ದೆಹಲಿ, ಮೇ 18: ಭಾರತೀಯ ಉದ್ಯಮಿ, ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ (Gautam Adani) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅದಾನಿ ಗ್ರೂಪ್ ವಿರುದ್ಧ ಹೂಡಲಾಗಿದ್ದ ಬಹುಕೋಟಿ ರುಪಾಯಿ ವಂಚನೆ ಮತ್ತು ಲಂಚದ ಆರೋಪ ಪ್ರಕರಣಗಳನ್ನು ಅಮೆರಿಕದ ಅಧಿಕಾರಿಗಳು ಕೈಬಿಟ್ಟಿದ್ದಾರೆ. ಭಾರತೀಯ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ವಿರುದ್ಧದ ಎಲ್ಲ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಶಾಶ್ವತವಾಗಿ ಕೈಬಿಟ್ಟಿದೆ. ನ್ಯೂಯಾರ್ಕ್‌ನಲ್ಲಿನ ಹೈ ಪ್ರೊಫೈಲ್ ಸೆಕ್ಯುರಿಟೀಸ್ ಮತ್ತು ವೈರ್ ವಂಚನೆ ಆರೋಪವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಟರ್‌ಗಳು ತೀರ್ಮಾನಿಸಿದ ಬಳಿಕ ಪ್ರಕರಣಗಳನ್ನು ಕೊನೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ 2 ದಿನಗಳಿಂದ ನಡೆಯುತ್ತಿದ್ದ ಕಾನೂನು ತನಿಖೆ ಮುಕ್ತಾಯಗೊಂಡಿದೆ. ಒಂದೂವರೆ ವರ್ಷದಿಂದ ಅದಾನಿಗೆ ದೊಡ್ಡ ತಲೆನೋವಾಗಿದ್ದ ಈ ಕ್ರಿಮಿನಲ್ ಪ್ರಕರಣಕ್ಕೆ ಈಗ ಅಧಿಕೃತ ಮುಕ್ತಿ ಸಿಕ್ಕಿದೆ.
ಗೌತಮ್ ಅದಾನಿ ವಿರುದ್ಧದ ಪ್ರಕರಣ ಕೈಬಿಟ್ಟ ಅಮೆರಿಕ:
ಪ್ರಕರಣ ಹಿನ್ನೆಲೆ
2024ರಲ್ಲಿ ಬ್ರೂಕ್ಲಿನ್‌ನ ಅಮೆರಿಕನ್ ಅಟಾರ್ನಿ ಕಚೇರಿಯು ಗೌತಮ್ ಅದಾನಿ ಮತ್ತು ಅವರ ಸೋದರ ಸಂಬಂಧಿ ಸಾಗರ್ ಅದಾನಿ ಸೇರಿ ಹಲವರ ಮೇಲೆ ಲಂಚ ಆಮೀಷ ಸೇರಿ ಗಂಭೀರ ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿತ್ತು. ಭಾರತದಲ್ಲಿ ಸೋಲಾರ್ ಇಂಧನ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 2,100 ಕೋಟಿ ರುಪಾಯಿ ಲಂಚ ನೀಡಲು ಅದಾನಿ ಗ್ರೂಪ್ ಸಂಚು ರೂಪಿಸಿತ್ತು ಮತ್ತು ಈ ವಿಷಯವನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ವಂಚಿಸಿದೆ ಎಂದು ಆರೋಪಿಸಲಾಗಿತ್ತು. ಆದರೆ ಈ ಆರೋಪಗಳನ್ನು ಅದಾನಿ ಗ್ರೂಪ್ ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿದೆ. ಅದಾಗ್ಯೂ ಈ ಕೇಸ್ ಅದಾನಿ ಗ್ರೂಪ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಪರ ವಕೀಲರು ಇತ್ತೀಚೆಗೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದು, ಎಸ್‌ಇಸಿ ಹೂಡಿರುವ ವಂಚನೆ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು.
ತನಿಖೆಯ ಬಳಿಕ ನ್ಯಾಯಾಲಯವು ಅದಾನಿ ಮತ್ತು ಇತರರ ವಿರುದ್ಧದ ದೋಷಾರೋಪಣೆಯನ್ನು ಪೂರ್ವಾಗ್ರಹದಿಂದ ವಜಾಗೊಳಿಸಬೇಕು ಎಂದು ಆದೇಶಿಸಿತು. ಪೂರ್ವಾಗ್ರಹದಿಂದ ವಜಾಗೊಳಿಸುವುದರಿಂದ ಪ್ರಕರಣವನ್ನು ಮತ್ತೆ ತೆರೆಯಲಾಗುವುದಿಲ್ಲ. ಅಂದರೆ ಶಾಶ್ವತವಾಗಿ ಕೊನೆಗಳಿಸಲಾಗಿದೆ ಎಂದರ್ಥ.
ಅದಾನಿ ಗ್ರೂಪ್‌ಗೆ ಹಿಂಡೆನ್‌ಬರ್ಗ್ ಮಾಡಿದ ವಂಚನೆ ಹೇಗಿತ್ತು?
ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಉದ್ಯಮಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್ ಅದಾನಿ ಇತ್ತೀಚೆಗೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಪ್ರಕಟಿಸಿರುವ ಸೂಚ್ಯಂಕದ ಪ್ರಕಾರ ಗೌತಮ್ ಅದಾನಿ ಅವರು 92.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದರೆ ಮುಖೇಶ್ ಅಂಬಾನಿ 90.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಬಂದರು, ಶಕ್ತಿ ಸಮೂಹದ ಷೇರುಗಳು ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.