Tata Motors: ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಮೋಟಾರ್ಸ್
ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಸಂಸ್ಥೆಯು ದೇಶಾ ದ್ಯಂತ ಇರುವ ಗ್ರಾಹಕರಿಗೆ ವಿದ್ಯುತ್ ವಾಣಿಜ್ಯ ವಾಹನಗಳು ಸುಲಭವಾಗಿ ದೊರೆಯುವಂತೆ ಮಾಡಲು ವಿದ್ಯುತ್ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ವರ್ಟೆಲೋ ಜೊತೆ ತಿಳಿವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಿದೆ.


ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಸಂಸ್ಥೆಯು ದೇಶಾದ್ಯಂತ ಇರುವ ಗ್ರಾಹಕರಿಗೆ ವಿದ್ಯುತ್ ವಾಣಿಜ್ಯ ವಾಹನಗಳು ಸುಲಭವಾಗಿ ದೊರೆಯುವಂತೆ ಮಾಡಲು ವಿದ್ಯುತ್ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ವರ್ಟೆಲೋ ಜೊತೆ ತಿಳಿವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಿದೆ. ಈ ಪಾಲುದಾರಿಕೆಯ ಮೂಲಕ ವರ್ಟೆಲೋ ಗ್ರಾಹಕರಿಗೆ ಕಸ್ಟಮೈಸ್ಡ್ ಗುತ್ತಿಗೆ (ಲೀಸಿಂಗ್) ವ್ಯವಸ್ಥೆಯನ್ನು ಕಲ್ಪಿಸಲಿದೆ. ಈ ಮೂಲಕ ಗ್ರಾಹಕರು ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಸುಲಭವಾಗಿ ಪರಿವರ್ತನೆ ಹೊಂದಬಹುದಾಗಿದೆ. ಈ ವ್ಯವಸ್ಥೆಯು ಟಾಟಾ ಮೋಟಾರ್ಸ್ ನ ಎಲ್ಲಾ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೂ ಅನ್ವಯವಾಗುತ್ತವೆ.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ವೈಸ್ ಪ್ರೆಸಿಡೆಂಟ್ ಮತ್ತು ಟ್ರಕ್ ವಿಭಾಗದ ಬಿಸಿನೆಸ್ ಹೆಡ್ ರಾಜೇಶ್ ಕೌಲ್ ಅವರು, “ಟಾಟಾ ಮೋಟಾರ್ಸ್ ವಿದ್ಯುತ್ ಸಾರಿಗೆ ವ್ಯವಸ್ಥೆಯು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ. ಸುಸ್ಥಿರ ಸಾರಿಗೆ ಉತ್ಪನ್ನಗಳು ಎಲ್ಲಾ ಗ್ರಾಹಕರಿಗೂ ದೊರೆಯುವಂತೆ ಮಾಡುವುದು ನಮ್ಮ ಗುರಿ ಯಾಗಿದೆ. ವರ್ಟೆಲೋ ಜೊತೆಗಿನ ಈ ಪಾಲುದಾರಿಕೆಯು ಈ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಇದರಿಂದ ಹೆಚ್ಚು ಗ್ರಾಹಕರು ನಮ್ಮ ಅತ್ಯಾಧುನಿಕ ವಿದ್ಯುತ್ ವಾಣಿಜ್ಯ ವಾಹನಗಳನ್ನು ಸುಲಭವಾಗಿ ಹೊಂದಬಹುದಾಗಿದೆ. ಇಂತಹ ಸಹಯೋಗಗಳ ಮೂಲಕ ನಾವು ಸುಸ್ಥಿರ ಸಾರಿಗೆ ಉತ್ಪನ್ನಗಳ ಅಳವಡಿಕೆಯನ್ನು ವೇಗಗೊಳಿಸುವುದಲ್ಲದೆ, ಭಾರತದಲ್ಲಿ ಬಲಿಷ್ಠ ವಿದ್ಯುತ್ ವಾಹನ ವ್ಯವಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದೇವೆ,” ಎಂದರು.
ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
ಈ ಸಹಯೋಗದ ಬಗ್ಗೆ ಮಾತನಾಡಿದ ವರ್ಟೆಲೋ ಸಂಸ್ಥೆಯ ಸಿಇಓ ಸಂದೀಪ್ ಗಂಭೀರ್ ಅವರು, “ಟಾಟಾ ಮೋಟಾರ್ಸ್ ಜೊತೆಗೆ ಕೈಜೋಡಿಸಿ, ಬಸ್ ಗಳು, ಟ್ರಕ್ ಗಳು, ಮತ್ತು ಮಿನಿ-ಟ್ರಕ್ ಗಳನ್ನು ಒಳಗೊಂಡಂತೆ ವಿವಿಧ ವಿದ್ಯುತ್ ವಾಣಿಜ್ಯ ವಾಹನಗಳ ಅಳವಡಿಕೆಯನ್ನು ವೇಗಗೊಳಿ ಸಲು ನಾವು ಉತ್ಸುಕರಾಗಿದ್ದೇವೆ. ಈ ಪಾಲುದಾರಿಕೆಯ ಮೂಲಕ ನಾವು ಕಸ್ಟಮೈಸ್ಡ್ ಗುತ್ತಿಗೆ ವ್ಯವಸ್ಥೆ ಒದಗಿಸುತ್ತೇವೆ ಮತ್ತು ವಾಣಿಜ್ಯ ವಾಹನ ಮಾಲೀಕರಿಗೆ ವಿದ್ಯುತ್ ಸಾರಿಗೆಯನ್ನು ಸಹಜ ಆಯ್ಕೆಯನ್ನಾಗಿಸುವ ಸುಸ್ಥಿರ ವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ. ಈ ಸಹಯೋಗವು ಟಾಟಾ ಮೋಟಾ ರ್ಸ್ ಮತ್ತು ವರ್ಟೆಲೋಗೆ ವಿದ್ಯುತ್ ವಾಣಿಜ್ಯ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಮತ್ತು ಪರಿಸರ ಸ್ನೇಹಿ ಸಾರಿಗೆ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಲು ಸಹಾಯ ಮಾಡುತ್ತದೆ,” ಎಂದರು.
ಟಾಟಾ ಮೋಟಾರ್ಸ್ ಕೊನೆಯ ಹಂತದ ಸಾರಿಗೆ ವ್ಯವಸ್ಥೆಗಾಗಿ ಟಾಟಾ ಏಸ್ ಇವಿ ಮತ್ತು ಸಮೂಹ ಸಾರಿಗೆ ವ್ಯವಸ್ಥೆಗೆ ಟಾಟಾ ಅಲ್ಟ್ರಾ ಮತ್ತು ಟಾಟಾ ಸ್ಟಾರ್ ಬಸ್ ಶ್ರೇಣಿಯನ್ನು ಒದಗಿಸುತ್ತದೆ. ಕಂಪನಿಯು ಟಾಟಾ ಪ್ರೈಮಾ ಇ.55ಎಸ್, ಟಾಟಾ ಅಲ್ಟ್ರಾ ಇ.12, ಟಾಟಾ ಮ್ಯಾಗ್ನಾ ಇವಿ ಬಸ್, ಟಾಟಾ ಅಲ್ಟ್ರಾ ಇವಿ 9 ಬಸ್, ಟಾಟಾ ಇಂಟರ್‌ಸಿಟಿ ಇವಿ 2.0 ಬಸ್, ಟಾಟಾ ಏಸ್ ಪ್ರೋ ಇವಿ, ಮತ್ತು ಟಾಟಾ ಇಂಟ್ರಾ ಇವಿಯಂತಹ ವಾಹನಗಳನ್ನು ಪ್ರದರ್ಶಿಸಿದ್ದು, ಇವು ಗ್ರಾಹಕರ ವಿವಿಧ ಅಗತ್ಯ ಗಳಿಗೆ ಮತ್ತು ಬೇಡಿಕೆಗಳಿಗೆ ಸರಿಹೊಂದುತ್ತವೆ. ನಾವೀನ್ಯತೆ ಮತ್ತು ಸುಸ್ಥಿರತೆಯ ಮೇಲೆ ಗಮನ ಹರಿಸಿರುವ ಟಾಟಾ ಮೋಟಾರ್ಸ್, ಟ್ರಕ್ ಗಳು, ಬಸ್ ಗಳು, ಮತ್ತು ಸಣ್ಣ ವಾಣಿಜ್ಯ ವಾಹನ ವಿಭಾಗಗಳಲ್ಲಿ ತನ್ನ ವಿದ್ಯುತ್ ವಾಹನ ಶ್ರೇಣಿಯನ್ನು ವಿಸ್ತರಿಸುತ್ತಿದೆ.
ಬೆಳೆಯುತ್ತಿರುವ ಚಾರ್ಜಿಂಗ್ ಮೂಲಸೌಕರ್ಯ, ಬಲಿಷ್ಠ ಸೇವಾ ಜಾಲ, ಮತ್ತು ವಾಹನಗಳ ದಕ್ಷತೆ ಯನ್ನು ಉತ್ತಮಗೊಳಿಸುವ ಫ್ಲೀಟ್ ಎಡ್ಜ್—ಕನೆಕ್ಟೆಡ್ ಪ್ಲಾಟ್‌ಫಾರ್ಮ್ ನೆರವಿನೊಂದಿಗೆ ಟಾಟಾ ಮೋಟಾರ್ಸ್ ಭಾರತದ ಸುಸ್ಥಿರ ಸಾರಿಗೆ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ