ಬಿಹಾರ: ಆಸ್ತಿ ವಿವಾದ ಪ್ರಕರಣಕ್ಕೆ ( property dispute case) ಸಂಬಂಧಿಸಿ ಬಿಹಾರ ಸಂಸದ (Bihar MP) ಪಪ್ಪು ಯಾದವ್ (MP Pappu Yadav) ಅವರನ್ನು ಶುಕ್ರವಾರ ಬಂಧಿಸಲಾಗಿದೆ. ವಿನೋದ್ ಬಿಹಾರಿ ಲಾಲ್ ಅವರು 1995ರ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಪಪ್ಪು ಯಾದವ್ ವಿರುದ್ಧ ಗಾರ್ಡಾನಿಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗಲು ಪದೇಪದೇ ಪಪ್ಪು ಯಾದವ್ ಗೈರು ಹಾಜರಾಗಿದ್ದರಿಂದ ಅವರ ಬಂಧನಕ್ಕೆ ನ್ಯಾಯಾಲಯವು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ಅವರನ್ನು ಪಾಟ್ನಾದ ಮನೆಯಿಂದ ಬಂಧಿಸಿದರು.
ವಿನೋದ್ ಬಿಹಾರಿ ಲಾಲ್ ಎಂಬವರು ನೀಡಿರುವ ದೂರಿನಲ್ಲಿ ಪಪ್ಪು ಯಾದವ್ ಅವರು ತಮ್ಮ ಮನೆಯನ್ನು ವಂಚನೆಯ ಮೂಲಕ ಬಾಡಿಗೆಗೆ ಪಡೆದು ಬಳಿಕ ಅದನ್ನು ಸಂಸತ್ ಸದಸ್ಯ ಕಚೇರಿಯಾಗಿ ಮಾಡಿಕೊಂಡಿದ್ದಾರೆ. ಒಪ್ಪಂದದ ವೇಳೆ ಅವರು ಇದನ್ನು ಮರೆಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಗ್ನಿ-3 ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತ; 3500 ಕಿ.ಮೀಟರ್‌ವರೆಗೆ ನಿಖರ ದಾಳಿ ಸಾಮರ್ಥ್ಯ
ಈ ಕುರಿತು ವಿಚಾರಣೆಗೆ ಪದೇ ಪದೇ ಪಪ್ಪು ಯಾದವ್ ಗೈರುಹಾಜರಾದ ಕಾರಣ ನ್ಯಾಯಾಲಯವು ಈ ಹಿಂದೆ ಬಂಧನದ ವಾರಂಟ್ ಹೊರಡಿಸಿ ಆರೋಪಿಯ ವಶದಲ್ಲಿರುವ ನಿವಾಸಗಳಲ್ಲಿ ನೊಟೀಸ್ ಅಂಟಿಸುವಂತೆ ನಿರ್ದೇಶನ ನೀಡಿತ್ತು. ಈ ಬಳಿಕವೂ ಪಪ್ಪು ಯಾದವ್ ಮತ್ತು ಇತರ ಆರೋಪಿಗಳು ಯಾರೂ ಕೂಡ ನ್ಯಾಯಾಲಯಕ್ಕೆ ಹಾಜರಾಗದ ಇದ್ದುದರಿಂದ ನ್ಯಾಯಾಲಯವು ಪಪ್ಪು ಯಾದವ್ ಮತ್ತು ಇತರ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಬಂಧಿಸಲು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ 31 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಪೊಲೀಸರು ಶುಕ್ರವಾರ ಪಪ್ಪು ಯಾದವ್ ಅವರನ್ನು ಬಂಧಿಸಿದ್ದಾರೆ.
ಬಂಧನಕ್ಕೂ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪಪ್ಪು ಯಾದವ್, ಇದು ರಾಜಕೀಯ ಪ್ರೇರಿತವಾಗಿದೆ ಮತ್ತು ನೀಟ್ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿರುವುದಕ್ಕೆ ತಮ್ಮನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
ನೀಟ್ ಆಕಾಂಕ್ಷಿಗಳಿಗಾಗಿ ಧ್ವನಿ ಎತ್ತಿದ್ದಕ್ಕಾಗಿ ಬಿಹಾರ ಪೊಲೀಸರು ತಮ್ಮ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ತಾವು ಯಾರಿಗೂ ತಲೆಬಾಗುವುದಿಲ್ಲ ಜೈಲು ಶಿಕ್ಷೆಯಾದರೂ ಸರಿ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಹಿಟ್ & ರನ್‌ಗೆ ವ್ಯಕ್ತಿ ಬಲಿ, 11 ಗಂಟೆ ರಸ್ತೆಯಲ್ಲೇ ಬಿದ್ದಿತ್ತು ಶವ
ಈ ಕುರಿತು ಮಾಹಿತಿ ನೀಡಿರುವ ಪಾಟ್ನಾ ಎಸ್ಪಿ ನಗರ ಭಾನು ಪ್ರತಾಪ್ ಸಿಂಗ್, 1995ರ ಪ್ರಕರಣಕ್ಕೆ ಸಂಬಂಧಿಸಿ ಪೂರ್ನಿಯಾ ಸಂಸದ ಪಪ್ಪು ಯಾದವ್ ವಿರುದ್ಧ ಹಳೆಯ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದು ಈಗ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಅಡಿಯಲ್ಲಿ ಬದಲಾಯಿಸಲಾಗಿದೆ. ಪ್ರಕರಣವು ಸೆಕ್ಷನ್ 419, 420, 468, 448, 506 ಮತ್ತು 120 ಬಿ ಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಪಪ್ಪು ಯಾದವ್ ಅವರಿಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲಾಗಿದೆ. ಆರೈಕೆದಾರರು ಅವರ ಜೊತೆಗಿದ್ದಾರೆ. ಸಂಸದರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಅವರು ಹೇಳಿದರು.