನ್ಸ್ ಮತ್ತು ಕುಕ್‌ವೇರ್ ಉತ್ಪನ್ನಗಳನ್ನು ಸುಲಭವಾಗಿ ತಲುಪಿಸಲು ಇದು ಅನುವು ಮಾಡಿಕೊಡುತ್ತಿದೆ. ಬೆಂಗಳೂರಿನ ಈ ಹೊಸ ಫ್ಲ್ಯಾಗ್‌ಶಿಪ್ ಸ್ಟೋರ್ ಗ್ರಾಹಕರಿಗೆ ಅತ್ಯುತ್ತಮ ಬ್ರ್ಯಾಂಡ್ ಅನುಭವ ಒದಗಿಸುವ ಮೂಲಕ ಸಂಸ್ಥೆಯ ಜಾಲವನ್ನು ಮತ್ತಷ್ಟು ಬಲಪಡಿಸಲಿದೆ.
ಈ ಮಳಿಗೆಯ ಆರಂಭವು ಬ್ರ್ಯಾಂಡ್‌ನ ಡಿಜಿಟಲ್ ಬೆಳವಣಿಗೆಗೆ ಪೂರಕವಾಗಿರುವುದರ ಜೊತೆಗೆ ರೀಟೇಲ್ ಉಪಸ್ಥಿತಿಯನ್ನೂ ಗಟ್ಟಿಗೊಳಿಸಲಿದೆ. ಗ್ರಾಹಕರಿಗೆ ಕಂಪನಿಯ ಉತ್ಪನ್ನ ಶ್ರೇಣಿಯನ್ನು ಪಡೆಯಲು ಇದೊಂದು ಮೀಸಲು ತಾಣವಾಗಿದೆ.