ಕೋಲ್ಕತ್ತಾ: ಒಟ್ಟಿಗೆ ಜೋಡಿಸಲಾದ 31 ಜೀವಂತ ಬಾಂಬ್‌ಗಳು (Bomb threat) ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (west bengal) ನಡೆದಿದೆ. ಬಂಗಾಳದ ಬಿರ್ಭುಮ್ (Birbhum) ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಬಾಂಬ್ ಅನ್ನು ನೋಡಿದ ಸ್ಥಳೀಯರು ಈ ಕುರಿತು ಪೊಲೀಸರಿಗೆ (west bengal police) ಮಾಹಿತಿ ನೀಡಿದ್ದಾರೆ. ಜೀವಂತ ಬಾಂಬ್ ಗಳನ್ನು ನೋಡಿದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ತಕ್ಷಣವೇ ಬಾಂಬ್ ನಿಷ್ಕ್ರಿಯ ದಳಕ್ಕೆ (Bomb Disposal Squad) ಮಾಹಿತಿ ನೀಡಿದ ಪೊಲೀಸರು ಪ್ರದೇಶವನ್ನು ಸೀಲ್ ಮಾಡಿ ತನಿಖೆ ಪ್ರಾರಂಭಿಸಿದ್ದಾರೆ.
ಬಿರ್ಭುಮ್ ಪ್ರದೇಶದ ಕೆರೆಯ ದಂಡೆಯ ಬಳಿ ಜೀವಂತ ಬಾಂಬ್ ಗಳಿದ್ದರು. ಇದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ದೊಡ್ಡ ಪೊಲೀಸ್ ತುಕಡಿಯು ಪ್ರದೇಶವನ್ನು ಸುತ್ತುವರಿದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಕ್ರಮಗಳನ್ನು ಪ್ರಾರಂಭಿಸಿತು.
ತ್ವಿಶಾ ಶರ್ಮಾ ಸಾವು ಪ್ರಕರಣ: 10 ದಿನಗಳ ನಂತರ ಜಬಲ್‌ಪುರ ನ್ಯಾಯಾಲಯದಲ್ಲಿ ಶರಣಾದ ಪತಿ ಸಮರ್ಥ್ ಸಿಂಗ್
ಒಟ್ಟು ಸುಮಾರು 31 ಜೀವಂತ ಬಾಂಬ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರದೇಶ ಸುರಕ್ಷಿತವಾಗಿದೆ ಎಂದು ದೃಢಪಡಿಸಲಾಗಿದೆ. ನಾಗರಿಕರ ಸುರಕ್ಷತೆಗಾಗಿ ಸಂಪೂರ್ಣ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲು ಬಾಂಬ್ ನಿಷ್ಕ್ರಿಯ ದಳವನ್ನು ಕೂಡ ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಾಂಬ್‌ಗಳನ್ನು ಯಾರು ಮತ್ತು ಯಾವ ಉದ್ದೇಶಕ್ಕಾಗಿ ಇಟ್ಟಿದ್ದರು ಎಂಬುದನ್ನು ತಿಳಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ಗ್ರಾಮ ಮತ್ತು ಸುತ್ತಮುತ್ತ ಶೋಧ ಕಾರ್ಯಾಚರಣೆಗಳು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಬಾಂಬ್ ಗಳನ್ನು ನೋಡಿದಾಗ ಮೊದಲು ಹಣ್ಣುಗಳೆಂದು ಭಾವಿಸಿದ್ದೆವು. ಬಳಿಕ ಅದು ಬಾಂಬ್ ಎಂದು ತಿಳಿಯಿತು. ರಾಜ್ಯ ಚುನಾವಣೆಗಳು ಮುಗಿದ ಬಳಿಕ ಇಷ್ಟು ದೊಡ್ಡ ಪ್ರಮಾಣದ ಜೀವಂತ ಬಾಂಬ್‌ಗಳು ಪತ್ತೆಯಾಗಿರುವುದು ಈ ಪ್ರದೇಶದಲ್ಲಿ ಆತಂಕ ಉಂಟು ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಧಾನ ಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಮೇಲೆ ರಾಜ್ಯದಲ್ಲಿ ಅಸ್ಥಿರತೆ ಮುಂದುವರಿದಿದ್ದು, ಶಾಂತಿ ಸ್ಥಾಪನೆಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮೊದಲ ಬಾರಿಗೆ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿದೆ.
ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆಗೆ ಕೊಲೆ ಬೆದರಿಕೆ
ಚುನಾವಣಾ ಫಲಿತಾಂಶ ಪ್ರಕಟವಾದ ಮೇಲೆ ಗಿರಾಜ್ಯಾದ್ಯಂತ ರಾಜಕೀಯ ಘರ್ಷಣೆಗಳು, ಬಾಂಬ್ ದಾಳಿಗಳು, ವಿಧ್ವಂಸಕ ಕೃತ್ಯಗಳು ಮತ್ತು ಪ್ರತೀಕಾರದ ಹಿಂಸಾಚಾರಗಳು ನಡೆದಿವೆ. ಇದನ್ನು ನಿಯಂತ್ರಿಸುವ ಕಾರ್ಯವನ್ನು ರಾಜ್ಯಾಡಳಿತ ನಡೆಸುತ್ತಿದೆ.