ಬೆಂಗಳೂರು, ಏ. 23: ಕೃತಕ ಬುದ್ದಿಮತ್ತೆಯು (Artificial intelligence) ಉದ್ಯೋಗ ಕ್ಷೇತ್ರದಲ್ಲಿ ಇವತ್ತು ಉದ್ಯೋಗ ಕಳೆದು ಹೋಗಲಿದೆ ಎನ್ನುವ ಆತಂಕವನ್ನು ಉಂಟು ಮಾಡಿದೆ. ಆದರೆ ಇದರಿಂದ ಅಪಾಯಕ್ಕಿಂತಲೂ ಹೆಚ್ಚು ಲಾಭವಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎನ್ನುತ್ತಾರೆ ಖ್ಯಾತ ಹೂಡಿಕೆ ತಜ್ಞ ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ (Founder of cautilya Capital) ಅಶೋಕ್ ದೇವನಾಂಪ್ರಿಯ. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಉದ್ಯೋಗ ಕ್ಷೇತ್ರದ ಮೇಲೆ ಎಐ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಪ್ರತಿಯೊಂದು ಸೆಕ್ಟರ್ ಮೇಲೂ ಎಐ ಪರಿಣಾಮ ಬೀರುತ್ತದೆ. ಆದರೆ ಇದು ಯಾವ ರೀತಿಯ ಪರಿಣಾಮ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ಯಾಕೆಂದರೆ ಇದು ನಷ್ಟಕ್ಕಿಂತ ಹೆಚ್ಚು ಲಾಭವನ್ನೇ ಅನೇಕ ವಿಭಾಗಗಳಿಗೆ ಕೊಡಲಿದೆ ಎಂದು ಅವರು ಹೇಳಿದರು.
ವಿಡಿಯೊ ಇಲ್ಲಿದೆ:
ಎಐಯು ಕೇರ್ ಟೇಕಿಂಗ್ ವಿಭಾಗವಾದ ಆಸ್ಪತ್ರೆಗಳಿಗೆ ಬಂದರೆ ಅಲ್ಲಿರುವ ಹಲವು ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಅಲ್ಲಿರುವ ತಂತ್ರಜ್ಞಾನವನ್ನು ಅದು ಉತ್ತಮಗೊಳಿಸುತ್ತದೆ. ಇದು ಎಲ್ಲರಿಗೂ ಒಳ್ಳೆಯದು. ಅಪರೇಷನ್, ರೂಟಿನ್ ರಿಪೀಟ್ ಟೆಸ್ಟ್ ಗಳು ಇದರಿಂದ ಕಡಿಮೆಯಾಗುತ್ತದೆ. ಹೆಲ್ತ್ ಕೇರ್ ವಿಭಾಗದಲ್ಲಿ ಕೃತಕ ಬುದ್ದಿ ಮತ್ತೆಯು ಉದ್ಯೋಗ ಕಡಿತ ಮಾಡಲ್ಲ. ಬದಲಿಗೆ ಉತ್ತಮ ಚಿಕಿತ್ಸೆಗಾಗಿ ಅಲ್ಲಿರುವ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಎಲ್ಲರಿಗೂ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಇನ್ನು ಹೊಟೇಲ್, ರೆಸ್ಟೋರೆಂಟ್ ಗಳ ಮೇಲೂ ಎಐ ಅಷ್ಟಾಗಿ ಪರಿಣಾಮ ಬೀರುವುದಿಲ್ಲ.ಅಲ್ಲಿನ ಸಣ್ಣ ಪುಟ್ಟ ಕೆಲಸಗಳನ್ನು ಕೃತಕ ಬುದ್ದಿ ಮತ್ತೆಯಿಂದ ನಿರ್ವಹಿಸಬಹುದು. ರೋಬೋಟ್ ಕೆಲಸದ ವೇಗ ಹೆಚ್ಚಿಸಬಹುದು. ಆದರೆ ಅತ್ಯುತ್ತಮ ಸೇವೆ ನೀಡಲು ಮನುಷ್ಯರ ಅವಶ್ಯಕತೆ ಖಂಡಿತ ಇರುತ್ತದೆ ಎಂದರು.
ಎಐ ನಿರ್ವಹಣೆ ವೆಚ್ಚದ ಬಗ್ಗೆ ಇವತ್ತು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಎಲ್ಲ ಕೆಲಸಗಳನ್ನು ರೋಬೋಟ್ ಮಾಡುವುದು ಅಸಾಧ್ಯ. ಮುಖ್ಯವಾಗಿ ಡಿಸೈನಿಂಗ್, ಕ್ರಿಯೇಟಿವಿಟಿ, ಕನ್ಸ್ಟ್ರಕ್ಟನ್ ನಲ್ಲಿರುವ ವಿಶೇಷ ಸ್ಕಿಲ್ ಗಳನ್ನು ಎಐ ಮಾಡೋಕೆ ಸಾಧ್ಯವಿಲ್ಲ. ಆದರೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದರು.
ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಸರ್ಕಾರಿ ಉದ್ಯೋಗ, ರಾಜ್ಯ ಉದ್ಯೋಗ, ವಿಮಾನಯಾನ, ರೈಲ್ವೇಯಾನದಲ್ಲಿ ಸಾಕಷ್ಟು ಸೇವೆಗಳನ್ನು ನಾವು ಎಐನಿಂದ ಪಡೆಯಲು ಸಾಧ್ಯವಿಲ್ಲ.ಇದು ಸಾಕಷ್ಟು ಸಮಯವನ್ನು ಉಳಿತಾಯ ಮಾಡಿಕೊಡಲಿದೆ. ಇದರಿಂದ ಎಲ್ಲರಿಗೂ ಪ್ರಯೋಜನ ಸಿಗುತ್ತದೆ ಎಂದು ಅಶೋಕ್ ದೇವನಾಂಪ್ರಿಯ ವಿವರಿಸಿದರು.
ಕೃತಕ ಬುದ್ದಿ ಮತ್ತೆಯು ಐಟಿ ಇಂಡಸ್ಟ್ರಿಗೆ ಮಾತ್ರ ಇದು ತೊಂದರೆ ಕೊಟ್ಟಿದೆ. ಯಾಕೆಂದರೆ ಅವರ ಆದಾಯ ಗಗನಕ್ಕೇರಿದೆ. ಇಲ್ಲಿ ಎಐ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುವುದರಿಂದ ಐಟಿ ಸೆಕ್ಟರ್ ಗೆ ಸಾಕಷ್ಟು ಲಾಭ ಕೊಡುತ್ತದೆ. ಐಟಿ ಉದ್ಯೋಗಿಗಳ ಆದಾಯ ಕಡಿತದ ಪರಿಣಾಮ ಬೇರೆಬೇರೆ ಸೆಕ್ಟರ್ ಮೇಲೆ ಬೀಳಲಿದೆ. ಇದಕ್ಕೆ ಹೊಂದಿಕೊಳ್ಳಲು ಮಾರುಕಟ್ಟೆಯಲ್ಲಿ ಕೆಲವು ಕಾಲ ಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು.
ಐಟಿ ಉದ್ಯೋಗಿಗಳು ಕಡಿಮೆಯಾದಾಗ ಅಥವಾ ಅವರ ಆದಾಯ ಕಡಿಮೆಯಾದಾಗ ಅದರ ಪರಿಣಾಮ ಹೊಟೇಲ್, ರೆಸ್ಟೋರೆಂಟ್, ವಾಹನ ಕಂಪೆನಿಗಳು, ಆಸ್ತಿ ಖರೀದಿ ಸಂಬಂಧಿಸಿದ ವ್ಯವಹಾರಗಳ ಮೇಲೆ ಪರಿಣಾಮ ಹೆಚ್ಚಾಗಿ ಬೀಳುತ್ತದೆ. ಹೀಗಾಗಿ ಈಗ ಉದ್ಯೋಗದಲ್ಲಿರುವವರು ತಮ್ಮ ಉದ್ಯೋಗ ಉಳಿಸಿಕೊಳ್ಳುವ ಸಲುವಾಗಿ ಅಪ್ಡೇಟ್ ಆಗಬೇಕಿದೆ. ಇದು ೩೫- ೪೫ ವರ್ಷದವರಿಗೆ ಹೆಚ್ಚಿನ ಸಮಸ್ಯೆ ಉಂಟು ಮಾಡುತ್ತದೆ. ಯಾರು ಹೂಡಿಕೆ ಮಾಡಿದ್ದರೋ ಅವರೆಲ್ಲ ಆರಾಮವಾಗಿ ಇರುತ್ತಾರೆ. ಪರ್ಸನಲ್ ಫೈನಾನ್ಸ್ ಅನ್ನು ಚೆನ್ನಾಗಿ ಇಟ್ಟುಕೊಳ್ಳದವರು ತುಂಬಾ ತೊಂದರೆ ಅನುಭವಿಸುತ್ತಾರೆ ಎಂದು ತಿಳಿಸಿದರು.
ಅನ್ ಲಿಸ್ಟೆಡ್ ಸ್ಟಾಕ್ ಮೇಲೆ ಹೂಡಿಕೆ ಮಾಡುವಾಗ ಇರಲಿ ಎಚ್ಚರ
ಎಐನಿಂದ ನಷ್ಟ ತುಂಬಾ ಕಡಿಮೆ ಜನರಿಗೆ, ಆದರೆ ಲಾಭ ಹೆಚ್ಚು ಜನರಿಗೆ ಸಿಗುತ್ತದೆ ಎಂದ ಅಶೋಕ್ ದೇವಾನಾಂಪ್ರಿಯ, ಐಟಿ ಎನ್ನುವುದು ಒಂದು ಕಾಲದಲ್ಲಿ ವಿಐಪಿ ಇಂಡಸ್ಟ್ರಿ ಎನ್ನುವ ಕಲ್ಪನೆ ಇತ್ತು. ಅದು ಈಗ ಕಡಿಮೆಯಾಗುತ್ತಿದೆ ಎಂದು ಹೇಳಿದರು.