ದಾಂಡೇಲಿ: ಪತ್ನಿಯ ಕಿರುಕುಳಕ್ಕೇ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ನಗರದ ಬಾಂಬೆಚಾಳದಲ್ಲಿ ನಡೆದಿದೆ. ಮಲೇಷ್ಯಾದಲ್ಲಿ ಕೆಲಸ ಮಾತ್ತಿದ್ದ ರಾಘವೇಂದ್ರ ಎಂಬಾತ ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಹುಟ್ಟೂರು ದಾಂಡೇಲಿಗೆ ಆಗಮಿಸಿದ್ದರು. ಈ ನಡುವೆ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ನೋಟ್ನಲ್ಲಿ ಪತ್ನಿ ಕಿರುಕುಳ ನೀಡುತ್ತಿದ್ದಳು, ತನ್ನ ಸಾವಿಗೆ ಪತ್ನಿ ಮೇಘಾ ಮತ್ತು ಆಕೆಯ ತಾಯಿಯೇ ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ಮತ್ತು ಪತ್ನಿ ಮೇಘಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮೃತ ರಾಘವೇಂದ್ರ ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಮೃತ ರಾಘವೇಂದ್ರ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದರೆ, ಇತ್ತ ಗಂಡ ಇಲ್ಲದ ಹೊತ್ತಲ್ಲಿ ಪತ್ನಿ ಮೇಘಾ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇದರಿಂದ ಬೇಸತ್ತು ಮಲೇಷ್ಯಾದಿಂದ ಹುಟ್ಟೂರಿಗೆ ಬಂದಿದ್ದ ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ರಾಘವೇಂದ್ರ ಪತ್ನಿ ಮೇಘಾ ಮತ್ತು ಆಕೆಯ ತಾಯಿಯನ್ನು ದಾಂಡೇಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಿಯಕರನ ಜತೆ ಹೆಂಡತಿ ಪರಾರಿಯಾಗಿದ್ದಕ್ಕೆ ಇಬ್ಬರು ಮಕ್ಕಳನ್ನು ಕೊಂದು ಅರ್ಚಕ ಆತ್ಮಹತ್ಯೆ
ಕುಣಿಗಲ್: ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ (Kunigal) ಹುತ್ರಿದುರ್ಗ ಹೋಬಳಿ ಆಲ್ಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇಗುಲದ ಅರ್ಚಕ ಶಿವಣ್ಣ (40), ಪುತ್ರರಾದ ಜೀವನ್ (10), ಪ್ರಾಣೇಶ್ (5) ಮೃತರು. ಮಕ್ಕಳನ್ನು ಉಸಿರು ಗಟ್ಟಿಸಿ ಕೊಂದು, ನಂತರ ಶಿವಣ್ಣ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶುಕ್ರವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಣ್ಣನ ಪತ್ನಿ ಪರಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಒಂದು ವಾರದ ಹಿಂದೆ ಆಕೆ ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಓಡಿಹೋಗಿದ್ದಳು. ಈ ಸಂಬಂಧ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದ. ಪೊಲೀಸರ ಮಧ್ಯಸ್ಥಿಕೆಯ ನಂತರ ಪತ್ನಿ ಮನೆಗೆ ಮರಳಿ ಬಂದಿದ್ದಳು. ಆದರೆ, ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ನೋಡಿಕೊಂಡು, ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣದೊಂದಿಗೆ ಆಕೆ ಮತ್ತೆ ಪಲಾಯನ ಮಾಡಿದ್ದಾಳೆ.
30 ವರ್ಷದ ಜಡ್ಜ್ ಆತ್ಮಹತ್ಯೆಗೆ ಶರಣು; ಕಾರ್ಯದೊತ್ತಡ, ವೈಯಕ್ತಿಕ ಕಾರಣ-ಜೀವ ಕಳೆದುಕೊಂಡಿದ್ದೇಕೆ?
ಪತ್ನಿಯ ಈ ನಡತೆಯಿಂದ ತೀವ್ರವಾಗಿ ಮನನೊಂದ ಶಿವಣ್ಣ, ಜೀವನದಲ್ಲಿ ಜಿಗುಪ್ಸೆಗೊಂಡು ಮಕ್ಕಳೊಂದಿಗೆ ಸಾವಿನ ಹಾದಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.