ಕಾನ್ಪುರ, ಜ.08: 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರದ ಭಯಾನಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ (Kanpur) ನಡೆದಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ಕಾಪಾಡಬೇಕಾದ ಆರಕ್ಷಕನೇ ರಕ್ಕಸನಾಗಿ ಬದಲಾಗಿದ್ದಾನೆ. ಅಂದರೆ, ಈ ಅತ್ಯಾಚಾರದಲ್ಲಿ ಪೊಲೀಸ್ ಕೂಡ ಭಾಗಿಯಾಗಿದ್ದಾರೆ. ಯುವಕನೊಬ್ಬನೊಂದಿಗೆ ಸೇರಿ ಪೊಲೀಸ್ ಅಧಿಕಾರಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿ ಎರಡು ಗಂಟೆಗಳ ಕಾಲ ಅತ್ಯಾಚಾರ ಮಾಡಿ, ನಂತರ ಆಕೆಯ ಮನೆಯ ಬಳಿ ಎಸೆದು ಪರಾರಿಯಾಗಿದ್ದಾರೆ. ಸಚೇಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ (Crime News).
ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪೊಲೀಸ್ ತನಿಖೆಯಲ್ಲಿ ಇನ್ಸ್‌ಪೆಕ್ಟರ್ ಅಮಿತ್ ಮೌರ್ಯ ಭಾಗಿಯಾಗಿರುವುದು ದೃಢಪಟ್ಟಿದೆ. ಅಧಿಕಾರಿ ಮತ್ತು ಯುವಕ ಶಿವಬರನ್, ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಭೀಮ್‌ಸೇನ್ ಹೊರಠಾಣೆ ಉಸ್ತುವಾರಿ ವಹಿಸಿರುವ ಆರೋಪಿ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಪ್ರಸ್ತುತ ಪರಾರಿಯಾಗಿದ್ದಾರೆ.
Self Harming: ಹೆಂಡತಿ ಇದ್ದರೂ ತಂಗಿಯ ಸಂಗ ಬೆಳೆಸಿದ ಅಣ್ಣ, ಸಂಬಂಧ ದುರಂತದಲ್ಲಿ ಕೊನೆ
ಸಚೆಂಡಿ ಪೊಲೀಸ್ ಠಾಣೆ ಉಸ್ತುವಾರಿ ವಿಕ್ರಮ್ ಸಿಂಗ್ ಅವರಿಗೂ ಎಫ್‌ಐಆರ್ ದಾಖಲಿಸದಿದ್ದಕ್ಕಾಗಿ ಶಿಕ್ಷೆ ವಿಧಿಸಲಾಗಿದೆ. ಠಾಣೆ ಉಸ್ತುವಾರಿ ಪಾತ್ರವೂ ಪ್ರಶ್ನಾರ್ಹವಾಗಿದ್ದು, ಠಾಣೆ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ. ಮತ್ತೊಬ್ಬ ಆರೋಪಿ ಶಿವಬರನ್‍ನನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಇನ್ಸ್‌ಪೆಕ್ಟರ್ ಅಮಿತ್ ಮೌರ್ಯ ಅವರನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಆತನ ಬಂಧನದ ನಂತರ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತೆಯು ಆರೋಪಿ ಇನ್ಸ್‌ಪೆಕ್ಟರ್ ಅನ್ನು ಗುರುತಿಸಿದ್ದರೂ, ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.
ಬಾಲಕಿಯ ಕುಟುಂಬವು ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಸಹೋದರಿ ಮನೆಯಿಂದ ಹೊರಗೆ ಹೋದಾಗ ಸ್ಕಾರ್ಪಿಯೋ ಮತ್ತು ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ವಾಹನಕ್ಕೆ ಎಳೆದುಕೊಂಡು ಹೋದರು. ಇಬ್ಬರು ಆರೋಪಿಗಳು ಆಕೆಯನ್ನು ಸಚೇಡಿ ಪ್ರದೇಶದ ನಿರ್ಜನ ಸ್ಥಳಕ್ಕೆ ಕರೆದೊಯ್ದು, ಸ್ಕಾರ್ಪಿಯೋ ಒಳಗೆ ಅತ್ಯಾಚಾರ ಎಸಗಿದರು. ಆರೋಪಿಗಳಲ್ಲಿ ಒಬ್ಬ ಪೊಲೀಸ್ ಕೂಡ ಸೇರಿದ್ದಾರೆ ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ಸಂತ್ರಸ್ತೆಯನ್ನು ಕಾರಿನಲ್ಲಿಯೇ ಇಟ್ಟುಕೊಂಡು, ನಂತರ ಅವರು ಆಕೆಯ ಮನೆಯ ಬಳಿ ಎಸೆದು ಹೋಗಿದ್ದರು. ಸಂತ್ರಸ್ತೆ ತನ್ನ ಸಹೋದರನಿಗೆ ನಡೆದ ಘಟನೆಯನ್ನು ವಿವರಿಸಿದ್ದು, ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.
Self Harming: ಇನ್ನೊಬ್ಬ ಪೇದೆಯಿಂದ ಕಿರುಕುಳ, ಪೊಲೀಸ್ ಪೇದೆ ಆತ್ಮಹತ್ಯೆ
ಸುಮಾರು ಎರಡು ಗಂಟೆಗಳ ಕಾಲ ಸಂತ್ರಸ್ತೆಯನ್ನು ಕಾರಿನಲ್ಲಿಯೇ ಇಟ್ಟುಕೊಂಡು, ನಂತರ ಅವರು ಆಕೆಯ ಮನೆಯ ಬಳಿ ಎಸೆದು ಹೋಗಿದ್ದರು. ಸಂತ್ರಸ್ತೆ ತನ್ನ ಸಹೋದರನಿಗೆ ನಡೆದ ಘಟನೆಯನ್ನು ವಿವರಿಸಿದ್ದು, ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದಾಗ, ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಮತ್ತು ಅವರನ್ನು ಪೊಲೀಸ್ ಠಾಣೆಯಿಂದ ವಾಪಸ್ ಕಳುಹಿಸಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ತಿಳಿಸಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಅಶುತೋಷ್ ಕುಮಾರ್ ಹೇಳಿದ್ದಾರೆ.