ಭುವನೇಶ್ವರ, ಜ. 27: ಖಾಸಗಿ ತರಬೇತಿ ಕೇಂದ್ರದಲ್ಲಿ ಗಣರಾಜ್ಯೋತ್ಸವ (Republic Day) ಕಾರ್ಯಕ್ರಮದ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸುವಾಗ ವಿದ್ಯುತ್ ಸ್ಪರ್ಶಿಸಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಒಡಿಶಾದ (Odisha) ಜಗತ್ಸಿಂಗ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಓಂ ಪ್ರಕಾಶ್ ದ್ವಿವೇದಿ ಎಂದು ಗುರುತಿಸಲಾಗಿದ್ದು, ಮೂಲತಃ ಕೇಂದ್ರಪಾರ ಜಿಲ್ಲೆಯವನು. ಓಂ ಪ್ರಕಾಶ್ ತನ್ನ ಅಧ್ಯಯನವನ್ನು ಮುಂದುವರಿಸಲು ಜಗತ್ಸಿಂಗ್‌ಪುರದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ. ಸೋಮವಾರ (ಜನವರಿ 26) ಘಟನೆ ನಡೆದ ಕೋಚಿಂಗ್ ಸೆಂಟರ್‌ನಲ್ಲಿ ಟ್ಯೂಷನ್ ತರಗತಿಗೆ ಓಂ ಪ್ರಕಾಶ್ ಹಾಜರಾಗಿದ್ದ ಎನ್ನಲಾಗಿದೆ.
ಅಯ್ಯೋ ಇದೆಂಥಾ ದುರ್ವಿಧಿ: ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಬಾಲಕಿ ದುರ್ಮರಣ
ಸೋಮವಾರ ಬೆಳಗ್ಗೆ ಗಣರಾಜ್ಯೋತ್ಸವ ಆಚರಿಸಲು ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ನ ಛಾವಣಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ್ದರು. ಕಬ್ಬಿಣದ ಪೈಪ್ ಬಳಸಿ ಧ್ವಜವನ್ನು ಹಾರಿಸಲಾಗಿತ್ತು. ಸಂಜೆ ಓಂ ಪ್ರಕಾಶ್ ಧ್ವಜವನ್ನು ಕೆಳಗಿಳಿಸಲು ಪ್ರಯತ್ನಿಸಿದಾಗ, ಲೋಹದ ಕಂಬ ಆಕಸ್ಮಿಕವಾಗಿ ಮೇಲಿರುವ ವಿದ್ಯುತ್ ತಂತಿಗೆ ತಗುಲಿತು.
ವಿದ್ಯುತ್ ತಂತಿ ಸ್ಪರ್ಶಿಸಿದಾಗ ಓಂ ಪ್ರಕಾಶ್‍ಗೆ ತೀವ್ರ ವಿದ್ಯುತ್ ಆಘಾತ ತಗುಲಿ ತಕ್ಷಣವೇ ಕುಸಿದು ಬಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಘಟನೆಯ ತನಿಖೆಯ ಭಾಗವಾಗಿ ಕೋಚಿಂಗ್ ಸೆಂಟರ್‌ನ ಮಾಲಕ ಅಶ್ವಿನಿ ಕುಮಾರ್ ನಂದ ಅವರನ್ನು ವಶಕ್ಕೆ ಪಡೆಯಲಾಗಿದೆ.
ಮಾಜಿ ಪ್ರೇಮಿಯ ಪತ್ನಿಗೆ ಎಚ್ಐವಿ ಇಂಜೆಕ್ಟ್ ಮಾಡಿದ ಮಹಿಳೆ
ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಪ್ರತೀಕಾರದಿಂದ ಬೇಯುತ್ತಿದ್ದ ಮಹಿಳೆಯೊಬ್ಬಳು ಪೊಲೀಸರನ್ನೂ ದಿಗ್ಭ್ರಮೆಗೊಳಿಸುವ ಭಯಾನಕ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಖಾಸಗಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ (ಮಹಿಳಾ ವೈದ್ಯೆ)ಗೆ, ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಲಾಯಿತು. ಶನಿವಾರ (ಜನವರಿ 24), ಪೊಲೀಸರು ಪ್ರಮುಖ ಆರೋಪಿ ಬಿ. ಬೋಯಾ ವಸುಂಧರಾ, ಆಕೆಯ ಸ್ನೇಹಿತೆ (ನರ್ಸ್) ಮತ್ತು ನರ್ಸ್‌ನ ಇಬ್ಬರು ಅಪ್ರಾಪ್ತ ಪುತ್ರರನ್ನು ಬಂಧಿಸಿದರು.
ಪ್ರಮುಖ ಆರೋಪಿ ವಸುಂಧರಾ (34) ಈ ಹಿಂದೆ ಸಂತ್ರಸ್ತೆ ವೈದ್ಯೆಯ ಪತಿಯೊಂದಿಗೆ (ಅವರು ಶಸ್ತ್ರಚಿಕಿತ್ಸಕರೂ ಆಗಿದ್ದಾರೆ) ಸಂಬಂಧ ಹೊಂದಿದ್ದಳು ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಆ ವ್ಯಕ್ತಿ ವಸುಂಧರಾಳನ್ನು ಬಿಟ್ಟು ಬೇರೆ ಮಹಿಳೆಯನ್ನು (ಸಂತ್ರಸ್ತೆ ವೈದ್ಯೆ) ಮದುವೆಯಾದಾಗ, ವಸುಂಧರಾಗೆ ದ್ವೇಷ ಹುಟ್ಟಿಕೊಂಡಿದೆ. ವೈದ್ಯರಿಗೆ ಎಚ್ಐವಿ ಸೋಂಕು ತಗುಲಿಸಲು ಅವಳು ವೃತ್ತಿಯಲ್ಲಿ ನರ್ಸ್ ಆಗಿದ್ದ ತನ್ನ ಸ್ನೇಹಿತೆ ಜ್ಯೋತಿ ಜತೆ ಸಂಚು ರೂಪಿಸಿದಳು. ಸಂಶೋಧನೆಯ ನೆಪದಲ್ಲಿ ಜ್ಯೋತಿ, ಕರ್ನೂಲ್ ಸರ್ಕಾರಿ ಆಸ್ಪತ್ರೆಯಿಂದ ಎಚ್ಐವಿ ಸೋಂಕಿತ ರಕ್ತದ ಮಾದರಿಯನ್ನು ಪಡೆದು ವಸುಂಧರಾ ಅವರ ಮನೆಯಲ್ಲಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದ್ದಳು. ಬಳಿಕ ಅಪಘಾತವೆಸಗಿದಂತೆ ನಾಟಕವಾಡಿ ಸಹಾಯ ಮಾಡುವ ನೆಪದಲ್ಲಿ ಎಚ್ಐವಿ ಇಂಜೆಕ್ಟ್ ಮಾಡಿದ್ದಾಳೆ.