ಬೆಂಗಳೂರು: ಹಣದ (cash) ಮತ್ತೊಂದು ರೂಪವಾಗಿರುವ ಡಿಜಿಟಲ್ ಕರೆನ್ಸಿ (digital currency) ಎಂದರೆ ನಮ್ಮ ಜೇಬಿನಲ್ಲಿರುವ ಹಣ ಮೊಬೈಲ್ ವ್ಯಾಲೆಟ್ (Mobile wallet) ನಲ್ಲಿದ್ದಂತೆ. ಇದನ್ನು ಯಾವಾಗ, ಎಲ್ಲಿ ಬೇಕಾದರೂ ಅತ್ಯಂತ ಸುಲಭ ವಿಧಾನದ ಮೂಲಕ ಬಳಸಿಕೊಳ್ಳಬಹುದು. ದೈನಂದಿನ ವ್ಯವಹಾರಕ್ಕೆ ಬೇಕಾಗುವ ಚಿಲ್ಲರೆ, ಸಣ್ಣ ಮೊತ್ತದ ನಗದು ಇದರಲ್ಲಿ ಇಟ್ಟುಕೊಳ್ಳಬಹುದಾಗಿದೆ ಎಂದು ಬೆಂಗಳೂರಿನ (Bengaluru) ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಪ್ರೊಫೆಸರ್, ಹಣಕಾಸು ತಜ್ಞರಾದ ವಿನೋದ್ ಕೃಷ್ಣ (Vinod krishna) ತಿಳಿಸಿದ್ದಾರೆ.
'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಮೊದಲಿಗೆ ಡಿಜಿಟಲ್ ಕರೆನ್ಸಿಯ ಹಿನ್ನೆಲೆಯನ್ನು ವಿವರಿಸಿದರು.
ಮ್ಯೂಚುವಲ್ ಫಂಡ್‌ನಲ್ಲಿ ಕೋಟಿ ರೂ. ಗಳಿಸೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ
ಒಂದು ವಸ್ತುವನ್ನು ನೀಡಿ ಇನ್ನೊಂದು ವಸ್ತು ಪಡೆಯುವ ಬಾರ್ಟರ್ ಸಿಸ್ಟಮ್ ಮೊದಲು ಮಾರುಕಟ್ಟೆಯಲ್ಲಿ ಹಣದ ರೂಪವಾಗಿ ಬಳಸಲಾಗುತ್ತಿತ್ತು. ಬಳಿಕ ವಸ್ತುಗಳ ಮೌಲ್ಯವನ್ನು ನಿರ್ಣಯಿಸಲು ತಾಮ್ರ, ಬೆಳ್ಳಿ, ಚಿನ್ನದ ಲೋಹಗಳು, ಮೊಹರಿನ ಕಾಯಿನ್ ಗಳು ಬಂದವು. ಅನಂತರ ಬಂದಿರುವುದು ಪೇಪರ್ ಕರೆನ್ಸಿ. ಇದರ ಮುಂದುವರಿದ ರೂಪವೇ ಡಿಜಿಟಲ್ ಕರೆನ್ಸಿಯಾಗಿದೆ ಎಂದರು.
2008ರಲ್ಲಿ ಆದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಮೊದಲಿಗೆ ಡಿಜಿಟಲ್ ಕರೆನ್ಸಿಯಾಗಿ ಬಿಟ್ ಕಾಯಿನ್ ಬಳಕೆಗೆ ಬಂದಿತ್ತು. ಇದು ಕ್ರಿಪ್ಟೋ ಕರೆನ್ಸಿಯ ಮೂಲ ರೂಪವಾಗಿತ್ತು. ಇದು ಮಧ್ಯವರ್ತಿಗಳು, ಸರ್ಕಾರದ ಹಸ್ತಕ್ಷೇಪ ಇರಬಾರದು ಎನ್ನುವ ಉದ್ದೇಶಕ್ಕೆ ಬಂದಿದ್ದರೂ ಇದನ್ನು ಹೆಚ್ಚಾಗಿ ಬಳಕೆ ಮಾಡಿದ್ದು ಕ್ರಿಮಿನಲ್ಸ್ ಗಳು. ಹೀಗಾಗಿ ಡಿಜಿಟಲ್ ಕರೆನ್ಸಿಯ ಉದ್ದೇಶದ ಹಾದಿ ತಪ್ಪಲಾರಂಭಿಸಿತು ಎಂದರು.
ಬಿಟ್ ಕಾಯಿನ್ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ 2015ರಲ್ಲೇ 140ಕ್ಕೂ ಹೆಚ್ಚು ದೇಶಗಳು ಅವರದ್ದೇ ಆದಂತಹ ಡಿಜಿಟಲ್ ಕರೆ ಕರೆನ್ಸಿ ತರುವ ಯೋಜನೆ ಮಾಡಲಾರಂಭಿಸಿದವು. ಭಾರತದಲ್ಲಿ 2022ರಲ್ಲಿ ಸಿಬಿಡಿಸಿ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ) ತರಲಾಯಿತು ಎಂದು ತಿಳಿಸಿದರು.
ಸಿಬಿಡಿಸಿಯನ್ನೇ ಇ-ರುಪಿ ಎಂದು ಕರೆಯಲಾಗುತ್ತದೆ. ಸದ್ಯ ಇದನ್ನು 19 ಬ್ಯಾಂಕ್ ಗಳಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿ ನೋಟ್ ಬ್ಯಾನ್ ಆದ ಬಳಿಕ ಡಿಜಿಟಲೈಶನ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಇದರ ಪರಿಣಾಮ ಹುಟ್ಟಿಕೊಂಡಿದ್ದೇ ಯುಪಿಐ. ಇದು ಪಾವತಿ ಮಾಡಲು ಇರುವ ಸಾಧನವಾಗಿದೆ. ಆದರೆ ಇದು ಕರೆನ್ಸಿಯಲ್ಲ ಎಂದರು.
ಕರೆನ್ಸಿ ಎಂದೆನಿಸಿಕೊಳ್ಳಬೇಕಾದರೆ ಇಟ್ಟಿರುವ ಹಣಕ್ಕೆ ಮೌಲ್ಯ, ಖಾತೆಯಲ್ಲೊಂದು ವಿಭಾಗ, ಯಾವಾಗ ಬೇಕೋ ಆಗ ಹಣ ವರ್ಗಾವಣೆ ಅವಕಾಶ ಇರಬೇಕಾಗುತ್ತದೆ. ಆದರೆ ಯುಪಿಐಯಲ್ಲಿ ಇದು ಇಲ್ಲ. ಇಲ್ಲಿ ಕೇವಲ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ ಎಂದರು.
ಸಿಬಿಡಿಸಿ ಎಂಬುದು ಹಣವೇ ಆಗಿದೆ. ಇದರ ಮೌಲ್ಯಗಳನ್ನು ಆಯಾ ಬ್ಯಾಂಕ್ ವೆಬ್ ಸೈಟ್ ಗಳಲ್ಲಿ ನೋಡಬಹುದು. ಇದರೊಂದಿಗೆ ಇದೀಗ ಬ್ರಿಕ್ಸ್ ದೇಶಗಳು ದಿ ಯೂನಿಟ್ ಕರೆನ್ಸಿಯನ್ನು ತರುತ್ತಿದೆ. ಇದರಲ್ಲಿ ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ, ಸೌತ್ ಆಫ್ರಿಕಾ ಜೊತೆಗೆ ಇನ್ನು ಐದು ರಾಷ್ಟ್ರಗಳು ಇವೆ. ಈ ದೇಶಗಳು ವ್ಯಾಪಾರ ವಹಿವಾಟಿನಲ್ಲಿ ಡಾಲರ್ ಬದಲಿಗೆ ದಿ ಯೂನಿಟ್ ಕರೆನ್ಸಿಯನ್ನು ಬಳಸುತ್ತವೆ. ಇದರಲ್ಲಿ ಶೇ. 40 ಚಿನ್ನ ಮತ್ತು ಶೇ. 60ರಷ್ಟು ಆಯಾ ದೇಶಗಳು ಬಳಸುವ ಹಣದ ಆಧಾರದಲ್ಲಿ ಯುನಿಟ್ ಕರೆನ್ಸಿಯ ಮೌಲ್ಯವನ್ನು ನಿರ್ಧರಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಇ ರೂಪಿ ಹಣ ನಮ್ಮ ಜೇಬಿನಲ್ಲಿ ಹಣವಿದ್ದಂತೆ. ಆದರೆ ಇದನ್ನು ನಾವು ಬ್ಯಾಂಕ್ ನ ವ್ಯಾಲೆಟ್ ಇಟ್ಟಿರುತ್ತೇವೆ. ಇದರಲ್ಲಿ ಯಾವಾಗ ಬೇಕೋ ಆಗ ಹಣ ತುಂಬಬಹುದು ಮತ್ತು ತೆಗೆಯಬಹುದಾಗಿದೆ. ಆದರೆ ಇದಕ್ಕೆ ಬ್ಯಾಂಕ್ ನಿಂದ ಯಾವುದೇ ಬಡ್ಡಿ ಸಿಗುವುದಿಲ್ಲ. ಜೇಬಿನಲ್ಲಿರುವ ಹಣ ಸುರಕ್ಷಿತವಾಗಿರುವುದಿಲ್ಲ. ಆದರೆ ಡಿಜಿಟಲ್ ಕರೆನ್ಸಿ ಅತ್ಯಂತ ಸುರಕ್ಷಿತವಾಗಿದೆ. ಇಲ್ಲಿ ಮೊಬೈಲ್ ಕಳೆದು ಹೋದರೂ ಹಣ ಕಳೆದುಹೋಗುವುದಿಲ್ಲ ಎಂದು ಅವರು ಹೇಳಿದರು.
ಡಿಜಿಟಲ್ ಕರೆನ್ಸಿಯು ಮೊಬೈಲ್ ಅನ್ನು ಆಧರಿಸಿಲ್ಲ. ಹೀಗಾಗಿ ಮೊಬೈಲ್ ಕಳೆದು ಹೋದ ಮೇಲೆ ಬ್ಲಾಕ್ ಮಾಡಿ ಹೊಸ ಸಿಮ್ ಪಡೆದಾಗ ಮರಳಿ ಪಡೆಯುವ ಅವಕಾಶವಿರುತ್ತದೆ. ಸದ್ಯ ಡಿಜಿಟಲ್ ಕರೆನ್ಸಿಯಲ್ಲಿ ಎಷ್ಟು ಗರಿಷ್ಠ ಹಣ ಇಡಬಹುದು ಎನ್ನುವ ನಿರ್ಧಾರ ಮಾಡಲಾಗಿಲ್ಲ ಎಂದು ಅವರು ತಿಳಿಸಿದರು.
ಎನ್‌ಎಸ್‌ಇ ಮತ್ತು ಮುಂಬೈ ಕ್ಲೈಮೆಟ್ ವೀಕ್ ಸಹಯೋಗದಲ್ಲಿ ಎಮ್‌ಸಿಡಬ್ಲ್ಯೂ 2026 ಇನ್ನೊವೇಶನ್ ಚ್ಯಾಲೆಂಜ್
ಯುಪಿಐ ಕ್ಯೂಆರ್ ಕೋಡ್ ಗೂ ಇ ರುಪಿಯನ್ನು ಸೇರಿಸಿರುವುದರಿಂದ ಇಲ್ಲಿ ಹಣವನ್ನು ಅತ್ಯಂತ ಸುಲಭವಾಗಿ ವರ್ಗಾವಣೆ ಮತ್ತು ಪಡೆದುಕೊಳ್ಳುವ ಅವಕಾಶವಿದೆ. ಇ ರುಪಿಯು ರಿಟೈಲ್ ಮತ್ತು ಹೋಲ್ ಸೇಲ್ ರೂಪದಲ್ಲಿ ಲಭ್ಯವಿರುವುದರಿಂದ ಯಾರಿಗೆ ಯಾವುದು ಅವಶ್ಯಕತೆ ಇದೆ ಅದನ್ನು ಬಳಸಬಹುದಾಗಿದೆ ಎಂದರು.