30 ವರ್ಷದ ಜಡ್ಜ್ ಆತ್ಮಹತ್ಯೆಗೆ ಶರಣು; ಕಾರ್ಯದೊತ್ತಡ, ವೈಯಕ್ತಿಕ ಕಾರಣ-ಜೀವ ಕಳೆದುಕೊಂಡಿದ್ದೇಕೆ?
Self Harming: ದೆಹಲಿಯಲ್ಲಿ 30 ವರ್ಷದ ಜಡ್ಜ್ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಪ್ರೇಮ್ ಕುಮಾರ್ ಶರ್ಮ ಅವರ ಪುತ್ರ ಅಮನ್ ಕುಮಾರ್ ಶರ್ಮ ಎಂದು ಗುರುತಿಸಲಾಗಿದೆ. ಸಫ್ದರ್ಜಂಗ್‌ನ ಅವರ ಗ್ರೀನ್ ಪಾರ್ಕ್ ಮನೆಯ ಬಾತ್ ರೂಂನಲ್ಲಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.
ಸಾಂದರ್ಭಿಕ ಚಿತ್ರ -
ದೆಹಲಿ, ಮೇ 2: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 30 ವರ್ಷದ ಜಡ್ಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ (Self Harming). ದಕ್ಷಿಣ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಪ್ರೇಮ್ ಕುಮಾರ್ ಶರ್ಮ ಅವರ ಪುತ್ರ ಅಮನ್ ಕುಮಾರ್ ಶರ್ಮ (Aman Kumar Sharma) ಎಂದು ಗುರುತಿಸಲಾಗಿದೆ. ಸಫ್ದರ್ಜಂಗ್‌ನ ಅವರ ಗ್ರೀನ್ ಪಾರ್ಕ್ ಮನೆಯ ಬಾತ್ ರೂಂನಲ್ಲಿ ಮೃತದೇಹ ಪತ್ತೆಯಾಗಿದ್ದು, ತನಿಖೆ ಆರಂಭವಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.
ಅಮನ್ ಕುಮಾರ್ ಶರ್ಮ ಈಶಾನ್ಯ ದೆಹಲಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಕಾರ್ಯದರ್ಶಿಯಾಗಿ ಕರ್ಕಾರ್ಡೂಮಾ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ನೇಮಕವನ್ನು ಕರ್ಕಾರ್ಡೂಮಾ ಬಾರ್ ಅಸೋಸಿಯೇಷನ್ ಕೂಡ ದೃಢಪಡಿಸಿದೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ ಶನಿವಾರ (ಮೇ 2) ಮಧ್ಯಾಹ್ನ 1.45ರ ಸುಮಾರಿಗೆ ಸಫ್ದರ್ಜಂಗ್ ಎನ್‌ಕ್ಲೇವ್ ಪೊಲೀಸ್ ಠಾಣೆಗೆ ಕರೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಜಡ್ಜ್:
दिल्ली में सनसनी, कड़कड़डूमा कोर्ट के 30 वर्षीय जज ने की आत्महत्या, घर के बाथरूम में मिला शव
— News Leader (@NewsLeaderLive) May 2, 2026
राजधानी दिल्ली के ग्रीन पार्क इलाके में कड़कड़डूमा कोर्ट के जज अमन कुमार शर्मा ने फांसी लगाकर खुदकुशी कर ली है. 30 वर्षीय अमन कुमार शर्मा डीएलएसए (DLSA) में सचिव के पद पर तैनात थे. घटना… pic.twitter.com/WLTsgXY7XK
ಪೊಲೀಸರಿಗೆ ಕರೆ ಮಾಡಿದ್ದ ಅಮನ್ ಸಂಬಂಧಿ
ಪೊಲೀಸ್ ಠಾಣೆಗೆ ಕರೆ ಮಾಡಿದ ಅಮನ್ ಅವರ ಸಹೋದರ ಸಂಬಂಧಿ, ಡಿಫೆನ್ಸ್ ಕಾಲನಿಯ ಶಿವಂ, ʼʼಮನೆಯ ಬಾತ್‌ರೂಂನಲ್ಲಿ ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼʼ ಎಂದು ಹೇಳಿದ್ದಾರೆ. ಕೂಡಲೇ ಧಾವಿಸಿದ ಪೊಲೀಸರು ಅಮನ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೂಲಗಳ ಪ್ರಕಾರ ನೇಣು ಬಿಗಿದು ಅಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಲಭ್ಯವಾಗದ ಕಾರಣ ಪೊಲೀಸರು ಕೂಲಂಕುಷ ತನಿಖೆಗೆ ಮುಂದಾಗಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಸದ್ಯ ತನಿಖಾಧಿಕಾರಿಗಳು ಅಮನ್‌ನ ಕುಟುಂಬಸ್ಥರು ಮತ್ತು ಆತ್ಮೀಯರ ವಿಚಾರಣೆ ನಡೆಸುತ್ತಿದ್ದಾರೆ.
ಅಮನ್ ಶರ್ಮ ಹಿನ್ನಲೆ
2018ರಲ್ಲಿ ಮಹಾರಾಷ್ಟ್ರದ ಪುಣೆಯ ಸಿಂಬಿಯೋಸಿಸ್ ಕಾನೂನು ಶಾಲೆಯಿಂದ ಕಾನೂನು ಪದವಿ ಪೂರ್ಣಗೊಳಿಸಿದ ಅಮನ್ ಶರ್ಮ 2021ರ ಜೂನ್ 19ರಂದು ದೆಹಲಿಯಲ್ಲಿ ನ್ಯಾಯಾಂಗ ಸೇವೆಗೆ ಸೇರಿದರು. ಅವರು ತಮ್ಮ ಸೇವಾ ಅವಧಿಯಲ್ಲಿ ಹಲವು ಕ್ರಿಮಿನಲ್ ಮತ್ತು ಸಿವಿಲ್ ವ್ಯಾಜ್ಯಗಳ ವಾದ-ವಿವಾದ ಆಲಿಸಿ ತೀರ್ಪು ನೀಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ ಅವರನ್ನು 2025ರ ಅಕ್ಟೋಬರ್‌ನಲ್ಲಿ ಕರ್ಕಾರ್ಡೂಮಾ ನ್ಯಾಯಾಲಯದ ಡಿಎಲ್‌ಎಸ್‌ಎಯಲ್ಲಿ ಪೂರ್ಣ ಸಮಯದ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಶ್ರೀ ಸಾಯಿ ಸಿಲ್ಕ್ಸ್ ಮಾಲಕಿ, ಇನ್‌ಸ್ಟಾಗ್ರಾಮ್ ಪ್ರಭಾವಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ
ಕಳೆದ ತಿಂಗಳು ವಕೀಲ ಆತ್ಮಹತ್ಯೆ
ಕಳೆದ ತಿಂಗಳು ಕೂಡ ಇಂತಹದ್ದೇ ಮತ್ತೊಂದು ಪ್ರಕರಣ ದೆಹಲಿಯಲ್ಲಿ ನಡೆದಿತ್ತು. ದೆಹಲಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದ 26 ವರ್ಷದ ವಕೀಲರೊಬ್ಬರು ಕನ್ನಾಟ್‌ನ ಹೋಟೆಲ್ ಒಂದರ 15ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಮ್ಮ ಸಾವಿಗೆ ತಾವೇ ಕಾರಣ ಎಂದು ಬರೆದುಕೊಂಡಿದ್ದರು. ಅವರ ರೂಮ್‌ನಲ್ಲಿ ಮದ್ಯದ ಬಾಟಲ್ ಕೂಡ ಪತ್ತೆಯಾಗಿತ್ತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.