ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sand Mining: ಹರಳಹಳ್ಳಿ ಬಳಿ 146 ಮೆಟ್ರಿಕ್ ಟನ್ ಮರಳು ಜಪ್ತಿ: ಮರಳು ಸಾಗಿಸಲು ವಾಹನಗಳಿಲ್ಲದೆ ರಾತ್ರಿಯಿಡೀ ನದಿತೀರದಲ್ಲೇ ಬೀಡುಬಿಟ್ಟ ಅಧಿಕಾರಿಗಳು

ನದಿತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಅ.9ರಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಅಧಿಕಾರಿಗಳು ಸ್ಥಳಕ್ಕೆ ತೆರಳು ತ್ತಿದ್ದಂತೆ ಮರಳು ಸಂಗ್ರಹಿಸಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಮರಳು ಸಂಗ್ರಹಿಸಿದವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಹಾವೇರಿ: ತಾಲೂಕಿನ ಗುತ್ತಲ ಹೋಬಳಿಯ ಹರಳಹಳ್ಳಿ ಗ್ರಾಮದ ಸಮೀಪ ತುಂಗಭದ್ರಾ ನದಿತೀರ ದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 146 ಮೆಟ್ರಿಕ್ ಟನ್ ಮರಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಅ.9ರಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಅಧಿಕಾರಿಗಳು ಸ್ಥಳಕ್ಕೆ ತೆರಳು ತ್ತಿದ್ದಂತೆ ಮರಳು ಸಂಗ್ರಹಿಸಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಮರಳು ಸಂಗ್ರಹಿಸಿ ದವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಹಾವೇರಿ ತಹಸೀಲ್ದಾರ್ ಶರಣಮ್ಮ ಅವರ ನೇತೃತ್ವದಲ್ಲಿ ಗುತ್ತಲ ಹೋಬಳಿಯ ಕಂದಾಯ ನಿರೀಕ್ಷಕ ರವೀಂದ್ರ ಮಲ್ಲಾಡದ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಪ್ರಕಾಶ್ ಉಜ್ಜಿನಿ, ಹೊನ್ನಪ್ಪ, ಪ್ರಶಾಂತ್, ವೀರೇಶ್, ಲಿಂಗರಾಜ ಮತ್ತು ವಿನಾಯಕ ಅವರ ತಂಡ ಅ.9ರ ಬೆಳಿಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ನಡೆಸಿತು.

ಇದನ್ನೂ ಓದಿ: Sand Mining: ಮರಳು ದಂಧೆ: ಬರಿದಾಗುತ್ತಿದೆ ಕೃಷ್ಣೆಯ ಒಡಲು

ಜಪ್ತಿ ಮಾಡಿದ ಮರಳನ್ನು ಸಾಗಿಸಲು ತಕ್ಷಣ ಟಿಪ್ಪರ್, ಲಾರಿ ಹಾಗೂ ಜೆಸಿಬಿ ಯಂತ್ರಗಳು ಲಭ್ಯ ವಾಗದ ಕಾರಣ ಅಧಿಕಾರಿಗಳು ರಾತ್ರಿಯಿಡೀ ನದಿತೀರದಲ್ಲೇ ಬೀಡುಬಿಟ್ಟು ಮರಳಿನ ಮೇಲೆ ನಿಗಾ ವಹಿಸಿದರು. ಬಳಿಕ ಅ.10ರಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಎರಡು ಜೆಸಿಬಿ ಯಂತ್ರಗಳು ಹಾಗೂ ಎರಡು ಲಾರಿಗಳ ನೆರವಿನಿಂದ ಮರಳನ್ನು ಸಾಗಿಸಿ ಪೊಲೀಸ್ ಸುಪರ್ದಿಗೆ ಒಪ್ಪಿಸ ಲಾಯಿತು.

ಮರಳು ಸಾಗಣೆ ತಡೆಯಲು ರಸ್ತೆಗಳಿಗೆ ಕಂದಕ: ನದಿತೀರದಿಂದ ಮತ್ತೆ ಅಕ್ರಮವಾಗಿ ಮರಳು ಸಾಗಣೆ(Sand Mining) ನಡೆಯದಂತೆ ತಡೆಯುವ ಉದ್ದೇಶದಿಂದ ಮರಳು ಸಾಗಿಸುವ ರಸ್ತೆಗಳಲ್ಲಿ ಕಂದಕಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಕರಿಸಿದರು.