Union Budget Size: ಈ ಬಾರಿಯ ಬಜೆಟ್ ಗಾತ್ರ ಎಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಇಂದು ಮಂಡನೆಯಾಗಿರುವ ಬಜೆಟ್ ಗಾತ್ರ(Union Budget Size) ಬರೋಬ್ಬರಿ 50 ಲಕ್ಷ ಕೋಟಿಗೂ ಮೀರಿದೆ. ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಬಜೆಟ್ ಗಾತ್ರ ಒಟ್ಟು 5,41,850.21 ಕೋಟಿ ರೂ. ಕಳೆದ ಬಜೆಟ್‌ಗೆ ಹೋಲಿಸಿದರೆ 1.26ಲಕ್ಷ ಕೋಟಿ ರೂ.ಗಳಷ್ಟು ಬಜೆಟ್ ಮೊತ್ತ ಏರಿಕೆ ಕಂಡಿದೆ.
ನವದೆಹಲಿ: ಕೇಂದ್ರ ವಿತ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitaraman) ಅವರು ಎಂಟನೇ ಬಾರಿ ಕೇಂದ್ರ ಬಜೆಟ್(Union Budget 2025) ಮಂಡಿಸಿದ್ದಾರೆ. ಇಂದು ಮಂಡನೆಯಾಗಿರುವ ಬಜೆಟ್ ಗಾತ್ರ(Union Budget Size) ಬರೋಬ್ಬರಿ 50 ಲಕ್ಷ ಕೋಟಿಗೂ ಮೀರಿದೆ. ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಬಜೆಟ್ ಗಾತ್ರ ಒಟ್ಟು 5,41,850.21 ಕೋಟಿ ರೂ. ಕಳೆದ ಬಜೆಟ್‌ಗೆ ಹೋಲಿಸಿದರೆ 1.26ಲಕ್ಷ ಕೋಟಿ ರೂ.ಗಳಷ್ಟು ಬಜೆಟ್ ಮೊತ್ತ ಏರಿಕೆ ಕಂಡಿದೆ. ಕಳೆದ ಬಾರಿ 4,15,356.25 ಕೋಟಿ ರೂ. ಗಾತ್ರದ ಬಜೆಟ್ ಮಂಡನೆಯಾಗಿತ್ತು.
ಕೇಂದ್ರ ವಲಯದ ಯೋಜನೆಗಳಿಗೆ, 2024-25ರಲ್ಲಿ 15.13 ಲಕ್ಷ ಕೋಟಿ ರೂ.ಗಳಿಗೆ ಮೀಸಲಿಟ್ಟಿದ್ದರೆ ಈ ಬಾರಿ ಬಜೆಟ್ 16.29 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮಾರುಕಟ್ಟೆ ಸಾಲಗಳು, ಖಜಾನೆ ಬಿಲ್‌ಗಳು, ಬಾಹ್ಯ ಸಾಲಗಳು, ಸಣ್ಣ ಉಳಿತಾಯ ಮತ್ತು ಭವಿಷ್ಯ ನಿಧಿಗಳ ಮೇಲಿನ ಬಡ್ಡಿ ಪಾವತಿಯಲ್ಲಿ ಹೆಚ್ಚಳ; ಬಂಡವಾಳ ವೆಚ್ಚ ಸೇರಿದಂತೆ ಸಶಸ್ತ್ರ ಪಡೆಗಳ ಹೆಚ್ಚಿನ ಅವಶ್ಯಕತೆಗಳು; ಮತ್ತು ಉದ್ಯೋಗ ಸೃಷ್ಟಿ ಯೋಜನೆಗೆ ಹೆಚ್ಚಿನ ನಿಬಂಧನೆಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ 2025-26ರ ಬಜೆಟ್ ವೆಚ್ಚ ಹೆಚ್ಚಾಗಿದೆ.
ಬಜೆಟ್‌ಗೆ ಹಣ ಹೊಂದಿಸಲಾಗುತ್ತದೆ?
ಇನ್ನು ಇಷ್ಟು ಭಾರೀ ಗಾತ್ರದ ಬಜೆಟ್‌ಗೆ ಸರ್ಕಾರ ಹೇಗೆ ಹಣ ಹೊಂದಿಸುತ್ತದೆ ಎಂಬುದನ್ನು ನೋಡಿದರೆ, ತೆರಿಗೆಗಳಿಂದ 28.37 ಲಕ್ಷ ಕೋಟಿ ರೂ. ಠೇವಣಿ, ಬಾಂಡ್ ಇತ್ಯಾದಿ ಸಾಲಗಳಿಂದ 16.45 ಲಕ್ಷ ಕೋಟಿ ರೂ, ತೆರಿಗೆಯೇತರ ಆದಾಯ 5.83 ಲಕ್ಷ ಕೋಟಿ ರೂ ಸಂಗ್ರಹಿಸಲಾಗುತ್ತದೆ. ಇಲ್ಲಿ ತೆರಿಗೆ ವಿಚಾರಕ್ಕೆ ಬಂದರೆ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳು ಒಳಗೊಂಡಿವೆ.