ಸೂರತ್, ಜ.16: ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆಗೆ (kite string accident) ಸಿಲುಕಿ 8 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಗುಜರಾತ್‌ನ (Gujarat) ಸೂರತ್ ಜಿಲ್ಲೆಯ ಆನಂದ್ ವಿಲ್ಲಾದಲ್ಲಿ ನಡೆದಿದೆ. ರೆಹನ್ಶ್ ಬೋರ್ಸೆ ಮೃತ ಬಾಲಕ. ಕಟ್ಟಡದ ಕಾಂಪೌಂಡ್ ಬಳಿ ಮತ್ತೊಂದು ಮಗುವಿನೊಂದಿಗೆ ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರವು ಬಾಲಕನ ಗಂಟಲ ಬಳಿ ಸಿಲುಕಿ ಗಾಯವಾಗಿದೆ. ಇದರಿಂದಾಗಿ ಆತ ಸೈಕಲ್‌ನಿಂದ ಬಿದ್ದು ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡು ರೆಹನ್ಶ್ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಗಾಳಿಪಟದ ದಾರವು ತುಂಬಾ ಹರಿತವಾಗಿದ್ದು, ಅದು ಬಾಲಕ ರೆಹನ್ಶ್‌ನ ಗಂಟಲನ್ನು ತೀವ್ರವಾಗಿ ಕತ್ತರಿಸಿದೆ ಎಂದು ಕಂಡುಬಂದಿದೆ ಎಂದು ರಾಂಡರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್‌ಜೆ ಚೌಧರಿ ಹೇಳಿದರು.
Drowned: ತಂದೆಯ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಮಕ್ಕಳು ಜಲಸಮಾಧಿ
ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಗಾಳಿಪಟ ದಾರದಿಂದ ಸಾವು ಸಂಭವಿಸಿದ ಸರಣಿಯ ನಂತರ ಈ ಘಟನೆ ನಡೆದಿದೆ. ಬುಧವಾರ (ಜ.14) ಸೂರತ್‌ನಲ್ಲಿ 70 ಅಡಿ ಎತ್ತರದ ಫ್ಲೈಓವರ್‌ನಿಂದ ಕುಟುಂಬವೊಂದರ ಮೂವರು ಸದಸ್ಯರು ಬಿದ್ದಿದ್ದರು. ಗಾಳಿಪಟ ದಾರವೊಂದು ಅವರ ದ್ವಿಚಕ್ರ ವಾಹನದ ಮೇಲೆ ಸಿಕ್ಕಾಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ತಂದೆ ಮತ್ತು ಅವರ 7 ವರ್ಷದ ಪುತ್ರಿ ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಗುಜರಾತ್‍ನ ಭರೂಚ್ ಜಿಲ್ಲೆಯ ಪಿಲುಂದ್ರ ಗ್ರಾಮದಲ್ಲಿ, ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರದಿಂದ ಗಂಟಲು ಸೀಳಿ ರಾಹುಲ್ ಪರ್ಮಾರ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನಂದ್ ಜಿಲ್ಲೆಯಲ್ಲಿ ಗಾಳಿಪಟದ ದಾರದಿಂದ ಕುತ್ತಿಗೆಗೆ ಗಂಭೀರ ಗಾಯಗಳಾಗಿ ಏಳು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆ ಸಮಯದಲ್ಲಿ ಮಗು ತನ್ನ ತಂದೆಯೊಂದಿಗೆ ಬಾದಲ್‌ಪುರದಿಂದ ರಾಲಜ್‌ಗೆ ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ. ಬಾಲಕ ಬೈಕ್‍ನ ಇಂಧನ ಟ್ಯಾಂಕ್ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.
ವಡೋದರಾ ಜಿಲ್ಲೆಯಲ್ಲಿ, ವಾಘೋಡಿಯಾ ಪ್ರದೇಶದಲ್ಲಿ ವಿದ್ಯುತ್ ಕಂಬದಿಂದ ಗಾಳಿಪಟವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ 33 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಶಂಕರ್ ರಥ್ವಾ ಎಂದು ಗುರುತಿಸಿಲಾಗಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ; ಅಂಥದ್ದೇನಾಯ್ತು?
ಮತ್ತೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಗಾಳಿಪಟದ ದಾರ ಸಿಲುಕಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ದಾರುಣ ಘಟನೆ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ನಡೆದಿದೆ. 48 ವರ್ಷದ ಸಂಜುಕುಮಾರ್ ಹೊಸಮನಿ ಮೃತ ದುರ್ದೈವಿ.
ಹೊಸಮನಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಗಾಳಿಪಟದ ದಾರವು ಆಳವಾದ ಗಾಯವನ್ನು ಉಂಟುಮಾಡಿತು. ಇದರಿಂದ ಅವರಿಗೆ ತೀವ್ರ ರಕ್ತಸ್ರಾವವಾಗಲು ಪ್ರಾರಂಭಿಸಿತು. ಅವರು ತಮ್ಮ ಬೈಕ್‌ನಿಂದ ಕುಸಿದು ಬಿದ್ದು ಹೇಗೋ ತಮ್ಮ ಮಗಳ ಸಂಖ್ಯೆಯನ್ನು ಡಯಲ್ ಮಾಡುವಲ್ಲಿ ಯಶಸ್ವಿಯಾದರು. ಅಲ್ಲಿದ್ದ ಸ್ಥಳೀಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾಗಿ ಹೇಳಿದರು. ಆದರೆ, ಅದು ಬರುವ ಹೊತ್ತಿಗೆ ಹೊಸಮನಿ ಗಂಭೀರ ಗಾಯಗಳಿಂದ ಕೊನೆಯುಸಿರೆಳೆದರು.