ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

SIDBI: ಸಿಡ್ಬಿ ಬಲವರ್ಧನೆಗೆ 5000 ಕೋಟಿ ರೂ ಈಕ್ವಿಟಿ ಬೆಂಬಲ: ಕೇಂದ್ರ ಸಂಪುಟ ಒಪ್ಪಿಗೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತದ ಸಣ್ಣ ಕೈಗಾರಿಕಾ ಅಭಿವೃದ್ದಿ ಬ್ಯಾಂಕ್‌ (ಸಿಡ್ಬಿ) ಗೆ 5000 ಕೋಟಿ ರೂ ಈಕ್ವಿಟಿ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿದೆ. 2026ರ ಹಣಕಾಸು ವರ್ಷದಲ್ಲಿ 3 ಸಾವಿರ ಕೋಟಿ ರೂ ಹಾಗೂ 2027 ಮತ್ತು 28ರ ಹಣಕಾಸು ವರ್ಷದಲ್ಲಿ ತಲಾ 1 ಸಾವಿರ ಕೋಟಿ ರೂ, ಹೂಡಿಕೆಗೆ ಅನುಮೋದನೆ ದೊರಕಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಯಲ್ಲಿ ಭಾರತದ ಸಣ್ಣ ಕೈಗಾರಿಕಾ ಅಭಿವೃದ್ದಿ ಬ್ಯಾಂಕ್‌ (ಸಿಡ್ಬಿ) ಗೆ 5000 ಕೋಟಿ ರೂ ಈಕ್ವಿಟಿ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿದೆ. 2026ರ ಹಣಕಾಸು ವರ್ಷದಲ್ಲಿ 3 ಸಾವಿರ ಕೋಟಿ ರೂ ಹಾಗೂ 2027 ಮತ್ತು 28ರ ಹಣಕಾಸು ವರ್ಷದಲ್ಲಿ ತಲಾ 1 ಸಾವಿರ ಕೋಟಿ ರೂ, ಹೂಡಿಕೆಗೆ ಅನುಮೋದನೆ ದೊರಕಿದೆ. ಇದು ಭಾರತದ ಬಹುದೊಡ್ಡ ಮೈಕ್ರೊ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ(ಎಮ್‌ಎಸ್‌ಎಮ್‌ಇ) ಕೈಗೆಟುಕುವ ಮತ್ತು ಸಕಾಲಿಕ ಸಾಲದ ನೆರವನ್ನು ನೀಡುವ ಉದ್ದೇಶ ಹೊಂದಿದೆ.

ಇತ್ತೀಚೆಗಿನ ವರ್ಷದಲ್ಲಿ ಸಿಡ್ಬಿ ತನ್ನ ಕಾರ್ಯಾಚರಣೆಯನ್ನು ವೇಗವಾಗಿ ವಿಸ್ತರಿಸಿದ್ದು ಸೆ.30, 2025ರ ಬ್ಯಾಲೆನ್ಸ್‌ಶೀಟ್‌ 5.8 ಲಕ್ಷ ಕೋಟಿ ದಾಟಿದೆ. ಸಿಡ್ಬಿ ಕಳೆದ 2 ಹಣಕಾಸು ಸಾಲಿನಲ್ಲಿ ನೂತನವಾಗಿ 65 ಶಾಖೆಗಳನ್ನು ತೆರೆದಿದ್ದು ಒಟ್ಟೂ 161 ಶಾಖೆಗಳನ್ನು ಹೊಂದಿದೆ. ಈ ಈಕ್ವಿಟಿ ಹೂಡಿಕೆಯು ದೇಶಾದ್ಯಂತ ಎಮ್‌ಎಸ್‌ಎಮ್‌ಇ ಕ್ಷೇತ್ರಕ್ಕೆ ನೆರವು ನೀಡುವ ಸಾಮರ್ಥ್ಯ ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ.

ಇದನ್ನೂ ಓದಿ: SIDBI: ಎಮ್‌ಎಸ್‌ಎಮ್‌ಇ ಅಭಿವೃದ್ಧಿಗೆ ಡೆವಲಪ್‌ಮೆಂಟ್‌ ಆಫ್‌ ಇಂಡಸ್ಟ್ರಿ ಅಸೋಸಿಯೇಶನ್‌ ಆರಂಭಿಸಿದ ಸಿಡ್‌ಬಿ!

ಜೊತೆಗೆ ಬ್ಯಾಂಕ್‌ನ ಶಾಖೆಗಳ ವಿಸ್ತರಣೆ, ಕಾರ್ಯೋಪಯುಕ್ತ ಬಂಡವಾಳಕ್ಕೆ ( working capital) ಹೆಚ್ಚು ನವೀನ ಡಿಜಿಟಲ್‌ ಉತ್ಪನ್ನ ಗಳ ಸೇರ್ಪಡೆ, ಸರಕುಪಟ್ಟಿ ರಿಯಾಯಿತಿ, ರಕ್ಷಣಾವಲಯಕ್ಕೆ ವಿಶೇಷ ಉತ್ಪನ್ನಗಳು, ಯಂತ್ರೋಪಕರಣಗಳಿಗೆ ಸಾಲ, ಇತ್ಯಾದಿ, ಇಕೊಸಿಸ್ಟೆಮ್‌ ಅಭಿವೃದ್ದಿ ಶ್ರಮವನ್ನೂ ಹೆಚ್ಚಿಸುವ ಗುರಿ ಹೊಂದಿದೆ.

ಜೊತೆಗೆ ಥೀಮ್‌ ಆಧಾರಿತ ಪುನರ್‍‌ಹಣಕಾಸು ಬೆಂಬಲ, ಎನ್‌ಬಿಎಫ್‌ಸಿ ಮತ್ತು ಆರ್‍‌ಆರ್‍‌ಬಿ ಜೊತೆ ಸೇರಿ ಕೋ ಲೆಂಡಿಂಗ್‌ , ಆರಂಭ ಮತ್ತು ಪ್ರೀ ಐಪಿಒ ಹಂತದಲ್ಲಿ ಈಕ್ಷಿಟಿ ಬೆಂಬಲ ಹಾಗೂ ಆಂಕರ್‍‌ ಹೂಡಿಕೆಯನ್ನು ಕೂಡ ಹೆಚ್ಚಿಸಲಿದೆ.

ಸಿಡ್ಬಿಯ ಸಿಎಮ್‌ಡಿ ಶ್ರೀ ಮನೋಜ್‌ ಮಿತ್ತಲ್‌ ಮಾತನಾಡಿ “ಸಿಡ್ಬಿ ಮೇಲಿನ ನಂಬಿಕೆಗೆ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ವಿಕಸಿತ್‌ ಭಾರತದ 2047ರ ಅಡಿಯಲ್ಲಿ ಗುರಿ ಸಾಧಿಸಲು ಸಿಡ್ಬಿಯನ್ನು ಗರೋತ್‌ ಇಂಜಿನ್‌ ಎಂದು ಗುರುತಿಸಿರುವಂತೆ, ಎಮ್‌ಎಸ್‌ ಎಮ್‌ಇ ಕ್ಷೇತ್ರ ಬಲವರ್ಧನೆಯಲ್ಲಿ ಸಿಡ್ಬಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದರಲ್ಲಿ ನನಗೆ ವಿಶ್ವಾಸವಿದೆ” ಎಂದರು.

ಬ್ಯಾಂಕ್‌ ಅನೌಪಚಾರಿಕ ಸೂಕ್ಷ್ಮ ಉದ್ಯಮಗಳ ಔಪಚಾರೀಕರಣ ಪ್ರಕ್ರಿಯೆಯನ್ನು ಕೂಡ ಹೆಚ್ಚಿಸಲಿದ್ದು, ಇಂಧನ ದಕ್ಷತೆ ಮತ್ತು ಕ್ಲಸ್ಟರ್ ಮಧ್ಯಸ್ಥಿಕೆಗಳ ಮೂಲಕ ಹಣಕಾಸಿನ ರೂಪ ದಲ್ಲಿ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಬೆಂಬಲಿಸುವುದು ಹಾಗೂ ಕೈಗಾರಿಕಾ ಸಂಘಗಳೊಂದಿಗೆ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಿದೆ.