ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೋಯ್ಡಾದಲ್ಲಿ ಗುಂಡಿಗೆ ಮತ್ತೊಂದು ಸಾವು; ಆಟವಾಡುತ್ತಿದ್ದ ಮೂರು ವರ್ಷದ ಬಾಲಕ ಜೀವ ತೆಗೆದ ಅವೈಜ್ಞಾನಿಕ ಕಾಮಗಾರಿ

Nodia: ಗ್ರೇಟರ್ ನೋಯ್ಡಾದ ದಲೇಲ್‌ಗಢ ಗ್ರಾಮದಲ್ಲಿ ನೀರು ತುಂಬಿದ ಗುಂಡಿಯಲ್ಲಿ ಮುಳುಗಿ ಮೂರು ವರ್ಷದ ಬಾಲಕ ಧಾರುಣವಾಗಿ ಸಾವನ್ನಪ್ಪಿದ್ದಾನೆ. ದೆಹಲಿ-ಎನ್‌ಸಿಆರ್‌ನಾದ್ಯಂತ ಗುಂಡಿಗಳನ್ನು ಅವೈಜ್ಞಾನಿಕವಾಗಿ ತೋಡಿದ್ದು, ಈಗಾಗಲೇ ಹಲವರು ಈ ಗುಂಡಿಗಳಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಸಂಗ್ರಹ ಚಿತ್ರ

ನೋಯ್ಡಾ: ಗ್ರೇಟರ್ ನೋಯ್ಡಾದ ದಲೇಲ್‌ಗಢ ಗ್ರಾಮದಲ್ಲಿ ನೀರು ತುಂಬಿದ ಗುಂಡಿಯಲ್ಲಿ ಮುಳುಗಿ ಮೂರು ವರ್ಷದ ಬಾಲಕ ಧಾರುಣವಾಗಿ ಸಾವನ್ನಪ್ಪಿದ್ದಾನೆ. ದೆಹಲಿ-ಎನ್‌ಸಿಆರ್‌ನಾದ್ಯಂತ ಗುಂಡಿಗಳನ್ನು ಅವೈಜ್ಞಾನಿಕವಾಗಿ ತೋಡಿದ್ದು, ಈಗಾಗಲೇ ಹಲವರು ಈ ಗುಂಡಿಗಳಿಗೆ ಬಲಿಯಾಗಿದ್ದಾರೆ. ಶನಿವಾರ ದಂಕೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೇವಾಂಶ್ ಎಂದು ಗುರುತಿಸಲಾದ ಮಗು, ದೇವಾಲಯದ ಬಳಿ ಮಳೆನೀರು ತುಂಬಿದ ಆಳವಾದ ಗುಂಡಿಗೆ ಬಿದ್ದಿದ್ದು, ಅಲ್ಲಿ ಸಾಮುದಾಯಿಕ ಹಬ್ಬ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಸ್ಥಳೀಯ ವರದಿಗಳ ಪ್ರಕಾರ, ಆ ಬಾಲಕ ಇತ್ತೀಚೆಗೆ ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್‌ನಿಂದ ತನ್ನ ತಂದೆ ಅನಿಲ್ ಜೊತೆ ಸಂಬಂಧಿಕರನ್ನು ಭೇಟಿ ಮಾಡಲು ಗ್ರಾಮಕ್ಕೆ ಬಂದಿದ್ದ. ಮಗುವು ಜನಸಮೂಹದ ಬಳಿ ಆಟವಾಡುತ್ತಿದ್ದಾಗ, ಹೊಂಡಕ್ಕೆ ಜಾರಿ ಬಿದ್ದಿದೆ. ಮಾಹಿತಿ ತಿಳಿದು ರಕ್ಷಣೆಗೆ ಧಾವಿಸುವ ಮುನ್ನವೇ ಬಾಲಕ ಮೃತಪಟ್ಟಿದ್ದಾನೆ. ಕುಟುಂಬಸ್ಥರು ಮಗುವನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ.

ಸದ್ಯ ಘಟನೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಅಪಾಯಕಾರಿ ಹೊಂಡಗಳನ್ನು ನಿರ್ಮಿಸಿ ಬೇಲಿ, ಬ್ಯಾರಿಕೇಡಿಂಗ್ ಅಥವಾ ಎಚ್ಚರಿಕೆ ಫಲಕಗಳು ಹಾಕದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಪಾಯಕಾರಿ ಸ್ಥಳದ ಬಗ್ಗೆ ಗ್ರೇಟರ್ ನೋಯ್ಡಾ ಪ್ರಾಧಿಕಾರಕ್ಕೆ ಪದೇ ಪದೇ ದೂರು ನೀಡಿದ್ದರೂ, ಯಾವುದೇ ತಡೆಗಟ್ಟುವ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಜನರಲ್ ಮ್ಯಾನೇಜರ್ ಎ.ಕೆ. ಸಿಂಗ್, ಮಾಹಿತಿ ಪಡೆದ ನಂತರ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದರು, ಆದರೆ ಜಲಮೂಲವು ಖಾಸಗಿ ಒಡೆತನದ್ದಾಗಿರುವುದರಿಂದ ಆಡಳಿತವು ನೇರ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಪರಿಶೀಲನೆಯಲ್ಲಿ ಗುಂಡಿಗಳು ಖಾಸಗಿ ಮಾಲೀಕರಾದ ಗಂಗಾರಾಮ್ ಮತ್ತು ಧರ್ಮವೀರ್ ಅವರಿಗೆ ಸೇರಿದ್ದು, ಅದನ್ನು ಖಾಸಗಿ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು. ಇದರಿಂದಾಗಿ, ಆಡಳಿತವು ಯಾವುದೇ ನೇರ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಮಗುವಿನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದರು.

ಬಿಕ್ಲು ಶಿವ ಕೊಲೆ ಕೇಸ್‌; ಬಿಜೆಪಿ ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ

ಜನವರಿಯಲ್ಲಿ, ನೋಯ್ಡಾದ ಸೆಕ್ಟರ್ 150 ರಲ್ಲಿ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಕಾರು ನೀರು ತುಂಬಿದ ನಿರ್ಮಾಣ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದರು. ಬಳಿಕ ಯುವಕನೊಬ್ಬ ಸಾವನ್ನಪ್ಪಿದ್ದ.

Vishakha Bhat Heggar

View all posts by this author