ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತೀಯ ಮೋಟಾರ್‌ ಸ್ಪೋರ್ಟ್‌ ವಿಭಾಗವನ್ನು ಉತ್ತಮಗೊಳಿಸಲು ಟಿವಿಎಸ್ ಮೋಟಾರ್ ಕಂಪನಿ ಮತ್ತು ಪೆಟ್ರೊನಾಸ್ ಲೂಬ್ರಿಕೆಂಟ್ಸ್ ಇಂಟರ್‌ ನ್ಯಾಷನಲ್ ಸಹಯೋಗ

ಪೆಟ್ರೊನಾಸ್ ಲೂಬ್ರಿಕೆಂಟ್ಸ್ ಇಂಟರ್‌ ನ್ಯಾಷನಲ್ (ಪಿಎಲ್ಐ) ಕಂಪನಿಯು ಮುಂದಿ ನ ಮೂರು ವರ್ಷಗಳ ಕಾಲ ಟಿವಿಎಸ್ ರೇಸಿಂಗ್‌ ನ ಮುಖ್ಯ ಪ್ರಾಯೋಜಕರಾಗಿ ಮುಂದು ವರಿಯ ಲಿದ್ದು, ಭಾರತದ ಮೋಟಾರ್‌ ಸ್ಪೋರ್ಟ್‌ ಅನ್ನು ಉತ್ತಮಗೊಳಿಸುವ ಪೆಟ್ರೊನಾಸ್ ಸಂಸ್ಥೆಯ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಈ ಸಹಯೋಗವು ಉತ್ತಮ ಗುಣಮಟ್ಟದ ಲೂಬ್ರಿ ಕೆಂಟ್‌ ವಿಭಾಗಕ್ಕೂ ವಿಸ್ತರಿಸಿದ್ದು, ಪೆಟ್ರೊನಾಸ್ ಸಂಸ್ಥೆಯು ಟಿವಿಎಸ್ ಟಿಆರ್‌ಯು4 ಬ್ರ್ಯಾಂಡ್ ಅಡಿಯಲ್ಲಿ ಪ್ರೀಮಿಯಂ ಸೆಮಿ ಮತ್ತು ಫುಲ್ ಸಿಂಥೆಟಿಕ್ ಆಯಿಲ್ ಗಳನ್ನು ಪೂರೈಸುತ್ತದೆ.

ಬೆಂಗಳೂರು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿ (ಟಿವಿಎಸ್ಎಂ) ಭಾರತದ ಮೋ ಟಾರ್‌ ಸ್ಪೋರ್ಟ್‌ ವಿಭಾಗವನ್ನು ಉತ್ತಮಗೊಳಿಸುವ ಸಲುವಾಗಿ ಪೆಟ್ರೊನಾಸ್ ಲೂಬ್ರಿ ಕೆಂಟ್ಸ್ ಇಂಟರ್‌ ನ್ಯಾಷನಲ್ (ಪಿಎಲ್ಐ) ಜೊತೆಗಿನ ತನ್ನ ಸಹಯೋಗವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಈ ವಿಸ್ತೃತ ಒಪ್ಪಂದದಡಿ ಪಿಎಲ್ಐ ಸಂಸ್ಥೆಯು ಮುಂದಿನ ಮೂರು ವರ್ಷಗಳ ಕಾಲ ಟಿವಿಎಸ್ ರೇಸಿಂಗ್‌ ಗೆ ಮುಖ್ಯ ಪ್ರಾಯೋಜಕರಾಗಿ ಮುಂದುವರಿಯಲಿದೆ.

ಟಿವಿಎಸ್ ರೇಸಿಂಗ್ ಭಾರತದ ಮೊದಲ ಫ್ಯಾಕ್ಟರಿ ರೇಸಿಂಗ್ ತಂಡವಾಗಿದೆ. ಟಿವಿಎಸ್ ರೇಸಿಂಗ್ ತಂಡವು ಇಂಡಿಯನ್ ನ್ಯಾಷನಲ್ ಸೂಪರ್‌ ಕ್ರಾಸ್ ಚಾಂಪಿಯನ್‌ಶಿಪ್ (ಐ ಎನ್ ಎಸ್ ಸಿ), ಇಂಡಿಯನ್ ನ್ಯಾಷನಲ್ ರಾಲಿ ಚಾಂಪಿಯನ್‌ಶಿಪ್ (ಐ ಎನ್ ಆರ್ ಸಿ), ಮತ್ತು ಇಂಡಿಯನ್ ನ್ಯಾಷನಲ್ ಮೋಟಾರ್‌ ಸೈಕಲ್ ರೇಸಿಂಗ್ ಚಾಂಪಿಯನ್‌ ಶಿಪ್ (ಐ ಎನ್ ಎಂ ಆರ್ ಸಿ) ಗಳಲ್ಲಿ ಭಾಗವಹಿಸಲು ಈ ಸಹಯೋಗವು ನೆರವಾಗಲಿದೆ. ಈ ಸಹಯೋಗವು ಭಾರತದಲ್ಲಿ ಮೋಟಾರ್‌ ಸ್ಪೋರ್ಟ್‌ ಗಳನ್ನು ಉತ್ತಮಗೊಳಿಸುವ ಎರಡೂ ಕಂಪನಿಗಳ ಬದ್ಧತೆಯನ್ನು ತೋರಿಸುತ್ತದೆ. ಜೊತೆಗೆ ಈ ಸಹಭಾಗಿತ್ವದ ಮೂಲಕ ಪಿಎಲ್ಐ ಸಂಸ್ಥೆಯು ಭಾರತದ ಉತ್ತಮ ಗುಣಮಟ್ಟದ ಲೂಬ್ರಿಕೆಂಟ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

ಇದನ್ನೂ ಓದಿ: Bangalore News: ಮಾ.2ರಂದು ನಗರದಲ್ಲಿ ಬೃಹತ್ “ಸ್ಕಿನ್ನಥಾನ್” : 10, 5 ಮತ್ತು 3 ಕಿಲೋಮೀಟರ್ ಓಟ ಆಯೋಜನೆ

ಪೆಟ್ರೊನಾಸ್ 2022-2023ನೇ ಸಾಲಿನಿಂದ ಟಿವಿಎಸ್ ರೇಸಿಂಗ್‌ನ ಮುಖ್ಯ ಪ್ರಾಯೋಜಕ ರಾಗಿದ್ದಾರೆ. ಈ ಮೂಲಕ ಪಿಎಲ್ಐ ಸಂಸ್ಥೆಯು ಭಾರತೀಯ ಮೋಟಾರ್‌ ಸ್ಪೋರ್ಟ್ ವಿಭಾಗದಲ್ಲಿ 40 ವರ್ಷಗಳ ಪರಂಪರೆ ಹೊಂದಿರುವ ಟಿವಿಎಸ್ ರೇಸಿಂಗ್‌ ಗೆ ನೆರವು ಒದಗಿ ಸುತ್ತಿದೆ. ಈ ಸಹಯೋಗದ ಭಾಗವಾಗಿ ಪಿಎಲ್ಐ ಟಿವಿಎಸ್‌ ನ ದೊಡ್ಡ ಡೀಲರ್ ಜಾಲಕ್ಕೆ ಆಫ್ಟರ್-ಮಾರ್ಕೆಟ್ ಆಯಿಲ್ ಗಳನ್ನು ಪೂರೈಸುವ ಅಧಿಕೃತ ಪೂರೈಕೆದಾರರಾಗಿ ಮುಂದು ವರಿಯಲಿದೆ.

ಪೆಟ್ರೊನಾಸ್ ಟಿವಿಎಸ್ ಟಿಆರ್‌ಯು4 ಉತ್ಪನ್ನ ಶ್ರೇಣಿಯು ಉತ್ತಮ ಗುಣಮಟ್ಟದ ಸೆಮಿ ಮತ್ತು ಫುಲ್ ಸಿಂಥೆಟಿಕ್ ಲೂಬ್ರಿಕೆಂಟ್‌ ಗಳನ್ನು ಒದಗಿಸುತ್ತವೆ. ಈ ಉತ್ಪನ್ನಗಳು ಟಿವಿಎಸ್ ಮೋಟಾರ್‌ ಸೈಕಲ್‌ಗಳ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುತ್ತವೆ ಮತ್ತು ದೀರ್ಘ ಬಾಳಿಕೆ ಬರುವಂತೆ ನೋಡಿಕೊಳ್ಳುತ್ತವೆ. ಈ ಸಹಯೋಗವು ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ಪಿಎಲ್ಐ ಸ್ಥಾನವನ್ನು ಬಲಪಡಿಸುವುದರ ಜೊತೆಗೆ ನಾವೀನ್ಯತೆ ಮತ್ತು ಶ್ರೇಷ್ಠತೆ ಕಡೆಗೆ ಟಿವಿಎಸ್ ರೇಸಿಂಗ್‌ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ.

ಈ ಕುರಿತು ಮಾತನಾಡಿರುವ ಟಿವಿಎಸ್ ಮೋಟಾರ್ ಕಂಪನಿಯ ಪ್ರೀಮಿಯಂ ಬಿಸಿನೆಸ್ ಮುಖ್ಯಸ್ಥ ವಿಮಲ್ ಸುಂಬ್ಲಿ ಅವರು, “ಟಿವಿಎಸ್ ರೇಸಿಂಗ್ ಭಾರತದ ಮೋಟಾರ್‌ ಸ್ಪೋರ್ಟ್‌ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ರೇಸಿಂಗ್ ಪ್ರಕಾರಗಳಲ್ಲಿ ಸ್ಥಿರವಾಗಿ ಶೇ.80ಕ್ಕಿಂತ ಹೆಚ್ಚು ಗೆಲುವಿನ ದರವನ್ನು ಹೊಂದಿದೆ. ಈ ರೇಸಿಂಗ್ ಅನುಭವ ನಮ್ಮ ಅಪಾಚೆ ಮೋಟಾರ್ ಸೈಕಲ್ ಸರಣಿಯ ಮೇಲೆ ಪ್ರಭಾವ ಬೀರಿದ್ದು, ಈ ಮೂಲಕ ಗ್ರಾಹಕರಿಗೆ ರೇಸ್‌ ನಿಂದ ಸ್ಫೂರ್ತಿ ಪಡೆದ ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನವನ್ನು ಒದಗಿಸಲಾಗುತ್ತದೆ. 40 ವರ್ಷಗಳಿಂದ ಟಿವಿಎಸ್ ರೇಸಿಂಗ್ ಭಾರತದಲ್ಲಿ ಮೋಟಾರ್‌ ಸ್ಪೋರ್ಟ್‌ ಅನ್ನು ಎಲ್ಲರಿಗೂ ತಲುಪಿಸುವಲ್ಲಿ ಮತ್ತು ಟಿವಿಎಸ್ ಒನ್ ಮೇಕ್ ಚಾಂಪಿ ಯನ್‌ ಶಿಪ್‌ ನಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪಿಎಲ್ಐ ಜೊತೆಗಿನ ನಮ್ಮ ಸಹಯೋಗವು ಅತ್ಯುತ್ತಮ ಕಾರ್ಯಕ್ಷಮತೆ ಸಾಧಿಸುವ ಮತ್ತು ಹೊಸತನದ ಗಡಿಗಳನ್ನು ಮೀರುವ ನಮ್ಮ ಸಂಕಲ್ಪವನ್ನು ತೋರಿಸು ತ್ತದೆ.

ಪಿಎಲ್ಐನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ರೇಸಿಂಗ್ ನಲ್ಲಿ ಅವರು ಹೊಂದಿರುವ ಅತ್ಯುತ್ತಮ ಅನುಭವ ನಾವು ಮೋಟಾರ್ ಸ್ಪೋರ್ಟಾ ಕಡೆಗೆ ಹೊಂದಿರುವ ಉದ್ದೇಶಕ್ಕೆ ಪೂರಕವಾಗಿದೆ. ಪಿಎಲ್ಐನ ಫ್ಲುಯ್ಡ್ ತಂತ್ರಜ್ಞಾನ ಪರಿಣತಿಯ ಜೊತೆಗೆ ನಮ್ಮ ರೇಸಿಂಗ್ ಪರಂಪರೆಯನ್ನು ಸಂಯೋಜಿಸುವ ಮೂಲಕ ನಾವು ಭಾರತದ ದ್ವಿಚಕ್ರದ ರೇಸಿಂಗ್‌ ವಿಭಾಗದ ಭವಿಷ್ಯವನ್ನು ರೂಪಿಸುತ್ತೇವೆ” ಎಂದು ಹೇಳಿದರು.

ಪೆಟ್ರೊನಾಸ್ ಲೂಬ್ರಿಕೆಂಟ್ಸ್ ಇಂಡಿಯಾ (ಪ್ರೈವೇಟ್) ಲಿಮಿಟೆಡ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿನು ಚಾಂಡಿ ಅವರು ಮಾತನಾಡಿ, “ಟಿವಿಎಸ್ ರೇಸಿಂಗ್ ಜೊತೆಗಿನ ನಮ್ಮ ಸಹಯೋಗವು ಉತ್ತಮ ಗುಣಮಟ್ಟದ ಲೂಬ್ರಿಕೆಂಟ್‌ ಗಳು ಮತ್ತು ಮೋಟಾರ್‌ಸ್ಪೋರ್ಟ್ ಶ್ರೇಷ್ಠತೆಯ ನಡುವಿನ ಉತ್ತಮ ಸಂಬಂಧವನ್ನು ತೋರಿ ಸಿದೆ. ಈ ಸಹಯೋಗವು ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ದೇಶದಲ್ಲಿನ ನಮ್ಮ ಗುರಿ ಸಾಧನೆಗೆ ಸಹಾಯ ಮಾಡು ತ್ತದೆ. ನಮ್ಮ ಮೋಟಾರ್‌ ಸ್ಪೋರ್ಟ್ ಪರಂಪರೆ ಮತ್ತು ಟಿವಿಎಸ್ ರೇಸಿಂಗ್‌ ನ 40 ವರ್ಷಗಳ ಆಧಿಪತ್ಯವು ಮೋಟಾರ್ ಸ್ಪೋರ್ಟ್ ಕ್ರೀಡೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂಬು ನಾವು ನಂಬಿದ್ದೇವೆ. ಈ ಪಯಣವನ್ನು ಒಟ್ಟಿಗೆ ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.

ಟಿವಿಎಸ್ ರೇಸಿಂಗ್ ತಂಡವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮೋಟಾರ್‌ ಸ್ಪೋರ್ಟ್‌ ನಲ್ಲಿ ಭಾಗವಹಿಸುವುದನ್ನು ಮುಂದುವರಿಸಿದೆ. ಯುವ ರೈಡರ್ ಐಶ್ವರ್ಯಾ ಪಿಸ್ಸೇ ಬಜಾಸ್ ಚಾಂಪಿಯನ್‌ ಶಿಪ್‌ ನಲ್ಲಿ ತನ್ನ ಗೆಲುವಿನ ಸರಣಿಯನ್ನು ಮುಂದುವರಿಸಿ ದ್ದಾರೆ ಮತ್ತು ಟಿವಿಎಸ್ ಏಷ್ಯಾ ಒನ್ ಮೇಕ್ ಚಾಂಪಿಯನ್‌ ಶಿಪ್ (ಓಎಂಸಿ) ತನ್ನ ಮೂರನೇ ಋತುವನ್ನು 9 ದೇಶಗಳ 15 ರೇಸರ್‌ ಗಳ ಪಾಲ್ಗೊಳ್ಳುವಿಕೆಯ ಮೂಲಕ ಯಶಸ್ವಿಯಾಗಿ ಪೂರ್ಣಗೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಟಿವಿಎಸ್ ರೇಸಿಂಗ್ ತಂಡವು ಐ ಎನ್ ಎಂ ಆರ್ ಸಿ ಪ್ರೊ ಸ್ಟಾಕ್ (165 ಸಿಸಿ & 301-400 ಸಿಸಿ) ಚಾಂಪಿಯನ್ ಶಿಪ್ ನ ಐ ಎನ್ ಆರ್ ಸಿಯ ಎಲ್ಲಾ ವಿಭಾಗಗಳಲ್ಲಿ ತಂಡ ಮತ್ತು ತಯಾರಕರ ವಿಭಾಗದಲ್ಲಿ ಗೆಲುವು ದಾಖಲಿಸಿದೆ. ಐ ಎನ್ ಎಸ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದೆ. ಟಿವಿಎಸ್ ಇಂಡಿಯನ್ ಓಎಂಸಿಯ 14ನೇ ಸೀಸನ್ ನಲ್ಲಿ ಭಾರತದ 50 ಉತ್ತಮ ರೇಸಿಂಗ್ ಪ್ರತಿಭೆಗಳು ಭಾಗವಹಿಸಿ ದ್ದು, ಈ ಮೂಲಕ ಸೀಸನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

‘ಟ್ರ್ಯಾಕ್ ಟು ರೋಡ್’ ಫಿಲಾಸಫಿಯ ಮೂಲಕ ಟಿವಿಎಸ್ ರೇಸಿಂಗ್, ರೇಸ್‌ ಆಧರಿತ ತಂತ್ರ ಜ್ಞಾನವನ್ನು ಉತ್ತಮ ಗುಣಮಟ್ಟದ ಮೋಟಾರ್‌ ಸೈಕಲ್‌ ಗಳಲ್ಲಿ ಬಳಸುವ ಮೂಲಕ ಟಿವಿಎಸ್ ಅಪಾಚೆ ಸರಣಿಯನ್ನು ರೂಪಿಸುವುದನ್ನು ಮುಂದುವರೆಸಿದೆ. ಪೆಟ್ರೊನಾಸ್ ಟಿವಿಎಸ್ ರೇಸಿಂಗ್ ತಂಡ ಮೋಟಾರ್‌ ಸ್ಪೋರ್ಟ್ ಶ್ರೇಷ್ಠತೆಯ ಗಡಿಗಳನ್ನು ಮೀರಲು ಮತ್ತು ಪ್ರಮುಖ ರೇಸಿಂಗ್ ಪ್ರಕಾರಗಳಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲು ಬದ್ಧ ವಾಗಿದೆ.

ಟಿವಿಎಸ್ ರೇಸಿಂಗ್ ಮತ್ತು ಪಿಎಲ್ಐ ತಮ್ಮ ಸಹಯೋಗವನ್ನು ಬಲಪಡಿಸುವ ಮೂಲಕ, ತಮ್ಮ ಜಂಟಿ ಪರಿಣತಿಯ ಮೂಲಕ ರೈಡರ್‌ ಗಳು ಮತ್ತು ಮೋಟಾರ್‌ ಸ್ಪೋರ್ಟ್ ಉತ್ಸಾಹಿ ಗಳಿಗೆ ಉತ್ಸಾಹ ತುಂಬಲಿದೆ ಮತ್ತು ದ್ವಿಚಕ್ರ ರೇಸಿಂಗ್‌ ವಿಭಾಗದಲ್ಲಿ ಹೊಸ ಮೈಲಿಗಲ್ಲು ಗಳನ್ನು ಹಾಕಿಕೊಡಲಿದೆ.