ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Red Chilli: ಮೆಣಸಿನ ಬೆಳೆಗಾರರಿಗೆ ಸಿಹಿ, ಗ್ರಾಹಕರ ಬಾಯಿ ಖಾರ

ಡಬ್ಬಿ ಮೆಣಸಿನಕಾಯಿಗೆ ಕನಿಷ್ಠ 3000-3500, ರು. ಗರಿಷ್ಠ 4000-5000 ರು. ಇತ್ತು. ಗುಂಟೂರು ಮೆಣಸಿನ ಕಾಯಿ ಕ್ವಿಂಟಲ್‌ಗೆ ಕನಿಷ್ಠ 9000 ಹಾಗೂ ಗರಿಷ್ಠ 16409 ರು.ಗೆ ಮಾರಾಟವಾಗಿತ್ತು. ಪ್ರಸಕ್ತ ವರ್ಷ ಬ್ಯಾಡಗಿ ಮಾರುಕಟ್ಟೆಗೆ ಹೆಚ್ಚು ಕಡಿಮೆ ದಿನನಿತ್ಯ 50-60 ಸಾವಿರ ಚೀಲಗಳಷ್ಟು ಪೂರೈಕೆಯಾಗುತ್ತಿದ್ದು, ಉತ್ತಮ ಡಬ್ಬಿ ಮೆಣಸಿನಕಾಯಿ ಪ್ರಸ್ತುತ ದರ ಕ್ವಿಂಟಲ್‌ಗೆ ಗರಿಷ್ಠ ದರ 75500 ರು. ಕನಿಷ್ಠ 51500 ರು. ಗೆ ಮಾರಾಟವಾಗಿದೆ.

ಹೂವಪ್ಪ ಐ.ಎಚ್. ಬೆಂಗಳೂರು

ಬ್ಯಾಡಗಿ ಮೆಣಸಿನಕಾಯಿ ಶೇ.50ರಷ್ಟು ಬೆಳೆ ಕುಸಿತ

ಮಾರುಕಟ್ಟೆಗೆ ಆವಕ ಕೂಡ 50ರಷ್ಟು ಕಡಿಮೆ

ಈ ವರ್ಷ ಡಬ್ಬಿ ಮೆಣಸಿನಕಾಯಿ ಕೆಜಿಗೆ 600 ರು.

ಏಷ್ಯಾದಲ್ಲಿಯೇ ಅತಿಹೆಚ್ಚು ವಹಿವಾಟು ನಡೆಸುವ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯೂ ಒಂದು. ಸತತ 2 ವರ್ಷಗಳಿಂದ ಬೆಲೆ ಕುಸಿತದಿಂದ ತತ್ತರಿಸಿದ್ದ ಮೆಣಸಿನಕಾಯಿ ರೈತರಿಗೆ ಈ ವರ್ಷದ ಆರಂಭದಲ್ಲಿಯೇ ಉತ್ತಮ ದರ ದೊರೆಯುತ್ತಿರುವುದು ಮೆಣಸಿನಕಾಯಿ ಬೆಳೆಗಾರರ ಬಾಯಿ ಸಿಹಿಯಾಗಿದೆ. ಆದರೆ ತೀವ್ರ ಬೆಲೆ ಏರಿಕೆಯಿಂದ ಗ್ರಾಹಕರ ಬಾಯಿ ಭಾರೀ ಖಾರವಾಗಿದೆ.

ಕಳೆದ ವರ್ಷ ರಾಜ್ಯದಲ್ಲಿ ಮೆಣಸಿನಕಾಯಿ ಬೆಳೆ ಇಳುವರಿ ಹೆಚ್ಚಿತ್ತು. ಜತೆಗೆ ಹಳೇ ದಾಸ್ತನು ಕೂಡ ಇದ್ದ ಪರಿಣಾಮ ಬ್ಯಾಡಗಿ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಆವಕವಾಗಿ ಬೆಲೆ ಭಾರೀ ಇಳಿಕೆ ಯಾಗಿ ಗ್ರಾಹಕರಿಗೆ ಖುಷಿ ಕೊಟ್ಟಿತ್ತು. ಕಳೆದ ವರ್ಷ ಗ್ರಾಹಕರು ಕೆಜಿಗೆ ಬ್ಯಾಡಗಿ ಉತ್ತಮ ಮೆಣಸಿನ ಕಾಯಿ 300-350 ರು. ಗೆ ಖರೀದಿಸಿದ್ದರು. ಈ ವರ್ಷ 600-650 ರು. ಗೆ ಖರೀದಿ ಮಾಡಬೇಕಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ಈ ವರ್ಷ ದುಪ್ಪಟ್ಟು ಬೆಲೆ ಏರಿಕೆಯಾಗಿದೆ. ಇತರೆ ವೆರಿಟಿ ಶೇ.70ರಷ್ಟು ಏರಿಕೆಯಾಗಿದೆ. ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ದರ ಕಳೆದ ಸಾಲಿನಲ್ಲಿ ಕ್ವಿಂಟಲ್‌ಗೆ ಕನಿಷ್ಠ 8000-9000 ರು. ಹಾಗೂ ಗರಿಷ್ಠ 12000-13000 ರು. ಇತ್ತು.

ಇದನ್ನೂ ಓದಿ: Commercial Tax: ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ನಿಗದಿತ ಗುರಿ ಸಾಧಿಸಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ

ಡಬ್ಬಿ ಮೆಣಸಿನಕಾಯಿಗೆ ಕನಿಷ್ಠ 3000-3500, ರು. ಗರಿಷ್ಠ 4000-5000 ರು. ಇತ್ತು. ಗುಂಟೂರು ಮೆಣಸಿನಕಾಯಿ ಕ್ವಿಂಟಲ್‌ಗೆ ಕನಿಷ್ಠ 9000 ಹಾಗೂ ಗರಿಷ್ಠ 16409 ರು.ಗೆ ಮಾರಾಟವಾಗಿತ್ತು. ಪ್ರಸಕ್ತ ವರ್ಷ ಬ್ಯಾಡಗಿ ಮಾರುಕಟ್ಟೆಗೆ ಹೆಚ್ಚು ಕಡಿಮೆ ದಿನನಿತ್ಯ 50-60 ಸಾವಿರ ಚೀಲಗಳಷ್ಟು ಪೂರೈಕೆ ಯಾಗುತ್ತಿದ್ದು, ಉತ್ತಮ ಡಬ್ಬಿ ಮೆಣಸಿನಕಾಯಿ ಪ್ರಸ್ತುತ ದರ ಕ್ವಿಂಟಲ್‌ಗೆ ಗರಿಷ್ಠ ದರ 75500 ರು. ಕನಿಷ್ಠ 51500 ರು. ಗೆ ಮಾರಾಟವಾಗಿದೆ.

ಕಡ್ಡಿ ಮೆಣಸಿನಕಾಯಿ ಗರಿಷ್ಠ 62000 ರು. ಕನಿಷ್ಠ 43000 ರು. ಗೆ ಮಾರಾಟವಾಗಿದೆ. ಇನ್ನೂ ಗುಂಟೂರು, ಮೆಣಸಿನಕಾಯಿ ಕ್ವಿಂಟಲ್‌ಗೆ 14000 ರು. ನಿಂದ 18000 ರು.ವರೆಗೆ ವಹಿವಾಟಾಗಿದೆ. ಇನ್ನು ಬೆಂಗಳೂರು, ಮಾರುಕಟ್ಟೆಯಲ್ಲಿ ಬ್ಯಾಡಗಿ ಡಬ್ಬಿ ಕನಿಷ್ಠ 35000 ರಿಂದ ಗರಿಷ್ಠ 78000 ರು.ಗೆ, ಗುಂಟೂರು ಮೆಣಸಿನಕಾಯಿ 25000-35000 ರು. ಗೆ ಮಾರಾಟವಾಗಿದೆ.

ಈ ವರ್ಷ ಬೆಳೆ ಕಡಿಮೆ: ಕಳೆದ ಎರಡು ವರ್ಷ ಮಳೆರಾಯನ ಆರ್ಭಟ ಮೆಣಸಿನಕಾಯಿ ಬೆಳೆಗಾರ ರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೆಣಸಿನಕಾಯಿ ಗಿಡಕ್ಕೆ ಹಾನಿ ತಂದಿದ್ದಲ್ಲದೇ, ನಂತರ ಡಿಸೆಂಬರ್‌ ನಲ್ಲಿ ಮೆಣಸಿನಕಾಯಿ ಒಣಗಲು ಹಾಕಿದಾಗ ಸಹ ಮಳೆರಾಯ ಆರ್ಭಟಿಸಿದ್ದು, ಗುಣಮಟ್ಟದ ಬೆಳೆ ಹೆಚ್ಚು ಪ್ರಮಾಣದಲ್ಲಿ ಸಿಗಲಿಲ್ಲ. ಅಲ್ಲದೇ ಸತತ ಎರಡು ವರ್ಷ ಅಧಿಕ ಲಾಭದ ಆಸೆಗೆ ರೈತರು ಹೆಚ್ಚಿಗೆ ಬೆಳೆ ಮಾಡಿದ್ದರು. ಇದರಿಂದ ಕಳೆದ ಸಾಲಿನಲ್ಲಿ ಮಾರುಕಟ್ಟೆಗೆ ಪೂರೈಕೆ ಅಧಿಕವಾಯಿತು, ದರ ಕಡಿಮೆಯಾಯಿತು. ಆದರೆ ಸತತ ಎರಡು ವರ್ಷಗಳಿಂದ ಮೆಣಸಿನಕಾಯಿ ಬೆಳೆಯಲ್ಲಿ ಅಲ್ಪ ಲಾಭ ಮತ್ತು ಹಾನಿ ಅನುಭವಿಸಿದ್ದ ರೈತರು ಈ ವರ್ಷ ಕಡಿಮೆ ವಿಸ್ತೀರ್ಣದಲ್ಲಿ ಮೆಣಸಿನ ಕಾಯಿ ಬೆಳೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಆವಕ ಹೆಚ್ಚು, ಬೆಲೆ ಕಡಿಮೆ: ಮಾರುಕಟ್ಟೆ ಕಳೆದ ವರ್ಷ ಇತಿಹಾಸದಲ್ಲಿ ಕಾಣದಷ್ಟು ಮೆಣಸಿನಕಾಯಿ ವಹಿವಾಟು ನಡೆಸಿತ್ತು. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲ ಹಿಡಿಯಲಾರದಷ್ಟು ಆವಕವಾಗಿತ್ತು. ಮಾರುಕಟ್ಟೆಯ ಪ್ರಾಂಗಣದಲ್ಲಿ ಅಷ್ಟೇ ಅಲ್ಲದೆ ತಾಲೂಕು ಕ್ರೀಡಾಂಗಣದಲ್ಲಿ ಸಹ ಮೆಣಸಿನಕಾಯಿ ಚೀಲವಿಟ್ಟು ಟೆಂಡರ್ ಹಾಕಲಾಗಿತ್ತು.

ಸುಮಾರು ಅಂದಾಜು 3 ಲಕ್ಷ 20 ಸಾವಿರ ಮೆಣಸಿನಕಾಯಿ ಚೀಲಗಳು ಕಳೆದ ವರ್ಷದ ಸೀಸನ್‌ನಲ್ಲಿ ಆವಕವಾಗಿತ್ತು. ಅಧಿಕ ಲಾಭ ಸಿಗುವ ಭರವಸೆಯಿಟ್ಟುಕೊಂಡ ರೈತರು ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆ ಬೆಳೆದಿದ್ದರು. ಅಇಕ ಇಳುವರಿಯ ಜತೆಗೆ ಮಳೆಯ ಚೆಟದಲ್ಲಿ ಮೆಣಸಿನಕಾಯಿ ದರದಲ್ಲಿ ಕುಸಿತ ತಂದಿತ್ತು. ರೈತರು ಲಾಭ ಇರಲಿ, ಬೆಳೆಗೆ ಮಾಡಿದ ಖರ್ಚು ಸಿಗಲಾರದಷ್ಟು ಬೆಲೆ ಕುಸಿದಿತ್ತು ಎನ್ನುತ್ತಾರೆ ರೈತರು.

ಈ ವರ್ಷ ಲೋಕಲ್ ಮೆಣಸಿನಕಾಯಿ ಕಮ್ಮಿ:ರೋಗ ಬಾಧೆ ಸೇರಿದಂತೆ ನಾನಾ ಕಾರಣಗಳಿಂದ ಮೆಣಸಿನಕಾಯಿ ಬೆಳೆ ಕ್ಷೇತ್ರ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ. ಬೇರೆ ರಾಜ್ಯ ದಿಂದ ಬರುವ ಸೀq ವೆರೈಟಿ ಮೆಣಸಿನಕಾಯಿ ಆವಕದಲ್ಲಿ ಕೊರತೆ ಒಂದೆಡೆಯಾರದೆ ಮತ್ತೊಂದೆಡೆ ರಾಜ್ಯದಲ್ಲಿನ ಕುಂದಗೋಳ, ಅಣ್ಣಿಗೇರಿ, ಅಂತೂರ, ಬೆಂತೂರ, ಗದಗ, ಸಂಶಿ, ಸುತ್ತಲ ಪ್ರದೇಶದಲ್ಲಿ ಬೆಳೆಯುತ್ತಿದ್ದ ಲೋಕಲ್ ಮೆಣಸಿನಕಾಯಿ ಬೆಳೆ ಕಮ್ಮಿಯಾಗಿದೆ. ಈಗ ಉತ್ತಮ ಬೆಲೆ ಸಿಗುತ್ತಿರುವುದಕ್ಕೆ ಇದು ಕೂಡ ಕಾರಣವಾಗಿದೆ

*

ಈ ವರ್ಷ ಮೆಣಸಿನಕಾಯಿ ಬೆಳೆ ಕಡಿಮೆ ಇರುವುದರಿಂದ ಬ್ಯಾಡಗಿ ಮಾರುಕಟ್ಟೆಗೆ ಅವಕ ಕಡಿಮೆ ಇದೆ. ಇದರ ಪರಿಣಾಮ ಬೇಡಿಕೆ ಹೆಚ್ಚಾಗಿ ಬೆಳೆ ಏರಿಕೆಯಾಗಿದೆ.

- ಬಿ.ಎಸ್.ಗೌಡರ, ಬ್ಯಾಡಗಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ

*

ಮೆಣಸಿನಕಾಯಿ ಬೆಲೆ ಭಾರೀ ಏರಿಕೆ ಕಂಡಿದೆ. ಬ್ಯಾಡಗಿ ಡಬ್ಬಿ ಮತು ಕಡ್ಡಿ ತಳಿ ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆ ದುಪ್ಪಟ್ಟಾಗಿದೆ. ಇತರೆ ತಳಿ ಮೆಣಸಿನಕಾಯಿ ಬೆಲೆ ಶೇ.70-80ರಷ್ಟು ಏರಿಕೆಯಾಗಿದೆ. ಈ ತೀವ್ರ ಬೆಲೆ ಏರಿಕೆಯಾಗಿದ್ದ ರಿಂದ ವ್ಯಾಪಾರ ಸ್ವಲ್ಪ ಮಂದಗತಿ ಇದೆ.

- ಪಿ.ಸಿ.ಎನ್.ಪ್ರಭಾಕರ, ಬೆಂಗಳೂರು ಎಪಿಎಂಸಿ ಮೆಣಸಿನಕಾಯಿ ವರ್ತಕ

*

ಎಷ್ಟು ಉತ್ಪಾದನೆ?

2024-25ರಲ್ಲಿ ಮೆಣಸಿನಕಾಯಿ ಬೆಳೆಯ ಪ್ರದೇಶ ಸುಮಾರು 1.24 ಲಕ್ಷ ಹೆಕ್ಟೇರ್ ಪ್ರದೇಶವಾಗಿದ್ದು, ಸುಮಾರು 2.19 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗಿತ್ತು. 2025-26ರಲ್ಲಿ ಸುಮಾರು 79,52 ಹೆಕ್ಟೇರ್ʼನಲ್ಲಿ ಬೆಳೆಯಲಾಗಿದ್ದು, ಸುಮಾರು 1.58 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗಿದೆ.