ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬವುಮಾ ಕೊನೆಕ್ಸ್‌ಪೋ ಇಂಡಿಯಾ 2026ರಲ್ಲಿ ಮುಂದಿನ ಪೀಳಿಗೆಯ ಅಗ್ರಿಗೇಟ್ಸ್ ಪ್ರದರ್ಶಿಸಿದ ಟಾಟಾ ಮೋಟಾರ್ಸ್

ಮೆಟೀರಿಯಲ್ ಹ್ಯಾಂಡ್ಲಿಂಗ್, ನಿರ್ಮಾಣ ಉಪಕರಣಗಳು, ಕೈಗಾರಿಕಾ ಬಳಕೆ ಮತ್ತು ಲಾಜಿಸ್ಟಿಕ್ಸ್ ವಿಭಾಗ ಗಳ ನಿರಂತರ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ಇವುಗಳನ್ನು ವಿನ್ಯಾಸ ಗೊಳಿಸಲಾಗಿದ್ದು, ಕಠಿಣ ನಿರ್ಮಾಣ ಪರಿಸರದಲ್ಲೂ ಅತ್ಯುನ್ನತ ವಿಶ್ವಾಸಾರ್ಹತೆ, ದಕ್ಷತೆ ಹಾಗೂ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ.

ಬೆಂಗಳೂರು: ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಹಾಗೂ ಸಾರಿಗೆ ಉತ್ಪನ್ನಗಳ ಪ್ರಮುಖ ಸಂಸ್ಥೆಯಾದ ಟಾಟಾ ಮೋಟಾರ್ಸ್(Tata Motors), ಪ್ರತಿಷ್ಠಿತ ಬವುಮಾ ಕೊನೆಕ್ಸ್‌ಪೋ ಇಂಡಿಯಾ 2026ರಲ್ಲಿ ತನ್ನ ಮುಂದಿನ ಪೀಳಿಗೆಯ ಬಿಡಿಭಾಗಗಳ (ಅಗ್ರಿಗೇಟ್ಸ್) ಸಮಗ್ರ ಪೋರ್ಟ್‌ ಫೋಲಿಯೊವನ್ನು ಅನಾವರಣಗೊಳಿಸಿದೆ.

ಈ ಪ್ರದರ್ಶನದಲ್ಲಿ ಸಿಪಿಸಿಬಿ IV+ (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ IV+) ಮಾನದಂಡ ಗಳಿಗೆ ಅನುಗುಣವಾಗಿರುವ 10 ಕೆವಿಎಯಿಂದ 125 ಕೆವಿಎವರೆಗಿನ ಟಾಟಾ ಮೋಟಾರ್ಸ್ ಜೆನ್‌ ಸೆಟ್‌ಗಳು, 0.7 ಲೀಟರ್‌ನಿಂದ 3.3 ಲೀಟರ್‌ವರೆಗಿನ ಹೆಚ್ಚಿನ ಕಾರ್ಯಕ್ಷಮತೆಯ ಕೈಗಾರಿಕಾ ಎಂಜಿನ್‌ ಗಳು ಹಾಗೂ ಅಧಿಕ ಸ್ಥಳೀಯ ಬಿಡಿಭಾಗಗಳೊಂದಿಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಭಾರತದ ಮೊದಲ ಹಬ್ ರಿಡಕ್ಷನ್ ಆಕ್ಸಲ್ ಆದ ಎಚ್‌ಆರ್ 210 ಲೈವ್ ಆಕ್ಸಲ್ ಅನ್ನು ಪ್ರದರ್ಶಿಸಲಾಗಿದೆ.

ಮೆಟೀರಿಯಲ್ ಹ್ಯಾಂಡ್ಲಿಂಗ್, ನಿರ್ಮಾಣ ಉಪಕರಣಗಳು, ಕೈಗಾರಿಕಾ ಬಳಕೆ ಮತ್ತು ಲಾಜಿಸ್ಟಿಕ್ಸ್ ವಿಭಾಗಗಳ ನಿರಂತರ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ಇವುಗಳನ್ನು ವಿನ್ಯಾಸ ಗೊಳಿಸಲಾಗಿದ್ದು, ಕಠಿಣ ನಿರ್ಮಾಣ ಪರಿಸರದಲ್ಲೂ ಅತ್ಯುನ್ನತ ವಿಶ್ವಾಸಾರ್ಹತೆ, ದಕ್ಷತೆ ಹಾಗೂ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್ʼನಿಂದ ಹೊಸ ಇಂಟ್ರಾ V40 ಬಿಡುಗಡೆ

ಪ್ರದರ್ಶನದ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್‌ನ ಬಿಡಿಭಾಗ ಗಳು ಮತ್ತು ಅಗ್ರಿಗೇಟ್ಸ್ ವ್ಯವಹಾರ ವಿಭಾಗದ ಮುಖ್ಯಸ್ಥರಾದ ವಿಕ್ರಮ್ ಅಗ್ರವಾಲ್ ಅವರು, “ಟಾಟಾ ಮೋಟಾರ್ಸ್ ಅಗ್ರಿಗೇಟ್ಸ್ ಶ್ರೇಣಿಯ ಗರಿಷ್ಠ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಬವುಮಾ ಕೊನೆಕ್ಸ್‌ಪೋ ಒಂದು ಮಹತ್ವದ ವೇದಿಕೆಯಾಗಿದೆ. ಭಾರತದಲ್ಲೇ ಅತ್ಯುನ್ನತ ಜಾಗತಿಕ ದರ್ಜೆಯ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ನಾವು ಬೆಳೆಸಿಕೊಂಡಿದ್ದೇವೆ. ಅತ್ಯಂತ ಸವಾಲಿನ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ಎಂಜಿನ್‌ಗಳು, ಜೆನ್‌ಸೆಟ್‌ಗಳು ಮತ್ತು ಆಕ್ಸಲ್‌ಗಳನ್ನು ಭಾರತದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಉದ್ಯಮ ರಂಗವು ನಿರಂತರ ಮತ್ತು ಹೆಚ್ಚಿನ ತೀವ್ರತೆಯ ಯೋಜನಾ ಚಕ್ರಗಳತ್ತ ಸಾಗುತ್ತಿರುವುದರಿಂದ, ಗ್ರಾಹಕರಿಗೆ ಸಂಪೂರ್ಣ ನಂಬಿಕಸ್ಥ ಪರಿಹಾರಗಳ ಅಗತ್ಯವಿದೆ. ನಮ್ಮ ಅಗ್ರಿಗೇಟ್ಸ್ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸುವುದು, ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸುವುದು ಹಾಗೂ ಹೆಚ್ಚಿನ ದಕ್ಷತೆಯೊಂದಿಗೆ ಹೆಚ್ಚು ಸುರಕ್ಷಿತ ಉತ್ಪನ್ನಗಳನ್ನು ಒದಗಿಸುವುದರ ಮೇಲೆ ನಾವು ಗಮನಹರಿಸಿದ್ದೇವೆ” ಎಂದು ತಿಳಿಸಿದರು.

ಬವುಮಾ ಕೊನೆಕ್ಸ್‌ಪೋ 2026ರಲ್ಲಿ ಟಾಟಾ ಮೋಟಾರ್ಸ್ ಬಿಡಿಭಾಗಗಳು (ಅಗ್ರಿಗೇಟ್ಸ್):

  • ಜೆನ್‌ಸೆಟ್ ಎಂಜಿನ್‌ಗಳು: 0.7 ಲೀ 2-ಸಿಲಿಂಡರ್ ಎಂಜಿನ್ (10-15 ಕೆವಿಎ), 1.5L 4-ಸಿಲಿಂಡರ್ (20-35 ಕೆವಿಎ) - ಕಾಂಪ್ಯಾಕ್ಟ್, ಇಂಧನ ದಕ್ಷ ಮತ್ತು ಹೆಚ್ಚು ವಿಶ್ವಾಸಾರ್ಹ.
  • ಕೈಗಾರಿಕಾ ಎಂಜಿನ್‌ಗಳು: 497 ನ್ಯಾಚುರಲಿ ಎ (41 ಕೆಡಬ್ಲ್ಯೂ), 497 ಟಿಸಿ (74 ಕೆಡಬ್ಲ್ಯೂ) ಮತ್ತು 3.3ಲೀ ಟಿಸಿ (101.5 ಕೆಡಬ್ಲ್ಯೂ) - ನಿರ್ಮಾಣ, ಸರಕು ಸಾಗಣೆ ನಿರ್ವಹಣೆ ಮತ್ತು ಇತರ ಕೈಗಾರಿಕಾ ಅಪ್ಲಿಕೇಷನ್ ಗಳಿಗೆ ಸೂಕ್ತ.
  • ಟಾಟಾ ಮೋಟಾರ್ಸ್ ಜೆನ್‌ಸೆಟ್‌ಗಳು: ಬುದ್ಧಿವಂತ ರಿಮೋಟ್ ಮಾನಿಟರಿಂಗ್ ಸಿಸ್ಟಮ್ ಹೊಂದಿರುವ ಸಿಪಿಸಿಬಿ IV+ ಮಾನದಂಡದ 10 ಕೆವಿಎನಿಂದ 125 ಕೆವಿಎ ಶ್ರೇಣಿಯ ಜೆನ್‌ಸೆಟ್‌ಗಳು.
  • ಎಚ್ ಆರ್ 210 ಲೈವ್ ಆಕ್ಸಲ್: ಭಾರತದ ಮೊದಲ ಹಬ್ ರಿಡಕ್ಷನ್ ಆಕ್ಸಲ್, ಅಧಿಕ ಸ್ಥಳೀಯ ಬಿಡಿಭಾಗಗಳೊಂದಿಗೆ ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ, ಕಠಿಣ ನಿರ್ಮಾಣ ಪರಿಸರದಲ್ಲಿ ವಿಶ್ವಾಸಾರ್ಹ ಕಾರ್ಯಾಚರಣೆಗಾಗಿ ನಿರ್ಮಿಸಲಾಗಿದೆ.

ಟಾಟಾ ಮೋಟಾರ್ಸ್‌ನ ಅಗ್ರಿಗೇಟ್‌ಗಳು ತಮ್ಮ ಅತ್ಯುನ್ನತ ಬಾಳಿಕೆ, ಕಾರ್ಯಕ್ಷಮತೆ ಹಾಗೂ ದಕ್ಷತೆಗೆ ಹೆಸರುವಾಸಿಯಾಗಿವೆ. ಭಾರತೀಯ ನಿರ್ಮಾಣ ಪರಿಸರದಲ್ಲಿ ಎದುರಾಗುವ ಏರಿಳಿತದ ಮತ್ತು ಅಧಿಕ ಹೊರೆಯ ಪರಿಸ್ಥಿತಿಗಳಲ್ಲಿ ಗರಿಷ್ಠ ಮಟ್ಟದ ಕಾರ್ಯಕ್ಷಮತೆಯನ್ನು ನೀಡುವಂತೆ ಕೈಗಾರಿಕಾ ಎಂಜಿನ್ ಶ್ರೇಣಿಯನ್ನು ವಿನ್ಯಾಸಗೊಳಿಸಲಾಗಿದೆ. ಅದೇ ರೀತಿ, ಜೆನ್‌ಸೆಟ್ ಸರಣಿಯಲ್ಲಿ ರಿಯಲ್-ಟೈಮ್ ದೋಷಪತ್ತೆ ಮತ್ತು ದೂರದಿಂದಲೇ ನಿರ್ವಹಣಾ ವೆಚ್ಚವನ್ನು ಅತ್ಯುತ್ತಮವಾಗಿಸಲು ಬುದ್ಧಿವಂತ ರಿಮೋಟ್ ಮಾನಿಟರಿಂಗ್ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ (55 ಕಿಲೋವ್ಯಾಟ್‌ ಗಿಂತ ಕಡಿಮೆ ಸಾಮರ್ಥ್ಯದ ಮಾದರಿಗಳಿಗೆ ಇದು ಐಚ್ಛಿಕವಾಗಿರುತ್ತದೆ).

ರಸ್ತೆಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಸಾಬೀತಾಗಿರುವ ಟಾಟಾ ಮೋಟಾರ್ಸ್ ವಾಹನಗಳ ಎಂಜಿನ್ ತಂತ್ರಜ್ಞಾನದ ಆಧಾರದ ಮೇಲೆ ಈ ಜೆನ್‌ಸೆಟ್‌ಗಳನ್ನು ನಿರ್ಮಿಸಲಾಗಿದ್ದು, ಸ್ಥಿರ ವಿದ್ಯುತ್ ಪೂರೈಕೆಯ ಕ್ಷೇತ್ರದಲ್ಲೂ ಇದು ಅಷ್ಟೇ ಶ್ರೇಷ್ಠ ಹಾಗೂ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.