ಶಿಮ್ಲಾ, ಏ. 6: ಹಿಮಾಚಲ ಪ್ರದೇಶದ (Himachal Pradesh) ಉನಾ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ (Child Abuse) ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮನೆಯ ಬಳಿ ಮರದಿಂದ ಸೀಬೆ ಹಣ್ಣುಗಳನ್ನು ಕಿತ್ತಿದ್ದಕ್ಕಾಗಿ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ಅಪ್ರಾಪ್ತ ಬಾಲಕಿಯನ್ನು ಕಟ್ಟಿಹಾಕಿ ಥಳಿಸಿರುವ ಆಘಾತಕಾರಿ ಘಟನೆ ನಡೆದಿದೆ (Crime News). ಮಾಹಿತಿಯ ಪ್ರಕಾರ, ಅಪ್ರಾಪ್ತ ಬಾಲಕಿ ವಲಸೆ ಕುಟುಂಬದದಿಂದ ಬಂದವಳು. ಆರೋಪಿಯ ನಿವಾಸದ ಬಳಿಯ ಮರದಿಂದ ಸೀಬೆ ಹಣ್ಣುಗಳನ್ನು ಕಿತ್ತುಕೊಂಡಿದ್ದೇ ಈ ಅತಿರೇಕದ ವರ್ತನೆಗೆ ಕಾರಣ ಎನ್ನಲಾಗಿದೆ.
ಆತ ಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು, ಸರಪಳಿಯಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಯುವಕನೊಬ್ಬ ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ವೈರಲ್ ಆಗಿದೆ.
ಮಗು ಅಳುತ್ತ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ತನ್ನನ್ನು ಉಳಿಸಲು ಬೇಡಿಕೊಂಡಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಆದರೆ ಆರೋಪಿಯು ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತ, ಬಾಲಕಿ ಸೀಬೆ ಹಣ್ಣುಗಳನ್ನು ಕದ್ದಿದ್ದಾಗಿ ಆರೋಪಿಸಿದ್ದಾರೆ. ವಿಡಿಯೊ ಚಿತ್ರೀಕರಿಸುತ್ತಿರುವ ವ್ಯಕ್ತಿಯು ಹಲ್ಲೆಯ ಬಗ್ಗೆ ಆರೋಪಿಯನ್ನು ಪ್ರಶ್ನಿಸಿದ್ದಾರೆ.
ಇಲ್ಲಿದೆ ವಿಡಿಯೊ:
ಘಟನೆಯ ಬಗ್ಗೆ ಮಕ್ಕಳ ಸಹಾಯವಾಣಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ರೋಹಿತ್ ಹೇಳಿದ್ದಾರೆ. ಅವರ ಪ್ರಕಾರ, ಆರೋಪಿ ನಂತರ ಬಾಲಕಿಯ ಕುಟುಂಬಕ್ಕೆ ಕ್ಷಮೆಯಾಚಿಸಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಿವೃತ್ತ ಸೇನಾಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದರು.
ಬಾಲಕಿಯ ಕುಟುಂಬದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಬಳಿಕ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆರೋಪಿ ವಿರುದ್ಧ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದ ರಿಜ್ವಾನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದ ತಂದೆ
ತಮಿಳುನಾಡಿನಲ್ಲಿ ಮಾವನನ್ನು ಗುಂಡಿಕ್ಕಿ ಕೊಂದ ಅಳಿಯ
ಮಗುವಿನ ಪಾಲನೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಭೀಕರ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಮಾವನನ್ನೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ನಡೆದಿತ್ತು. ಪತ್ನಿಯೊಂದಿಗೆ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಆರೋಪಿಯು ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಈ ಘಟನೆಯು ತಿರುಪತ್ತೂರು ಜಿಲ್ಲೆಯ ಆಂಬೂರು ಸಮೀಪ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಮತ್ತು ಆತನಿಂದ ದೂರವಿರುವ ಪತ್ನಿಯ ನಡುವೆ ಮಕ್ಕಳ ಪಾಲನೆಯ ಹಕ್ಕಿನ ಕುರಿತು ದೀರ್ಘಕಾಲದಿಂದ ಉದ್ವಿಗ್ನತೆ ಇತ್ತು. ಈ ದಂಪತಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳಿದ್ದು, ವಿಶೇಷವಾಗಿ ಮಗನ ಪಾಲನೆಯ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಆರೋಪಿಯು ತನ್ನ ಚಿಕ್ಕ ಮಗನ ಪಾಲನೆಯನ್ನು ಬಯಸಿದ್ದನು. ಆದರೆ ತಾಯಿ ಅದಕ್ಕೆ ಒಪ್ಪಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.