ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hit-and-Run: ಹಿಟ್‌ ಅಂಡ್‌ ರನ್‌ಗೆ 60 ವರ್ಷದ ವೃದ್ಧ ಬಲಿ: ಮಗಳ ಮನೆಗೆ ತೆರಳಿ ಮರಳುವಾಗ ಅಪಘಾತ; ಡಿಕ್ಕಿ ಹೊಡೆದು ಪರಾರಿಯಾದ ವಾಹನ ಪತ್ತೆಗೆ ಆಗ್ರಹ

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 60 ವರ್ಷದ ವೃದ್ಧ ಮೃತಪಟ್ಟಿರುವ ಘಟನೆ ಪೆರೇಸಂದ್ರ ಸಮೀಪದ ನಂದಿ ವೈದ್ಯಕೀಯ ಕಾಲೇಜಿನ ಬಳಿ ನಡೆದಿದೆ. ಜಿಲ್ಲೆಯ ಬಂಡಳ್ಳಿ ಗ್ರಾಮದ ಅವಲಪ್ಪ ಮೃತಪಟ್ಟವರು. ಸೋಮೇನಹಳ್ಳಿಯಲ್ಲಿರುವ ಮಗಳ ಮನೆಗೆ ತೆರಳಿ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ಅವಲಪ್ಪ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 60 ವರ್ಷದ ವೃದ್ಧ ಮೃತಪಟ್ಟಿರುವ ಘಟನೆ ಪೆರೇಸಂದ್ರ ಸಮೀಪದ ನಂದಿ ವೈದ್ಯಕೀಯ ಕಾಲೇಜಿನ ಬಳಿ ನಡೆದಿದೆ.

ಜಿಲ್ಲೆಯ ಬಂಡಳ್ಳಿ ಗ್ರಾಮದ ಅವಲಪ್ಪ ಮೃತಪಟ್ಟವರು. ಸೋಮೇನಹಳ್ಳಿಯಲ್ಲಿರುವ ಮಗಳ ಮನೆಗೆ ತೆರಳಿ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ಅವಲಪ್ಪ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. 

ಇದನ್ನೂ ಓದಿ: Chitradurga accident: ಚಿತ್ರದುರ್ಗದಲ್ಲಿ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಚಾಲಕ, ಪ್ರಯಾಣಿಕ ಸಾವು, 15 ಮಂದಿಗೆ ಗಾಯ

ಅಪಘಾತದ ಬಳಿಕ ವಾಹನ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವಲಪ್ಪ ಮೃತಪಟ್ಟಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ.

ಅಪಘಾತಕ್ಕೆ ಕಾರಣವಾದ ವಾಹನವನ್ನು ಪೊಲೀಸರು ಕೂಡಲೇ ಪತ್ತೆಹಚ್ಚಿ, ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.