ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೆನ್ಸೆಕ್ಸ್‌ 633 ಅಂಕ ಏರಿಕೆ, ನಿಫ್ಟಿ 23,777ಕ್ಕೆ ಜಿಗಿತ: ಇರಾನ್‌ ಯುದ್ಧ ಬಳಿಕ ಏರಿದ ಸ್ಟಾಕ್ಸ್‌ ಯಾವುದು?

Sensex-Nifty: ಮುಂಬಯಿ ಷೇರು ಮಾರುಕಟ್ಟೆ‌ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇವತ್ತು 633 ಅಂಕ ಏರಿಕೆಯಾಗಿದ್ದು, 76,704 ಕ್ಕೆ ಸ್ಥಿರವಾಯಿತು. ನಿಫ್ಟಿ 196 ಅಂಕ ಚೇತರಿಸಿದ್ದು 23,777ಕ್ಕೆ ದಿನದ ವಹಿ ವಾಟು ಮುಕ್ತಾಯಗೊಳಿಸಿತು. ಐಟಿ ಸ್ಟಾಕ್ಸ್‌ ಏರಿಕೆ ದಾಖಲಿಸಿದ್ದುದು ವಿಶೇಷವಾಗಿತ್ತು. ಎಟರ್ನಲ್‌, ಮಹೀಂದ್ರಾ & ಮಹೀಂದ್ರಾ ಲಾಭ ಗಳಿಸಿದರೆ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಟಾಟಾ ಸ್ಟೀಲ್‌ ನಷ್ಟಕ್ಕೀಡಾಯಿತು..

ಸಂಗ್ರಹ ಚಿತ್ರ

ನವದೆಹಲಿ, ಮಾ. 18: ಮುಂಬಯಿ ಷೇರು ಮಾರುಕಟ್ಟೆ‌ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಬುಧವಾರ (ಮಾರ್ಚ್‌ 18) 633 ಅಂಕ ಏರಿಕೆಯಾಗಿದ್ದು, 76,704 ಕ್ಕೆ ಸ್ಥಿರವಾಯಿತು. ನಿಫ್ಟಿ 196 ಅಂಕ ಚೇತರಿಸಿದ್ದು 23,777ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಐಟಿ ಸ್ಟಾಕ್ಸ್‌ ಏರಿಕೆ ದಾಖಲಿಸಿದ್ದುದು ವಿಶೇಷವಾಗಿತ್ತು. ಎಟರ್ನಲ್‌, ಮಹೀಂದ್ರಾ & ಮಹೀಂದ್ರಾ ಲಾಭ ಗಳಿಸಿದರೆ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಟಾಟಾ ಸ್ಟೀಲ್‌ ನಷ್ಟಕ್ಕೀಡಾಯಿತು.

ಹೂಡಿಕೆದಾರರಿಗೆ ಇವತ್ತು 7 ಲಕ್ಷ ಕೋಟಿ ರುಪಾಯಿ ನೋಶನಲ್‌ ಲಾಭ ಉಂಟಾಯಿತು. ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 439 ಲಕ್ಷ ಕೋಟಿ ರುಪಾಯಿಗೆ ಏರಿತು.

ಸೆನ್ಸೆಕ್ಸ್-ನಿಫ್ಟಿ ಏರಿಕೆಗೆ ಕಾರಣವೇನು?

  1. ತೈಲ ದರ ಸ್ಥಿರವಾಗಿ ಇರುವುದು.
  2. ಜಾಗತಿಕ ಮಾರಿಕಟ್ಟೆಯ ಚೇತರಿಕೆ.
  3. ಬಾಂಡ್‌ ಉತ್ಪತ್ತಿ ಇಳಿಕೆ.
  4. ಮೌಲ್ಯಯುತ ಷೇರುಗಳ ಖರೀದಿ.

ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 101 ಡಾಲರ್‌ಗೆ ಏರಿಕೆಯಾಯಿತು. ಹೊರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಶೀಘ್ರ ಪುನರಾರಂಭವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದು ಸಕಾರಾತ್ಮಕ ಪ್ರಭಾವ ಬೀರಿತು.

ವಿಡಿಯೊ ನೋಡಿ:



ಇಳಿಕೆ ದಾಖಲಿಸಿದ ಸ್ಟಾಕ್ಸ್

ಕೋಲ್‌ ಇಂಡಿಯಾ: 455/-: 1.53%

NTPC: 378/-: 1.27%

HUL: 2,133/-: 1.07%

ಸಿಪ್ಲಾ: 1,269/-: 1.05%

ಸನ್‌ ಫಾರ್ಮಾ: 1,778/-: 0.90%

ಹಿಂಡಾಲ್ಕೊ: 933/-: 0.39%

ಅಪೊಲೊ ಹಾಸ್ಪಿಟಲ್‌: 7,471/-: 0.39%

ಏರಿಕೆ ದಾಖಲಿಸಿದ ಸ್ಟಾಕ್ಸ್

ಜಿಯೊ ಫೈನಾನ್ಸಿಯಲ್‌ ಸರ್ವೀಸ್:‌ 248/-: 4.47%

ಎಟರ್ನಲ್‌: 242/: 3.38%

ಟೆಕ್‌ ಮಹೀಂದ್ರಾ: 1,385/-: 3.24%

ಇನ್ಫೋಸಿಸ್:‌ 1,267/-: 2.78%

ಎಚ್‌ಸಿಎಲ್‌ ಟೆಕ್‌: 1,357/-: 2.74%

M&M: 3,215/: 2.74%

ಇವತ್ತು ಡಾಲರ್‌ ಎದುರು ರುಪಾಯಿ ಮೌಲ್ಯ 92.30 ರುಪಾಯಿಯಷ್ಟು ಇತ್ತು.

ಇರಾನ್‌ ವಾರ್‌ ಶುರುವಾದ ಬಳಿಕ ಏರಿಕೆಯಾಗಿರುವ ಹತ್ತು ಷೇರುಗಳ ಲಿಸ್ಟ್‌:

ಸ್ವಾನ್‌ ಡಿಫೆನ್ಸ್‌ ಆಂಡ್‌ ಹೆವಿ ಇಂಡಸ್ಟ್ರೀಸ್:‌ ಇರಾನ್‌ ಯುದ್ಧ ಆರಂಭವಾದ ಬಳಿಕ ಈ ಷೇರಿನ ದರದಲ್ಲಿ 40% ಏರಿಕೆ ಆಗಿದೆ.

ಆನ್‌ಲೈನ್ ಜೂಜಾಡಲು ಬ್ಯಾಂಕ್‌ನಿಂದಲೇ 4 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಅಸಿಸ್ಟೆಂಟ್ ಮ್ಯಾನೇಜರ್!

ಬ್ಲೂಸ್ಟೋನ್‌ ಜ್ಯುವೆಲ್ಲರಿ ಆಂಡ್‌ ಲೈಫ್‌ ಸ್ಟೈಲ್:‌ ಕಳೆದ ಕೆಲ ದಿನಗಳಿಂದ ಈ ಷೇರು 18% ಏರಿಕೆಯಾಗಿದೆ.

ಸ್ಟರ್ಲೈಟ್‌ ಟೆಕ್ನಾಲಜೀಸ್‌ ಷೇರು ದರದಲ್ಲಿ 15% ಏರಿಕೆ ಆಗಿದೆ.

ವನ್‌ ಸೋರ್ಸ್‌ ಸ್ಪೆಶಾಲಿಟಿ ಫಾರ್ಮಾ ಷೇರಿನ ದರ 11% ಹೆಚ್ಚಳವಾಗಿದೆ.

ಅದಾನಿ ಪವರ್‌ ಷೇರಿನ ದರದಲ್ಲಿ 10% ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕಮಾಡಿಟಿ ದರಗಳು ಹೆಚ್ಚಳವಾಗಿರುವುದು ಪರಿಣಾಮ ಬೀರಿದೆ.

ಜೂಡೂಸ್‌ ವೆಲ್ನೆಸ್‌ ಷೇರು ದರದಲ್ಲಿ 10% ಹೆಚ್ಚಳವಾಗಿದೆ.

ಎನ್‌ಟಿಪಿಸಿ ಗ್ರೀನ್‌ ಷೇರು ದರದಲ್ಲಿ 9% ಹೆಚ್ಚಳವಾಗಿದೆ.

ಫರ್ಟಿಲೈಸರ್‌ ವಲಯದ ಫಾಕ್ಟ್‌ ಷೇರಿನ ದರದಲ್ಲಿ 8% ಹೆಚ್ಚಳವಾಗಿದೆ.

ಸೋಲಾರ್‌ ವಲಯದ ಪ್ರೀಮಿಯರ್‌ ಎನರ್ಜಿ ಷೇರಿನ ದರದಲ್ಲಿ 8% ಹೆಚ್ಚಳವಾಗಿದೆ.