ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ವಾನ್ ರಿಯಾಲ್ಟಿಯಿಂದ ಐಷಾರಾಮಿ ಯೋಜನೆ `ಬೋಧಿ’ಗೆ ಚಾಲನೆ

ಸ್ವತಂತ್ರ ಮನೆಯ ಅನುಭವ ಮತ್ತು ಅಪಾರ್ಟ್‌ಮೆಂಟ್ ಜೀವನದ ಸೌಕರ್ಯಗಳನ್ನು ಒಂದೆಡೆ ತರಲು ವಿನ್ಯಾಸಗೊಳಿಸಲಾದ ಬೋಧಿ ಯೋಜನೆಯು 24 ನಾಲ್ಕು-ಬೆಡ್‌ರೂಮ್‌ಗಳ ನಿವಾಸ ಗಳನ್ನು ಒಳಗೊಂಡಿದೆ. ಪ್ರತಿಯೊಂದು ನಿವಾಸವು 4,000 ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಪ್ರತಿ ಮಹಡಿಯಲ್ಲಿ ಕೇವಲ ಎರಡು ಅಪಾರ್ಟ್‌ಮೆಂಟ್‌ಗಳು ಮಾತ್ರ ಇರಲಿವೆ.

ಬೆಂಗಳೂರು: ಶತಮಾನದ ಇತಿಹಾಸವಿರುವ ವೈವಿಧ್ಯಮಯ ಕೈಗಾರಿಕಾ ಸಂಸ್ಥೆ ಸ್ವಾನ್ ಕಾರ್ಪ್ ಲಿಮಿಟೆಡ್‌ ನ ಸ್ವಾನ್ ರಿಯಾಲ್ಟಿ, ಬೆಂಗಳೂರಿನಲ್ಲಿ ತನ್ನ ಐಷಾರಾಮಿ ಯೋಜನೆ 'ಬೋಧಿ'ಯನ್ನು ಪ್ರಾರಂಭಿಸಿದ್ದು ಈ ಯೋಜನೆಯು ಏಕಾಂತತೆ, ನಿಸರ್ಗ ಹಾಗೂ ಉನ್ನತ ಮಟ್ಟದ ಜೀವನಶೈಲಿಯ ಅಪರೂಪದ ಸಮ್ಮಿಶ್ರಣವನ್ನು ಒದಗಿಸುತ್ತದೆ. ಯಶವಂತಪುರದಲ್ಲಿ ಕಾರ್ಡಿನಲ್ ಒನ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಇದು ನಗರದಲ್ಲಿ ಸ್ವಾನ್ ರಿಯಾಲ್ಟಿಯ ಎರಡನೇ ಯೋಜನೆಯಾಗಿದೆ.

ಸ್ವತಂತ್ರ ಮನೆಯ ಅನುಭವ ಮತ್ತು ಅಪಾರ್ಟ್‌ಮೆಂಟ್ ಜೀವನದ ಸೌಕರ್ಯಗಳನ್ನು ಒಂದೆಡೆ ತರಲು ವಿನ್ಯಾಸಗೊಳಿಸಲಾದ ಬೋಧಿ ಯೋಜನೆಯು 24 ನಾಲ್ಕು-ಬೆಡ್‌ರೂಮ್‌ಗಳ ನಿವಾಸ ಗಳನ್ನು ಒಳಗೊಂಡಿದೆ. ಪ್ರತಿಯೊಂದು ನಿವಾಸವು 4,000 ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಪ್ರತಿ ಮಹಡಿಯಲ್ಲಿ ಕೇವಲ ಎರಡು ಅಪಾರ್ಟ್‌ಮೆಂಟ್‌ಗಳು ಮಾತ್ರ ಇರಲಿವೆ.

ದಕ್ಷಿಣ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜಯನಗರದಲ್ಲಿ ನೆಲೆಸಿರುವ ಈ ಕಡಿಮೆ ಸಾಂದ್ರತೆಯ ಯೋಜನೆಯು, ನಿವಾಸಿಗಳಿಗೆ ಹೆಚ್ಚಿನ ಏಕಾಂತತೆ, ವಿಶಾಲವಾದ ಜಾಗ ಹಾಗೂ ನಿಸರ್ಗದೊಂದಿಗೆ ನಿಕಟ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Real Estate at Chamundi Hills: ಚಾಮುಂಡಿ ಬೆಟ್ಟದ ನಿಷೇಧಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಿಯಲ್‌ ಏಸ್ಟೇಟ್

ಕೆಂಬಾವಿ ಆರ್ಕಿಟೆಕ್ಚರ್ ಫೌಂಡೇಶನ್ (ಕೆ.ಎ.ಎಫ್.) ವಿನ್ಯಾಸಗೊಳಿಸಿರುವ ಬೋಧಿ ಯೋಜನೆಯು, ಹರಿಯುವ ನಿಸರ್ಗದ ರೂಪಗಳನ್ನು ಅನುಕರಿಸುವ ಬಯೋಫಿಲಿಕ್ ಅಮಾರ್ಫಸ್ ಶೈಲಿಯನ್ನು ಅನುಸರಿಸುತ್ತದೆ. ಈ ವಿನ್ಯಾಸ ಭಾಷೆಯು ನಿರ್ಮಿತ ಕಟ್ಟಡ ಮತ್ತು ಸುತ್ತಮುತ್ತಲಿನ ನೈಸರ್ಗಿಕ ವಾತಾವರಣದ ನಡುವೆ ತಡೆರಹಿತ ಸಂಪರ್ಕವನ್ನು ಸೃಷ್ಟಿಸುತ್ತದೆ. ವಿಶಾಲವಾದ ನಿವಾಸಗಳು, ದೊಡ್ಡ ಗಾತ್ರದ ಸುಂದರ ಖಾಸಗಿ ಡೆಕ್‌ಗಳು, ಸಮೃದ್ಧ ನೈಸರ್ಗಿಕ ಬೆಳಕು ಮತ್ತು ಸೌಂದರ್ಯಮಯ ನೋಟಗಳು ಈ ತತ್ವವನ್ನು ಮನೆಗಳ ಒಳಗೂ ವಿಸ್ತರಿಸುತ್ತವೆ. ಜೊತೆಗೆ ಸ್ಕೈ ಗಾರ್ಡನ್, ಸನ್‌ ಡೌನರ್ ಕೋರ್ಟ್, ಕೊಯ್ ಕೊಳ ಮತ್ತು ನಕ್ಷತ್ರ ವೀಕ್ಷಣೆಯ ಡೆಕ್‌ನಂತಹ ಅಂಶಗಳು ನಿವಾಸಿಗಳ ಅನುಭವದಲ್ಲಿ ನಿಸರ್ಗವನ್ನು ಮತ್ತಷ್ಟು ಲೀನಗೊಳಿಸುತ್ತವೆ.

ಈ ಯೋಜನೆಯು ಉಷ್ಣತೆ ನಿಯಂತ್ರಿತ ಈಜುಕೊಳ. ವೆಲ್ನೆಸ್ ಮತ್ತು ಫಿಟ್‌ನೆಸ್ ಸೆಂಟರ್, ಸೆಲೆಬ್ರೇಷನ್ ಲೌಂಜ್, ಹಾಗೂ ಮನರಂಜನಾ ಕೊಠಡಿಯನ್ನು ಒಳಗೊಂಡಂತೆ ಹತ್ತು ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ.

ಸ್ವಾನ್ ರಿಯಾಲ್ಟಿಯ ಬಿಸಿನೆಸ್ ಹೆಡ್ ಜೇ ಶಾ ಮಾತನಾಡಿ, “ಬೆಂಗಳೂರಿನಲ್ಲಿ ಕಾರ್ಡಿನಲ್ ಒನ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಗೃಹ ಖರೀದಿದಾರರು ಉತ್ತಮ ಸ್ಥಳದೊಂದಿಗೆ ವಿಶಾಲವಾದ ಜಾಗ, ಏಕಾಂತತೆ ಮತ್ತು ಸುಖಕರ ಜೀವನಶೈಲಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬ ನಮ್ಮ ನಂಬಿಕೆಯನ್ನು ದೃಢಪಡಿಸಿದೆ.

ಜಯನಗರವು ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ವಸತಿ ಪ್ರದೇಶಗಳಲ್ಲಿ ಒಂದಾಗಿದ್ದು, ಅಲ್ಲಿ ಹೊಸ ಯೋಜನೆಗಳಿಗೆ ಅವಕಾಶಗಳು ಅತ್ಯಂತ ವಿರಳವಾಗಿವೆ. ಸ್ವತಂತ್ರ ಮನೆಯ ಏಕಾಂತತೆ ಮತ್ತು ಅಪಾರ್ಟ್‌ಮೆಂಟ್ ಜೀವನದ ಸೌಕರ್ಯಗಳನ್ನು ಒಳಗೊಂಡ ಕಡಿಮೆ ಸಾಂದ್ರತೆಯ ವಸತಿ ಮಾದರಿಯ ಮೂಲಕ ಬೋಧಿ ಈ ಕೊರತೆಯನ್ನು ನೀಗಿಸುತ್ತದೆ. ಸ್ವಾನ್ ರಿಯಾಲ್ಟಿಯಲ್ಲಿ, ಯಶಸ್ವಿ ರಿಯಲ್ ಎಸ್ಟೇಟ್ ಎಂದರೆ ಕೇವಲ ಕಟ್ಟಡಗಳನ್ನು ನಿರ್ಮಿಸುವುದಷ್ಟೇ ಅಲ್ಲ ಎಂದು ನಾವು ನಂಬುತ್ತೇವೆ. ಅದು ಚಿಂತನಶೀಲ ವಿನ್ಯಾಸ, ಗುಣಮಟ್ಟದ ನಿರ್ವಹಣೆ ಮತ್ತು ಜನರ ಜೀವನಶೈಲಿಯ ಆಶಯಗಳ ಸ್ಪಷ್ಟ ಗ್ರಹಿಕೆಯ ಮೂಲಕ ಕಾಲಕ್ಕೆ ತಕ್ಕಂತೆ ಮೌಲ್ಯಯುತವಾಗಿ ಉಳಿಯುವ ವಾತಾವರಣವನ್ನು ರೂಪಿಸುವುದಾಗಿದೆ” ಎಂದು ಹೇಳಿದರು.

ಈ ಯೋಜನೆಯು ರೆರಾ ನೋಂದಣಿಯಾಗಿದೆ ಮತ್ತು ಮಾರ್ಚ್ 2028ಕ್ಕೆ ಪೂರ್ಣಗೊಳ್ಳಲು ಸಜ್ಜಾಗಿದೆ.