ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೈಸೂರು ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ

ಮೈಸೂರು ನಗರವು ಪರಂಪರೆ, ಬೆಳೆಯುತ್ತಿರುವ ತಾಂತ್ರಿಕ ಆರ್ಥಿಕತೆ ಮತ್ತು ಉತ್ತಮ ಜೀವನಮಟ್ಟದ ಅಪರೂಪದ ಸಂಗಮವಾಗಿದೆ; ಇಂತಹ ಜೀವನಮಟ್ಟವನ್ನು ದೊಡ್ಡ ನಗರಗಳಲ್ಲಿ ಕಾಣುವುದು ಕಷ್ಟ. ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಇರುವ ಅನೇಕ ಖರೀದಿದಾರರು, ತಮ್ಮ ಅನುಕೂಲಕ್ಕೆ ತಕ್ಕಂತೆ ನಿಧಾನವಾಗಿ ಮನೆ ನಿರ್ಮಿಸಿಕೊಳ್ಳಲು ಜಮೀನನ್ನು ಹುಡುಕುತ್ತಿದ್ದಾರೆ. ಇದು ಸ್ವಂತ ವಾಸಸ್ಥಳವಾಗಲಿ, ಎರಡನೇ ಮನೆಯಾಗಲಿ ಅಥವಾ ದೀರ್ಘಕಾಲೀನ ಹೂಡಿಕೆ ಯಾಗಲಿ ಆಗಿರಬಹುದು.

ಬೆಂಗಳೂರು: 25 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ರಿಯಲ್ ಎಸ್ಟೇಟ್ ಸಂಸ್ಥೆಯು, ಮೈಸೂರಿನ ಆರ್.ಟಿ. ನಗರದಲ್ಲಿ 'ವೈಷ್ಣವಿ ಲೈಫ್' ಎಂಬ 45 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಪ್ರೀಮಿಯಂ ನಿವೇಶನ ಯೋಜನೆಯನ್ನು ಘೋಷಿಸಿದೆ. ಈ ಯೋಜನೆ ಯಲ್ಲಿ 1,200 ರಿಂದ 4,000 ಚದರ ಅಡಿ ವಿಸ್ತೀರ್ಣದ 598 ನಿವೇಶನಗಳು ಲಭ್ಯವಿದ್ದು, ಇವುಗಳ ಬೆಲೆ 81 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

ಉತ್ತರ ಬೆಂಗಳೂರಿನಲ್ಲಿರುವ 'ವೈಷ್ಣವಿ ಎಟಿ-ಒನ್ ಲೈಫ್' (Vaishnavi AT-One Life) ನಂತರ, ಕೈಗೊಂಡಿರುವ ಎರಡನೇ ಅತಿದೊಡ್ಡ ನಿವೇಶನ ಅಭಿವೃದ್ಧಿ ಯೋಜನೆ ಇದು.

ಮೈಸೂರಿನ ಪಶ್ಚಿಮ ದಿಕ್ಕಿನ ಹೊರವರ್ತುಲ ರಸ್ತೆಯ (Outer Ring Road) ಸಮೀಪದಲ್ಲಿರುವ ಈ ಯೋಜನೆಯು ನಗರದ ಪ್ರಮುಖ ಶಾಲೆಗಳು, ಆಸ್ಪತ್ರೆಗಳು ಮತ್ತು ಉದ್ಯೋಗ ಕೇಂದ್ರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಸಮುದಾಯ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ಯೋಜನೆಯಲ್ಲಿ, ಸುಸಜ್ಜಿತ ಮೂಲಸೌಕರ್ಯಗಳು, ವಿಶಾಲವಾದ ಹಸಿರು ವಲಯಗಳು, ವಿಶಿಷ್ಟ ಸೌಲಭ್ಯಗಳು ಹಾಗೂ 25,000 ಚದರ ಅಡಿ ವಿಸ್ತೀರ್ಣದ ಬಹು-ಮಹಡಿ ಕ್ಲಬ್ಹೌಸ್ ಲಭ್ಯವಿವೆ.

ಇದನ್ನೂ ಓದಿ: Real Estate at Chamundi Hills: ಚಾಮುಂಡಿ ಬೆಟ್ಟದ ನಿಷೇಧಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಿಯಲ್‌ ಏಸ್ಟೇಟ್

ಈ ಕುರಿತು ಮಾತನಾಡಿದ ಕಾರ್ಯನಿರ್ವಾಹಕ ನಿರ್ದೇಶಕ ದರ್ಶನ್ ಗೋವಿಂದರಾಜು ಅವರು ಹೀಗೆ ಹೇಳಿದರು: "ಮೈಸೂರು ನಗರವು ಪರಂಪರೆ, ಬೆಳೆಯುತ್ತಿರುವ ತಾಂತ್ರಿಕ ಆರ್ಥಿಕತೆ ಮತ್ತು ಉತ್ತಮ ಜೀವನಮಟ್ಟದ ಅಪರೂಪದ ಸಂಗಮವಾಗಿದೆ; ಇಂತಹ ಜೀವನಮಟ್ಟವನ್ನು ದೊಡ್ಡ ನಗರಗಳಲ್ಲಿ ಕಾಣುವುದು ಕಷ್ಟ. ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಇರುವ ಅನೇಕ ಖರೀದಿದಾರರು, ತಮ್ಮ ಅನುಕೂಲಕ್ಕೆ ತಕ್ಕಂತೆ ನಿಧಾನವಾಗಿ ಮನೆ ನಿರ್ಮಿಸಿಕೊಳ್ಳಲು ಜಮೀನನ್ನು ಹುಡುಕುತ್ತಿದ್ದಾರೆ. ಇದು ಸ್ವಂತ ವಾಸಸ್ಥಳವಾಗಲಿ, ಎರಡನೇ ಮನೆಯಾಗಲಿ ಅಥವಾ ದೀರ್ಘಕಾಲೀನ ಹೂಡಿಕೆ ಯಾಗಲಿ ಆಗಿರಬಹುದು. ಮೈಸೂರಿನಲ್ಲಿರುವ 'ವೈಷ್ಣವಿ ಲೈಫ್' (Vaishnavi Life) ಅಂತಹ ಅವಕಾಶವನ್ನೇ ಒದಗಿಸುತ್ತದೆ. ಜೊತೆಗೆ, ಕಳೆದ 25 ವರ್ಷಗಳಲ್ಲಿ ವೈಷ್ಣವಿ ಗ್ರೂಪ್ ರೂಪಿಸಿಕೊಂಡಿ ರುವ ಯೋಜನಾ ಶಿಸ್ತು ಮತ್ತು ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಪೂರ್ಣಗೊಳಿಸಿದ ಭರವಸೆಯ ಇತಿಹಾಸವೂ ಇದರ ಬೆನ್ನಿಗಿದೆ."

ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರು, ಬೆಂಗಳೂರಿನ ಹೊರಗೆ ರಾಜ್ಯದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ವೇ ನಿರ್ಮಾಣದಿಂದಾಗಿ, ಮೈಸೂರು ನಗರವು ಬೆಂಗಳೂರಿನಿಂದ ಸುಮಾರು 90 ನಿಮಿಷಗಳ ಪ್ರಯಾಣದ ಅಂತರಕ್ಕೆ ಬಂದಿದ್ದು, ಬಳಕೆದಾರರು ಮತ್ತು ಹೂಡಿಕೆದಾರರು ಇಬ್ಬರಿಗೂ ಈ ನಗರದ ಮೇಲಿನ ಆಕರ್ಷಣೆಯನ್ನು ಹೆಚ್ಚಿಸಿದೆ.

ರಾಜ್ಯಾದ್ಯಂತ ನಿವೇಶನ ಅಭಿವೃದ್ಧಿ ಯೋಜನೆಗಳು ವೇಗ ಪಡೆದು ಕೊಳ್ಳುತ್ತಿವೆ: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಪ್ರಕಾರ, 2026ರ ಮೊದಲ ತ್ರೈಮಾಸಿಕ ದಲ್ಲಿ ಅನುಮೋದನೆಗೊಂಡ 98 ರಿಯಲ್ ಎಸ್ಟೇಟ್ ಯೋಜನೆಗಳ ಪೈಕಿ 32 ಯೋಜನೆಗಳು ನಿವೇಶನ ಅಭಿವೃದ್ಧಿಗೆ ಸಂಬಂಧಿಸಿದವುಗಳಾಗಿವೆ; 2025ರ ಇದೇ ತ್ರೈಮಾಸಿಕದಲ್ಲಿ ಇಂತಹ ಯೋಜನೆಗಳ ಸಂಖ್ಯೆ 17 ಆಗಿತ್ತು.

ಈ ಯೋಜನೆಯ ಮಾಸ್ಟರ್ ಪ್ಲಾನ್ ಅನ್ನು RSP ಡಿಸೈನ್ ಕನ್ಸಲ್ಟೆಂಟ್ಸ್ (ವಾಸ್ತುಶಿಲ್ಪ ಮತ್ತು ಭೂದೃಶ್ಯ ವಿನ್ಯಾಸ), TRC ಇಂಜಿನಿಯರಿಂಗ್ (ರಚನಾತ್ಮಕ ವಿನ್ಯಾಸ), AUM ಟೆಕ್ನಾಲಜೀಸ್ (ಸೇವೆಗಳು) ಮತ್ತು ಕ್ಲಿಯರ್ ವಾಟರ್ ಡೈನಾಮಿಕ್ಸ್ (ಜಲವಿಜ್ಞಾನ) ಸಂಸ್ಥೆಗಳ ಸಹಯೋಗ ದೊಂದಿಗೆ ರೂಪಿಸಲಾಗಿದೆ.

1998ರಲ್ಲಿ ಸಿ.ಎನ್. ಗೋವಿಂದರಾಜು ಅವರಿಂದ ಸ್ಥಾಪಿಸಲ್ಪಟ್ಟ 'ವೈಷ್ಣವಿ ಗ್ರೂಪ್', ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಯಾಗಿದೆ. ಇಲ್ಲಿಯವರೆಗೆ 20 ದಶಲಕ್ಷ ಚದರ ಅಡಿಗೂ ಹೆಚ್ಚಿನ ವಸತಿ, ವಾಣಿಜ್ಯ ಮತ್ತು ಚಿಲ್ಲರೆ ವ್ಯಾಪಾರ (ರಿಟೇಲ್) ಯೋಜನೆಗಳನ್ನು ಪೂರ್ಣ ಗೊಳಿಸಿದೆ. ವೈಷ್ಣವಿ ಗ್ರೂಪ್, ಗುಣಮಟ್ಟದ ಹಾಗೂ ಸುಸ್ಥಿರ ರಿಯಲ್ ಎಸ್ಟೇಟ್ ಪರಿಹಾರಗಳನ್ನು ಒದಗಿಸುವುದರ ಜೊತೆಗೆ, ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಅತ್ಯುತ್ತಮ ಖ್ಯಾತಿ ಗಳಿಸಿದೆ.