ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Union Budget 2025: ಮಧುಬನಿ ಸೀರೆಯಲ್ಲಿ ಮಿಂಚಿದ ನಿರ್ಮಲಾ ಸೀತಾರಾಮನ್‌; ಇದು ಪದ್ಮ ‍ಪ್ರಶಸ್ತಿ ಪುರಸ್ಕೃತೆಯ ಗಿಫ್ಟ್‌ ಅಂತೆ!

Union Budget 2025: ಸಂಸತ್‌ಗೆ ಆಗಮಿಸುವ ಮುನ್ನ ನಿರ್ಮಲಾ ಸೀತಾರಾಮನ್ ತಮ್ಮ ತಂಡದ ಜೊತೆಗೆ ಕ್ಯಾಮರಾ ಮುಂದೆ ಡಿಜಿಟಲ್ ಬಜೆಟ್ ಹಿಡಿದು ಪೋಸ್ ನೀಡಿದ್ದು, ಅವರು ಈ ಬಾರಿ ಮಧುಬನಿ ಕಲೆ ಇರುವ ಸೀರೆಯನ್ನು ಧರಿಸಿ ಸಂಸತ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷವೆಂದರೆ ಈ ಸೀರೆಯನ್ನು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಅವರು ಉಡುಗೊರೆಯಾಗಿ ನೀಡಿದ್ದರು.

ನಿರ್ಮಲಾ ಧರಿಸಿರುವ ಮಧುಬನಿ ಸೀರೆಯ ವಿಶೇಷತೆ ಏನು ಗೊತ್ತಾ?

Profile Rakshita Karkera Feb 1, 2025 10:44 AM

ನವದೆಹಲಿ: ಕೇಂದ್ರ ಬಜೆಟ್‌(Union Budget 2025) ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಸತತ ಎಂಟನೇ ಬಾರಿ ಕೇಂದ್ರ ಬಜೆಟ್‌ ಮಂಡನೆ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌(Nirmala Sitharaman) ಫುಲ್‌ ರೆಡಿಯಾಗಿದ್ದಾರೆ. ಈಗಾಗಲೇ ಸಂಸತ್‌ಗೆ ಆಗಮಿಸಿರುವ ನಿರ್ಮಲಾ ಸೀತಾರಾಮನ್‌, ಇದಕ್ಕೂ ಮುನ್ನವೇ ಸಂಪ್ರದಾಯದಂತೆ ರಾಷ್ಟ್ರಪತಿ ‌ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪ್ರತಿಬಾರಿಯಂತೆ ಬಜೆಟ್‌ ಮಂಡನೆಗೂ ಮುನ್ನ ತಿನ್ನಿಸುವ ದಹೀ-ಚೀನಿ(ಮೊಸರು ಮತ್ತು ಸಕ್ಕರೆ)ಯನ್ನು ರಾಷ್ಟ್ರಪತಿ ಮುರ್ಮು ಅವರು ನಿರ್ಮಲಾ ಸೀತಾರಾಮನ್‌ ಅವರಿಗೆ ತಿನ್ನಿಸಿದ್ದಾರೆ.



ಇನ್ನು ನಿರ್ಮಲಾ ಬಜೆಟ್‌ ಮೇಲೆ ಎಷ್ಟು ಜನರಿಗೆ ಕುತೂಹಲವಿರುತ್ತದೆಯೋ ಅಷ್ಟೇ ಅವರು ಬಜೆಟ್‌ ಸಂದರ್ಭದಲ್ಲಿ ಧರಿಸುವ ಸೀರೆ ಬಗ್ಗೆಯೂ ಕುತೂಹಲ ಇರುತ್ತದೆ. ಏಕೆಂದರೆ ಬಜೆಟ್‌ ಸಂದರ್ಭದಲ್ಲಿ ಅವರು ಧರಿಸುವ ಸೀರೆಗೆ ಒಂದೊಂದು ಅರ್ಥವಿರುವುದನ್ನು ಗಮನಿಸಬಹುದು. ಹಾಗಿದ್ದರೆ ಈ ಬಾರಿ ಅವರು ಧರಿಸಿರುವ ಸೀರೆಯ ವಿಶೇಷತೆ ಏನು ಎಂಬುದನ್ನು ನೋಡೋಣ.



ಸಂಸತ್‌ಗೆ ಆಗಮಿಸುವ ಮುನ್ನ ನಿರ್ಮಲಾ ಸೀತಾರಾಮನ್ ತಮ್ಮ ತಂಡದ ಜೊತೆಗೆ ಕ್ಯಾಮರಾ ಮುಂದೆ ಡಿಜಿಟಲ್ ಬಜೆಟ್ ಹಿಡಿದು ಪೋಸ್ ನೀಡಿದ್ದು, ಅವರು ಈ ಬಾರಿ ಮಧುಬನಿ ಕಲೆ ಇರುವ ಸೀರೆಯನ್ನು ಧರಿಸಿ ಸಂಸತ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷವೆಂದರೆ ಈ ಸೀರೆಯನ್ನು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಅವರು ಉಡುಗೊರೆಯಾಗಿ ನೀಡಿದ್ದರು. ಹೀಗಾಗಿ ಅವರಿಗೆ ಮತ್ತು ಮಧುಬನಿ ಕಲೆಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಲಾ ಈ ಸೀರೆಯನ್ನು ಉಟ್ಟಿದ್ದಾರೆ. ಕ್ರೀಮ್‌ ಬಣ್ಣದ, ಗೋಲ್ಡನ್‌ ಬಾರ್ಡರ್‌ ಇರುವ ಈ ಸೀರೆಯಲ್ಲಿ ಮಧುಬನಿ ಚಿತ್ತಾರವನ್ನು ಕಾಣಬಹುದಾಗಿದೆ. ಇನ್ನು ಇದಕ್ಕೆ ಒಪ್ಪುವಂತಹ ಚಿನ್ನ ಬಳೆಗಳು, ಸರ ಮತ್ತು ಕಿವಿಯೋಲೆಯನ್ನು ಧರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Union Budget: ಬಜೆಟ್‌ ಎಷ್ಟು ಗೌಪ್ಯವಾಗಿರುತ್ತೆ? ಬಜೆಟ್‌ನ ಮುದ್ರಿತ ಪ್ರತಿ ಯಾರಿಗೆಲ್ಲ ತಲುಪಿರುತ್ತೆ? ಇಲ್ಲಿದೆ ಸಂಪೂರ್ಣ ವಿವರ