ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತೊಂದರೆ-ಮುಕ್ತ ಕೂಲಿಂಗ್‌ಗಾಗಿ ವರ್ಲ್‌ಪೂಲ್‌ನಿಂದ ತೊಂದರೆ-ಮುಕ್ತ ಕೂಲಿಂಗ್‌ಗಾಗಿ ಆಟೋಮ್ಯಾಟಿಕ್ ಡಿಫ್ರಾಸ್ಟಿಂಗ್ ವೈಶಿಷ್ಟ್ಯವಿರುವ ‘ನೋ-ಟೆನ್ಶನ್ ರೆಫ್ರಿಜರೇಟರ್‌ಗಳ’ ಬಿಡುಗಡೆ

ತನ್ನ ವಿಟಾಮ್ಯಾಜಿಕ್-ಪ್ರೊ (VitamagicPro) ಮತ್ತು ಇಂಪ್ರೋ ಪ್ಲಸ್ (IMPRO PLUS) ಶ್ರೇಣಿಗಳ ಪರಿಚಯದೊಂದಿಗೆ, ವರ್ಲ್‌ಪೂಲ್ ಸಿಂಗಲ್-ಡೋರ್ ವಿಭಾಗದಲ್ಲಿ ಅತಿ ದೊಡ್ಡ 'ಆಟೋ ಮ್ಯಾಟಿಕ್ ಡಿಫ್ರಾಸ್ಟ್' ರೆಫ್ರಿಜರೇಟರ್‌ಗಳ ಶ್ರೇಣಿಯನ್ನು ಮಾರುಕಟ್ಟೆಗೆ ತಂದಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲಕರ ಮತ್ತು ಒತ್ತಡ-ಮುಕ್ತ ರೆಫ್ರಿಜರೇಷನ್ ಅನುಭವ ನೀಡುತ್ತಿದೆ.

ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ 'ವರ್ಲ್‌ಪೂಲ್ ಆಫ್ ಇಂಡಿಯಾ ಲಿಮಿಟೆಡ್', ಗ್ರಾಹಕರು ಎದುರಿಸುತ್ತಿರುವ ಮ್ಯಾನುವಲ್ ಡಿಫ್ರಾಸ್ಟಿಂಗ್‌ನ (ಸ್ವತಃ ಫ್ರಿಡ್ಜ್‌ನ ಮಂಜುಗಡ್ಡೆ ಕರಗಿಸುವ) ಕಿರಿಕಿರಿಯನ್ನು ತಪ್ಪಿಸಲು ವಿನ್ಯಾಸಗೊಳಿಸಲಾದ ಸಿಂಗಲ್-ಡೋರ್ ವಿಭಾಗದ ಹೊಸ ‘ನೋ-ಟೆನ್ಶನ್ ರೆಫ್ರಿಜರೇಟರ್‌ಗಳ’ (No Tension Refrigerators) ಶ್ರೇಣಿಯನ್ನು ಇಂದು ಬಿಡುಗಡೆ ಮಾಡಿದೆ.

ತನ್ನ ವಿಟಾಮ್ಯಾಜಿಕ್-ಪ್ರೊ (VitamagicPro) ಮತ್ತು ಇಂಪ್ರೋ ಪ್ಲಸ್ (IMPRO PLUS) ಶ್ರೇಣಿಗಳ ಪರಿಚಯದೊಂದಿಗೆ, ವರ್ಲ್‌ಪೂಲ್ ಸಿಂಗಲ್-ಡೋರ್ ವಿಭಾಗದಲ್ಲಿ ಅತಿ ದೊಡ್ಡ 'ಆಟೋ ಮ್ಯಾಟಿಕ್ ಡಿಫ್ರಾಸ್ಟ್' ರೆಫ್ರಿಜರೇಟರ್‌ಗಳ ಶ್ರೇಣಿಯನ್ನು ಮಾರುಕಟ್ಟೆಗೆ ತಂದಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲಕರ ಮತ್ತು ಒತ್ತಡ-ಮುಕ್ತ ರೆಫ್ರಿಜರೇಷನ್ ಅನುಭವ ನೀಡುತ್ತಿದೆ.

ಹೆಚ್ಚಿನ ಸಿಂಗಲ್-ಡೋರ್ ಫ್ರಿಡ್ಜ್ ಬಳಕೆದಾರರಿಗೆ, ಫ್ರೀಜರ್‌ನಲ್ಲಿ ಹೆಪ್ಪುಗಟ್ಟಿದ ಮಂಜುಗಡ್ಡೆಯನ್ನು ತೆಗೆಯುವುದು ಶ್ರಮದಾಯಕ ಮತ್ತು ಬೇಸರದ ಕೆಲಸವಾಗಿದೆ. ಮ್ಯಾನುವಲ್ ಡಿಫ್ರಾಸ್ಟಿಂಗ್‌ಗಾಗಿ ಫ್ರಿಡ್ಜ್ ಅನ್ನು ಆಫ್ ಮಾಡುವುದು, ಒಳಗಿರುವ ವಸ್ತುಗಳನ್ನು ಖಾಲಿ ಮಾಡುವುದು, ಮಂಜುಗಡ್ಡೆ ಕರಗುವವರೆಗೆ ಕಾಯುವುದು ಮತ್ತು ನೀರು ಚೆಲ್ಲುವುದನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಇದು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಮತ್ತು ದೈನಂದಿನ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಬೇಸಿಗೆ ಯಂತಹ ಹೆಚ್ಚು ಬಳಕೆಯ ಸಮಯದಲ್ಲಿ, ಈ ಅನಾನುಕೂಲತೆ ಪದೇ ಪದೇ ಎದುರಾಗಿ, ದೈನಂದಿನ ಮನೆಕೆಲಸಗಳ "ಟೆನ್ಶನ್" ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: Whirlpool: ಕೇವಲ 10 ನಿಮಿಷಗಳಲ್ಲಿ ಫ್ರೀಜರ್ ಅನ್ನು ಫ್ರಿಜ್‌ ಆಗಿಸುವ ವರ್ಲ್‌ಪೂಲ್ ರೆಫ್ರಿಜರೇಟರ್

ಈ ಸಮಸ್ಯೆಗೆ ಪರಿಹಾರವಾಗಿ, ವರ್ಲ್‌ಪೂಲ್‌ನ ‘ನೋ-ಟೆನ್ಶನ್ ರೆಫ್ರಿಜರೇಟರ್‌ಗಳನ್ನು’ ಸಂಪೂರ್ಣವಾಗಿ ತೊಂದರೆ-ಮುಕ್ತ ಆಟೋಮ್ಯಾಟಿಕ್ ಡಿಫ್ರಾಸ್ಟಿಂಗ್ ಒದಗಿಸಲು ವಿನ್ಯಾಸಗೊಳಿಸ ಲಾಗಿದೆ. ಇದರ ಸ್ವಂತ 6ನೇ ಸೆನ್ಸ್ ಇಂಟೆಲಿಫ್ರಾಸ್ಟ್ ತಂತ್ರಜ್ಞಾನದ (6th Sense IntelliFrost Technology) ಬೆಂಬಲದೊಂದಿಗೆ, ಈ ರೆಫ್ರಿಜರೇಟರ್ ಮಂಜುಗಡ್ಡೆ ಕಟ್ಟುವುದನ್ನು ಬುದ್ಧಿವಂತಿಕೆ ಯಿಂದ ಗ್ರಹಿಸುತ್ತದೆ ಮತ್ತು ಅಗತ್ಯವಿದ್ದಾಗ ತಾನಾಗಿಯೇ ಡಿಫ್ರಾಸ್ಟಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.

ಇದರಿಂದ ಮ್ಯಾನುವಲ್ ಆಗಿ ಏನನ್ನೂ ಮಾಡುವ ಅಗತ್ಯವಿರುವುದಿಲ್ಲ. ಇದು ಫ್ರಿಡ್ಜ್ ಬಳಕೆಯನ್ನು ಸರಳಗೊಳಿಸುವುದಲ್ಲದೆ, ಒಳಗಿಟ್ಟ ವಸ್ತುಗಳನ್ನು ಸುಲಭವಾಗಿ ತೆಗೆದುಕೊಳ್ಳಲು ನೆರವಾಗುತ್ತದೆ ಮತ್ತು ನೀರು ಚೆಲ್ಲುವುದನ್ನು ತಡೆಯುವ ಮೂಲಕ ದೈನಂದಿನ ಬಳಕೆಯನ್ನು ಹೆಚ್ಚು ಸ್ವಚ್ಛ ಮತ್ತು ಅನುಕೂಲಕರವಾಗಿಸುತ್ತದೆ.

ಈ ಬಿಡುಗಡೆಯ ಕುರಿತು ಮಾತನಾಡಿದ ವರ್ಲ್‌ಪೂಲ್ ಆಫ್ ಇಂಡಿಯಾದ ಮಾರ್ಕೆಟಿಂಗ್ ಉಪಾಧ್ಯಕ್ಷ ನಕುಲ್ ತಿವಾರಿ,: "ಡಿಫ್ರಾಸ್ಟಿಂಗ್ ಎಂಬುದು ಸಿಂಗಲ್ ಡೋರ್ ಫ್ರಿಡ್ಜ್ ಬಳಕೆದಾರರಿಗೆ ಬಹಳ ಹಿಂದಿನಿಂದಲೂ ಅತ್ಯಂತ ಸಾಮಾನ್ಯ ಮತ್ತು ನಿರಾಸೆ ಮೂಡಿಸುವ ಸವಾಲಾಗಿದೆ. ಇದು ದೈನಂದಿನ ದಿನಚರಿಯನ್ನು ಅಡ್ಡಿಪಡಿಸುತ್ತದೆ ಮತ್ತು ಪದೇ ಪದೇ ಮ್ಯಾನುವಲ್ ಆಗಿ ಕೆಲಸ ಮಾಡುವಂತೆ ಮಾಡುತ್ತದೆ.

6th ಸೆನ್ಸ್ ಇಂಟೆಲಿಫ್ರಾಸ್ಟ್ ತಂತ್ರಜ್ಞಾನದ ಬೆಂಬಲವಿರುವ ನಮ್ಮ ಹೊಸ ‘ನೋ-ಟೆನ್ಶನ್ ರೆಫ್ರಿಜರೇಟರ್‌ಗಳ’ ಮೂಲಕ ಯಾವುದೇ ಮ್ಯಾನುವಲ್ ಶ್ರಮವಿಲ್ಲದೆ ಆಟೋಮ್ಯಾಟಿಕ್ ಡಿಫ್ರಾಸ್ಟಿಂಗ್ ಸಕ್ರಿಯಗೊಳಿಸುವ ಮೂಲಕ ಈ ದೈನಂದಿನ ಕಿರಿಕಿರಿಯನ್ನು ತೊಡೆದು ಹಾಕುವ ಗುರಿಯನ್ನು ನಾವು ಹೊಂದಿದ್ದೇವೆ. ಭಾರತೀಯ ಕುಟುಂಬಗಳ ದೈನಂದಿನ ಜೀವನವನ್ನು ಸರಳ ಗೊಳಿಸುವ ಮತ್ತು ಅನುಕೂಲವನ್ನು ಹೆಚ್ಚಿಸುವ ಅರ್ಥಪೂರ್ಣ ಆವಿಷ್ಕಾರಗಳನ್ನು ನೀಡುವ ನಮ್ಮ ಬದ್ಧತೆಯನ್ನು ಈ ಶ್ರೇಣಿಯು ಪ್ರತಿಬಿಂಬಿಸುತ್ತದೆ," ಎಂದು ಹೇಳಿದರು.

ದೈನಂದಿನ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ಸ್ಮಾರ್ಟ್ ತಂತ್ರಜ್ಞಾನಗಳು

ಆಟೋಮ್ಯಾಟಿಕ್ ಡಿಫ್ರಾಸ್ಟಿಂಗ್ ಜೊತೆಗೆ, ವಿಟಾಮ್ಯಾಜಿಕ್ ಮತ್ತು ಇಂಪ್ರೋ ಪ್ಲಸ್ ಶ್ರೇಣಿಗಳು ದೈನಂದಿನ ಅಗತ್ಯಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ಗ್ರಾಹಕರು ತಮ್ಮ ದೈನಂದಿನ ಬಳಕೆಯ ಮಾದರಿಗಳ ಆಧಾರದ ಮೇಲೆ ಕೂಲಿಂಗ್ ಕಾರ್ಯಕ್ಷಮತೆಯನ್ನು ಸುಲಭವಾಗಿ ಹೊಂದಿಸಿಕೊಳ್ಳಲು ಅನುವು ಮಾಡಿಕೊಡುವ ಸ್ಮಾರ್ಟ್ ಕೂಲಿಂಗ್ ಮೋಡ್‌ಗಳನ್ನು ಈ ರೆಫ್ರಿಜರೇಟರ್‌ಗಳು ಒಳಗೊಂಡಿವೆ:

● ಫ್ಲೆಕ್ಸಿಕೂಲ್ (FlexiCool): ಫ್ರಿಡ್ಜ್‌ನ ಕೂಲಿಂಗ್ ಮಟ್ಟವನ್ನು ಕಡಿಮೆ (Low), ಮಧ್ಯಮ (Medium) ಮತ್ತು ಹೆಚ್ಚು (High) ಸೆಟ್ಟಿಂಗ್‌ಗಳ ಮೂಲಕ ಹೊಂದಿಸಲು ಬಳಕೆದಾರರಿಗೆ ಅನುಮತಿಸುತ್ತದೆ.

● ಫಾಸ್ಟ್ ಫಾರ್ವರ್ಡ್ ಐಸ್ (Fast Forward Ice): ಐಸ್ ಮಾಡುವ ಪ್ರಕ್ರಿಯೆಯನ್ನು ಚುರುಕು ಗೊಳಿಸುತ್ತದೆ ಮತ್ತು ಕೇವಲ 95 ನಿಮಿಷಗಳಲ್ಲಿ / 2 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಐಸ್ ಒದಗಿಸುತ್ತದೆ.

● ಇಕೋ ಮೋಡ್ (Eco Mode): ರಜಾದಿನಗಳಂತಹ ಕಡಿಮೆ ಬಳಕೆಯ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಎಲ್ಲಾ ಇಂಟೆಲಿಜೆಂಟ್ ಮೋಡ್‌ಗಳು ಒಟ್ಟಾಗಿ ಗ್ರಾಹಕರಿಗೆ ತಮ್ಮ ಜೀವನಶೈಲಿಯ ಅಗತ್ಯಗಳಿಗೆ ಅನುಗುಣವಾಗಿ ಕೂಲಿಂಗ್, ಅನುಕೂಲತೆ ಮತ್ತು ವಿದ್ಯುತ್ ದಕ್ಷತೆಯನ್ನು ಅತ್ಯುತ್ತಮವಾಗಿಸಲು ನೆರವಾಗುತ್ತವೆ.

ಆಹಾರವನ್ನು ಉತ್ತಮವಾಗಿ ಸಂರಕ್ಷಿಸಲು ಸುಧಾರಿತ ಫ್ರೆಶ್‌ನೆಸ್ ತಂತ್ರಜ್ಞಾನಗಳು

ಆಹಾರದ ತಾಜಾತನ ಮತ್ತು ಪೋಷಕಾಂಶಗಳನ್ನು ಹೆಚ್ಚು ಕಾಲ ಕಾಪಾಡಲು ವಿನ್ಯಾಸಗೊಳಿಸ ಲಾದ ವರ್ಲ್‌ಪೂಲ್‌ನ ಸುಧಾರಿತ ತಂತ್ರಜ್ಞಾನಗಳನ್ನು ಈ ಹೊಸ ಶ್ರೇಣಿಯು ಒಳ ಗೊಂಡಿದೆ. ವಿಟಾಮ್ಯಾಜಿಕ್ ಮತ್ತು ಇಂಪ್ರೋ ಪ್ಲಸ್ ಎರಡೂ ರೆಫ್ರಿಜರೇಟರ್‌ಗಳು ಮೈಕ್ರೋಬ್ಲಾಕ್ ತಂತ್ರಜ್ಞಾನವನ್ನು (Microblock Technology) ಹೊಂದಿದ್ದು, ಇದು ಬ್ಯಾಕ್ಟೀರಿಯಾದ ಬೆಳವಣಿಗೆ ಯನ್ನು 99% ರಷ್ಟು ಸಕ್ರಿಯವಾಗಿ ತಡೆಯುತ್ತದೆ. ಜೊತೆಗೆ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಆಹಾರ ಸಂರಕ್ಷಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇಂಪ್ರೋ ಪ್ಲಸ್ ಶ್ರೇಣಿಯು 15 ದಿನಗಳವರೆಗೆ ಗಾರ್ಡನ್ ಫ್ರೆಶ್‌ನೆಸ್ ನೀಡಿದರೆ, ವಿಟಾಮ್ಯಾಜಿಕ್ ಶ್ರೇಣಿಯು 12 ದಿನಗಳವರೆಗೆ ಗಾರ್ಡನ್ ಫ್ರೆಶ್‌ನೆಸ್ ನೀಡುತ್ತದೆ. ಇದರಿಂದಾಗಿ ಮನೆಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಿನ ದಿನಗಳವರೆಗೆ ತಾಜಾವಾಗಿ ಸಂಗ್ರಹಿಸಿಡಬಹುದು.

ಇದರ ಜೊತೆಗೆ, ವಿಟಾಮ್ಯಾಜಿಕ್ ಶ್ರೇಣಿಯು ವರ್ಲ್‌ಪೂಲ್‌ನ ಪೇಟೆಂಟ್ ಪಡೆದ ಜಿಯೋಲೈಟ್ ತಂತ್ರಜ್ಞಾನವನ್ನು (Zeolite Technology) ಒಳಗೊಂಡಿದೆ. ಹಣ್ಣು ಮತ್ತು ತರಕಾರಿಗಳು ಬಿಡುಗಡೆ ಮಾಡುವ ಹೆಚ್ಚುವರಿ ಎಥಿಲೀನ್ ಅನಿಲವನ್ನು (ಇವು ಬೇಗನೆ ಮಾಗಲು/ಹಾಳಾಗಲು ಇದು ಮುಖ್ಯ ಕಾರಣ) ಇದು ಹೀರಿಕೊಳ್ಳುತ್ತದೆ. ಎಥಿಲೀನ್ ಮಟ್ಟವನ್ನು ನಿಯಂತ್ರಿಸುವ ಮೂಲಕ, ಈ ತಂತ್ರಜ್ಞಾನವು ತಾಜಾತನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ವಿಟಮಿನ್‌ ಗಳನ್ನು 40% ರಷ್ಟು ಹೆಚ್ಚು ಕಾಲ ಸಂರಕ್ಷಿಸುತ್ತದೆ.

ಬೆಲೆ ಮತ್ತು ಲಭ್ಯತೆ

ವಿಟಾಮ್ಯಾಜಿಕ್ ಮತ್ತು ಇಂಪ್ರೋ ಪ್ಲಸ್ ಒಳಗೊಂಡಂತೆ ಹೊಸ ‘ನೋ-ಟೆನ್ಶನ್ ರೆಫ್ರಿಜರೇಟರ್‌ಗಳು’ 192L ನಿಂದ 274L ವರೆಗಿನ ಸಾಮರ್ಥ್ಯಗಳಲ್ಲಿ ಲಭ್ಯವಿರುತ್ತವೆ. ಇವುಗಳ ಬೆಲೆ ₹17,700 ರಿಂದ ಪ್ರಾರಂಭವಾಗಲಿದ್ದು, ಭಾರತದಾದ್ಯಂತ ಪ್ರಮುಖ ರಿಟೇಲ್ ಮಳಿಗೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತವೆ. ವಿದ್ಯುತ್ ಉಳಿತಾಯದ ಕುರಿತಾದ ಗ್ರಾಹಕರ ಬೇಡಿಕೆ ಗಳನ್ನು ಪೂರೈಸುವ ನಿಟ್ಟಿನಲ್ಲಿ, ಈ ಶ್ರೇಣಿಯನ್ನು 2-ಸ್ಟಾರ್‌ನಿಂದ 5-ಸ್ಟಾರ್ ವರೆಗಿನ ಎನರ್ಜಿ ರೇಟಿಂಗ್‌ಗಳಲ್ಲಿ ನೀಡಲಾಗುತ್ತದೆ.